ಬಜಾರಿ ಹಾಡಿಗೆ ಭರ್ಜರಿಯಾಗಿ ವಿಧಾನಸೌಧದ ಎದುರು ತನಿಷಾ ಕುಪ್ಪಂಡ ಜೊತೆ ಕುಣಿದ ಕಿಶನ್!
ಬಿಗ್‌ಬಾಸ್ ಮಾಜಿ ಸ್ಪರ್ಧಿಗಳಾದ ಕಿಶನ್ ಬಿಳಿಗಲಿ ಮತ್ತು ತನಿಶಾ ಕುಪ್ಪಂಡ, ದರ್ಶನ್ ಅಭಿನಯದ 'ದತ್ತ' ಚಿತ್ರದ ಸೂಪರ್ ಹಿಟ್ 'ಬಾರೆ ಬಾರೆ ನನ್ನ ಬಜಾರಿ' ಹಾಡನ್ನು ರಿಕ್ರಿಯೇಟ್ ಮಾಡಿದ್ದಾರೆ. ಬೆಂಗಳೂರಿನ ವಿಧಾನಸೌಧದಂತಹ ಐಕಾನಿಕ್ ಸ್ಥಳಗಳ ಮುಂದೆ ಡಾನ್ಸ್ ಚಿತ್ರೀಕರಿಸಲಾಗಿದೆ.

ಒಂದೆಡೆ ದರ್ಶನ್ ತನಗೆ ಜಾಮೀನು ಯಾವಾಗ ಸಿಗುತ್ತೋ ಅಂತಾ ಜೈಲಿನಲ್ಲಿ ಕಾಯುತ್ತಾ ಕುಳಿತಿದ್ದರೆ, ಇನ್ನೊಂದೆಡೆ ದರ್ಶನ್ ಸಿನಿಮಾದ ಸೂಪರ್ ಹಾಡುಗಳನ್ನು ಬಳಸಿಕೊಂಡು ಬಿಗ್‌ಬಾಸ್ ಮಾಜಿ ಸ್ಪರ್ಧಿ ಕಿಶನ್ ಬಿಳಿಗಲಿ ಹವಾ ಸೃಷ್ಟಿಸಿದ್ದಾರೆ.
ಬಿಗ್‌ಬಾಸ್ ಮಾಜಿ ಸ್ಪರ್ಧಿಗಳು ಹಾಗೂ ಸಿನಿಮಾ ನಟಿಯರನ್ನು ಬಳಸಿಕೊಂಡು, ಹಳೆಯ ಹಾಡುಗಳನ್ನು ರಿಕ್ರಿಯೇಟ್ ಮಾಡುವ ಕಂಟೆಂಟ್ ಕೊಡುವ ಕಿಶನ್, ಈ ಬಾರಿ ದರ್ಶನ್ ಸಿನಿಮಾದ ಹಾಡಿಗೆ ಬಿಗ್‌ಬಾಸ್‌ನ ಮತ್ತೊಬ್ಬ ಮಾಜಿ ಸ್ಪರ್ಧಿ ತನಿಶಾ ಕುಪ್ಪಂಡ ಜೊತೆಯಲ್ಲಿ ಡಾನ್ಸ್ ಮಾಡಿದ್ದಾರೆ.
ದರ್ಶನ್ ವೃತ್ತಿಜೀವನದ ಅತ್ಯಂತ ಸ್ಪೆಷಲ್ ಸಿನಿಮಾ ಆಗಿದ್ದ 'ದತ್ತ' ಚಿತ್ರದ 'ಬಾರೆ..ಬಾರೆ..ಬಾರೆ..ನನ್ನ ಬಜಾರಿ..' ಸೂಪರ್ ಹಿಟ್ ಹಾಡಿಗೆ ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ ಜೊತೆ ಡಾನ್ಸ್ ಮಾಡಿದ್ದರು. ಈ ಹಾಡು ಸೂಪರ್‌ಹಿಟ್ ಆಗಿರುವುದಕ್ಕೆ ದರ್ಶನ್ ಹಾಗೂ ರಮ್ಯಾ ಅವರ ಎನರ್ಜಿಟಿಕ್ ಡಾನ್ಸ್ ಕೂಡ ಕಾರಣವಾಗಿತ್ತು.
ಈಗ ಅದೇ ಹಾಡನ್ನು ಬಳಸಿಕೊಂಡು ಕಿಶನ್ ಹಾಗೂ ತನಿಶಾ ಕುಪ್ಪಂಡ ಬೆಂಗಳೂರಿನ ವಿಧಾನಸೌಧ ಸೇರಿದಂತೆ ವಿವಿಧ ಐಕಾನಿಕ್ ಪ್ಲೇಸ್‌ಗಳ ಎದುರು ಹಳೇ ಹಾಡಿನ ಮ್ಯಾಜಿಕ್ ಕ್ರಿಯೇಟ್ ಮಾಡಿದ್ದಾರೆ.
ಇನ್ನು ಕಿಶನ್ ಅವರ ಡಾನ್ಸ್‌ನಲ್ಲಿ ಎಂದಿನ ಎನರ್ಜಿ ಕಾಣಿಸಿದರೆ, ಅವರಿಗೆ ಸರಿಸಮ ಎನ್ನುವಂತೆ ತನಿಶಾ ಕುಪ್ಪಂಡ ಡಾನ್ಸ್ ಮಾಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಸಖತ್ ವೈರಲ್ ಆಗಿದೆ.
ಮಾಸ್ ಗೆ ಕ್ಲಾಸ್‌ಗೆ ಈ ಬಾಸ್ ಎನ್ನುವ ಶೀರ್ಷಿಕೆಯಲ್ಲಿ ಕಿಶನ್ ಈ ಡಾನ್ಸ್ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಪೋಸ್ಟ್ ಮಾಡಿದ ಎರಡೇ ಗಂಟೆಯಲ್ಲಿ 21 ಸಾವಿರ ಲೈಕ್ಸ್ ಹಾಗೂ 4.60 ಲಕ್ಷ ವೀವ್ಸ್ ಕಂಡಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

