BBK 12: ಗಿಲ್ಲಿ ಅಭಿಮಾನಿಗಳಿಂದ ಸೋಶಿಯಲ್ ಮೀಡಿಯಾದಲ್ಲಿ ವಿಶೇಷ ಅಭಿಯಾನ ಆರಂಭ
ಬಿಗ್‌ಬಾಸ್ ಸೀಸನ್ 12 ರಲ್ಲಿ ಗಿಲ್ಲಿ ನಟ ಮತ್ತು ಕಾವ್ಯಾ ನಡುವಿನ ಆಟ ಬದಲಾಗಿದೆ. ಕಾವ್ಯಾ ವರ್ತನೆಯಿಂದ ಬೇಸರಗೊಂಡಿರುವ ಗಿಲ್ಲಿ ನಟನ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ವಿಶೇಷ ಅಭಿಯಾನ ಆರಂಭಿಸಿದ್ದಾರೆ.

ಗಿಲ್ಲಿ ನಟ
ಬಿಗ್‌ಬಾಸ್ ಸೀಸನ್ 12ರ ಜನಪ್ರಿಯ ಸ್ಪರ್ಧಿಯಾಗಿ ಗಿಲ್ಲಿ ನಟ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಗಿಲ್ಲಿ ನಟ ಅಭಿಮಾನಿಗಳು ಹೆಸರಿನಲ್ಲಿ ಹಲವಾರು ಪೇಜ್‌ಗಳು ಕ್ರಿಯೇಟ್ ಆಗಿವೆ. ಇದೀಗ ಗಿಲ್ಲಿ ಅಭಿಮಾನಿಗಳಿಂದ ವಿಶೇಷ ಅಭಿಯಾನವೊಂದು ಆರಂಭವಾಗಿದೆ.
ಕಾವ್ಯಾ ಪರವಾಗಿಯೂ ವೋಟ್
ಗಿಲ್ಲಿ ನಟ ಬಿಗ್‌ಬಾಸ್ ಶೋನಲ್ಲಿ ತೆಗೆದುಕೊಳ್ಳುವ ನಿರ್ಧಾರದ ಮೇಲೆ ಅಭಿಮಾನಿಗಳು ಹೊರಗಡೆ ಪ್ರಚಾರ ನಡೆಸುತ್ತಾರೆ. ಮೊದಲ ದಿನದಿಂದಲೂ ಗಿಲ್ಲಿ ನಟ ಮತ್ತು ಕಾವ್ಯಾ ಜೊತೆಯಾಗಿ ಆಟವಾಡಿಕೊಂಡು ಬಂದಿದ್ದಾರೆ. ಕಾವ್ಯ ಅಂತರ ಕಾಪಾಡಿಕೊಳ್ಳಲು ಪ್ರಯತ್ನಿಸಿದ್ರೂ ಗಿಲ್ಲಿ ನಟ ಇದಕ್ಕೆ ಅವಕಾಶ ನೀಡಿಲ್ಲ. ಈ ಕಾರಣದಿಂದ ಗಿಲ್ಲಿ ನಟ ಅಭಿಮಾನಿಗಳು ಕಾವ್ಯಾ ಪರವಾಗಿಯೂ ವೋಟ್ ಹಾಕುತ್ತಿದ್ದರು. ಇದನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳುತ್ತಿದ್ದಾರೆ.
ಕಾವ್ಯಾ ಬೇಸರ
ಇದೀಗ ಆಟ ಬದಲಾಗಿದ್ದು, ಟಾಪ್ 6ನ ಮೊದಲ ಟಿಕೆಟ್ ಪಡೆದುಕೊಳ್ಳುವ ಟಾಸ್ಕ್‌ನಿಂದ ಗಿಲ್ಲಿ ಹೊರಗೆ ಬಿದ್ದಿದ್ದಾರೆ. ಮತ್ತೊಂದೆಡೆ ಗಿಲ್ಲಿ ಬಗ್ಗೆ ಕಾವ್ಯಾ ನಿರಂತರವಾಗಿ ಅಸಮಾಧಾನ ಹೊರ ಹಾಕುತ್ತಿದ್ದಾರೆ. ಈ ಹಿಂದಿನ ಸಂಚಿಕೆಯಲ್ಲಿ ಧನುಷ್ ಜೊತೆ ಮಾತನಾಡುವ ಗಿಲ್ಲಿ ವರ್ತನೆಗೆ ಕಾವ್ಯಾ ಬೇಸರ ವ್ಯಕ್ತಪಡಿಸಿದ್ದರು. ಈ ಎಲ್ಲಾ ಬೆಳವಣಿಗೆ ಬಳಿಕ ಗಿಲ್ಲಿ ನಟ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ವಿಶೇಷ ಅಭಿಯಾನ ಆರಂಭಿಸಿದ್ದಾರೆ.
ಏನಿದು ಅಭಿಯಾನ?
ಓರ್ವ ಸ್ಪರ್ಧಿಗೆ ಒಬ್ಬರು 99 ಮತಗಳನ್ನು ಚಲಾಯಿಸಬಹುದು. ಈ ಮೊದಲು ಗಿಲ್ಲಿ ಅಭಿಮಾನಿಗಳು ಅರ್ಧ ಮತಗಳನ್ನು ಕಾವ್ಯಾ ಅವರಿಗೆ ನೀಡುತ್ತಿದ್ದರು. ಇದೀಗ ಕಾವ್ಯಾ ಆಟದಿಂದ ಬೇಸರಗೊಂಡಿರುವ ಸ್ಪರ್ಧಿಗಳು, ಎಲ್ಲಾ ಮತಗಳನ್ನು ಗಿಲ್ಲಿ ನಟನಿಗೆ ಮಾತ್ರ ಹಾಕಬೇಕು ಎಂದು ಪೋಸ್ಟ್ ಶೇರ್ ಮಾಡಿಕೊಳ್ಳುತ್ತಿದ್ದಾರೆ. ಈ ಮೂಲಕ ಕಾವ್ಯಾಗೆ ಮತ ಚಲಾಯಿಸಬೇಡಿ ಎಂದು ಪ್ರಚಾರ ಮಾಡುತ್ತಿದ್ದಾರೆ.
ಇದನ್ನೂ ಓದಿ: BBK 12: ಗಿಲ್ಲಿ ನಟನ ಸಾಲಿಗೆ ಸೇರಿದ ರಕ್ಷಿತಾ ಶೆಟ್ಟಿ: ಆದ್ರೂ ಕಡಿಮೆಯಾಗಿಲ್ಲ ಅಬ್ಬರ!
ಕಾವ್ಯಾ ಆಟ
ಮಂಗಳವಾರದ ಸಂಚಿಕೆಯಲ್ಲಿ ಧ್ರುವಂತ್ ಮತ್ತು ಅಶ್ವಿನಿ ಗೌಡ ಜೊತೆಯಲ್ಲಿ ಕಾವ್ಯಾ ಆಟವಾಡಿದ್ದರು. ಆಟ ಗೆದ್ದ ಬಳಿಕ ಮೂರು ಸ್ಪರ್ಧಿಗಳು ಎದುರಾಳಿಯಾಗಿ ಆಟವಾಡಿದ್ದರು. ಈ ಆಟದಲ್ಲಿ ಗೆದ್ದಿರುವ ಕಾವ್ಯಾ ಟಾಪ್ 6 ಸ್ಪರ್ಧಿಗಳ ಸ್ಥಾನಕ್ಕೆ ಸೇರ್ಪಡೆಯಾಗಿದ್ದಾರೆ.
ಇದನ್ನೂ ಓದಿ: BBK 12: ಬಿಗ್‌ಬಾಸ್‌ನಲ್ಲಿ ಟಾಸ್ಕ್ ಅಬ್ಬರ; ಗಿಲ್ಲಿಯನ್ನು ಹಿಂದಿಕ್ಕಿ ಮುಂದೆ ಹೊರಟ ಕಾವ್ಯಾ ಶೈವ?
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

