ಶಿಮ್ಲಾದ ಟಾಪ್ 10 ಸುಂದರ ತಾಣಗಳು
ಶಿಮ್ಲಾದಲ್ಲಿ ನೋಡೋಕೆ ಜಖೂ ಬೆಟ್ಟದಿಂದ ಮಾಲ್ ರೋಡ್‌ವರೆಗೆ ತುಂಬಾ ಇದೆ.

ಮಾಲ್ ರೋಡ್
ಶಿಮ್ಲಾದ ಮುಖ್ಯ ರಸ್ತೆ, ಮಾಲ್ ರೋಡ್ ಅಂಗಡಿಗಳು, ಕಾಫಿ ಮತ್ತು ಊಟದ ಹೋಟೆಲ್‌ಗಳಿಂದ ತುಂಬಿದೆ. ಇಲ್ಲಿ ಓಡಾಡೋಕೆ ಚೆನ್ನಾಗಿರುತ್ತೆ.
ಜಾಖೂ ಬೆಟ್ಟ
ಜಾಖೂ ಬೆಟ್ಟ ಶಿಮ್ಲಾದ ಅತಿ ಎತ್ತರದ ಜಾಗ. ಇಲ್ಲಿಂದ ಶಿವಾಲಿಕ್ ಬೆಟ್ಟಗಳ ಅದ್ಭುತ ನೋಟ ಸಿಗುತ್ತೆ. ಹನುಮಾನ್ ದೇವಸ್ಥಾನ ಕೂಡ ಇಲ್ಲಿದೆ.
ಕ್ರೈಸ್ಟ್ ಚರ್ಚ್
ಇದು ಫೇಮಸ್ ಚರ್ಚ್. ಗಾಜಿನ ಕಿಟಕಿಗಳು ಅದ್ಭುತವಾಗಿವೆ. ಉತ್ತರ ಭಾರತದ ಹಳೆಯ ಚರ್ಚ್‌ಗಳಲ್ಲಿ ಇದು ಒಂದು. ಶಿಮ್ಲಾದ ಹಳೆಯ ಕಾಲದ ನೆನಪು ಇಲ್ಲಿ ಸಿಗುತ್ತೆ.
ದಿ ರಿಡ್ಜ್
ಇಲ್ಲಿ ಸಾಂಸ್ಕೃತಿಕ ಚಟುವಟಿಕೆಗಳು ನಡೆಯುತ್ತವೆ. ಬೆಟ್ಟಗಳ ಸುಂದರ ನೋಟವನ್ನು ನೋಡಬಹುದು. ಫೋಟೋ ತೆಗಿಯೋಕೆ ಮತ್ತು ಕಾರ್ಯಕ್ರಮಗಳಿಗೆ ಇದು ಬೆಸ್ಟ್ ಪ್ಲೇಸ್.
ಕುಫ್ರಿ
ಶಿಮ್ಲಾ ಹತ್ತಿರದ ಗಿರಿಧಾಮ. ಸ್ಕೀಯಿಂಗ್ ಮತ್ತು ಕುದುರೆ ಸವಾರಿ ಮಾಡಬಹುದು. ಸುತ್ತಲಿನ ಬೆಟ್ಟಗಳ ನೋಟ ಕಣ್ಣಿಗೆ ಹಬ್ಬದಂತಿರುತ್ತದೆ.
ಚಾಡ್ವಿಕ್ ಫಾಲ್ಸ್
ಗ್ಲೇನ್ ಫಾರೆಸ್ಟ್‌ನಲ್ಲಿದೆ. ಸುಮಾರು 100 ಮೀಟರ್ ಎತ್ತರದಿಂದ ನೀರು ಧುಮುಕುತ್ತದೆ. ಹಸಿರಿನಿಂದ ತುಂಬಿರುವ ಈ ಜಾಗ ಪ್ರಕೃತಿ ಪ್ರಿಯರಿಗೆ ಹೇಳಿ ಮಾಡಿಸಿದ ತಾಣ.
ವೈಸರಿಗಲ್ ಲಾಡ್ಜ್
ವೈಸರಿಗಲ್ ಲಾಡ್ಜ್ ಇದು ಶಿಮ್ಲಾದಲ್ಲಿನ ಬ್ರಿಟಿಷರ ಕಾಲದ ಹಳೆಯ ಕಟ್ಟಡ. ಇಲ್ಲಿ ಸುಂದರವಾದ ಉದ್ಯಾನ ಮತ್ತು ಅದ್ಭುತ ನೋಟಗಳಿವೆ.
ಸಮ್ಮರ್ ಹಿಲ್
ಶಿಮ್ಲಾವನ್ನು ಸುತ್ತುವರೆದಿರುವ ಏಳು ಬೆಟ್ಟಗಳಲ್ಲಿ ಇದು ಒಂದು. ಶಾಂತ ವಾತಾವರಣ ಮತ್ತು ರಮಣೀಯ ನೋಟ ಇಲ್ಲಿ ಸಿಗುತ್ತದೆ. ಪಿಕ್ನಿಕ್ ಮಾಡಲು ಹೇಳಿಮಾಡಿಸಿದ ಜಾಗ.
ಅನ್ನಾಡೇಲ್
ಅನ್ನಾಡೇಲ್ ಇದು ಎತ್ತರವಾದ ಮರಗಳಿಂದ ಆವೃತವಾದ ಸಮತಟ್ಟಾದ ಪ್ರದೇಶ. ಇದು ತನ್ನ ಗಾಲ್ಫ್ ಕೋರ್ಸ್ ಮತ್ತು ಆಟಗಳಿಗೆ ಹೆಸರುವಾಸಿಯಾಗಿದೆ.
ಕಾಳಿ ಬಾಡಿ ದೇವಸ್ಥಾನ
ಕಾಳಿ ದೇವಿಗೆ ಅರ್ಪಿತವಾದ ಈ ದೇವಸ್ಥಾನ ಶಿಮ್ಲಾದ ಮಧ್ಯದಲ್ಲಿದೆ. ಇದರ ವಾಸ್ತುಶಿಲ್ಪ ಮತ್ತು ಆಧ್ಯಾತ್ಮಿಕ ಮಹತ್ವದಿಂದ ಇದು ಹೆಸರುವಾಸಿಯಾಗಿದೆ.