- Home
- Entertainment
- TV Talk
- BBK 12: ಗಿಲ್ಲಿಯ ಚಿತ್ತಾಲ ಪತ್ತಾಲ್ ಆಟಕ್ಕೆ ಸುಸ್ತಾದ ರಾಶಿಕಾ; ಈ ವಾರದ ಕ್ಯಾಪ್ಟನ್ ಯಾರು?
BBK 12: ಗಿಲ್ಲಿಯ ಚಿತ್ತಾಲ ಪತ್ತಾಲ್ ಆಟಕ್ಕೆ ಸುಸ್ತಾದ ರಾಶಿಕಾ; ಈ ವಾರದ ಕ್ಯಾಪ್ಟನ್ ಯಾರು?
ಬಿಗ್‌ಬಾಸ್ ಮನೆಯಲ್ಲಿ ಕ್ಯಾಪ್ಟನ್ ಪಟ್ಟಕ್ಕಾಗಿ ಸೂರಜ್-ಕಾವ್ಯಾ ಮತ್ತು ರಘು-ಗಿಲ್ಲಿ ನಡುವೆ ತೀವ್ರ ಪೈಪೋಟಿ ನಡೆದಿದೆ. ಬಕೆಟ್ ಹಿಡಿದು ವಸ್ತುಗಳನ್ನು ಸಂಗ್ರಹಿಸುವ ಆಟದಲ್ಲಿ, 'ವೈಪರ್' ತರುವ ವಿಚಾರದಲ್ಲಿ ದೊಡ್ಡ ಜಗಳವೇ ಶುರುವಾಗಿದೆ.

ಕ್ಯಾಪ್ಟನ್ ಪಟ್ಟಕ್ಕಾಗಿ ಆಟ
ಹಲವು ರೋಚಕ ತಿರುವುಗಳ ನಡುವೆ ಕ್ಯಾಪ್ಟನ್ ಪಟ್ಟಕ್ಕಾಗಿ ಆಡಲು ಸೂರಜ್, ರಘು, ಗಿಲ್ಲಿ ನಟ ಮತ್ತು ಕಾವ್ಯಾ ಆಯ್ಕೆಯಾಗಿದ್ದಾರೆ. ಇದೀಗ ನಾಲ್ವರು ಜಂಟಿಯಾಗಿ ಕ್ಯಾಪ್ಟನ್ಸಿ ಟಾಸ್ಕ್ ಆಡುತ್ತಿದ್ದಾರೆ. ಈ ಆಟದಲ್ಲಿ ಸೂರಜ್-ಕಾವ್ಯಾ ಮತ್ತು ರಘು-ಗಿಲ್ಲಿ ಜೊತೆಯಾಗಿದ್ದಾರೆ. ಈ ಆಟದ ಉಸ್ತುವಾರಿಯನ್ನು ಕ್ಯಾಪ್ಟನ್ ರಾಶಿಕಾ ಮಾಡುತ್ತಿದ್ದಾರೆ.
ಆಟ ಏನು?
ಒಂದು ಬಕೆಟ್‌ನನ್ನು ನಾಲ್ಕು ತುಂಡುಗಳನ್ನಾಗಿ ಮಾಡಲಾಗಿದೆ. ಆಟವಾಡುವ ಜೋಡಿ ಸದಸ್ಯರು ತಲಾ ಎರಡು ತುಂಡುಗಳನ್ನು ಕೈಗಳಿಗೆ ಕಟ್ಟಿಕೊಳ್ಳಬೇಕು. ನಂತರ ನಾಲ್ಕು ತುಂಡು ಸೇರಿಸಿ ಬಕೆಟ್ ರಚನೆ ಮಾಡಬೇಕು. ಆ ಬಳಿಕ ಬಿಗ್‌ಬಾಸ್ ಸೂಚಿಸುವ ವಸ್ತುಗಳನ್ನು ಬಕೆಟ್‌ನಲ್ಲಿಯೇ ತಂದು ತಮಗೆ ಮೀಸಲಿರಿಸುವ ಸ್ಥಳದಲ್ಲಿ ಹಾಕಬೇಕು.
ಯಾರ ಬಳಿಯಲ್ಲಿದೆ ವೈಪರ್?
ಕಿಚನ್‌ನಲ್ಲಿರುವ ವೈಪರ್ ತೆಗೆದುಕೊಂಡು ಬರುವಂತೆ ತೆಗೆದುಕೊಂಡು ಬರುವಂತೆ ಬಿಗ್‌ಬಾಸ್ ಸೂಚನೆ ನೀಡುತ್ತಾರೆ. ಸೂರಜ್-ಕಾವ್ಯಾ ವೈಪರ್‌ನ ಮುಂಭಾಗ ತೆಗೆದುಕೊಂಡು ಬರುತ್ತಾರೆ. ಗಿಲ್ಲಿ-ರಘು ವೈಪರ್ ಸಿಗದಕ್ಕೆ ಅದರ ಹಿಂಭಾಗದ ಹಿಡಿಕೆಯನ್ನು ತರುತ್ತಾರೆ. ವಸ್ತು ಪೂರ್ಣವಾಗಿರಬೇಕು, ಅದು ವೈಪರ್ ಅಲ್ಲ ಎಂದು ಕಾವ್ಯಾ ಆಕ್ಷೇಪ ವ್ಯಕ್ತಪಡಿಸುತ್ತಾರೆ.
ರಜತ್ ಮಧ್ಯೆ ಪ್ರವೇಶ
ಈ ವೇಳೆ ಮಧ್ಯೆ ಪ್ರವೇಶಿಸಿದ ರಜತ್, ಆಟ ಡ್ರಾ ಆಗುತ್ತೆ. ಇಬ್ಬರ ಬಳಿಯಲ್ಲಿಯೂ ಪೂರ್ಣವಾದ ವೈಪರ್ ಇಲ್ಲ ಎಂದು ರಾಶಿಕಾಗೆ ಹೇಳುತ್ತಾರೆ. ಇತ್ತ ನಾನು ಗಿಲ್ಲಿ-ರಘು ಜೋಡಿ ತಂದಿರುವ ವಸ್ತುವನ್ನಿ ಪರಿಗಣಿಸಲ್ಲ ಎಂಬ ಮಾತನ್ನು ಹೇಳುತ್ತಾರೆ. ಇದರಿಂದ ಆಟದ ಮಧ್ಯೆ ವಾಕ್ಸಮರ ಏರ್ಪಟ್ಟಿದೆ.
ಇದನ್ನೂ ಓದಿ: BBK 12: ಅಂದುಕೊಂಡಂತೆಯೇ ಆಯ್ತು: ಸೀಕ್ರೆಟ್ ರೂಮ್‌ನಲ್ಲಿ ರಕ್ಷಿತಾ ಆಗಿ ಬದಲಾದ ಧ್ರುವಂತ್!
ರಾಶಿಕಾ ತೀವ್ರ ಅಸಮಾಧಾನ
ಇತ್ತ ನಮ್ಮ ಮನೆಯಲ್ಲಿ ಇದೇ ರೀತಿಯಾಗಿ ವೈಪರ್ ಇರುತ್ತೆ ಎಂದು ಸೂರಜ್ ಹೇಳಿದ್ರೆ, ಇದರಿಂದ ನಾವು ವೈಪ್ ಮಾಡಿ ತೋರಿಸುತ್ತೇವೆ ಎಂದು ಹೇಳುವ ಮೂಲಕ ಪಾಯಿಂಟ್ ನಮಗೆ ಸಿಗಬೇಕು ಎಂಬ ವಾದವನ್ನು ಕಾವ್ಯಾ ಮಂಡಿಸುತ್ತಾರೆ. ಇತ್ತ ಗಿಲ್ಲಿ ಹಿಡಿಕೆ ಹಿಡಿದುಕೊಂಡು ವೈಪ್ ಮಾಡುತ್ತೇನೆ ಎಂದು ತೋರಿಸುತ್ತಾರೆ. ಈ ಜಗಳದಿಂದ ರಾಶಿಕಾ, ಅಕ್ಷರಶಃ ಟೆನ್ಷನ್‌ಗೆ ಒಳಗಾಗಿದ್ದಾರೆ. ನಿನ್ನೆ ಸಂಚಿಕೆಯಲ್ಲಿಯೂ ಗಿಲ್ಲಿ ವಿರುದ್ಧ ರಾಶಿಕಾ ತೀವ್ರ ಅಸಮಾಧಾನ ಹೊರ ಹಾಕಿದ್ದರು.
ಇದನ್ನೂ ಓದಿ: Bigg Boss: ಅಶ್ವಿನಿ ಗೌಡಗೆ ಯಾಕೆ ಆ ಬಗ್ಗೆ ಕೇಳಲಿಲ್ಲ? ಗ್ರಹಚಾರ ಬಿಡಿಸಿಲ್ಲ? ಕಿಚ್ಚ ಸುದೀಪ್ ಉತ್ತರ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

