- Home
- Entertainment
- TV Talk
- Bigg Bossಗೆ ಸೂರಜ್ ಸಿಂಗ್ ಎಂಟ್ರಿ ಕೊಟ್ಟಾಗ ರಿಷಾ ಗೌಡಗೆ ಏನಾಯ್ತು? ಎಲ್ಲವನ್ನೂ ಓಪನ್ ಆಗೇ ಹೇಳಿದ ನಟಿ
Bigg Bossಗೆ ಸೂರಜ್ ಸಿಂಗ್ ಎಂಟ್ರಿ ಕೊಟ್ಟಾಗ ರಿಷಾ ಗೌಡಗೆ ಏನಾಯ್ತು? ಎಲ್ಲವನ್ನೂ ಓಪನ್ ಆಗೇ ಹೇಳಿದ ನಟಿ
ಬಿಗ್‌ಬಾಸ್‌ನಿಂದ ಎಲಿಮಿನೇಟ್ ಆಗಿ ಹೊರಬಂದಿರುವ ರಿಷಾ ಗೌಡ, ಮನೆಯೊಳಗಿನ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ. ವೈಲ್ಡ್‌ಕಾರ್ಡ್ ಎಂಟ್ರಿ ಕೊಟ್ಟಿದ್ದ ಸೂರಜ್ ಸಿಂಗ್ ಮೇಲೆ ತಮಗೆ ಕ್ರಷ್ ಇರಲಿಲ್ಲ ಎಂದು ಸ್ಪಷ್ಟಪಡಿಸಿರೋ ಅವರು ಹೇಳಿದ್ದೇನು ಕೇಳಿ.
ಅನುಭವ ಶೇರ್
Bigg Boss (ಬಿಗ್‌ಬಾಸ್‌ನಿಂದ) ರಿಷಾ ಗೌಡ ಎಲಿಮಿನೇಟ್ ಆಗಿ ಹೊರಕ್ಕೆ ಬಂದಿದ್ದು, ಇದೀಗ ಬಿಗ್‌ಬಾಸ್‌ನ ತಮ್ಮ ಹಲವು ಅನುಭವಗಳನ್ನು ಶೇರ್ ಮಾಡಿಕೊಳ್ಳುತ್ತಿದ್ದಾರೆ.
ವೈಲ್ಡ್‌ಕಾರ್ಡ್ ಎಂಟ್ರಿ
ಭರ್ಜರಿಯಾಗಿ ವೈಲ್ಡ್‌ಕಾರ್ಡ್ ಎಂಟ್ರಿ ಕೊಟ್ಟಿದ್ದ ರಿಷಾ ಗೌಡ ಮಧ್ಯದಲ್ಲಿಯೇ ಹೊರಕ್ಕೆ ಬಂದಿರುವುದು ಅವರ ಅಭಿಮಾನಿಗಳಿಗೆ ಬೇಸರವನ್ನೂ ತರಿಸಿದೆ.
ಪ್ರೇತಿ-ಪ್ರೇಮ
ಇದರ ನಡುವೆಯೇ ಬಿಗ್‌ಬಾಸ್‌ನಲ್ಲಿ ಪ್ರೀತಿ,ಪ್ರೇಮದ ಬಗ್ಗೆ ಅವರಿಗೆ ಪ್ರಶ್ನೆ ಕೇಳಲಾಗಿದೆ. ಸೂರಜ್ ಸಿಂಗ್ ಅವರು ಬಿಗ್‌ಬಾಸ್‌ಗೆ ವೈಲ್ಡ್ ಕಾರ್ಡ್ ಆಗಿ ಎಂಟ್ರಿ ಕೊಟ್ಟ ಬಳಿಕ, ಅಲ್ಲಿದ್ದ ಕೆಲವು ಯುವತಿಯರು ಹಾಗೂ ಮಹಿಳೆಯರ ರಿಯಾಕ್ಷನ್ ಬಗ್ಗೆ ಬಿಗ್‌ಬಾಸ್‌ನಲ್ಲಿ ಭಾರಿ ಚರ್ಚೆಯಾಗಿತ್ತು.
ಷರ್ಟ್ ಬಿಚ್ಚಿದಾಗ
ಸೂರಜ್ ಸಿಂಗ್ (Bigg Boss Suraj Singh) ಅವರು, ಷರ್ಟ್ ಬಿಚ್ಚಿ ಪೋಸ್ ಕೊಟ್ಟಾಗ ಕಾವ್ಯಾ ಶೈವ, ರಾಷಿಕಾ ಸೇರಿದಂತೆ ಅಲ್ಲಿದ್ದವರು ಬಾಯಿಬಾಯಿ ಬಿಟ್ಟು ನೋಡಿದ್ದರು. ಕೊನೆಗೆ ಇಲ್ಲಿರುವ ಸುಂದರವಾದ ಹುಡುಗಿಗೆ ಹೂವು ಕೊಡಿ ಎಂದು ಬಿಗ್‌ಬಾಸ್ ಹೇಳಿದಾಗ ರಾಶಿಕಾಗೆ ಅವರು ಹೂವು ಕೊಟ್ಟಿದ್ದರು.
ಲವ್‌ಸ್ಟೋರಿ ಶುರು
ಅಲ್ಲಿಂದ ಅವರಿಬ್ಬರ ಲವ್‌ಸ್ಟೋರಿ ಶುರುವಾಗಿತ್ತು. ಹಾಗೆ ನೋಡಿದರೆ, ರಾಷಿಕಾ ಅವರೇ ಒಂದು ಹಂತ ಮುಂದಕ್ಕೆ ಹೋಗಿ ಸೂರಜ್ ಮೇಲೆ ಒಲವು ತೋರುವಂತೆ ಕಂಡುಬರುತ್ತಿದೆ.
ಸೂರಜ್ ಮೇಲೆ ಕ್ರಷ್?
ಅದೇನೇ ಇರಲಿ, ಇದೀಗ ಅದೇ ವಿಷಯವನ್ನು ರಿಷಾ ಗೌಡ ಅವರಿಗೆ ಕೇಳಲಾಗಿದೆ. ಸೂರಜ್ ಮೇಲೆ ಕ್ರಷ್ ಆಗಿತ್ತಾ ಎಂದು ಪ್ರಶ್ನಿಸಲಾಗಿದೆ. ಅದಕ್ಕೆ ರಾಷಿಕಾ ಅವರು, ನಿಮಗೆ ಯಾವ ಆಂಗಲ್‌ನಲ್ಲಿ ನೋಡಿದರೂ ನನಗೆ ಹಾಗೆ ಆಗಿಲ್ಲ ಎನ್ನುವುದು ತಿಳಿಯುತ್ತದೆ. ಅವರು ಹೂವು ಕೊಟ್ಟು ಫ್ರೆಂಡ್‌ಷಿಪ್ ಮಾಡಿಕೊಳ್ಳಲು ಬಂದಾಗಲೂ ನಾನು ಮುಂದೆ ಹೋಗಲಿಲ್ಲ ಎಂದಿದ್ದಾರೆ.
ಟಾಂಗ್ ಕೊಟ್ಟಿ ರಿಷಾ
ನಾನು ಆ ರೀತಿಯ ಹುಡುಗಿ ಅಲ್ಲ, ಲುಕ್ ಎಲ್ಲಾ ನೋಡಿ ಬೀಳುವವಳು ಅಲ್ಲ. ನನಗೆ ನನ್ನದೇ ಆದ ಐಡೆಂಟಿಟಿ ಇದೆ. ಯಾರ್‍ಯಾರನ್ನೋ ನೋಡಿದ ತಕ್ಷಣ ಬೀಳುವ ಹುಡುಗಿ ಅಲ್ಲ ಎಂದು ಓಪನ್ ಆಗಿಯೇ, ಹೀಗೆ ಬೀಳುವ ಹುಡುಗಿಯರಿಗೆ ಟಾಂಗ್ ಕೊಟ್ಟಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

