MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • TV Talk
  • ಒಂದೇ ಒಂದು ಕಾಂಟ್ರವರ್ಸಿಯಿಂದ ಕರಿಯರ್ ಹಾಳು ಮಾಡಿಕೊಂಡ ಜನಪ್ರಿಯ Influencers

ಒಂದೇ ಒಂದು ಕಾಂಟ್ರವರ್ಸಿಯಿಂದ ಕರಿಯರ್ ಹಾಳು ಮಾಡಿಕೊಂಡ ಜನಪ್ರಿಯ Influencers

ಇಂಟರ್ನೆಟ್‌ನಲ್ಲಿ ಹೇಗೆ ವಿಷ್ಯಗಳು ವೈರಲ್ ಆಗುತ್ತವೆ ಅಂದ್ರೆ, ಇದು ಒಂದೇ ಸಲಕ್ಕೆ ವ್ಯಕ್ತಿಗೆ ಜನಪ್ರಿಯತೆಯನ್ನು ತರುತ್ತದೆ, ಇನ್ನೊಂದು ಕಡೆ  ಕಾಂಟ್ರವರ್ಸಿಗೆ ಗುರಿಯಾಗುವಂತೆ ಸಹ ಮಾಡುತ್ತದೆ. ಅದೇ ರೀತಿ ಜನಪ್ರಿಯತೆಯನ್ನು ಪಡೆದು, ಬಳಿಕ ಕಾಂಟ್ರವರ್ಸಿಯಿಂದ ಕರಿಯರ್ ಹಾಳು ಮಾಡಿದ ಯೂಟ್ಯೂಬರ್ ಗಳಿವರು.

2 Min read
Author : Pavna Das
Published : Jun 12 2026, 10:04 PM IST
Share this Photo Gallery
  • FB
  • TW
  • Linkdin
  • Whatsapp
16
ಜನಪ್ರಿಯ ಇನ್’ಫ್ಲ್ಯೂಯನ್ಸರ್
Image Credit : social media

ಜನಪ್ರಿಯ ಇನ್’ಫ್ಲ್ಯೂಯನ್ಸರ್

ಭಾರತದ ಈ ಜನಪ್ರಿಯ ಇನ್’ಫ್ಲ್ಯೂಯನ್ಸರ್ ಗಳು ತಮ್ಮ ಮಾತುಗಳಿಂದಲೇ ಒಂದು ಕಾಲದಲ್ಲಿ ಜನಪ್ರಿಯತೆಯ ಉತ್ತುಂಗಕ್ಕೆ ಏರಿದರು. ಆದರೆ ಅವರ ಅದೇ ಮಾತು ನಂತರ ಅವರ ಕರಿಯರ್ ಗೆ ಮುಳುವಾಗುವಂತಹ ಕಾಂಟ್ರವರ್ಸಿಗೆ ಗುರಿಯಾದರು. ಯಾವೆಲ್ಲಾ ಇನ್’ಫ್ಲ್ಯೂಯನ್ಸರ್ ಕಾಂಟ್ರವರ್ಸಿಗೆ ಗುರಿಯಾದರು ನೋಡೋಣ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ಪ್ರಣೀತ್ ಮೋರೆ
Image Credit : facebook

ಪ್ರಣೀತ್ ಮೋರೆ

ಬಿಗ್ ಬಾಸ್ 19 ಸ್ಪರ್ಧಿ ಮತ್ತು ಮುಂಬೈ ಮೂಲದ ಸ್ಟ್ಯಾಂಡ್-ಅಪ್ ಕಾಮಿಡಿಯನ್ ಪ್ರಣೀತ್ ಮೋರೆ ಇದೀಗ ದೊಡ್ಡ ವಿವಾದಲ್ಲಿ ಸಿಲುಕಿದ್ದಾರೆ. ಅವರ ಗುರ್ಗಾಂವ್ ಕಾರ್ಯಕ್ರಮದ ವೀಡಿಯೊ ವೈರಲ್ ಆಗಿದ್ದು, ಅದರಲ್ಲಿ ಒಬ್ಬ ಹುಡುಗ ₹370 ಬಿರಿಯಾನಿ ಜೊತೆ ಮಹಿಳೆ ದೇಹವನ್ನು ಹೋಲಿಕೆ ಮಾಡಿ ಮಾತನಾಡಿದ್ದರು. ಈ ಗಂಭೀರ ಘಟನೆ ಬಗ್ಗೆ ಕೋಪಗೊಳ್ಳುವ ಬದಲು, ಪ್ರಣೀತ್ ಮತ್ತು ಪ್ರೇಕ್ಷಕರು ನಕ್ಕು ಪ್ರೋತ್ಸಾಹಿಸಿದರು. ಈ ವೀಡಿಯೊ ಆನ್‌ಲೈನ್‌ನಲ್ಲಿ ವೈರಲ್ ಆದ ತಕ್ಷಣ ಕೋಲಾಹಲಕ್ಕೆ ಕಾರಣವಾಯಿತು, ಈ ಬಗ್ಗೆ ವ್ಯಾಪಕ ಪ್ರತಿಭಟನೆಗಳ ನಂತರ, ಮಹಾರಾಷ್ಟ್ರ ಸೈಬರ್ ಪೊಲೀಸರು ಪ್ರಣೀತ್ ಮೋರೆ ಮತ್ತು ಹುಡುಗನ ವಿರುದ್ಧ ಎಫ್‌ಐಆರ್ ದಾಖಲಿಸಿದರು. ವಿವಾದವು ಪ್ರಣೀತ್ ತನ್ನ ಇನ್‌ಸ್ಟಾಗ್ರಾಮ್ ಖಾತೆಯನ್ನು ಡಿಲಿಟ್ ಮಾಡುವ ಹಂತಕ್ಕೆ ಬಂದು ನಿಂತಿತು.

Related Articles

Related image1
Peddi Controversy: ಜಾನ್ವಿ ಕಪೂರ್ ಬೆನ್ನಿಗೆ ನಿಂತ ಕನ್ನಡದ ನಟಿ: ಇಂಡಸ್ಟ್ರಿಯ ಕರಾಳ ಸತ್ಯ ಬಿಚ್ಚಿಟ್ಟ ಆಶಿಕಾ!
Related image2
ಯಾರ ದೃಷ್ಟಿ ಬಿತ್ತೋ ಏನೋ! 2.5 ವರ್ಷದ ಮುದ್ದಾದ ಮಗ, ಪತ್ನಿ ಬಿಟ್ಟು ಹೊರಟ ಕನ್ನಡ Social Media Influencer
36
ಸಮಯ್ ರೈನಾ
Image Credit : instagram

ಸಮಯ್ ರೈನಾ

ಹಾಸ್ಯನಟ ಸಮಯ್ ಅವರ ಅತ್ಯಂತ ದೊಡ್ಡ ಮತ್ತು ಮಹತ್ವದ ವಿವಾದವು ಅವರ ಸೂಪರ್‌ಹಿಟ್ ಯೂಟ್ಯೂಬ್ ಶೋ "ಇಂಡಿಯಾಸ್ ಗಾಟ್ ಲ್ಯಾಟೆಂಟ್" ನಿಂದ ಹುಟ್ಟಿಕೊಂಡಿತು. ಈ ಕಾರ್ಯಕ್ರಮದ ಒಂದು ಸಂಚಿಕೆಯಲ್ಲಿ ಜಡ್ಜ್ ರಣವೀರ್ ಅಲ್ಲಾಹಬಾಡಿಯಾ (ಬೀರ್‌ಬೈಸೆಪ್ಸ್) ಮತ್ತು ಅಪೂರ್ವ ಮುಖಿಯಾ (ದಿ ರೆಬೆಲ್ ಕಿಡ್) ಭಾಗವಹಿಸಿದ್ದರು, ಅಲ್ಲಿ ಪೋಷಕರು ಮತ್ತು ದೈಹಿಕ ಸಂಬಂಧಗಳ ಬಗ್ಗೆ ಅತ್ಯಂತ ಆಕ್ಷೇಪಾರ್ಹ ಮತ್ತು ಅಸಭ್ಯ ಕಾಮೆಂಟ್‌ಗಳನ್ನು ಮಾಡಲಾಯಿತು. ವೀಡಿಯೊ ವೈರಲ್ ಆದ ತಕ್ಷಣ, ಇಂಟರ್ನೆಟ್ ಭುಗಿಲೆದ್ದಿತು ಮತ್ತು ಅಸ್ಸಾಂ ಮತ್ತು ಮಹಾರಾಷ್ಟ್ರ ಸೈಬರ್ ಪೊಲೀಸರು ಸಮಯ್ ರೈನಾ, ರಣವೀರ್ ಅಲ್ಲಾಹಬಾಡಿಯಾ ಮತ್ತು ಅಪೂರ್ವಾ ಮುಖಿಯಾ ವಿರುದ್ಧ ಎಫ್‌ಐಆರ್ ದಾಖಲಿಸಿದರು. ಕೊನೆಗೆ ಸಮಯ್ ರೈನಾ ಎಲ್ಲಾ ಯೂಟ್ಯೂಬ್ ವಿಡೀಯೋಗಳನ್ನು ಅಳಿಸಲಾಯಿತು.

46
ಎಲ್ವಿಶ್ ಯಾದವ್
Image Credit : X

ಎಲ್ವಿಶ್ ಯಾದವ್

ಭಾರತದ ಅತಿದೊಡ್ಡ ಯೂಟ್ಯೂಬರ್ ಆಗಿರುವ ಎಲ್ವಿಶ್ ಯಾದವ್ ಬಿಗ್ ಬಾಸ್ ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಿದರು. ಆದರೆ, ಅವರ ಗೆಲುವು ಶೀಘ್ರದಲ್ಲೇ ಹಲವಾರು ಗಂಭೀರ ವಿವಾದಗಳಿಗೆ ಕಾರಣವಾಯಿತು. ರೇವ್ ಪಾರ್ಟಿಯಲ್ಲಿ ಹಾವಿನ ವಿಷ ಪೂರೈಕೆ, ಸಾಮಾಜಿಕ ಮಾಧ್ಯಮದಲ್ಲಿ ಇತರ ಯೂಟ್ಯೂಬರ್‌ಗಳ ಮೇಲೆ ಹಲ್ಲೆ ಮತ್ತು ಬೆದರಿಕೆ ಹಾಕುತ್ತಿರುವ ವೀಡಿಯೊ, ಎಲ್ವಿಶ್ ನಿರಂತರವಾಗಿ ಪೊಲೀಸ್ ಮತ್ತು ಕಾನೂನು ತೊಂದರೆಗಳಲ್ಲಿ ಸಿಲುಕಿಕೊಂಡಿದ್ದರು. ನಂತರದ ಪೊಲೀಸ್ ಕ್ರಮ ಮತ್ತು ಜೈಲು ಶಿಕ್ಷೆಯು ಅವರ ಕರಿಯರ್ ಮತ್ತು ಬ್ರ್ಯಾಂಡ್ ಮೌಲ್ಯಕ್ಕೆ ದೊಡ್ಡ ಹೊಡೆತ ಬಿದ್ದು, ಅಭಿಮಾನಿಗಳ ಕ್ರೇಜ್ ಕೂಡ ಕಡಿಮೆಯಾಯಿತು.

56
ಮುನಾವರ್ ಫಾರೂಕಿ
Image Credit : instagram

ಮುನಾವರ್ ಫಾರೂಕಿ

ಪ್ರಸಿದ್ಧ ಹಾಸ್ಯನಟ ಮತ್ತು ಬಿಗ್ ಬಾಸ್ ವಿಜೇತ ಮುನಾವರ್ ಫಾರೂಕಿ ಜೊತೆ ಕಾಂಟ್ರವರ್ಸಿ ಯಾವಾಗಲೂ ಕನೆಕ್ಟ್ ಆಗಿರುತ್ತದೆ. 2021 ರಲ್ಲಿ ಇಂದೋರ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದ ಮೇಲೆ ಅವರು ಸುಮಾರು ಒಂದು ತಿಂಗಳು ಜೈಲು ಶಿಕ್ಷೆ ಅನುಭವಿಸಿದರು. ಈ ಘಟನೆಯಿಂದ ಅವರ ಡಜನ್ಗಟ್ಟಲೆ ಕಾರ್ಯಕ್ರಮ ರದ್ದುಗೊಂಡಿತು. ಅವರ ಕರಿಯರ್ ಸಂಪೂರ್ಣ ಕುಸಿತ ಕಂಡಿತ್ತು. ಇನ್ನು ಇವರು ಬಿಗ್ ಬಾಸ್ ಗೆ ಎಂಟ್ರಿಕೊಟ್ಟ ನಂತರ ಮತ್ತೆ ಹಲವಾರು ಹುಡುಗಿಯರ ಜೊತೆಗಿನ ಡೇಟಿಂಗ್ ನಿಂದ ಮತ್ತೆ ವಿವಾದಕ್ಕೆ ಒಳಗಾಗಿದ್ದರು.

66
ಗೌರವ್ ತನೇಜಾ
Image Credit : Instagram

ಗೌರವ್ ತನೇಜಾ

ದೇಶದ ಅತ್ಯಂತ ಪ್ರಮುಖ ವ್ಲಾಗರ್‌ಗಳಲ್ಲಿ ಒಬ್ಬರಾದ ಗೌರವ್ ತನೇಜಾ ಒಂದು ಕಾಲದಲ್ಲಿ ದೊಡ್ಡ ವಿವಾದದಲ್ಲಿ ಸಿಲುಕಿಕೊಂಡಿದ್ದರು. ಅವರ ಹುಟ್ಟುಹಬ್ಬದಂದು ನೋಯ್ಡಾ ಮೆಟ್ರೋ ನಿಲ್ದಾಣದಲ್ಲಿ ಫ್ಯಾನ್ಸ್ ಮೀಟ್ ಮಾಡುವ ಮೂಲಕ ಕೋಲಾಹಲ ಸೃಷ್ಟಿಸಿದ ನಂತರ ಅವರನ್ನು ಪೊಲೀಸರು ಬಂಧಿಸಿದರು. ನಂತರ, ಅವರ ವೈಯಕ್ತಿಕ ಮತ್ತು ವೈವಾಹಿಕ ಜೀವನದ ಬಗ್ಗೆ ಹಲವಾರು ವದಂತಿಗಳು ಮತ್ತು ಊಹಾಪೋಹಗಳು ಸಾಮಾಜಿಕ ಮಾಧ್ಯಮದಲ್ಲಿ ಹರಡಿ, ಪರ್ಫೆಕ್ಟ್ ಫ್ಯಾಮಿಲಿ ಮ್ಯಾನ್ ಎಂಬ ಅವರ ಇಮೇಜ್‌ಗೆ ಹಾನಿಯಾಗಿತ್ತು. ಫಾಲೋವರ್ಸ್ ಸಂಖ್ಯೆಯೂ ಕಡಿಮೆಯಾಯಿತು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

PD
Pavna Das
ಮೂಲತಃ ಮಂಗಳೂರಿನವಳು. ಮಂಗಳೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮದ ಸ್ನಾತಕೋತ್ತರ ಪದವಿ . ಕಳೆದ 12 ವರ್ಷಗಳಿಂದ ಪತ್ರಿಕೆ ಹಾಗೂ ಡಿಜಿಟಲ್ ಮಾಧ್ಯಮಗಳಲ್ಲಿ ಕೆಲಸ . ಸುದ್ದಿ ಬಿಡುಗಡೆ, ಗಲ್ಫ್ ಕನ್ನಡಿಗ, ಈ ಟಿವಿ ಭಾರತ್, ಕನ್ನಡ ನ್ಯೂಸ್ ನೌ, ವಿಜಯಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ. ಈಗ ಏಷ್ಯಾನೆಟ್ ಸುವರ್ಣದಲ್ಲಿ ಫ್ರೀಲಾನ್ಸರ್ . ಮನೋರಂಜನೆ, ಲೈಫ್ ಸ್ಟೈಲ್, ಟ್ರಾವೆಲ್ ಬರವಣಿಗೆ ಇಷ್ಟ.
ಯೂಟ್ಯೂಬರ್
ಮನರಂಜನಾ ಸುದ್ದಿ
ರಿಯಾಲಿಟಿ ಶೋ
ವಿವಾದ

Latest Videos
Recommended Stories
Recommended image1
ರೂಪಸಿಯಾದ ನಿವೇದಿತಾ ಗೌಡ, ಕಾಮೆಂಟ್‌ ಬಾಕ್ಸ್‌ ಕವಿಗಳಾದ ನೆಟ್ಟಿಗರು
Recommended image2
ಬಜಾರಿ ಹಾಡಿಗೆ ಭರ್ಜರಿಯಾಗಿ ವಿಧಾನಸೌಧದ ಎದುರು ತನಿಷಾ ಕುಪ್ಪಂಡ ಜೊತೆ ಕುಣಿದ ಕಿಶನ್‌!
Recommended image3
Bigg Boss​ ಪ್ರಿಯರಿಗೆ ಭರ್ಜರಿ ಗುಡ್​ ನ್ಯೂಸ್​: ಕೊನೆಗೂ ಡೇಟ್​ ಫಿಕ್ಸ್​- ಸೆಲೆಬ್ರಿಟಿಗಳು ಯಾರು
Related Stories
Recommended image1
Peddi Controversy: ಜಾನ್ವಿ ಕಪೂರ್ ಬೆನ್ನಿಗೆ ನಿಂತ ಕನ್ನಡದ ನಟಿ: ಇಂಡಸ್ಟ್ರಿಯ ಕರಾಳ ಸತ್ಯ ಬಿಚ್ಚಿಟ್ಟ ಆಶಿಕಾ!
Recommended image2
ಯಾರ ದೃಷ್ಟಿ ಬಿತ್ತೋ ಏನೋ! 2.5 ವರ್ಷದ ಮುದ್ದಾದ ಮಗ, ಪತ್ನಿ ಬಿಟ್ಟು ಹೊರಟ ಕನ್ನಡ Social Media Influencer
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved