- Home
- Entertainment
- TV Talk
- ಅಂದು ಆಶೀರ್ವಾದಕ್ಕೋಸ್ಕರ ಕಾಲಿಗೆ ಬಿದ್ರು, ಇಂದು ಥೂ, ನಿನ್ನ ಫ್ಯಾಮಿಲಿ ಸರ್‌ನೇಮ್ ಅಂದ್ರು: ಚೈತ್ರಾ ಕುಂದಾಪುರ ಹೀಗ್ಯಾಕೆ?
ಅಂದು ಆಶೀರ್ವಾದಕ್ಕೋಸ್ಕರ ಕಾಲಿಗೆ ಬಿದ್ರು, ಇಂದು ಥೂ, ನಿನ್ನ ಫ್ಯಾಮಿಲಿ ಸರ್‌ನೇಮ್ ಅಂದ್ರು: ಚೈತ್ರಾ ಕುಂದಾಪುರ ಹೀಗ್ಯಾಕೆ?
ಬಿಗ್ ಬಾಸ್ ಕನ್ನಡ ಸೀಸನ್ 11 ಶೋನಲ್ಲಿ ರಜತ್, ಚೈತ್ರಾ ಕುಂದಾಪುರ ಜಗಳ ಆಡಿಕೊಂಡಿದ್ದರು. ಆಗ ಚೈತ್ರಾಗೆ ರಜತ್ ಸುಳ್ಳಿ, ಕಳ್ಳಿ, ಬಾಸ್ ಎಂದೆಲ್ಲ ನಾಮಕರಣ ಮಾಡಿದ್ದರು. ಚೈತ್ರಾ ಮದುವೆಯಲ್ಲಿ ರಜತ್ ಅವರು ಅಣ್ಣನಾಗಿ ಶಾಸ್ತ್ರ ಮಾಡಿದ್ರು, ಚೈತ್ರಾ, ರಜತ್ ಕಾಲಿಗೆ ಬಿದ್ದರು. ಈಗ ಆಗಿರೋದು ಬೇರೆ.

ಮದುವೆಯಲ್ಲಿ ಕಾಲಿಗೆ ಬಿದ್ರು
ಚೈತ್ರಾ ಕುಂದಾಪುರ ಮದುವೆಯಲ್ಲಿ ರಜತ್ ಭಾಗಿಯಾಗಿರೋದು, ಅಣ್ಣನಾಗಿ ಶಾಸ್ತ್ರ ಮಾಡಿರೋದು ಅನೇಕರಿಗೆ ಆಶ್ಚರ್ಯ ಆಗಿತ್ತು. ಮದುವೆಯಲ್ಲಿ ರಜತ್ ಕಾಲಿಗೆ ಚೈತ್ರಾ ಬಿದ್ದು, ಆಶೀರ್ವಾದ ಪಡೆದ ಬಳಿಕ, ರಜತ್ ಅವರು ಆಶ್ಚರ್ಯದಿಂದ ನಕ್ಕಿದ್ದುಂಟು. ಈಗ ಬಿಗ್ ಬಾಸ್ ಸೀಸನ್ 12 ಶೋನಲ್ಲಿ ರಜತ್, ಚೈತ್ರಾ ಇಬ್ಬರೂ ಸ್ಪರ್ಧಿಗಳು.
ಚೈತ್ರಾ, ರಜತ್ ಒಂದೇ ಆಗಿದ್ರು
ಆರಂಭದಲ್ಲಿ ರಜತ್, ಚೈತ್ರಾ ಕುಂದಾಪುರ ಒಂದೇ ರೀತಿಯ ನಿರ್ಧಾರಗಳನ್ನು ತಗೊಳ್ತಾರೆ, ಇವರಿಬ್ಬರೂ ಎಲ್ಲ ಸ್ಪರ್ಧಿಗಳ ಮೇಲೆ ಒಂದೇ ರೀತಿಯ ಅಭಿಪ್ರಾಯ ಹೊಂದಿದ್ದಾರೆ ಎಂಬ ಆರೋಪ ಇತ್ತು. ಇವರಿಬ್ಬರೂ ಒಂದೇ ಎಂದು ಕಾಣಿಸುತ್ತದೆ ಎಂದು ಗಿಲ್ಲಿ ನಟ ಅವರೇ ಕಿಚ್ಚ ಸುದೀಪ್ ಮುಂದೆ ಹೇಳಿದ್ದುಂಟು. ಈಗ ದೊಡ್ಮನೆಯಲ್ಲಿ ಆಗ್ತಿರೋದು ಏನು?
ಚೈತ್ರಾ ಹಾಗೂ ರಜತ್‌ಗೂ ಜಗಳ
ಬಿಗ್ ಬಾಸ್ ಮನೆಯಲ್ಲಿ ಟಾಸ್ಕ್ ವಿಚಾರದಲ್ಲಿ ಚೈತ್ರಾ ಹಾಗೂ ರಜತ್‌ಗೂ ಜಗಳ ಆಗುತ್ತಿದೆ. ಚೈತ್ರಾಗೆ ಸುಳ್ಳಿ, ಸುಳ್ಳಿ ಎಂದು ರಜತ್ ಕರೆದಿದ್ದಾರೆ. ಇದು ಚೈತ್ರಾ ಪಿತ್ತವನ್ನು ನೆತ್ತಿರೇಗಿಸಿದೆ. ಹೀಗಾಗಿ ರಜತ್ ಸರ್‌ನೇಮ್, ರಜತ್ ಫ್ಯಾಮಿಲಿ ಬಗ್ಗೆ ಚೈತ್ರಾ ಮಾತನಾಡಿದ್ದಾರೆ. ಉಸ್ತುವಾರಿ ರಾಶಿಕಾ ಶೆಟ್ಟಿ ಅವರು ರಜತ್ ಟೀಂಗೆ ವಿನ್ ಆಗಿದೆ ಎಂದರು. ಇದು ಚೈತ್ರಾಗೆ ಸಿಟ್ಟು ತರಿಸಿತು.
ಸುಳ್ಳಿ, ಯೋಗ್ಯತೆ.. ಏನಿದು ಪದಗಳು?
ರಜತ್ ಅವರು ಸುಳ್ಳಿ ಎಂದು ಹೇಳಿದ್ದಾರೆ. ಆಗ ಚೈತ್ರಾ ಕುಂದಾಪುರ ಅವರು, “ನಿನ್ನ ಕುಟುಂಬಕ್ಕೆ ಸರ್‌ನೇಮ್ ಇದೆ, ನನ್ನ ಕುಟುಂಬಕ್ಕೆ ಒಳ್ಳೆಯ ಸರ್‌ನೇಮ್ ಇದೆ, ಅವನು ಸರ್‌ನೇಮ್ ನಮಗೆ ಬೇಕಾಗಿಲ್ಲ” ಎಂದು ಹೇಳಿದ್ದಾರೆ, ಆಗ ರಜತ್ ಅವರು, “ನಿನ್ನ ಹತ್ರ ಮಾತಾಡಿದೆ, ಫ್ಯಾಮಿಲಿಯವರೆಗೆ ಬರಬೇಡ, ಎಲ್ಲಿ ಮಾತಾಡಬೇಕೋ ಅಲ್ಲಿ ಮಾತಾಡ್ತೀನಿ, ಆಟ ಆಡೋಕೆ ಯೋಗ್ಯತೆ ಇಲ್ಲದಿರೋಳು ನೀನು, ಕೆಟ್ಟದಾಗಿ ಟಾಸ್ಕ್ ಆಡಲ್ಲ” ಎಂದು ಹೇಳಿದ್ದಾರೆ. ಆಗ ಚೈತ್ರಾ, “21 ದಿನದಿಂದ ನಿನ್ನ ಯೋಗ್ಯತೆ ನೋಡಿದೆ, ಟಾಸ್ಕ್‌ಗೆ ಬಾ ಅಂತ ಕರೀತಾನೆ, ನಿನ್ನ ಟೀಂಗೆ ಬಂದ್ರೆ ಮಕಾಡೆ ಮಲಗಬೇಕು” ಎಂದು ಹೇಳಿದ್ದಾರೆ.
ಸರ್‌ನೇಮ್ ವಿಷಯ ಬೇಕಾ?
ಬಿಗ್ ಬಾಸ್ ಮನೆಯಲ್ಲಿ ಟಾಸ್ಕ್ ಆಡಬೇಕು, ಗೆಲ್ಲಬೇಕು ಎನ್ನೋದು ಎಲ್ಲರಿಗೂ ಇರುತ್ತದೆ. ರಜತ್ ಅಣ್ಣ ಬಿಗ್ ಬಾಸ್ ಟೀಂನ ಪ್ರತಿನಿಧಿಯಾಗಿ ನಮ್ಮ ಮದುವೆಗೆ ಬಂದಿದ್ದು ಖುಷಿಯಾಯ್ತು ಎಂದು ಚೈತ್ರಾ ಕುಂದಾಪುರ ಅವರು ಆಶೀರ್ವಾದ ಪಡೆದರು. ಈಗ ಟಾಸ್ಕ್‌ಗೋಸ್ಕರ “ನಿನ್ನ ಯೋಗ್ಯತೆ ಏನು? ಸರ್‌ನೇಮ್” ಹೀಗೆಲ್ಲ ಮಾತನಾಡೋದು ಎಷ್ಟು ಸರಿ? ಎಲ್ಲ ಟಾಸ್ಕ್ ಆಡಿ, ಗೆದ್ದವರು ಕೂಡ ಬಿಗ್ ಬಾಸ್ ಟ್ರೋಫಿ ಗೆದ್ದಿಲ್ಲ. ಇದು ಬಿಗ್ ಬಾಸ್‌ನ ಭಾಗ ಅಷ್ಟೇ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

