ಬೈಕ್ನಲ್ಲಿ ಲಾಂಗ್ ಡ್ರೈವ್ ಹೋಗುವವರಿಗೆ ಇಲ್ಲಿವೆ ಭಾರತದ 5 ಅತ್ಯಂತ ಸುಂದರ ರಸ್ತೆಗಳು!
Top 5 Beautiful Roads in india: ಭಾರತದಲ್ಲಿ ಸ್ವಂತ ಕಾರು, ಬೈಕ್ಗಳಲ್ಲಿ ಪ್ರವಾಸ ಮಾಡುವ ಆನಂದವೇ ಬೇರೆ. ಅದರಲ್ಲೂ ಅಗಲವಾದ ರಸ್ತೆಗಳು, ಪ್ರಾಕೃತಿಕ ಸೊಬಗ ಕಣ್ತುಂಬಿಕೊಳ್ಳುತ್ತ ಪ್ರಯಾಣ ಮಾಡಲು ಭಾರತದ ಐದು ಅತ್ಯುತ್ತಮ ರಸ್ತೆ ಮಾರ್ಗಗಳಿವು, ಬೈಕ್ ರೈಡ್ ಮಾಡುವವರಿಗೆ ಹೇಳಿ ಮಾಡಿಸಿದ ರಸ್ತೆಗಳು.

ಭಾರತದ 5 ಅತ್ಯಂತ ಸುಂದರ ರಸ್ತೆಗಳಿವು!
ಭಾರತದಲ್ಲಿ ಸ್ವಂತ ಕಾರು, ಬೈಕ್ಗಳಲ್ಲಿ ಪ್ರವಾಸ ಮಾಡುವ ಆನಂದವೇ ಬೇರೆ. ಅದರಲ್ಲೂ ಅಗಲವಾದ ರಸ್ತೆಗಳು, ಪ್ರಾಕೃತಿಕ ಸೊಬಗ ಕಣ್ತುಂಬಿಕೊಳ್ಳುತ್ತ ಪ್ರಯಾಣ ಮಾಡುವಂತಿದ್ದರೆ ಆಯಾಸವೇ ಆಗುವುದಿಲ್ಲ. ಬಹಳಷ್ಟು ಕಡೆ ನಾವು ಗೊತ್ತಿಲ್ಲದೆ ಪ್ರವಾಸ ಮಾಡುವುದರಿಂದ ಕೆಟ್ಟ ರಸ್ತೆಗಳಲ್ಲಿ ಪ್ರಯಾಣಿಸಿ ಹೈರಾಣಾಗಿಬಿಡುತ್ತೇವೆ.
'ಸಾಕಪ್ಪ ಇನ್ನೂ ಈ ಪ್ರವಾಸಕ್ಕೆ ಹೋಗುವುದೇ ಬೇಡ ಎನಿಸಿಬಿಡುತ್ತದೆ. ಆದರೆ ಕೆಲವು ಸ್ಥಳಗಳಿಗೆ ಪ್ರವಾಸ ಹೋದರೆ ಮತ್ತೆ ಮತ್ತೆ ಹೋಗಬೇಕೆನಿಸುತ್ತೆ. ಅಲ್ಲಿನ ರಸ್ತೆಗಳು ಅಷ್ಟೊಂದು ಸುಂದರವಾಗಿವೆ. ಬೈಕ್ ಕಾರುಗಳಲ್ಲಿ ನೀವು ದೀರ್ಘ ಪ್ರಯಾಣ ಮಾಡಲು ಇಷ್ಟಪಡುತ್ತೀರಾ? ಹಾಗಾದರೆ ನಿಮಗಾಗಿ ಅತ್ಯುತ್ತಮ ಮತ್ತು ಸುಂದರವಾದ ಭಾರತದ ಟಾಪ್ 5 ರಸ್ತೆಗಳ ಬಗ್ಗೆ ತಿಳಿಸುತ್ತೇವೆ.
ಪ್ರವಾಸ ಎಂದರೆ ಸ್ಥಳ ತಲುಪಿದ ನಂತರ ನೋಡುವುದಲ್ಲ. ಪ್ರಯಾಣಿಸುತ್ತಲೇ ನೋಡುವಂತಿರಬೇಕು. ಎತ್ತರದ ಕಣಿವೆಗಳು, ಇಳಿಜಾರಿನ ಜಾಲಪಾತಗಳು, ಹಿಮದಿಂದ ಆವೃತವಾಗಿರುವ ಪರ್ವತಗಳು, ಕರಾವಳಿ, ದಟ್ಟವಾದ ಕಾಡುಗಳ ಇವುಗಳ ಮಧ್ಯೆ ಸುಂದರ ಅಗಲವಾದ ರಸ್ತೆಗಳು ಇದ್ದರೆ ಪ್ರಯಾಣ ನಿಜಕ್ಕೂ ಸುಖ. ಎಲ್ಲವೂ ಒಟ್ಟಿಗೆ ಸುಂದರವಾಗಿರುವ ತಾಣಗಳಿವೆ. ಈ ಐದು ಸ್ಥಳಗಳಿಗೆ ಬೈಕ್ ಅಥವಾ ಕಾರುಗಳಲ್ಲಿ ಪ್ರಯಾಣಿಸಬಹುದು.
ಮನಾಲಿ ಟು ಲೇಹ್ಗೆ ತಲುಪುವ ರಸ್ತೆ ಅತ್ಯಂತ ಸುಂದರ!
ನೀವು ಸುಂದರ ರಸ್ತೆಯಲ್ಲಿ ಪ್ರಯಾಣಿಸುವ ಆಸೆ ಇದ್ದರೆ ಮನಾಲಿಯಿಂದ ಲೇಹ್ ಮಾರ್ಗದ ರಸ್ತೆಯಲ್ಲಿ ಪ್ರಯಾಣಿಸಿ. ಈ ರೋಡ್ ಭಾರತದ ಅತ್ಯಂತ ಸುಂದರ, ಜನಪ್ರಿಯ ಬೈಕ್ ರೈಡ್ ಮಾಡುವವರಿಗಾಗಿಯೇ ನಿರ್ಮಿಸಿದಂತಿದೆ. ಇಲ್ಲಿಗೆ ಲಕ್ಷಾಂತರ ಯುವಕರು ಪ್ರತಿವರ್ಷ ತಮ್ಮ ಸ್ಪೋರ್ಟ್ಸ್ ಬೈಕ್ಗಳಲ್ಲಿ ಇಲ್ಲಿಗೆ ಪ್ರವಾಸ ಹೊರಡುತ್ತಾರೆ. ಸುತ್ತಲೂ ಹಿಮದಿಂದ ಆವೃತವಾದ ಪರ್ವತಗಳು, ವಿಶಾಲವಾದ ಕಣಿವೆಗಳು ಮತ್ತು ತಂಪಾದ ಪರ್ವತ ಗಾಳಿ.. ಪ್ರಯಾಣವನ್ನು ನಿಜಕ್ಕೂ ವಿಶೇಷ ಎನಿಸುವಂತೆ ಮಾಡುತ್ತೆ. ಮನಾಲಿ-ಲೇಹ್ ಮಾರ್ಗದಲ್ಲಿ ಪ್ರಯಾಣಿಸುವುದರಿಂದ ಲಡಾಖ್ನ ಪ್ರಸಿದ್ಧ ಪಾಸ್ಗಳ ದೃಶ್ಯ ಕಣ್ತುಂಬಿಕೊಳ್ಳಬಹುದು. ಬೃಹತ್ ಪರ್ವತಗಳ ನಡುವೆ ಪ್ರಯಾಣಿಸುವ ಮಜಾ ಅನುಭವಿಸಿಯೇ ತೀರಬೇಕು. ಇಲ್ಲಿನ ನೈಸರ್ಗಿಕ ಸೌಂದರ್ಯ ಆಯಾಸವನ್ನು ಕಳೆಯುತ್ತದೆ.
ಬೆಸ್ಟ್ ಸಮಯ: ಮನಾಲಿಯಿಂದ ಲೇಹ್ ರಸ್ತೆ ಪ್ರವಾಸಕ್ಕೆ ಜೂನ್ ಮತ್ತು ಸೆಪ್ಟೆಂಬರ್ ನಡುವೆ ಉತ್ತಮ ಸಮಯ.
ಚೆನ್ನೈ ಟು ಪುದುಚೇರಿಗೆ
ನಿಮಗೆ ಮನಾಲಿ-ಲೇಹ್ ಪ್ರಯಾಣ ದೂರವೆನಿಸಿದರೆ ನೆರೆ ರಾಜ್ಯದ ಚೆನ್ನೈ-ಪುದುಚೇರಿ ಮಾರ್ಗದ ರಸ್ತೆಯಲ್ಲಿ ಪ್ರಯಾಣಿಸಬಹುದು. ಇಲ್ಲಿ ಕರಾವಳಿ ರಸ್ತೆ ಅದ್ಭುತವಾಗಿದೆ. ಈ ರೂಟ್ನಲ್ಲಿ ಪ್ರಯಾಣಿಸುವ ವಿಶೇಷತೆ ಎಂದರೆ ಒಂದು ಕಡೆ ಸಮುದ್ರ, ಹಸಿರು ವನರಾಸಿ, ನೀರಿನ ಮೇಲೆ ಬೀಳುವ ಸೂರ್ಯನ ಕಿರಣ ಇಡೀ ರಸ್ತೆಯನ್ನು ಸುಂದರವಾಗಿಸುತ್ತದೆ. ರಸ್ತೆಯುದ್ದಕ್ಕೂ ಸಮುದ್ರ ನೋಡುತ್ತ ಪ್ರಯಾಣಿಸಬಹುದು. ಸಮುದ್ರದಿಂದ ಬೀಸುವ ತಂಪಾದ ಗಾಳಿ ಮೈಮನಗಳಲ್ಲಿ ಪುಳಕಗೊಳಿಸಬಹುದು. ಈ ಮಾರ್ಗದಲ್ಲಿ ಸ್ವಲ್ಪ ದೂರ ಹೋಗುತ್ತಿದ್ದಂತೆ ನೈಸರ್ಗಿಕ ಸೊಬಗಿನ ಸುಂದರ ತಾಣಗಳು ಎದುರುಗೊಳ್ಳುತ್ತವೆ. ವಾರಂತ್ಯದ ಪ್ರವಾಸಕ್ಕೆ ಬೆಸ್ಟ್. ನೀವು ಪ್ರಯಾಣಿಸಬೇಕು ಎಂದುಕೊಂಡಿದ್ದಾರೆ ಅಕ್ಟೋಬರ್ ನಿಂದ ಫೆಬ್ರವರಿ ವರೆಗೆ ಒಳ್ಳೆಯ ಸಮಯ.
ಬೆಂಗಳೂರಿನಿಂದ ಊಟಿಗೆ ಮಾರ್ಗವೂ ಅತ್ಯಂತ ಸುಂದರ!
ಇದು ಇನ್ನೂ ಸಮೀಪ. ನಿಮಗೆ ವಾರಂತ್ಯದಲ್ಲಿ ಬೈಕ್ನಲ್ಲಿ ಲಾಂಗ್ ಡ್ರೈವ್ ಮಾಡಬೇಕು ಅನಿಸಿದರೆ ಬೆಂಗಳೂರು ಟು ಊಟಿ ಮಾರ್ಗದಲ್ಲಿ ಬೈಕ್ ನಲ್ಲಿ ಹೋಗಬಹುದು. ಬೆಂಗಳೂರಿನಿಂದ ಊಟಿಗೆ ಹೋಗುವ ಮಾರ್ಗ ಇದೆಯಲ್ಲ, ಇದರ ವಿಶೇಷ ಏನೆಂದರೆ ಇಲ್ಲಿ 36 ಹೇರ್ ಪಿನ್ ತಿರುವುಗಳಿವೆ. ಇದಕ್ಕಾಗಿಯೇ ಇಲ್ಲಿಗೆ ಬೈಕ್ನಲ್ಲಿ ಯುವಕರು ತಂಡೋಪತಂಡವಾಗಿ ಬರುತ್ತಲೇ ಇರುತ್ತಾರೆ. ಜೊತೆಗೆ ಮುದುಮಲೈ ರಾಷ್ಟ್ರೀಯ ಉದ್ಯಾನವನವು ದಾರಿಯುದ್ದಕ್ಕೂ ಇದ್ದು ಪ್ರಯಾಣ ಇನ್ನಷ್ಟು ಮಜಾ ಕೊಡುತ್ತದೆ. ರಸ್ತೆಗಳ ಎಡ-ಬಲ. ಚಹಾ ತೋಟಗಳು, ಅರ್ಧದಾರಿ ಒಮ್ಮೆ ಎದುರಾಗುವ ಜಲಪಾತಗಳು, ಕ್ರಿಸ್ಟಲ್ ಕ್ಲಿಯರ್ನಂತಿರುವ ಸರೋವರಗಳು ಇವೆಲ್ಲವೂ ಕಣ್ತುಂಬಿಕೊಳ್ಳಬಹುದು. ಈ ಮಾರ್ಗದ ರಸ್ತೆ ಪ್ರಯಾಣವು ಸುಮಾರು ಆರುಗಂಟೆಗಳಷ್ಟು ದೀರ್ಘವಾಗಿದೆ. ಹೀಗಾಗಿ ಇಲ್ಲಿಗೆ ಪ್ರಯಾಣಿಸುವವರು ಊಟ-ತಿಂಡಿ ಜೊತೆಗೆ ಕುಡಿಯಲು ನೀರು ತೆಗೆದುಕೊಂಡು ಹೋಗಬೇಕಾಗಿಯೂ ಇಲ್ಲ. ಏಕೆಂದರೆ ದಾರಿಯುದ್ಧಕ್ಕೂ ಹಲವು ನಿಲ್ದಾಣಗಳಿವೆ, ಇಲ್ಲಿ ಎಲ್ಲವೂ ಸಿಗುತ್ತದೆ.
ಈ ರಸ್ತೆ ಪ್ರಯಾಣಕ್ಕೆ ಅಕ್ಟೋಬರ್ ನಿಂದ ಜೂನ್ವರೆಗೆ ಉತ್ತಮ.
ಗುವಾಹಟಿಯಿಂದ ತವಾಂಗ್ ಪ್ರಯಾಣ
ಗುವಾಹಟಿಯಿಂದ ಈಶಾನ್ಯ ಭಾರತದ ತವಾಂಗ್ಗೆ ರಸ್ತೆ ಪ್ರಯಾಣವು ಅತ್ಯಂತ ಸುಂದರ ಅನುಭವ. ದಾರಿಯುದ್ದಕ್ಕೂ ಹಚ್ಚಹಸಿರು, ಇಲ್ಲಿನ ದೃಶ್ಯಗಳು ಅತ್ಯಂತ ಸುಂದರ ಯಾವಾಗಲೂ ನೆನಪಿನಲ್ಲುಳಿಯುವಂತದ್ದು, ಆದರೆ ಈ ಮಾರ್ಗದಲ್ಲಿ ಪ್ರಯಾಣಿಸುವ ಮೊದಲು ಒಂದು ವಿಷಯ ನೆನಪಿನಲ್ಲಿಟ್ಟುಕೊಳ್ಳಬೇಕು. ಭಾರತೀಯ ಮತ್ತು ವಿದೇಶಿ ನಾಗರಿಕರು ಅರುಣಾಚಲ ಪ್ರದೇಶಕ್ಕೆ ಪ್ರವೇಶಿಸಲು ಇನ್ನರ್ ಲೈನ್ ಪರ್ಮಿಟ್ ಅಗತ್ಯವಿದೆ. ಗುವಾಹಟಿಯಿಂದ ತವಾಂಗ್ಗೆ ಪ್ರಯಾಣವನ್ನು ಸುಮಾರು 14 ಗಂಟೆಗಳಲ್ಲಿ ಪೂರ್ಣಗೊಳಿಸಬಹುದು. ಈ ರಸ್ತೆ ಪ್ರವಾಸಕ್ಕೆ ಉತ್ತಮ ಸಮಯವೆಂದರೆ ಮಾರ್ಚ್ ನಿಂದ ಅಕ್ಟೋಬರ್ ವರೆಗೆ.
ಮನಾಲಿ ಟು ಶಿಮ್ಲಾಗೆ
ಮನಾಲಿಯಿಂದ ಮಂಡಿ ಮೂಲಕ ಶಿಮ್ಲಾಗೆ ಹೋಗುವ ಮಾರ್ಗವು ಸುಂದರವಾದ ಪರ್ವತ ಪ್ರಯಾಣಕ್ಕೂ ಹೆಸರುವಾಸಿಯಾಗಿದೆ. ಉತ್ತಮ ರಸ್ತೆ, ಒಂದು ಬದಿಯಲ್ಲಿ ಎತ್ತರದ ಬಂಡೆಗಳು, ಮತ್ತೊಂದೆಡೆ ಎತ್ತರದ ಪರ್ವತಗಳು ಮತ್ತು ಆಳವಾದ ಕಂದರಗಳು, ಈ ಮಾರ್ಗವನ್ನು ಕಾರು ಅಥವಾ ಬೈಕ್ ಮೂಲಕ ಅನ್ವೇಷಿಸಲು ಸೂಕ್ತವಾಗಿಸುತ್ತದೆ.
ಭಾರತದ ಐದು ಸುಂದರ ರಸ್ತೆಗಳು
ಮನಾಲಿಯಿಂದ ಶಿಮ್ಲಾ ತಲುಪಲು ಹಿಮಾಚಲ ಪ್ರವಾಸೋದ್ಯಮ ಬಸ್ಗಳು ಸಹ ಲಭ್ಯವಿದೆ, ಆದರೆ ತಮ್ಮದೇ ಆದ ವೇಗದಲ್ಲಿ ಮಾರ್ಗದ ನೈಸರ್ಗಿಕ ಸೌಂದರ್ಯವನ್ನು ಅನುಭವಿಸಲು ಇಷ್ಟಪಡುವವರಿಗೆ, ಕಾರು ಅಥವಾ ಬೈಕ್ನಲ್ಲಿ ಪ್ರಯಾಣಿಸುವುದು ಉತ್ತಮ ಅನುಭವವಾಗಬಹುದು. ಶಿಮ್ಲಾವನ್ನು ಬಿಟ್ಟ ನಂತರ, NH-88 NH-21 ಗೆ ಸಂಪರ್ಕ ಕಲ್ಪಿಸುತ್ತದೆ. ಶಿಮ್ಲಾದಿಂದ ಸರಿಸುಮಾರು 33 ಕಿಲೋಮೀಟರ್ ದೂರದಲ್ಲಿ, ಸುಂದರವಾದ ವಿಭಾಗವು ಶಲಾಘಾಟ್ಗೆ ಕಾರಣವಾಗುತ್ತದೆ.
ದಾರಿಯುದ್ದಕ್ಕೂ, ನೀವು ಹಲವಾರು ಸ್ಥಳೀಯ ತಿನಿಸುಗಳು ಸವಿಯಬಹುದು, ಅಲ್ಲಿ ಪಂಜಾಬಿ ಮೀಲ್ಸ್ ಕೂಡ ಸಿಗುತ್ತೆ. ಸುಮಾರು 51 ಕಿಲೋಮೀಟರ್ ಮುಂದೆ, ನೀವು ಡಾಲ್ಡಮೋಡ್ ಮತ್ತು ನಂತರ ಬಾಗೆ ತಲುಪುತ್ತೀರಿ. ಪ್ರಯಾಣದ ಉದ್ದಕ್ಕೂ, ನೀವು ಸುತ್ತಮುತ್ತಲಿನ ಸಸ್ಯವರ್ಗ ಮತ್ತು ನೈಸರ್ಗಿಕ ದೃಶ್ಯಾವಳಿಗಳನ್ನು ಪರ್ವತಗಳ ಜೊತೆಗೆ ನೋಡಬಹುದು. ಅಂಕುಡೊಂಕಾದ ಮತ್ತು ಅಂಕುಡೊಂಕಾದ ಮಾರ್ಗಗಳು ಈ ಪ್ರಯಾಣವನ್ನು ಇನ್ನಷ್ಟು ರೋಮಾಂಚನಗೊಳಿಸುತ್ತವೆ. ಈ ಮಾರ್ಗವು ಛಾಯಾಗ್ರಹಣ ಉತ್ಸಾಹಿಗಳಿಗೆ ಸಹ ಬಹಳ ಆಕರ್ಷಕವಾಗಿದೆ.
ಆರೋಗ್ಯ, ಸೌಂದರ್ಯ, ಫಿಟ್ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.















