MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Life
  • Travel
  • ಭಾರತದ ಟಾಪ್‌ 10 ಕ್ಲೀನೆಸ್ಟ್ ಸಿಟಿಗಳು, 2025ರಲ್ಲಾದ್ರೂ ವಿಸಿಟ್ ಮಾಡಿ, ಶಾಪಿಂಗ್ ಮಾಡಿ!

ಭಾರತದ ಟಾಪ್‌ 10 ಕ್ಲೀನೆಸ್ಟ್ ಸಿಟಿಗಳು, 2025ರಲ್ಲಾದ್ರೂ ವಿಸಿಟ್ ಮಾಡಿ, ಶಾಪಿಂಗ್ ಮಾಡಿ!

2025ಕ್ಕೆ ಭಾರತದ ಕ್ಲೀನೆಸ್ಟ್ ಸಿಟಿಗಳು: ಭಾರತದಲ್ಲಿ ತಿರುಗಾಡೋಕೆ ತುಂಬಾ ಚಂದದ ಸಿಟಿಗಳಿವೆ. ಮಧ್ಯ ಪ್ರದೇಶದಿಂದ ಗುಜರಾತ್ ತನಕ, ಎಲ್ಲ ಕಡೆನೂ ಅದರದ್ದೇ ಆದ ಚಾರ್ಮ್ ಇದೆ. ಬನ್ನಿ, ಒಂದಷ್ಟು ಸ್ಪೆಷಲ್ ಸಿಟಿಗಳ ಬಗ್ಗೆ ತಿಳ್ಕೊಳ್ಳೋಣ!

2 Min read
Gowthami K
Published : Mar 22 2025, 01:02 PM IST| Updated : Mar 22 2025, 01:07 PM IST
Share this Photo Gallery
  • FB
  • TW
  • Linkdin
  • Whatsapp
110

ಇಂದೋರ್, ಮಧ್ಯ ಪ್ರದೇಶ
ಇಂದೋರ್ ಭಾರತದ ಮಧ್ಯ ಪ್ರದೇಶದಲ್ಲಿರೋ ಸಿಟಿ. ಇಲ್ಲಿ ರಾಜವಾಡ, ಲಾಲ್ ಬಾಗ್ ಪ್ಯಾಲೇಸ್, ಖಜರಾನಾ ಗಣೇಶ ದೇವಸ್ಥಾನ, ಪಾತಾಳಪಾಣಿ ಜಲಪಾತ ಮತ್ತೆ ರಾಲಾಮಂಡಲ ಅಂತಾ ತುಂಬಾ ಪ್ಲೇಸ್ ಗಳಿವೆ.

210

ಸೂರತ್, ಗುಜರಾತ್
ಸೂರತ್ ನಲ್ಲಿ ತಿರುಗಾಡೋಕೆ ತುಂಬಾ ಒಳ್ಳೆ ಪ್ಲೇಸ್ ಗಳಿವೆ, ದುಮಾಸ್ ಬೀಚ್, ಹಜೀರಾ ಬೀಚ್, ಸುವಾಲಿ ಬೀಚ್, ಇಸ್ಕಾನ್ ದೇವಸ್ಥಾನ, ಇತರ ಕಡೆಗಳೂ ಇವೆ. ಭಾರತದ ವಜ್ರ ನಗರಿ" ಎಂದು ಕರೆಯಲ್ಪಡುವ ಸೂರತ್ ನಲ್ಲಿ ವಿಶ್ವದ ವಜ್ರ ಕತ್ತರಿಸುವುದು ಮತ್ತು ಹೊಳಪು ನೀಡುವ ಕೆಲಸ 90% ಇಲ್ಲಿ ನಡೆಯುತ್ತದೆ. ಇದು ಪ್ರಮುಖ ಜವಳಿ ಕೇಂದ್ರವಾಗಿದ್ದು, ಚೌಟಾ ಬಜಾರ್ ಮತ್ತು ಸಹಾರಾ ದರ್ವಾಜಾದಂತಹ ಮಾರುಕಟ್ಟೆಗಳು ಶಾಪಿಂಗ್‌ಗೆ ಜನಪ್ರಿಯವಾಗಿವೆ. 

ಪಾಕಿಸ್ತಾನದ 10 ಅತಿ ಅಪಾಯಕಾರಿ ನಗರಗಳಿವು, ಟ್ರಾವೆಲ್‌ ಮಾಡೋರು ಇಲ್ಲಿಗೆ ಹೋಗೋದು ರಿಸ್ಕ್ ಗುರು!

310

ನವಿ ಮುಂಬೈ, ಮಹಾರಾಷ್ಟ್ರ
ನವಿ ಮುಂಬೈ, ಮುಂಬೈ ಹತ್ರ ತಿರುಗಾಡೋಕೆ ಬೆಸ್ಟ್ ಪ್ಲೇಸ್. ಈ ಸಿಟಿ ಕ್ಲೀನ್ ಆಗಿರೋದಕ್ಕೆ ಫೇಮಸ್. ಇಲ್ಲಿ ವಿಸಿಟ್‌ ಮಾಡಿ ಶಾಪಿಂಗ್ ಮಾಡಿಕೊಂಡು ಬರಬಹುದು. ಉದ್ಯಾನವನಗಳು, ಹಸಿರು ಸ್ಥಳಗಳು, ಉತ್ತಮ ಮೂಲಸೌಕರ್ಯಗಳು ಇಲ್ಲಿ ಲಭ್ಯವಿದೆ

ಜಗತ್ತಿನ ಟಾಪ್ 10 ದುಬಾರಿ ವಾಚ್‌ಗಳು: ಬೆಲೆ ಕೇಳಿದ್ರೆ ತಲೆ ತಿರುಗಿ ಬೀಳೋದು ಗ್ಯಾರಂಟಿ!

410

ಅಂಬಿಕಾಪುರ್, ಛತ್ತೀಸ್‌ಗಢ
ಅಂಬಿಕಾಪುರ್, ಛತ್ತೀಸ್‌ಗಢದಲ್ಲಿ ತಿರುಗಾಡೋಕೆ ತುಂಬಾ ಚಂದದ ಮತ್ತೆ ಇಂಟರೆಸ್ಟಿಂಗ್ ಪ್ಲೇಸ್ ಗಳಿವೆ, ಮಹಾಮಾಯಾ ದೇವಸ್ಥಾನ, ಮೈನ್ಪಾಟ್ ಹಿಲ್ ಸ್ಟೇಷನ್, ಕೈಲಾಶ್ ಗುಹೆ, ಠಿನ್ಠಿನಿ ಕಲ್ಲು ಮತ್ತೆ ಸರ್ಗುಜಾ ಅರಮನೆ ಸೇರಿವೆ.

510

ಮೈಸೂರು, ಕರ್ನಾಟಕದಲ್ಲಿ ತಿರುಗಾಡೋಕೆ ಒಂದು ಬೆಸ್ಟ್ ಪ್ಲೇಸ್. ಇಲ್ಲಿ ಮೈಸೂರು ಅರಮನೆ, ಚಾಮುಂಡಿ ಬೆಟ್ಟ, ಬೃಂದಾವನ ಗಾರ್ಡನ್ ಮತ್ತೆ ಜಗನ್ಮೋಹನ ಅರಮನೆ ಅಂತಾ ತುಂಬಾ ತಿರುಗಾಡೋ ಪ್ಲೇಸ್ ಗಳಿವೆ.

ಪಾಕಿಸ್ತಾನದಲ್ಲಿ ಇರುವ ನೋಡಲೇಬೇಕಾದ 10 ಸುಂದರ ತಾಣಗಳು!

610

ವಿಜಯವಾಡ, ಆಂಧ್ರ ಪ್ರದೇಶ
ವಿಜಯವಾಡ ಆಂಧ್ರ ಪ್ರದೇಶದ ಕೃಷ್ಣಾ ಡಿಸ್ಟ್ರಿಕ್ಟ್ ನಲ್ಲಿ ಕೃಷ್ಣಾ ನದಿ ದಡದಲ್ಲಿರೋ ಫೇಮಸ್ ಟೂರಿಸ್ಟ್ ಪ್ಲೇಸ್.  ಐತಿಹಾಸಿಕ ಸ್ಮಾರಕಗಳಿಗೆ ಹೆಸರುವಾಸಿಯಾಗಿದೆ. ಕನಕ ​​ದುರ್ಗಾ ದೇವಸ್ಥಾನ ಇಲ್ಲಿ ಫೇಮಸ್‌ 

710

ಅಹಮದಾಬಾದ್, ಗುಜರಾತ್
ಅಹಮದಾಬಾದ್ ಕ್ಲೀನ್ ಆಗಿರೋದಕ್ಕೆ ಫೇಮಸ್. ಇಲ್ಲಿ ತಿರುಗಾಡೋಕೆ ತುಂಬಾ ಚಂದದ ಪ್ಲೇಸ್ ಗಳಿವೆ. ಶ್ರೀಮಂತ ಇತಿಹಾಸ, ಸಾಂಸ್ಕೃತಿಕ ಮಹತ್ವ, ಅಭಿವೃದ್ಧಿ ಹೊಂದುತ್ತಿರುವ ಜವಳಿ ಉದ್ಯಮ, ಮತ್ತು ನವರಾತ್ರಿಯಂತಹ ರೋಮಾಂಚಕ ಹಬ್ಬಗಳು, ಜೊತೆಗೆ ಭಾರತದ ಸ್ವಾತಂತ್ರ್ಯ ಚಳವಳಿಯ ಪ್ರಮುಖ ತಾಣವಾದ ಸಬರಮತಿ ಆಶ್ರಮದ ಸ್ಥಳವಾಗಿದೆ.

ಅತ್ಯಧಿಕ ಸಮಯ ಜನರು ಕೆಲಸ ಮಾಡುವ ಟಾಪ್-10 ದೇಶಗಳು: ಭಾರತಕ್ಕೆ ಎಷ್ಟನೇ ಸ್ಥಾನ?

810

ನವ ದೆಹಲಿ, ಭಾರತ ಸರ್ಕಾರದ ರಾಜಧಾನಿ. ಇಲ್ಲಿ ತಿರುಗಾಡೋಕೆ ತುಂಬಾ ಬೆಸ್ಟ್ ಪ್ಲೇಸ್ ಗಳಿವೆ. ಶ್ರೀಮಂತ ಇತಿಹಾಸ, ವೈವಿಧ್ಯಮಯ ಸಂಸ್ಕೃತಿ,  ಕೆಂಪು ಕೋಟೆ, ಕುತುಬ್ ಮಿನಾರ್, ಹುಮಾಯೂನ್ ಸಮಾಧಿ ಮತ್ತು ಕಮಲ ದೇವಾಲಯ ಸೇರಿದಂತೆ ಹಲವಾರು ಐತಿಹಾಸಿಕ ಸ್ಮಾರಕಗಳಿವೆ

910

ಚಂದ್ರಪುರ್, ಮಹಾರಾಷ್ಟ್ರ
ಚಂದ್ರಪುರ್, ಮಹಾರಾಷ್ಟ್ರದಲ್ಲಿರೋ ಒಂದು ಸಿಟಿ. ಇಲ್ಲಿನ ಮಹಾಕಾಳಿ ದೇವಸ್ಥಾನ ತುಂಬಾ ಫೇಮಸ್. ಕೋಟೆ ನಗರ ಚಂದ್ರಾಪುರವು ಹಳೆಯ ಹತ್ತಿ ನೇಯ್ಗೆ ಉದ್ಯಮಕ್ಕೆ ಹೆಸರುವಾಸಿಯಾಗಿದೆ . ಈ ಪ್ರದೇಶದಲ್ಲಿ ಮತ್ತು ಸುತ್ತಮುತ್ತ ಕಂಡುಬರುವ ಹೆಚ್ಚಿನ ಕರಕುಶಲ ವಸ್ತುಗಳು ಹತ್ತಿ ಬಟ್ಟೆಗಳಾಗಿದ್ದು, ಅವು ಶ್ರೇಷ್ಠತೆ ಮತ್ತು ಬಾಳಿಕೆಗೆ ವ್ಯಾಪಕ ಖ್ಯಾತಿಯನ್ನು ಹೊಂದಿವೆ.

1010

ಖರಗೋಣ್, ಮಧ್ಯ ಪ್ರದೇಶ
ಖರಗೋಣ್, ಮಧ್ಯ ಪ್ರದೇಶದಲ್ಲಿ ತಿರುಗಾಡೋಕೆ ತುಂಬಾ ಚಂದದ ಮತ್ತೆ ಹಿಸ್ಟಾರಿಕಲ್ ಪ್ಲೇಸ್ ಗಳಿವೆ. ಇಲ್ಲಿನ ಕ್ಲೀನ್ ವಾತಾವರಣ ಇನ್ನೂ ಸ್ಪೆಷಲ್ ಆಗಿ ಮಾಡುತ್ತೆ. ನವಗ್ರಹ ದೇವಸ್ಥಾನ, ಹತ್ತಿ ಮತ್ತು ಮೆಣಸಿನಕಾಯಿ ಉತ್ಪಾದನೆ ಮತ್ತು ಅದರ ಕೃಷಿ ಉತ್ಪನ್ನ ಮಾರುಕಟ್ಟೆ. ಘಾಟ್‌ಗಳು ಮತ್ತು ಮಹೇಶ್ವರಿ ಸೀರೆಗಳಿಗೆ ಹೆಸರುವಾಸಿಯಾಗಿದೆ. 

About the Author

GK
Gowthami K
ಒನ್ ಇಂಡಿಯಾ, ಡೈಲಿಹಂಟ್‌, ವಿಜಯ ಕರ್ನಾಟಕ ವೆಬ್‌, ಈಗ ಏಷ್ಯಾನೆಟ್ ಕನ್ನಡ ಸೇರಿ 10 ವರ್ಷಗಳಿಂದಲೂ ಡಿಜಿಟಲ್ ಮಾಧ್ಯಮದಲ್ಲಿದ್ದೇನೆ. ಉಜಿರೆಯ ಎಸ್‌ಡಿಎಂನಲ್ಲಿ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯಾಗಿದೆ. ಸುಳ್ಯ ತಾಲೂಕಿನ ಕುಕ್ಕುಜಡ್ಕದವಳು. ಉದ್ಯೋಗ, ರಾಜಕೀಯ, ದೇಶ-ವಿದೇಶ, ವಿಜ್ಞಾನ ಮತ್ತು ವಾಣಿಜ್ಯ, ಸಿನೆಮಾವೆಂದರೆ ಹೆಚ್ಚು ಆಸಕ್ತಿ. ಹಿನ್ನೆಲೆ ಧ್ವನಿ ನೀಡುವುದು ಹವ್ಯಾಸ.
ಭಾರತ ಸುದ್ದಿ
ಪ್ರವಾಸೋದ್ಯಮ
ಪ್ರವಾಸ

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved