3 ವರ್ಷಗಳಿಂದ ಒಂದೇ ಒಂದು ಟಿಕೆಟ್ ಮಾರಾಟವಿಲ್ಲ: ಮರೆತುಹೋದ ರೈಲು ನಿಲ್ದಾಣಗಳು
Indian Railways Stations: ಏಳು ನಿಲ್ದಾಣಗಳಲ್ಲಿ ಯಾವುದೇ ರೈಲು ನಿಲ್ಲದ ಕಾರಣ ಮೂರು ವರ್ಷಗಳಿಂದ ಒಂದೇ ಒಂದು ಟಿಕೆಟ್ ಮಾರಾಟವಾಗಿಲ್ಲ. ನೂರಾರು ಪ್ರಯಾಣಿಕರು ದೂರದ ನಿಲ್ದಾಣಗಳಿಗೆ ಪ್ರಯಾಣಿಸಲು ಪ್ರತಿದಿನ ತೊಂದರೆ ಅನುಭವಿಸುತ್ತಿದ್ದಾರೆ.

3 ವರ್ಷಗಳಿಂದ ಟಿಕೆಟ್‌ಗಳ ಮಾರಾಟವಿಲ್ಲ!
ರಾಂಪುರ-ಬರೇಲಿ ಮಾರ್ಗದ ಏಳು ನಿಲ್ದಾಣಗಳಲ್ಲಿ ಕಳೆದ ಮೂರು ವರ್ಷಗಳಿಂದ ಒಂದೇ ಒಂದು ಟಿಕೆಟ್ ಮಾರಾಟವಾಗಿಲ್ಲ. ಕಾರಣ? ಯಾವುದೇ ರೈಲು ನಿಲ್ಲುವುದಿಲ್ಲ!
ರೈಲುಗಳು ಓಡುತ್ತವೆ, ಆದರೆ ನಿಲ್ಲುವುದಿಲ್ಲ
63 ಕಿ.ಮೀ. ಉದ್ದದ ಈ ರೈಲು ಮಾರ್ಗದಲ್ಲಿ ಹಲವಾರು ರೈಲುಗಳು ಓಡುತ್ತವೆ, ಆದರೆ ಎಕ್ಸ್‌ಪ್ರೆಸ್ ಮತ್ತು ಸೂಪರ್‌ಫಾಸ್ಟ್ ರೈಲುಗಳು ಈ ಸಣ್ಣ ನಿಲ್ದಾಣಗಳನ್ನು ನಿರ್ಲಕ್ಷಿಸುತ್ತವೆ. ಹಾಗಾಗಿ ಇಲ್ಲಿ ಯಾವುದೇ ರೈಲುಗಳು ನಿಲುಗಡೆಯಾಗುವುದಿಲ್ಲ.
ನೂರಾರು ಪ್ರಯಾಣಿಕರ ದೈನಂದಿನ ಸಮಸ್ಯೆ
ಈ ನಿಲ್ದಾಣಗಳ ಜನರು ರೈಲು ಹಿಡಿಯಲು 20-30 ಕಿ.ಮೀ. ದೂರದ ದೊಡ್ಡ ನಿಲ್ದಾಣಗಳಿಗೆ ಹೋಗಬೇಕು ಅಥವಾ ಬಸ್‌ಗಳನ್ನು ಅವಲಂಬಿಸಬೇಕು, ಇದರಿಂದ ಸಮಯ ಮತ್ತು ಹಣ ಎರಡೂ ವ್ಯರ್ಥವಾಗುತ್ತದೆ.
ಕೊರೊನಾ ಕಿತ್ತುಕೊಂಡ ಸೌಲಭ್ಯ
ಕೊರೊನಾ ಪೂರ್ವದಲ್ಲಿ ಲಕ್ನೋದಿಂದ ಸಹರಾನ್‌ಪುರ ಮತ್ತು ದೆಹಲಿಗೆ ಪ್ರಯಾಣಿಕ ರೈಲುಗಳು ಓಡುತ್ತಿದ್ದವು, ಆದರೆ ಸಾಂಕ್ರಾಮಿಕದ ನಂತರ ಅವುಗಳನ್ನು ನಿಲ್ಲಿಸಲಾಯಿತು ಮತ್ತು ಮತ್ತೆ ಆರಂಭವಾಗಿಲ್ಲ.
ಇಲ್ಲಿ ರೈಲುಗಳು ನಿಲ್ಲುತ್ತಿದ್ದವು, ಈಗ ಭೂತನಗರ
ಶಹಜಾದ್‌ನಗರ, ಧಮೋರಾ, ದುಗನ್‌ಪುರ, ಧನೇಟಾ, ಭಿಟೌರಾ, ಪರ್ಸಾಖೇಡಾ ಮತ್ತು ಸಿಬಿಗಂಜ್ ನಿಲ್ದಾಣಗಳಲ್ಲಿ ಪ್ರತಿದಿನ ಸಾವಿರಾರು ಜನರು ಪ್ರಯಾಣಿಸುತ್ತಿದ್ದರು, ಈಗ ಈ ನಿಲ್ದಾಣಗಳು ಖಾಲಿ ಖಾಲಿಯಾಗಿವೆ.
ಸಾವಿರಾರು ಟಿಕೆಟ್‌ಗಳು ಮಾರಾಟವಾಗುತ್ತಿದ್ದವು
ಒಂದು ಖಾಸಗಿ ವಾಹಿನಿ ಪ್ರಕಟಿಸಿದ ವರದಿಯ ಪ್ರಕಾರ, ಈ ನಿಲ್ದಾಣಗಳಿಂದ ಪ್ರತಿದಿನ ಸಾವಿರಾರು ಟಿಕೆಟ್‌ಗಳು ಮಾರಾಟವಾಗುತ್ತಿದ್ದವು. ಜನರು ಲಕ್ನೋ, ದೆಹಲಿಗೆ ಪ್ರಯಾಣಿಸುತ್ತಿದ್ದರು.
ಆಶಾಕಿರಣ!
ಮುಖ್ಯ ಟಿಕೆಟ್ ಪರಿಶೀಲಕ ಗೋವಿಂದ್ ಸಿಂಗ್ ಜಾನಿ ಅವರ ಪ್ರಕಾರ, ಭವಿಷ್ಯದಲ್ಲಿ ರೈಲುಗಳು ಇಲ್ಲಿ ನಿಲ್ಲುವ ಸಾಧ್ಯತೆಯಿದೆ, ಇದರಿಂದ ಈ ನಿಲ್ದಾಣಗಳಿಗೆ ಮತ್ತೆ ಜೀವ ಬರಬಹುದು ಎಂದು ಹೇಳಿದ್ದಾರೆ.
ಬರೇಲಿ ಮತ್ತು ಮುರಾದಾಬಾದ್ ನಡುವಿನ ಪ್ರಮುಖ ರೈಲುಗಳು
ಬರೇಲಿ-ರಾಂಪುರ-ಮುರಾದಾಬಾದ್ ಮಾರ್ಗದಲ್ಲಿ ಪ್ರಮುಖ ಎಕ್ಸ್‌ಪ್ರೆಸ್ ಮತ್ತು ಸೂಪರ್‌ಫಾಸ್ಟ್ ರೈಲುಗಳು ಓಡುತ್ತಿವೆ, ಆದರೆ ಪ್ರಯಾಣಿಕ ರೈಲುಗಳು ನಿಂತಿವೆ. ಇನ್ನು ಹೆಚ್ಚಿನ ರೈಲುಗಳು ನಮ್ಮ ನಿಲ್ದಾಣದಲ್ಲಿ ನಿಲುಗಡೆಯಾಗಬೇಕೆಂದು ಸ್ಥಳೀಯರು ಆಗ್ರಹಿಸಿಸುತ್ತಾರೆ.