- Home
- Automobile
- Bike News
- ಹೆತ್ತವರು, ಪತ್ನಿ, ಮಕ್ಕಳೊಂದಿಗೆ ಪ್ರಯಾಣಿಸಲು ಕಂಫರ್ಟೆಬಲ್ ಸೀಟು ಇರುವ 5 ಅತ್ಯುತ್ತಮ ಬೈಕ್ಗಳಿವು!
ಹೆತ್ತವರು, ಪತ್ನಿ, ಮಕ್ಕಳೊಂದಿಗೆ ಪ್ರಯಾಣಿಸಲು ಕಂಫರ್ಟೆಬಲ್ ಸೀಟು ಇರುವ 5 ಅತ್ಯುತ್ತಮ ಬೈಕ್ಗಳಿವು!
Comfortable bike pillion seats: ಎಲ್ಲ ಬೈಕ್ಗಳು ಕುಟುಂಬದೊಂದಿಗೆ ಪ್ರಯಾಣಿಸಲು ಯೋಗ್ಯವಾಗಿರುವುದಿಲ್ಲ. ನೀವು ವಯಸ್ಸಾದ ಅಪ್ಪ-ಅಮ್ಮ, ಹೆಂಡ್ತಿ ಮಕ್ಕಳೊಂದಿಗೆ ಬೈಕ್ನಲ್ಲಿ ಪ್ರಯಾಣಿಸಲು ಬಯಸಿದರೆ, ಅತ್ಯುತ್ತಮ ಆರಾಮದಾಯಕ ಸೀಟುಗಳಿರುವ ಈ ಐದು ಬೈಕ್ಗಳನ್ನು ಖರೀದಿಸಬಹುದು.

Comfortable bike pillion seats: ಬೈಕ್ ಖರೀದಿಸುವ ಮುನ್ನ ಸೀಟು ಗಮನಿಸಿ
Comfortable bike pillion seats: ಬೈಕ್ ಖರೀದಿಸುವುದು ವೈಯಕ್ತಿಕ ಓಡಾಟಕ್ಕಷ್ಟೇ ಅಲ್ಲ, ಕುಟುಂಬದೊಂದಿಗೆ ಸುತ್ತಾಟಕ್ಕೂ ಬೇಕಾಗುತ್ತೆ. ಸಮೀಪದ ಊರುಗಳಿಗೆ ಹೋಗುವುದು, ಹೆಂಡ್ತಿ ಮಕ್ಕಳೊಂದಿಗೆ ಮಾರುಕಟ್ಟೆಗೆ ಹೋಗುವುದರಿಂದಿಡಿದು ಮಕ್ಕಳನ್ನು ಶಾಲೆಗೆ ಬಿಡಲು ಹೋಗುವುದಕ್ಕೂ ಬೈಕ್ ಬೇಕಾಗುತ್ತದೆ. ಹೀಗಾಗಿ ಬೈಕ್ ಖರೀದಿಸುವ ಮುನ್ನ ಹಿಂಬದಿ ಸೀಟಿನ ಬಗ್ಗೆ ಗಮನ ಹರಿಸಬೇಕು. ವಯಸ್ಸಾದ ಅಪ್ಪ ಅಮ್ಮ, ಚಿಕ್ಕ ಮಕ್ಕಳು, ಪತ್ನಿ ಕೂಡಲು ಆರಾಮ ಎನಿಸುಂತ ಸೀಟುಗಳು ಇರುವುದು ಮುಖ್ಯ.
ಹೀಗಾಗಿ ಬೈಕ್ ಖರೀಸುವುದಾಗ ಸ್ಟೈಲೀಸ್ ಒಂದೇ ಮುಖ್ಯವಲ್ಲ. ಅದರ ಸೀಟು ಕೂಡ ಕಂಫರ್ಟಬಲ್ ಆಗಿ ಇರೋದು ಕೂಡ ಮುಖ್ಯ. ಕೆಲವು ಬೈಕ್ಗಳ ಹಿಂಬದಿ ಸೀಟು ತುಂಬಾ ಎತ್ತರವಾಗಿರುತ್ತೆ. ಹಿಂದೆ ಕುಳಿತವರು ತುಂಬಾ ಕಿರಿಕಿರಿ ಅನುಭವಿಸುತ್ತಾರೆ. ಬೈಕ್ ಮೇಲೆ ಪ್ರಯಾಣಿಸಲು ಇದೇ ಕಾರಣಕ್ಕೆ ಹಿಂದೇಟು ಹಾಕುತ್ತಾರೆ. ಹೀಗಾಗಿ ಕುಟುಂಬದವರು ಕೂರಲು ಆರಾಮದಾಯಕ ಸೀಟುಗಳಿರುವ ಐದು ಬೈಕ್ಗಳು ಇಲ್ಲಿವೆ.
ರಾಯಲ್ ಎನ್ಫೀಲ್ಡ್ ಬುಲೆಟ್ 350
ಬೆಲೆ: ರೂ. 1.67 ಲಕ್ಷದಿಂದ (ಎಕ್ಸ್ ಶೋ ರೂಂ) ಪ್ರಾರಂಭ
ಟ್ರೆಡಿಷನ್ ಲುಕ್ ನಲ್ಲಿರುವ ಈ ಬೈಕ್ ನಲ್ಲಿ ಕುಟುಂಬದೊಂದಿಗೆ ಪ್ರಯಾಣಿಸಲು ತುಂಬಾ ಆರಾಮಾದಾಯಕ. ರಾಯಲ್ ಎನ್ಫೀಲ್ಡ್ ಬುಲೆಟ್ 350 ಬೈಕ್ನಲ್ಲಿ ಹಿಂಬದಿ ಸೀಟು ಅಷ್ಟೇ ಅಲ್ಲ, ರೈಡ್ ಮಾಡುವವರಿಗೆ ಕಂಫರ್ಟ್ ಸೀಟು ಇದೆ. ಈ ಬೈಕ್ನ ಸೀಟು ಹತ್ತಲು, ಇಳಿಯಲು ಸುಲಭವಾಗಿದೆ. ಇದರ ಜೊತೆಗೆ ಗುಣಮಟ್ಟದಲ್ಲಿ ಎರಡು ಮಾತಿಲ್ಲ. ಎಲ್ಲ ರಸ್ತೆಗಳಿಗೂ ಹೊಂದಿಕೊಳ್ಳುವ ಬೈಕ್ ಇದಾಗಿದೆ. ಆದರೆ ನೀವು ನೆನಪಿಡಬೇಕಾದ ಒಂದು ವಿಷಯವೆಂದರೆ ಈ ಬೈಕ್ ತುಂಬಾ ಭಾರವಾಗಿದೆ. ವೇಗ ಕಡಿಮೆಯಾದಾಗ ಭಾರ ಹೆಚ್ಚಾಗುತ್ತೆ. ಜೊತೆಗೆ ಇಕ್ಕಟ್ಟಾದ ತಿರುವುಗಳಲ್ಲಿ, ಅಕ್ಕಪಕ್ಕದ ಪ್ರಯಾಣಿಕರ ವಾಹನಗಳಿಗೆ ತಾಗದಂತೆ ಬ್ಯಾಲೆನ್ಸ್ ಮಾಡಲು ಅಂದರೆ ಬೈಕ್ ನಿಯಂತ್ರಿಸುವಷ್ಟು ಶಕ್ತಿವಂತರಿದ್ರೆ ಮಾತ್ರ ಈ ಬೈಕ್ ಖರೀದಿಸಬಹುದು.
ಟಿವಿಎಸ್ ರೋನಿನ್
ಬೆಲೆ: ರೂ. 1.30 ಲಕ್ಷದಿಂದ (ಎಕ್ಸ್ ಶೋ ರೂಂ) ಪ್ರಾರಂಭ
ಟಿವಿಎಸ್ ರೋನಿನ್ ಕೂಡ ಉತ್ತಮ, ಕಂಫರ್ಟಬಲ್ ಸೀಟು ಹೊಂದಿರುವ ಬೈಕ್ ಆಗಿದೆ.
ಕಮ್ಯೂಟರ್ ಬೈಕ್ಗಿಂತ ಇದು ಭಿನ್ನ, ವಿಶಿಷ್ಟ ಲುಕ್ ಜೊತೆಗೆ ಕಂಫರ್ಟಬಲ್ ರೈಡ್ ಮಾಡಲು ಈ ಬೈಕ್ ಬೆಸ್ಟ್. ಟಿವಿಎಸ್ ರೋನಿನ್ ವಿಶೇಷತೆಯೇ ಅದರ ಇಂಜಿನ್. ಕಡಿಮೆ ವೇಗದಲ್ಲಿಯೂ ಉತ್ತಮ ಪಿಕಪ್ ಇದೆ. ಇದಕ್ಕೆ ಅಳವಡಿಸಿರುವ ಸೀಟು, ಅದರ ಗುಣಮಟ್ಟ, ವಿನ್ಯಾಸ ಎಲ್ಲವೂ ಹಿಂಬದಿ ಕೂಡುವವರಿಗೆ ಕಂಫರ್ಟ್ ಆಗಿದೆ. ಇನ್ನೊಂದು ಪ್ರಮುಖ ವಿಷಯವೆಂದರೆ ಟಿವಿಎಸ್ ಹೆಚ್ಚುವರಿಯಾಗಿ ಬ್ಯಾಕ್ರೆಸ್ಟ್ ಕೂಡ ನೀಡುತ್ತಿದೆ. ಹೀಗಾಗಿ ಹಿಂದೆ ಕುಳಿತಿರುವ ವಯಸ್ಸಾದವರಿಗೆ ಬೆನ್ನಿಗೆ ಇದರಿಂದ ಸಪೋರ್ಟ್ ಸಿಕ್ಕು. ಆರಾಮವಾಗಿ ಕುಳಿತು ಪ್ರಯಾಣಿಸಬಹುದು.
ಹೋಂಡಾ ಯೂನಿಕಾರ್ನ್(Honda Unicorn)
ಬೆಲೆ: ರೂ. 1.15 ಲಕ್ಷದಿಂದ (ಎಕ್ಸ್ ಶೋ ರೂಂ) ಪ್ರಾರಂಭವಾಗುತ್ತದೆ. ಈ ಬೈಕ್ ದಿನನಿತ್ಯದ ಪ್ರಯಾಣಕ್ಕೆ ಉತ್ತಮ. ಅಲ್ಲದೆ ವಯಸ್ಸಾದ ತಂದೆ-ತಾಯಿಯೊಂದಿಗೆ ಪ್ರಯಾಣಿಸುವುದು ಹೆಚ್ಚು ಎಂದಾದರೆ ಈ ಬೈಕ್ ಖರೀದಿಸಿ ಏಕೆಂದರೆ ಕಂಫರ್ಟಬಲ್ ಆಗಿರುವ ಸೀಟು ಇದೆ. ಉದ್ದವಾದ, ಸಮತಟ್ಟಾದ, ಒಂದೇ ಸೀಟ್ ಇರುವುದರಿಂದ ಹಿರಿಯರಿಗೆ ಕೂಡಲು ಕಂಫರ್ಟ್. ಗ್ರಾಬ್ ರೈಲ್ ಅನ್ನು ಸುಲಭ ಹಿಡಿತಕ್ಕಾಗಿ ಇರಿಸಲಾಗಿದೆ. ಪಿಲಿಯನ್ ಫುಟ್ಪೆಗ್ಗಳ ಕೂಡ ಕಂಫರ್ಟ್ ಇದೆ.
ಈ ಬೈಕ್ನಲ್ಲಿರುವ ಸಸ್ಪೆನ್ಷನ್ ನಿಂದ ರಸ್ತೆಗಳಲ್ಲಿ ಎದುರಾಗುವ ಗುಂಡಿಗಳು, ಉಬ್ಬುಗಳ ಪರಿಣಾಮ ಹಿಂಬದಿ ಕುಳಿತವರಿಗೆ ತೊಂದರೆಯಾಗದಂತೆ ತಡೆಯುತ್ತದೆ. ಸ್ಪೋರ್ಟಿ ರೈಡಿಂಗ್ಗಿಂತ ಇದು ಆರಾಮವಾಗಿ ರೈಡ್ ಮಾಡಲು ಇಷ್ಟಪಡೋರಿಗೆ ಈ ಯೂನಿಕಾರ್ನ್ ಬೈಕ್ ಉತ್ತಮ ಆಯ್ಕೆ.
ಹೋಂಡಾ ಹೆನೆಸ್ Honda H'ness CB350
ಹೋಂಡಾ ಹೆನೆಸ್
ಬೆಲೆ: ರೂ. 1.93 ಲಕ್ಷದಿಂದ (ಎಕ್ಸ್ ಶೋ ರೂಂ) ಪ್ರಾರಂಭ
ಇದು ಕೂಡ ಕುಟಂಬದವರೊಂದಿಗೆ ಪ್ರಯಾಣಿಸಲು. ಅದರಲ್ಲೂ ಕೆಟ್ಟ ರಸ್ತೆಗಳು, ತಗ್ಗುದಿಣ್ಣೆಗಳಂತಹ ರಸ್ತೆಗಳಲ್ಲಿ ಪ್ರಯಾಣಿಸಲು ಆರಾಮದಾಯಕ. ಇದರ ಎಂಜಿನ್ ತುಂಬಾ ಶಕ್ತಿಶಾಲಿಯಾಗಿದೆ. ಸ್ಪೋರ್ಟಿವ್ ರೈಡ್ಗಿಂತ ಆರಾಮವಾಗಿ ಫ್ಯಾಮಿಲಿ ಜೊತೆ ಪ್ರಯಾಣಿಸಲು ಇದು ಉತ್ತಮ ಬೈಕ್. ಹಿಂದೆ ಕೂಡುವವರಿಗಾಗಿ ಇದರ ಸೀಟು ವಿಶಿಷ್ಟವಾಗಿ ವಿನ್ಯಾಸಗೊಳಿಸಲಾಗಿದೆ. ದೂರದ ಪ್ರಯಾಣವೂ ಕೂಡ ಆರಾಮ ಎನಿಸುವಂತಿದೆ.
ಇದರ ಸಸ್ಪೆನ್ಷನ್ ಗುಂಡಿಗಳು, ಹಂಪ್ಸ್ ಅಥವಾ ಕೆಟ್ಟ ರಸ್ತೆಗಳಲ್ಲಿ ಪ್ರಯಾಣಿಸಲು ಕಂಫರ್ಟ್ ಆಗಿದೆ. ಸೀಟು ಆಗಲವಾಗಿದೆ. ಹತ್ತಲು ಇಳಿಯಲು ಅನುಕೂಲಕರವಾಗಿದೆ. ಹೀಗಾಗಿ ಕುಟುಂಬದೊಂದಿಗೆ ದೂರದ ಪ್ರಯಾಣಕ್ಕೆ ಈ ಬೈಕ್ ಉತ್ತಮ ಆಯ್ಕೆಯಾಗಿದೆ.
ಜಾವಾ 42 ಎಫ್ಜೆ(Jawa 42 FJ)
ಬೆಲೆ: ರೂ. 2.15 ಲಕ್ಷ (ಎಕ್ಸ್ ಶೋ ರೂಂ)
ಮಾಡರ್ನ್ ಲುಕ್ ಜೊತೆಗೆ ವಿಂಟೇಜ್ ಸ್ಟೈಲ್ನಲ್ಲಿ ವಿನ್ಯಾಸಗೊಳಿಸಲಾಗಿರುವ ಈ ಬೈಕ್ ನಲ್ಲಿ ರೈಡ್ ಮಾಡಲು ಪ್ರತಿಯೊಬ್ಬ ಯುವಕನ ಕನಸು. ಅದರಲ್ಲೂ ಕುಟುಂಬದೊಂದಿಗೆ ಪ್ರಯಾಣಿಸುವುದು ಹೊಸ ಅನುಭವ ನೀಡುತ್ತೆ. ಜಾವಾ 42 FJ ಹಿಂಬದಿ ಸೀಟು ಕಂಫರ್ಟ್ ಆಗಿದೆ. ರೈಡ್ ಮಾಡುವವರಿಗೆ ಆರಾಮ ಎನಿಸುವಂತೆ ವಿನ್ಯಾಸಗೊಳಿಸಲಾಗಿದೆ. ಆಗಾಗ ಹೆತ್ತವರೊಂದಿಗೆ ಪ್ರಯಾಣಿಸುವವರು ನೀವಾಗಿದ್ದಾರೆ ಈ ಬೈಕ್ ಖರೀದಿಸಲಬಹುದು.
ಬೈಕ್ ಖರೀದಿಸುವಾಗ ಈ ವಿಷಯ ನೆನಪಿರಲಿ
ಹತ್ತುವುದು ಇಳಿಯುವುದು: ಬಹಳಷ್ಟು ಬೈಕ್ಗಳಿಗೆ ಹೆತ್ತವರು ಬಿಡಿ ಪತ್ನಿ ಮಕ್ಕಳು ಕೂಡ ಹತ್ತಲು ಹರಸಾಹಸ ಪಡಬೇಕಾಗುತ್ತೆ, ಸೀಟು ಎತ್ತರ ಮತ್ತು ಇಳಿಜಾರು ಇರುವುದರಿಂದ ಹಿಂದೆ ಕುಳಿತವರಿಗೆ ಕಂಫರ್ಟ್ ಬದಲು ಕಿರಿಕಿರಿಯಾಗುತ್ತದೆ. ಸೀಟಿನ ಎತ್ತರ ತುಂಬಾ ಹೆಚ್ಚಿರಬಾರದು, ಸಮತಟ್ಟಾಗಿದ್ದಷ್ಟು ಆರಾಮದಾಯಕ.
ಪಿಲಿಯನ್ ಸೀಟ್: ಸೀಟು ಅಗಲವಾಗಿರಬೇಕು. ಅದರ ಕುಷನಿಂಗ್ ವರ್ಕ್ ಗಮನಿಸಬೇಕು, ಹಿಂದೆ ಕುಳಿತಿರುವ ವ್ಯಕ್ತಿಗೆ ಆರಾಮದಾಯಕ ಅನಿಸಬೆಕು.
ಗ್ರಾಬ್ ರೈಲ್, ಬ್ಯಾಕ್ರೆಸ್ಟ್: ಹಿಂದೆ ಕುಳಿತವರು ಬಿಗಿಯಾಗಿ ಹಿಡಿದುಕೊಳ್ಳಲು. ಮತ್ತು ಆರಾಮವಾಗಿ ಕೂಡಲು ಗ್ರಾಬ್ ರೈಲ್ ಇರಬೇಕು. ಬ್ಯಾಕ್ರೆಸ್ಟ್ ಇದ್ದರೆ ಒಳ್ಳೆಯದು.
ಸಸ್ಪೆನ್ಷನ್: ಹಿಂದೆ ಕುಳಿತಿರುವ ವ್ಯಕ್ತಿ ಹೇಗೆನಿಸುತ್ತೆ ಅಂತಾ ತಿಳಿಯಲು ಗುಂಡಿಗಳು, ಸ್ಪೀಡ್ ಬ್ರೇಕ್ ಟೆಸ್ಟ್ ಮಾಡಿ.
ಬೈಕ್ ತೂಕ, ಬ್ಯಾಲೆನ್ಸ್: ಪಿಲಿಯನ್ನೊಂದಿಗೆ ರೈಡ್ ಮಾಡುವಾಗ ಬೈಕ್ ಬ್ಯಾಲೆನ್ಸ್ ಮಾಡುವುದು ಸುಲಭವಾಗಿರಬೇಕು. ಟ್ರಾಫಿಕ್, ಇಕ್ಕಟ್ಟಾದ ದಾರಿಗಳಲ್ಲಿ ರೈಡ್ ಮಾಡುವಾಗ ಇದು ತುಂಬಾ ಮುಖ್ಯ.
ಹೆಲ್ಮೆಟ್: ಪ್ರಯಾಣ ಎಷ್ಟೇ ಚಿಕ್ಕದಾಗಿದ್ದರೂ, ಹಿಂದೆ ಕುಳಿತಿರುವ ವ್ಯಕ್ತಿ ಸರಿಯಾದ ಗಾತ್ರದ ಹೆಲ್ಮೆಟ್ ಧರಿಸಬೇಕು.
ಈಗ ನಿಮ್ಮ ಬೈಕ್ ಯಾವುದು? ಅದರಲ್ಲಿ ವಯಸ್ಸಾದ ಅಪ್ಪ ಅಮ್ಮ, ಹೆಂಡ್ತಿ ಮಕ್ಕಳಿಗೆ ಆರಾಮದಾಯಕ ಎನಿಸುತ್ತದೆಯೇ? ಅಥವಾ ನಿಮ್ಮೊಂದಿಗೆ ಆ ಬೈಕ್ ಹತ್ತಲು ಹೆದರುತ್ತಾರೆಯೇ? ನಿಮ್ಮ ಅನುಭವವೇನು ಕಾಮೆಂಟ್ ಮಾಡಿ.













