Tallest Shiva Statues: ಕರ್ನಾಟಕದಲ್ಲಿರುವ ಅತೀ ಎತ್ತರವಾದ ಟಾಪ್ 5 ಶಿವನ ಮೂರ್ತಿಗಳು ಯಾವುವು?
ಕರ್ನಾಟಕದಲ್ಲಿ ಹಲವು ಕಡೆಗಳಲ್ಲಿ ನೀವು ಶಿವನ ಮೂರ್ತಿಯನ್ನು ನೋಡಿರುವಿರಿ. ಆದರೆ ರಾಜ್ಯದ ಟಾಪ್ 5 ಅತಿ ಎತ್ತರದ ಶಿವನ ಮೂರ್ತಿಗಳು ಯಾವುವು? ಅವು ಎಲ್ಲಿವೆ ಅನ್ನೋದನ್ನು ಬಲ್ಲಿರಾ?

ಅತೀ ಎತ್ತರವಾದ ಟಾಪ್ 5 ಶಿವನ ಮೂರ್ತಿಗಳು
ಕರ್ನಾಟಕದಲ್ಲಿ ದೇಗುಲಗಳ ಸಂಖ್ಯೆ ತುಂಬಾನೆ ಇದೆ. ರಾಜ್ಯದ ಮೂಲೆ ಮೂಲೆಗೆ ಹೊರಟರು ಎಲ್ಲಾ ಕಡೆ ಒಂದೊಂದು ದೇಗುಲವನ್ನು ಕಾಣಬಹುದು. ಅದೇ ರೀತಿ ಇಲ್ಲಿ ಶಿವನ ಮೂರ್ತಿಗಳು ಸಹ ಸಾಕಷ್ಟಿವೆ. ಆದರೆ ಕರ್ನಾಟಕದ ಅತಿ ಎತ್ತರವಾದ ಟಾಪ್ 5 ಶಿವನ ಮೂರ್ತಿಗಳು ಎಲ್ಲಿವೆ ಅನ್ನೋದು ಗೊತ್ತಿದ್ಯಾ? ಮೊದಲನೆಯದು ನಿಮಗೆ ಖಂಡಿತಾ ಗೊತ್ತಿರುತ್ತೆ. ಉಳಿದ ಶಿವನ ಮೂರ್ತಿಗಳ ಬಗ್ಗೆ ಅಥವಾ ಶಿವಲಿಂಗದ ಬಗ್ಗೆ ತಿಳಿಯೋಣ ಬನ್ನಿ.
ಮುರುಡೇಶ್ವರ, ಉತ್ತರ ಕನ್ನಡ (Murudeshwar, Uttara Kannada)
ಮೊದಲನೇ ಸ್ಥಾನದಲ್ಲಿರೋದು ಮುರುಡೇಶ್ವರದಲ್ಲಿರುವ ಶಿವನ ವಿಗ್ರಹ. ಹೌದು ಇದು ರಾಜ್ಯದ ಅತಿ ಎತ್ತರದ ಶಿವನ ಮೂರ್ತಿಯಾಗಿದೆ. ಸಮುದ್ರದ ತಟದಲ್ಲಿ ನಿಂತಿರುವ ಈ ಶಿವನ ಸ್ವಯಂಭೂ ಲಿಂಗ ಇರುವ ದೇಗುಲದ ಹಿಂದೆಯೇ ಶಿವನ ಸುಮಾರು 123 ಅಡಿ(37 meters) ಎತ್ತರದ ಮೂರ್ತಿಯನ್ನು ನಿರ್ಮಿಸಲಾಗಿದೆ. ಇದು ರಾಜ್ಯದ ಪ್ರಮುಖ ಆಕರ್ಷಣೆಯ ಕೇಂದ್ರ ಕೂಡ ಹೌದು.
ಆದಿಯೋಗಿ, ಚಿಕ್ಕಬಳ್ಳಾಪುರ (Adiyogi Shiva Statue, Chikkaballapura)
ಎರಡನೇಯ ಅತ್ಯಂತ ಎತ್ತರದ ಶಿವನ ವಿಗ್ರಹ ಇರೋದು ಚಿಕ್ಕಬಳ್ಳಾಪುರದಲ್ಲಿ ಆದಿಯೋಗಿ ಶಿವನ ಮೂರ್ತಿ. ಇದು ಸುಮಾರು 112 ಅಡಿ (34 meters) ಎತ್ತರದಲ್ಲಿ ನಿರ್ಮಾಣ ಮಾಡಲಾಗಿದೆ. ಈ ತಾಣ ಕೂಡ ಇದೀಗ ಅತಿ ಹೆಚ್ಚು ಜನರು ವೀಕ್ಷಣೆ ಮಾಡುವಂತಹ ಜಾಗವಾಗಿದೆ.
ಕೋಟಿಲಿಂಗೇಶ್ವರ, ಕೋಲಾರ (Kotilingeshwara Temple, Kolar )
ಕೋಲಾರದಲ್ಲಿರುವ ಕೋಟಿಲಿಂಗೇಶ್ವರ ದೇಗುಲದಲ್ಲಿರುವ ಶಿವನ ಮೂರ್ತಿ ಮೂರನೇಯ ಅತಿ ಎತ್ತರದ ಶಿವನ ಮೂರ್ತಿಯಾಗಿದೆ. ಇದು ಸುಮಾರು108 ಅಡಿ(33 meters) ಎತ್ತರದಲ್ಲಿದೆ. ಇದೊಂದು ಪ್ರಮುಖ ತೀರ್ಥ ಸ್ಥಳವಾಗಿದ್ದು, ಜೊತೆಗೆ ಇಲ್ಲಿ ನೀವು ಕೋಟಿ ಲಿಂಗಗಳನ್ನು ಕಣ್ತುಂಬಿಕೊಳ್ಳುವ ಮೂಲಕ ಧನ್ಯತಾ ಭಾವವನ್ನು ಅನುಭವಿಸಬಹುದು.
ಶಿವಗಿರಿ , ವಿಜಯಪುರ (Shivagiri, Vijayapura)
ವಿಜಯಪುರ ಅಥವಾ ಬಿಜಾಪುರದಲ್ಲಿರುವ ಶಿವಗಿರಿಯ ಶಿವನ ಮೂರ್ತಿ 85 ಅಡಿ (26 meters) ಎತ್ತರವಿದ್ದು, ಇದು ರಾಜ್ಯದ ನಾಲ್ಕನೇ ಅತಿ ಎತ್ತರದ ಶಿವನ ಮೂರ್ತಿಯಾಗಿದೆ. ಇಲ್ಲಿ ಶಿವನನ್ನು ಧ್ಯಾನ ಸ್ಥಿತಿಯಲ್ಲಿ ಕಾಣಬಹುದು. ಇದು ಬಿಜಾಪುರದ ಪ್ರಮುಖ ಆಕರ್ಷಣೆ ಕೂಡ ಆಗಿದೆ.
ಶಿವೋಹಂ, ಬೆಂಗಳೂರು (Shivoham Shiva Temple, Bengaluru )
ಶಿವೋಹಂ ಶಿವ ದೇವಾಲಯ ಬೆಂಗಳೂರಿನ ಓಲ್ಡ್ ಏರ್ ಪೋರ್ಟ್ ರಸ್ತೆಯಲ್ಲಿದೆ. ಇಲ್ಲಿನ ಶಿನ ವಿಗ್ರಹವು ಸುಮಾರು 65 ಅಡಿ (20 meters) ಎತ್ತರವಾಗಿದ್ದು, ಇದು ರಾಜ್ಯದ ಐದನೇಯ ಅತಿ ಎತ್ತರದ ಶಿವಲಿಂಗವಾಗಿದೆ.