- Home
- Entertainment
- TV Talk
- Bhagyalakshmi Serial: ದುಷ್ಟ, ನೀಚ ತಾಂಡವ್ ಪಾತ್ರ ಮುಗಿತಿದ್ಯಾ? ಈಗ ಸಿಕ್ಕ ಸುಳಿವು ಏನು?
Bhagyalakshmi Serial: ದುಷ್ಟ, ನೀಚ ತಾಂಡವ್ ಪಾತ್ರ ಮುಗಿತಿದ್ಯಾ? ಈಗ ಸಿಕ್ಕ ಸುಳಿವು ಏನು?
Bhagyalakshmi Serial Kannada: ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ತಾಂಡವ್ ಹಾಗೂ ಭಾಗ್ಯ ಮದುವೆ ನಡೆಯೋದಿಲ್ಲ ಬಿಡಿ. ಈಗಾಗಲೇ ಎಪಿಸೋಡ್‌ನಲ್ಲಿ ತಾಂಡವ್ ಕರ್ಮಕಾಂಡ ಎಲ್ಲವೂ ಬಯಲಾಗಿದೆ. ಹೀಗಿರುವಾಗ ವೀಕ್ಷಕರಿಗೆ ಒಂದು ಡೌಟ್ ಶುರುವಾಗಿದೆ. ಹೌದು, ತಾಂಡವ್ ಪಾತ್ರ ಮುಗಿಯತ್ತಾ?

ತಾಂಡವ್ ನಾಟಕ, ಮೋಸ
ತಾಂಡವ್ ಮೋಸದಿಂದ, ನಾಟಕ ಮಾಡಿಕೊಂಡು ಭಾಗ್ಯಳನ್ನು ಮತ್ತೆ ಮದುವೆ ಆಗಬೇಕು, ಅವಳ ಜೀವನವನ್ನು ನರಕ ಮಾಡಬೇಕು ಎಂದು ಹಸೆಮಣೆಯವರೆಗೂ ಬಂದಿದ್ದನು. ಇವನ ನಾಟಕ ಯಾರಿಗೂ ಗೊತ್ತಾಗಲಿಲ್ಲ. ಆದರೆ ಭಾಗ್ಯಗೆ ಡೌಟ್ ಇತ್ತು.
ಭಾಗ್ಯ ಪ್ಲ್ಯಾನ್ ಏನು?
ಈಗ ಭಾಗ್ಯ ಪ್ಲ್ಯಾನ್ ಮಾಡಿ ಶ್ರೇಷ್ಠಳನ್ನು ಮದುವೆ ಮಂಟಪಕ್ಕೆ ಕರೆಸಿದ್ದಾಳೆ. ಶ್ರೇಷ್ಠಳನ್ನು ತಾಂಡವ್ ಬಚ್ಚಿಡ್ತಾನೆ, ಅವಳೇನಾದರೂ ಬಂದರೆ ತನ್ನ ಮದುವೆ ನಡೆಯೋದಿಲ್ಲ ಎಂದು ತಾಂಡವ್ ಪ್ಲ್ಯಾನ್ ಮಾಡಿದ್ದನು. ಇದಕ್ಕೆ ಭಾಗ್ಯ ನೀರು ಎರಚಿದ್ದಾಳೆ. ತಾಂಡವ್ ಚಾಪೆ ಕೆಳಗಡೆ ತೂರಿದ್ರೆ, ಭಾಗ್ಯ ರಂಗೋಲಿ ಕೆಳಗಡೆ ತೂರಿದ್ದಾಳೆ.
ಶ್ರೇಷ್ಠ ಬಂದಾಯ್ತು
ತಾಯಿ ಆಗುತ್ತಿರುವ ಶ್ರೇಷ್ಠ ಈಗ ಮದುವೆ ಮಂಟಪಕ್ಕೆ ಬಂದು, ತಾಂಡವ್ ಬದಲಾಗಿಲ್ಲ, ಭಾಗ್ಯ ಲೈಫ್ ಹಾಳು ಮಾಡಬೇಕು ಎಂದು ಅವನು ಇಷ್ಟೆಲ್ಲ ನಾಟಕ ಮಾಡಿದ, ಭಾಗ್ಯ ಮೇಲೆ ಅವನಿಗೆ ದ್ವೇಷ ಹೆಚ್ಚಾಗಿದೆಯೇ ಹೊರತು, ಕಡಿಮೆ ಆಗಿಲ್ಲ. ಇದೆಲ್ಲ ನಾಟಕ, ನನ್ನ ಹೊಟ್ಟೆಯಲ್ಲಿ ಈಗ ತಾಂಡವ್ ಮಗು ಬೆಳೆಯುತ್ತಿದೆ ಎಂದು ಶ್ರೇಷ್ಠ ಎಲ್ಲರ ಮುಂದೆ ಹೇಳಿದ್ದಾಳೆ.
ಆದಿ-ಭಾಗ್ಯ ಮದುವೆ ನಡೆಯುತ್ತೆ
ತಾಂಡವ್ ಅಸಲಿ ಆಟ ಎಲ್ಲರಿಗೂ ಗೊತ್ತಾಗಿದೆ, ಶ್ರೇಷ್ಠ ಎಲ್ಲರ ಎದುರು ಸತ್ಯ ಹೇಳಿದ್ದಾಳೆ. ಈಗ ಭಾಗ್ಯ-ಆದಿ ಮದುವೆ ನಡೆಯುತ್ತಿದೆ ಎಂದು ಕಾಣುವುದು. ಅಲ್ಲಿಗೆ ತಾಂಡವ್ ಆಟ ಮುಗಿದಂತೆ. ಇದೆಲ್ಲ ನೋಡಿದರೆ ತಾಂಡವ್ ಪಾತ್ರ ಮುಗಿಯಲಿದೆಯಾ? ಎಂಬ ಸಂಶಯ ಶುರು ಆಗಿದೆ.
ಯಾಕೆ ಈ ಡೌಟ್?
ಎಷ್ಟು ವರ್ಷ ಅಂತ ತಾಂಡವ್‌ಗೆ ಭಾಗ್ಯ ಕಂಡರೆ ಆಗೋದಿಲ್ಲ ಎಂದು ಕಥೆ ಮಾಡ್ತಾರೆ? ವೀಕ್ಷಕರಿಗೂ ಬೇಸರ ಆಗಲಿದೆ. ಹೀಗಾಗಿ ತಾಂಡವ್ ಚಾಪ್ಟರ್‌ನ್ನು ಅಂತ್ಯ ಮಾಡುವ ಸಾಧ್ಯತೆ ಇದೆ. ಇನ್ನೊಂದು ಕಡೆ ಶ್ರೇಷ್ಠಗೂ ಕೂಡ ತಾಂಡವ್ ಜೊತೆ ಚೆನ್ನಾಗಿ ಬದುಕುವ ಆಸೆ ಶುರು ಆಗಿದೆ. ಅವಳು ಕೂಡ ಭಾಗ್ಯ ತಂಟೆಗೆ ಬರೋದು ಡೌಟ್.
ಕೊನೆಯಲ್ಲಿ ಒಳ್ಳೆಯವರಿಗೆ ಒಳ್ಳೆಯದೆ ಆಗತ್ತೆ ಅಂತಾರಲ್ವಾ… ಅದೇ ಥರ ಇಲ್ಲೂ ಆಗಬಹುದು. ಈ ಬಗ್ಗೆ ನಿಮ್ಮ ಅಭಿಪ್ರಾಯ ಏನು?
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

