ಹೊಸ ವರ್ಷದ ಮೊದಲ ವೀಕೆಂಡ್, ಬೆಂಗಳೂರಿನಿಂದ ಟ್ರಿಪ್ ಹೋಗೋಕೆ ಬೆಸ್ಟ್ ಜಾಗಗಳಿವು
ಹೊಸ ವರ್ಷ ಶುರುವಾಯ್ತು..ಜೊತೆಗೆ ಹೊಸ ವರ್ಷದ ಮೊದಲ ವೀಕೆಂಡ್ ಕೂಡಾ ಬಂತು. ನ್ಯೂ ಇಯರ್‌ನಲ್ಲಿ ಸಾಕಷ್ಟು ಟ್ರಾವೆಲ್ ಮಾಡ್ಬೇಕು ಅಂತ ಅಂದ್ಕೊಂಡಿರೋರು ಹಲವು ಮಂದಿ. ನೀವು ಸಹ ಅವರಲ್ಲಿ ಒಬ್ಬರಾಗಿದ್ರೆ ಬೆಂಗಳೂರಿನಿಂದ ಟ್ರಿಪ್ ಹೋಗೋಕೆ ಬೆಸ್ಟ್ ಜಾಗಗಳು ಇಲ್ಲಿವೆ.
ಸ್ಕಂದಗಿರಿ
ಚಾರಣಿಗರ ಸ್ವರ್ಗಲೋಕ ಎಂದೆ ಖ್ಯಾತಿಯಾಗಿರುವ ಸ್ಥಳ ಸ್ಕಂದಗಿರಿ ಬೆಟ್ಟ. ಚಿಕ್ಕಬಳ್ಳಾಪುರ ತಾಲೂಕಿನ ಕಳವಾರ ಗ್ರಾಮದ ಬಳಿಯಿದೆ. ಸ್ಕಂದಗಿರಿ ಬೆಟ್ಟ ಅರಣ್ಯ ಇಲಾಖೆ ವ್ಯಾಪ್ತಿಯಲ್ಲಿದ್ದು, ಸಮುದ್ರ ಮಟ್ಟದಿಂದ 1350 ಮೀಟರ್ ಗಳ ಎತ್ತರದಲ್ಲಿದೆ. ಬೆಂಗಳೂರಿನಿಂದ ಕೇವಲ 65 ಕಿಲೋ ಮೀಟರ್ ದೂರ ಇರುವ ಕಾರಣ ರಾಜ್ಯದ ಸಾಕಷ್ಟು ಚಾರಣಿಗರು ಸೇರಿದಂತೆ ಐಟಿ ಬಿಟಿಯ ಟೆಕ್ಕಿಗಳು ವಾರಾಂತ್ಯ ಬಂದ್ರೆ ಸಾಕು ಸ್ಕಂದಗಿರಿಯತ್ತ ಮುಖ ಮಾಡುತ್ತಾರೆ.
ಅಂತರಗಂಗೆ
ಬೆಂಗಳೂರಿನಿಂದ ಒಂದು ದಿನದ ಚಾರಣಕ್ಕೆ ಕೋಲಾರದ ಅಂತರಗಂಗೆ ಉತ್ತಮ ಸ್ಥಳವಾಗಿದೆ. ಇಲ್ಲಿ ಒಂದು ದೇವಾಲಯ ಮತ್ತು ಎರಡು ಗುಹೆಗಳಿವೆ. ಅಂತರ ಗಂಗೆಯು ದಕ್ಷಿಣದ ಕಾಶಿ ಎಂದೂ ಕರೆಯಲ್ಪಡುವ ಶ್ರೀ ಕಾಶಿ ವಿಶ್ವೇಶ್ವರ ದೇವಸ್ಥಾನಕ್ಕೆ ಪ್ರಸಿದ್ಧವಾಗಿದೆ. ಈ ದೇವಾಲಯವು ಶಿವನಿಗೆ ಸಮರ್ಪಿತವಾಗಿದೆ. ಈ ಸ್ಥಳ ಬೆಂಗಳೂರಿನಿಂದ ಎಪ್ಪತ್ತು ಕಿಲೋಮೀಟರ್ ದೂರದಲ್ಲಿದೆ.
ಹೊಗೇನಕಲ್
ಹೊಗೇನಕಲ್ ಜಲಪಾತವು ಒಂದು ದಿನದ ಟ್ರಿಪ್‌ಗೆ ಅತ್ಯುತ್ತಮ ಜಾಗ. ದಕ್ಷಿಣ ಭಾರತದಲ್ಲಿ ತಮಿಳುನಾಡಿನ ಧರ್ಮಪುರಿ ಜಿಲ್ಲೆ ಮತ್ತು ಕರ್ನಾಟಕದ ಚಾಮರಾಜನಗರ ಜಿಲ್ಲೆಯ ಗಡಿಯಲ್ಲಿರುವ ಕಾವೇರಿ ನದಿಯ ಬಳಿಕ ಈ ಜಲಪಾತವಿದೆ. ಚಾಮರಾಜನಗರದಿಂದ 199 ಕಿಮೀ ದೂರದಲ್ಲಿದೆ. ಹೊಗೇನಕಲ್ ಎಂಬ ಹೆಸರು ಕನ್ನಡದಿಂದ ಬಂದಿದೆ. ನದಿಯ ನೀರು ಕೆಳಗಿರುವ ಬಂಡೆಯ ಮೇಲೆ ಬಿದ್ದಾಗ, ಚಿಮ್ಮುವ ನೀರು ಹೊಗೆಯಂತೆ ಕಾಣುತ್ತದೆ. ಹೀಗಾಗಿ ಈ ಜಾಗಕ್ಕೆ ಹೊಗೇನಕಲ್ ಎಂದು ಹೆಸರಿಡಲಾಗಿದೆ.
ನಂದಿ ಹಿಲ್ಸ್
ಬೆಂಗಳೂರಿನಿಂದ ವೀಕೆಂಡ್ ಪ್ಲಾನ್ ಮಾಡುತ್ತಿದ್ದರೆ ನಂದಿ ಹಿಲ್ಸ್ ಖಂಡಿತವಾಗಿಯೂ ನಿಮ್ಮ ಲಿಸ್ಟ್‌ನಲ್ಲಿರಬೇಕು. ಹೊಸ ವರ್ಷಕ್ಕೆ ಇಲ್ಲಿ ಪ್ರವಾಸಿಗರಿಗೆ ನಿರ್ಬಂಧ ಹೇರಲಾಗಿತ್ತು. ಆದರೆ ಈ ವೀಕೆಂಡ್‌ನಲ್ಲಿ ನೀವಲ್ಲಿಗೆ ತೆರಳಬಹುದು. ಫ್ರೆಂಡ್ಸ್ ಅಥವಾ ಫ್ಯಾಮಿಲಿ ಜೊತೆ ಸಮಯವನ್ನು ಕಳೆಯಬಹುದು. ಕ್ಯಾಂಪಿಂಗ್ ಮತ್ತು ಸಾಹಸ ಕ್ರೀಡೆಗಳಲ್ಲಿ ತೊಡಗಿಕೊಳ್ಳಬಹುದು.
ಬಿಆರ್ ಹಿಲ್ಸ್
ಬಿಳಿಗಿರಿರಂಗನ ಬೆಟ್ಟ ಅಥವಾ ಬಿಆರ್ ಹಿಲ್ಸ್ ಎಂದು ಕರೆಯಲ್ಪಡುವ ಬೆಟ್ಟಗಳ ಸಾಲು ಕರ್ನಾಟಕ-ತಮಿಳುನಾಡು ಗಡಿಯಲ್ಲಿದೆ. ಆಗ್ನೇಯ ಕರ್ನಾಟಕದಲ್ಲಿ ನೆಲೆಗೊಂಡಿರುವ BR ಹಿಲ್ಸ್ ಅಥವಾ ಬಿಳಿಗಿರಿರಂಗನಾಥ ಸ್ವಾಮಿ ದೇವಾಲಯ ವನ್ಯಜೀವಿ ಅಭಯಾರಣ್ಯವು ಎರಡೂ ಪರ್ವತ ಶ್ರೇಣಿಗಳಿಗೆ ವಿಶಿಷ್ಟವಾದ ಪರಿಸರ ವ್ಯವಸ್ಥೆಗಳಿಗೆ ನೆಲೆಯಾಗಿದೆ. ಇದು ಟ್ರೆಕ್ಕಿಂಗ್ ಮತ್ತು ರಾಫ್ಟಿಂಗ್‌ಗೆ ಸಾಕಷ್ಟು ಅವಕಾಶವನ್ನು ಒದಗಿಸುತ್ತದೆ.
ರಾಮನಗರ ಬೆಟ್ಟ
ಬೆಂಗಳೂರಿನಿಂದ 49 ಕಿಮೀ ದೂರದಲ್ಲಿರುವ ರಾಮನಗರ ಬೆಟ್ಟ ದೊಡ್ಡ ದೊಡ್ಡ ಕಲ್ಲು, ಬಂಡೆಗಳಿಂದ ಕೂಡಿದ್ದು, ನೋಡಲು ಕಣ್ಣಿಗೆ ತುಂಬಾ ಅದ್ಭುತವಾಗಿ ಕಾಣುತ್ತದೆ. ಮೆಟ್ಟಿಲು, ಕಡಿದಾದ ಬೆಟ್ಟ ಟ್ರಿಕ್ಕಿಗ್‌ಗೆ ಹೋಗುವವರಿಗೆ ಬೆಸ್ಟ್ ಜಾಗ