- Home
- Entertainment
- TV Talk
- Bigg Boss Kannada 12 ವೀಕೆಂಡ್ ಸಂಚಿಕೆಗೆ ಡಬಲ್ ಸಂಭ್ರಮ; ಬರ್ತಿದ್ದಾರೆ ಇಬ್ಬರು ಸ್ಟಾರ್‌ಗಳು
Bigg Boss Kannada 12 ವೀಕೆಂಡ್ ಸಂಚಿಕೆಗೆ ಡಬಲ್ ಸಂಭ್ರಮ; ಬರ್ತಿದ್ದಾರೆ ಇಬ್ಬರು ಸ್ಟಾರ್‌ಗಳು
ಈ ವಾರದ ಬಿಗ್‌ಬಾಸ್ ವೀಕೆಂಡ್ ಸಂಚಿಕೆಯಲ್ಲಿ ನಿರೂಪಕ ಸುದೀಪ್ ಬದಲಿಗೆ ಇಬ್ಬರು ಸ್ಟಾರ್ ಆಗಮಿಸಲಿದ್ದಾರೆ. ಹೊಸ ಕ್ಯಾಪ್ಟನ್ ಗಿಲ್ಲಿ ನಟನ ನಾಯಕತ್ವ ಮತ್ತು ಕಾವ್ಯಾ ಆಟದ ಬದಲಾವಣೆಗಳು ಸಂಚಿಕೆಯ ಕುತೂಹಲವನ್ನು ಹೆಚ್ಚಿಸಿವೆ.

ವೀಕೆಂಡ್‌ಗೆ ಡಬಲ್ ಸಂಭ್ರಮ
ನಟ, ನಿರೂಪಕ ಸುದೀಪ್ ಈ ವಾರದ ವೀಕೆಂಡ್ ಸಂಚಿಕೆಗೆ ಬರುತ್ತಿಲ್ಲ ಎಂಬ ಸುದ್ದಿ ಎಲ್ಲರಿಗೂ ಗೊತ್ತಿರುವ ವಿಷಯ. ಸುದೀಪ್ ಬದಲಾಗಿ ಬಿಗ್‌ಬಾಸ್ ಮನೆಯೊಳಗೆ ಇಬ್ಬರು ಸ್ಟಾರ್‌ಗಳು ಆಗಮಿಸುತ್ತಿದ್ದು, ವೀಕೆಂಡ್ ಸಂಭ್ರಮ ಡಬಲ್ ಆಗಲಿದೆ.
ಧ್ರುವ ಸರ್ಜಾ ಮತ್ತು ಪ್ರೇಮ್
ಹೌದು, ಬಿಗ್‌ಬಾಸ್ ಮನೆಗೆ ನಟ ಧ್ರುವ ಸರ್ಜಾ ಮತ್ತು ನಿರ್ದೇಶಕ ಪ್ರೇಮ್ ಆಗಮಿಸುತ್ತಿದ್ದಾರೆ. ಈ ಇಬ್ಬರು ಸ್ಟಾರ್ ಕಾಂಬಿನೇಷನ್‌ನಲ್ಲಿ 'KD: The Devil' ಸಿನಿಮಾ ಮೂಡಿಬಂದಿದ್ದು, ಚಿತ್ರದ ಪ್ರಚಾರಕ್ಕಾಗಿ ಬಿಬಿ ಹೌಸ್‌ಗೆ ಬರುತ್ತಿದ್ದಾರೆ. ಪ್ರೇಮ್ ಮತ್ತು ಧ್ರುವ ಸರ್ಜಾ ವೀಕೆಂಡ್ ಸಂಚಿಕೆ ಹೇಗೆ ನಡೆಸಿಕೊಡ್ತಾರೆ ಎಂಬುದರ ಬಗ್ಗೆ ಕುತೂಹಲ ಮೂಡಿದೆ.
ಸ್ಟಾರ್ ಬಳಗ ಹೊಂದಿರುವ ಸಿನಿಮಾ
ಇತ್ತೀಚೆಗಷ್ಟೇ ಕೆಡಿ: ದಿ ಡೆವಿಲ್ ಸಿನಿಮಾದ ಅಣ್ತಮ್ಮ ಜೋಡೆತ್ತು ಕಣೋ ಸುಂದರ ಹಾಡು ರಿಲೀಸ್ ಆಗಿದ್ದು, ಜನಪ್ರಿಯವಾಗುತ್ತಿದೆ. ಅರ್ಜುನ್ ಜನ್ಯ ಸಂಗೀತದ ಹಾಡಿಗೆ ನಿರ್ದೇಶಕ ಪ್ರೇಮ್ ಧ್ವನಿಯಾಗಿದ್ದಾರೆ. ಈ ಹಾಡಿನ ಮೂಲಕ ಚಿತ್ರದ ಪಾತ್ರಗಳನ್ನು ಪರಿಚಯ ಮಾಡಿಕೊಡಲಾಗಿದೆ. ಚಿತ್ರದಲ್ಲಿ ಸಂಜಯ್ ದತ್, ಶಿಲ್ಪಾ ಶೆಟ್ಟಿ, ವಿ.ರವಿಚಂದ್ರನ್, ರಮೇಶ್ ಅರವಿಂದ್ ಸೇರಿದಂತೆ ದೊಡ್ಡ ತಾರಾಗಣವನ್ನು ಸಿನಿಮಾ ಹೊಂದಿದೆ.
ಗಿಲ್ಲಿ ನಟ ನಾಯಕತ್ವ
ಈ ಬಾರಿ ಗಿಲ್ಲಿ ನಟ ಕ್ಯಾಪ್ಟನ್ ಆಗಿದ್ದು, ಮನೆಯನ್ನು ಹೇಗೆ ನಿರ್ವಹಣೆ ಮಾಡ್ತಾರೆ ಎಂಬುದರ ಬಗ್ಗೆ ಕುತೂಹಲ ಮನೆ ಮಾಡಿದೆ. ಈ ಹಿಂದಿನ ವಾರಗಳಲ್ಲಿ ಕೆಲಸ ಮಾಡದೇ ಕ್ಯಾಪ್ಟನ್‌ಗಳಿಗೆ ಗಿಲ್ಲಿ ನಟ ತಲೆನೋವು ಆಗಿದ್ದರು. ಹಾಗಾಗಿ ಗಿಲ್ಲಿ ನಟ ನಾಯಕತ್ವದಲ್ಲಿ ಏನೆಲ್ಲಾ ನಡೆಯಬಹುದು? ಸದಸ್ಯರು ಕ್ಯಾಪ್ಟನ್ ಮಾತುಗಳನ್ನು ಕೇಳ್ತಾರಾ ಎಂಬುದನ್ನು ನೋಡಬೇಕಿದೆ.
ಇದನ್ನೂ ಓದಿ: BBK 12: ಕ್ಯಾಪ್ಟನ್ ಆಗ್ತಿದ್ದಂತೆ ಎಡವಟ್ಟು ಮಾಡಿಕೊಂಡ ಗಿಲ್ಲಿ ನಟ ; ಶುರುವಲ್ಲೇ ಎದುರಾದ ಮೊದಲ ವಿಘ್ನ!
ಕಾವ್ಯಾ ಆಟ ಬದಲಾಗುತ್ತಾ?
ಮತ್ತೊಂದೆಡೆ ಗಿಲ್ಲಿ ನಟನ ಜೊತೆಯಲ್ಲಿರುವಂತೆ ಕಾವ್ಯಾಗೆ ಪೋಷಕರು ಪರೋಕ್ಷವಾಗಿ ಸಲಹೆ ನೀಡಿದ್ದಾರೆ. ಗಿಲ್ಲಿಯಿಂದಲೇ ಕಾವ್ಯಾ ಎಂಬ ಸುಳಿವು ನೀಡಿದ್ದಾರೆ. ನಾಮಿನೇಷನ್ ಪ್ರಕ್ರಿಯೆ ಬಗ್ಗೆ ಮಾತನಾಡಿದ್ದರಿಂದ ಕಾವ್ಯಾ ಅವರ ತಾಯಿ ಮತ್ತು ಸೋದರನನ್ನು ಬಿಗ್‌ಬಾಸ್ ಮನೆಯಿಂದ ಹೊರಗೆ ಕಳುಹಿಸುತ್ತಾರೆ. ಇದೀಗ ಕಾವ್ಯಾ ತಮ್ಮ ಆಟದ ಶೈಲಿ ಬದಲಿಸಿಕೊಳ್ತಾರಾ ಎಂಬುವುದು ಮುಂದಿನ ದಿನಗಳಲ್ಲಿ ತಿಳಿಯಲಿದೆ.
ಇದನ್ನೂ ಓದಿ: BBK 12: ಯಾರು ಗಿಲ್ಲಿ ನಟನ ಬಳಿ ಇದು ಆಗೋದೇ ಇಲ್ಲ ಎಂದಿದ್ರೋ, ಅದನ್ನೇ ಮಾಡಿ ತೋರಿಸಿದ ಜಗತ್ ಕಿಲಾಡಿ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

