- Home
- Entertainment
- TV Talk
- Bigg Boss Kannada 12: ಗಿಲ್ಲಿ ನಟನ ಆಟದ ವೈಖರಿ ಅಸಲಿಯೋ? ನಕಲಿಯೋ? ಗೌರವ್ ಶೆಟ್ಟಿ ಮಾತು
Bigg Boss Kannada 12: ಗಿಲ್ಲಿ ನಟನ ಆಟದ ವೈಖರಿ ಅಸಲಿಯೋ? ನಕಲಿಯೋ? ಗೌರವ್ ಶೆಟ್ಟಿ ಮಾತು
ಬಿಗ್‌ಬಾಸ್ ಕನ್ನಡ ಸೀಸನ್ 12ರ ಸ್ಪರ್ಧಿ ಗಿಲ್ಲಿ ನಟ ಅವರ ಆಟದ ಬಗ್ಗೆ ನಟ ಗೌರವ್ ಶೆಟ್ಟಿ ಮತ್ತು ಶಿಶಿರ್ ಮಾತನಾಡಿದ್ದಾರೆ ಗಿಲ್ಲಿ ಆಟವನ್ನು 'ಒನ್‌ಮ್ಯಾನ್ ಶೋ' ಎಂದು ಬಣ್ಣಿಸಿದ್ದು, ಅವರ ವಿಶೇಷ ಗುಣವನ್ನು ಶ್ಲಾಘಿಸಿದ್ದಾರೆ.

ಬಿಗ್‌ಬಾಸ್ ಕನ್ನಡ ಸೀಸನ್ 12
ಬಿಗ್‌ಬಾಸ್ ಕನ್ನಡ ಸೀಸನ್ 12ರ ಸ್ಪರ್ಧಿಯಾಗಿರುವ ಗಿಲ್ಲಿ ನಟ ಅವರ ಆಟದ ವೈಖರಿ ಬಗ್ಗೆ ಕಲಾವಿದ ಗೌರವ್ ಶೆಟ್ಟಿ ಮಾತನಾಡಿದ್ದಾರೆ. ಯಾರಿಗೂ ಸಿಗದಂತಹ ಹೈಪ್ ಗಿಲ್ಲಿಯವರಿಗೆ ಸಿಗ್ತಿರೋದ್ಯಾಕೆ ಎಂದು ಗೌರವ್ ತಿಳಿಸಿದ್ದಾರೆ. ಸೂಪರ್‌ಹಿಟ್ ಚಿತ್ರದ ಶೀರ್ಷಿಕೆ ಮತ್ತು ಟೀಸರ್ ಲಾಂಚ್ ಕಾರ್ಯಕ್ರಮದಲ್ಲಿ ನಟ ಗೌರವ್ ಶೆಟ್ಟಿ ಮಾತನಾಡಿದ್ದಾರೆ. ಸೂಪರ್‌ಹಿಟ್ ಚಿತ್ರದಲ್ಲಿ ಗೌರವ್ ಅವರು ನಾಯಕನಾಗಿ ನಟಿಸುತ್ತಿದ್ದಾರೆ.
ನ್ಯಾಚುರಲ್ ಆಟ
ಹೈಪ್ ಅನ್ನೋದಕ್ಕಿಂತ ಗಿಲ್ಲಿ ಅವರು ನ್ಯಾಚುರಲ್ ಆಗಿ ಆಟವನ್ನು ಆಡುತ್ತಿದ್ದಾರೆ. ಹಾಗಾಗಿ ಬೇರೆಯವರಿಗೆ ಅಷ್ಟಾಗಿ ಹೈಪ್ ಸಿಕ್ಕಿಲ್ಲ ಎಂದು ಹೇಳಬಹುದು. ಒಂದು ಅಥವಾ ಎರಡು ದಿನ ನಾಟಕ ಮಾಡಿಕೊಂಡು ಬಿಗ್‌ಬಾಸ್ ಮನೆಯಲ್ಲಿ ಆಟವಾಡಬಹುದು. ಆದ್ರೆ ಅದು ಜನರಿಗೆ ಗೊತ್ತಾಗುತ್ತೆ ಎಂದು ಗೌರವ ಹೇಳುತ್ತಾರೆ.
ಗೌರವ್ ಶೆಟ್ಟಿ ವಿಶ್ವಾಸ
ನಾನು ಪರ್ಸನಲ್ ಆಗಿ ಗಿಲ್ಲಿಯವರ ಜೊತೆ ಸಮಯ ಕಳೆದಿದ್ದೇನೆ ಮತ್ತು ಅವರೊಂದಿಗೆ ಸಿನಿಮಾಗಳಲ್ಲಿಯೂ ಕೆಲಸ ಮಾಡಿದ್ದೇನೆ. ಗಿಲ್ಲಿ ನಟ ತುಂಬಾ ಒಳ್ಳೆಯ ವ್ಯಕ್ತಿ. ಹಾಗಾಗಿ ಈ ಬಾರಿ ಬಿಗ್‌ಬಾಸ್ ಟ್ರೋಫಿ ತೆಗೆದುಕೊಂಡು ಬರುತ್ತಾರೆ ಎಂದು ಗೌರವ್ ಶೆಟ್ಟಿ ವಿಶ್ವಾಸ ವ್ಯಕ್ತಪಡಿಸಿದರು.
ಶಿಶಿರ್ ಮಾತು
ಇದೇ ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಗಮಿಸಿದ್ದ ಬಿಗ್‌ಬಾಸ್ ಮಾಜಿ ಸ್ಪರ್ಧಿ, ನಟ ಶಿಶಿರ್, ಈ ಬಾರಿ ಒನ್‌ಮ್ಯಾನ್ ಶೋ ಆಗಿದೆ ಎಂದರು. ಈ ವಾರ ಕೆಲವೊಂದು ಎರಡ್ಮೂರು ಮಾತುಗಳನ್ನು ನೋಡಿಕೊಂಡು ಮಾತನಾಡಿದ್ದರೆ ಎರಡನೇ ಬಾರಿಗೆ ಗಿಲ್ಲಿ ನಟ ಅವರು ಕಿಚ್ಚನ ಚಪ್ಪಾಳೆ ಪಡೆದುಕೊಳ್ಳುತ್ತಿದ್ದರು ಎಂದು ಹೇಳಿದರು.
ಇದನ್ನೂ ಓದಿ: BBK 12: ನಾಮಿನೇಷನ್ ಜ್ವಾಲೆಯಲ್ಲಿ ಸಿಡಿದ ಗಿಲ್ಲಿ; ವಂಶದ ಕುಡಿ ದಾರಿಯಲ್ಲಿಯೇ ಹೊರಟ್ರಾ ನಟ?
ವಿಶೇಷ ಗುಣ
ಮಾತಿನ ಭರದಲ್ಲಿ ಆಡುವ ಮಾತುಗಳನ್ನು ನಂತರ ವಿಶ್ಲೇಷಣೆ ಮಾಡಿಕೊಳ್ಳುತ್ತಾನೆ. ತನ್ನಿಂದ ತಪ್ಪಾಗಿದ್ರೆ ಹೋಗಿ ಕ್ಷಮೆ ಕೇಳುತ್ತಾರೆ. ಇದು ಗಿಲ್ಲಿ ಅವರಲ್ಲಿರುವ ವಿಶೇಷ ಗುಣ. ಬಿಬಿ ಪ್ಯಾಲೇಸ್ ಟಾಸ್ಕ್‌ನಲ್ಲಿ ಗಿಲ್ಲಿ ನಟ ಎಲ್ಲರನ್ನು ಓವರ್ ಟೇಕ್ ಮಾಡಿದ ಎಂದು ಶಿಶಿರ್ ಅಭಿಪ್ರಾಯ ವ್ಯಕ್ತಪಡಿಸಿದರು.
ಇದನ್ನೂ ಓದಿ: Bigg Bossಗೆ ಸೂರಜ್ ಸಿಂಗ್ ಎಂಟ್ರಿ ಕೊಟ್ಟಾಗ ರಿಷಾ ಗೌಡಗೆ ಏನಾಯ್ತು? ಎಲ್ಲವನ್ನೂ ಓಪನ್ ಆಗೇ ಹೇಳಿದ ನಟಿ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

