- Home
- Entertainment
- TV Talk
- BBK 12: ಕ್ಯಾಪ್ಟನ್ ಆಗ್ತಿದ್ದಂತೆ ಎಡವಟ್ಟು ಮಾಡಿಕೊಂಡ ಗಿಲ್ಲಿ ನಟ ; ಶುರುವಲ್ಲೇ ಎದುರಾದ ಮೊದಲ ವಿಘ್ನ!
BBK 12: ಕ್ಯಾಪ್ಟನ್ ಆಗ್ತಿದ್ದಂತೆ ಎಡವಟ್ಟು ಮಾಡಿಕೊಂಡ ಗಿಲ್ಲಿ ನಟ ; ಶುರುವಲ್ಲೇ ಎದುರಾದ ಮೊದಲ ವಿಘ್ನ!
ಬಿಗ್‌ಬಾಸ್ ಮನೆಯ 13ನೇ ವಾರದ ಕ್ಯಾಪ್ಟನ್ ಆಗಿ ಗಿಲ್ಲಿ ನಟ ಆಯ್ಕೆಯಾಗಿದ್ದಾರೆ. ಆದರೆ, ಕ್ಯಾಪ್ಟನ್ ಆದ ಖುಷಿಯಲ್ಲೇ ಮೈಕ್ ಸರಿಯಾಗಿ ಧರಿಸದೆ ಮೂಲ ನಿಯಮವನ್ನೇ ಉಲ್ಲಂಘಿಸಿ ಮನೆಯ ಸದಸ್ಯರಿಂದ ತಮಾಷೆಗೆ ಗುರಿಯಾಗಿದ್ದಾರೆ.

14ನೇ ವಾರ
13ನೇ ವಾರಕ್ಕೆ ಬಿಗ್‌ಬಾಸ್ ಮನೆಗೆ ಬಹುತೇಕರ ನೆಚ್ಚಿನ ಸ್ಪರ್ಧಿಯಾಗಿರುವ ಗಿಲ್ಲಿ ನಟ ಕ್ಯಾಪ್ಟನ್ ಆಗಿದ್ದಾರೆ. ಮನೆಯ ನಾಯಕನಾಗಿ ಕ್ಯಾಪ್ಟನ್ ರೂಮ್‌ಗೆ ಗ್ರ್ಯಾಂಡ್ ಆಗಿ ಎಂಟ್ರಿ ನೀಡುವ ಸಂದರ್ಭದಲ್ಲಿಯೇ ಗಿಲ್ಲಿ ನಟ ಎಡವಟ್ಟು ಮಾಡಿಕೊಂಡಿದ್ದಾರೆ.
ಗಿಲ್ಲಿ ನಟ ಕ್ಯಾಪ್ಟನ್
ಸಕತ್ ರಗಡ್ ಲುಕ್‌ನಲ್ಲಿ ಗಿಲ್ಲಿ ನಟ ಕ್ಯಾಪ್ಟನ್ ರೂಮ್‌ಗೆ ಎಂಟ್ರಿ ಕೊಡುತ್ತಿದ್ದರು. ಕ್ಯಾಪ್ಟನ್ ಆದ ಜೋಶ್‌ನಲ್ಲಿ ಮೈಕ್ ಸರಿಯಾಗಿ ಹಾಕಿಕೊಳ್ಳೋದನ್ನು ಗಿಲ್ಲಿ ಮರೆತಿದ್ದಾರೆ. ಕೊನೆಗೆ ಬಿಗ್‌ಬಾಸ್ ಸೂಚನೆ ನೀಡಿದ್ಮೇಲೆ ಮನೆಯ ಸದಸ್ಯರು ಜೋರಾಗಿ ಕೂಗಿ ಗಿಲ್ಲಿ ಅವರನ್ನು ತಮಾಷೆ ಮಾಡಿದ್ದಾರೆ.
ಮೂಲ ನಿಯಮದ ಉಲ್ಲಂಘನೆ
ಮೈಕ್ ಸರಿಯಾಗಿ ಹಾಕಿಕೊಳ್ಳೋದು ಬಿಗ್‌ಬಾಸ್ ಮನೆಯ ಮೂಲ ನಿಯಮವಾಗಿದೆ. ಈ ಮೂಲ ನಿಯಮ ಉಲ್ಲಂಘನೆಗೆ ಕ್ಯಾಪ್ಟನ್ ಆಗಿರುವ ಸ್ಪರ್ಧಿ ಶಿಕ್ಷೆ ನೀಡುತ್ತಾರೆ. ಇದೀಗ ಕ್ಯಾಪ್ಟನ್ ಆಗಿರುವ ಗಿಲ್ಲಿ ಅವರಿಂದಲೇ ಮೂಲ ನಿಯಮದ ಉಲ್ಲಂಘನೆಯಾಗಿದೆ.
ಫ್ಯಾಮಿಲಿ ವೀಕ್
ಫ್ಯಾಮಿಲಿ ವೀಕ್ ಆಗಿದ್ದರಿಂದ ಮನೆಯ ಸದಸ್ಯರೆಲ್ಲರೂ ಅತ್ಯಂತ ಸಂತಸದಿಂದ ಒಂದು ವಾರ ಕಳೆದಿದ್ದಾರೆ. ಆದರೆ ಕಾವ್ಯಾ ಪೋಷಕರು (ಅಮ್ಮ ಮತ್ತು ತಮ್ಮ) ಮೂಲ ನಿಯಮ ಉಲ್ಲಂಘನೆ ಮಾಡಿದ್ದರಿಂದ ಬಿಗ್‌ಬಾಸ್ ಅವರನ್ನು ಹೊರಗೆ ಕಳುಹಿಸಿದ್ದರು.
ನಾಮಿನೇಷನ್ ಪ್ರಕ್ರಿಯೆ
ಕಾವ್ಯಾ ಸೋದರ ನಾಮಿನೇಟ್ ಮಾಡುವಾಗ ಗಿಲ್ಲಿ ಹೆಸರು ಹೇಳದಂತೆ ಸಲಹೆ ನೀಡಿದ್ದರು. ನಾಮಿನೇಷನ್ ಪ್ರಕ್ರಿಯೆ ಕುರಿತು ಮಾತನಾಡಿದ್ದರು. ಹೊರಗಡೆ ಗಿಲ್ಲಿ ಮತ್ತು ಕಾವ್ಯಾ ಸ್ನೇಹ ಹೊರಗೆ ಹೇಗೆ ಕಾಣಿಸುತ್ತಿದೆ ಎಂಬುದರ ಬಗ್ಗೆಯೂ ಚರ್ಚೆ ಮಾಡುವ ಮೂಲಕ ಬಿಗ್‌ಬಾಸ್ ಮನೆಯ ಮೂಲ ನಿಯಮದ ಉಲ್ಲಂಘನೆ ಮಾಡಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

