- Home
- Life
- Travel
- Karnataka Trekking Places: ಮಳೆ ಬಂತ್ರೀ..ಟ್ರೆಕ್ಕಿಂಗ್ ಮಾಡ್ತಿರೇನ್ರಿ? ಕರ್ನಾಟಕದ ಬೆಸ್ಟ್ ಚಾರಣ ಸ್ಥಳಗಳು!
Karnataka Trekking Places: ಮಳೆ ಬಂತ್ರೀ..ಟ್ರೆಕ್ಕಿಂಗ್ ಮಾಡ್ತಿರೇನ್ರಿ? ಕರ್ನಾಟಕದ ಬೆಸ್ಟ್ ಚಾರಣ ಸ್ಥಳಗಳು!
top 10 best trekking places in karnataka: ವಾರಪೂರ್ತಿ ಕೆಲಸ ಮಾಡಿದವರಿಗೆ, ವೀಕೆಂಡ್‌ನಲ್ಲಿ ಎಲ್ಲಿಯಾದರೂ ಚಾರಣ ಹೋಗಬೇಕು ಎಂದು ಎನಿಸುವುದುಂಟು. ಅಂತೆಯೇ ಕರ್ನಾಟಕದಲ್ಲೇ ಚಾರಣ ಮಾಡಲು ಸಾಕಷ್ಟು ಜಾಗಗಳು ಇವೆ. ಹಾಗಾದರೆ ಎಲ್ಲಿ ಹೋಗಬಹುದು?

ಕುದುರೆಮುಖ ಚಾರಣ (Kudremukh Trek)
ಕರ್ನಾಟಕದ ಅತ್ಯಂತ ಪ್ರಸಿದ್ಧ, ಸುಂದರವಾದ ಚಾರಣ ಇದಾಗಿದೆ. ಈ ಬೆಟ್ಟದ ಆಕಾರವು ಕುದುರೆಯ ಮುಖವನ್ನು ಹೋಲುವುದರಿಂದ ಕುದುರೆಮುಖ ಹೆಸರು ಬಂದಿದೆ. ಮಳೆಗಾಲದಲ್ಲಿ ವಿಶಾಲವಾದ ಹುಲ್ಲುಗಾವಲು, ದಟ್ಟವಾದ ಶೋಲಾ ಅರಣ್ಯಗಳು, ಹರಿಯುವ ಹಳ್ಳಗಳು, ಮಂಜಿನ ವಾತಾವರಣ ಚೆನ್ನಾಗಿರುತ್ತದೆ.
ಕುಮಾರ ಪರ್ವತ ಚಾರಣ
ದಕ್ಷಿಣ ಕನ್ನಡ ಜಿಲ್ಲೆಯ ಸುಬ್ರಹ್ಮಣ್ಯದ ಬಳಿ ಇದೆ. ಪುಷ್ಪಗಿರಿ ವನ್ಯಜೀವಿ ಅಭಯಾರಣ್ಯದ ವ್ಯಾಪ್ತಿಯಲ್ಲಿ ಈ ಬೆಟ್ಟಗಳು ಬರುತ್ತವೆ. ಕಡಿದಾದ ಹಾದಿ, ಮಂಜಿನ ಬೆಟ್ಟದ ತುದಿಯನ್ನು ತಲುಪುವುದು ಸಖತ್ ಆಗಿರುತ್ತದೆ.
ಕೊಡಚಾದ್ರಿ ಚಾರಣ
ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನಲ್ಲಿರುವ ಕೊಡಚಾದ್ರಿ, ಮೂಕಾಂಬಿಕಾ ರಾಷ್ಟ್ರೀಯ ಉದ್ಯಾನವನದ ಮಧ್ಯದಲ್ಲಿದೆ. ದಟ್ಟವಾದ ಕಾಡುಗಳು, ಸುಂದರವಾದ ಜಲಪಾತಗಳು, ತುದಿಯಲ್ಲಿರುವ ಸರ್ವಜ್ಞ ಪೀಠ ನೋಡಲು ತುಂಬ ಚೆನ್ನ
ನೇತ್ರಾವತಿ ಪೀಕ್ ಚಾರಣ
ಚಿಕ್ಕಮಗಳೂರು ಜಿಲ್ಲೆಯ ಕುದುರೆಮುಖ ವ್ಯಾಪ್ತಿಯಲ್ಲಿ ಬರುತ್ತದೆ. ಮಳೆಗಾಲದಲ್ಲಿ ಬೆಟ್ಟದ ತುದಿಯಲ್ಲಿ ನಿಂತು ನೋಡಿದಾಗ ಸುತ್ತಲೂ ಹರಡಿರುವ ಹಸಿರು ಕಣಿವೆ ಕಾಣುತ್ತದೆ.
ತಡಿಯಾಂಡಮೋಳ್ ಚಾರಣ
ಕೊಡಗು ಜಿಲ್ಲೆಯ ಅತ್ಯಂತ ಎತ್ತರವಾದ ಶಿಖರ. ಕಾಫಿ ತೋಟಗಳು, ಹಸಿರಿನ ರಸ್ತೆಗಳು, ಸಣ್ಣ ಸಣ್ಣ ನೀರಿನ ತೊರೆಗಳನ್ನು ದಾಟುತ್ತಾ ಸಾಗಬೇಕು.
ಗಾಳಿಬೀಡು, ನಿಶಾನಿ ಮೊಟ್ಟೆ ಚಾರಣ
ಕೊಡಗಿನ ಭಾಗದಲ್ಲಿದೆ. ತಲಕಾವೇರಿ ವನ್ಯಜೀವಿ ಅಭಯಾರಣ್ಯದಲ್ಲಿದೆ. ಈ ಕಾಡಿನ ಹಾದಿಗಳಲ್ಲಿ ಮಳೆಗಾಲದಲ್ಲಿ ಅಪರೂಪದ ಸಸ್ಯವರ್ಗ, ಜಲಪಾತಗಳನ್ನು ನೋಡಬಹುದು.
ಬಲ್ಲಾಳರಾಯನ ದುರ್ಗ, ಬಂಡಾಜೆ ಅರ್ಬಿ ಚಾರಣ
ಚಿಕ್ಕಮಗಳೂರಿನ ಮೂಡಿಗೆರೆ ಬಳಿ ಇದೆ. ಚಾರಣದ ಹಾದಿಯಲ್ಲಿ ಸಿಗುವ 12ನೇ ಶತಮಾನದ ಹಳೆಯ ಕೋಟೆಯ ಅವಶೇಷಗಳು, ಪ್ರಪಾತಕ್ಕೆ ಧುಮುಕುವ ಬಂಡಾಜೆ ಜಲಪಾತ ನೋಡಲು ತುಂಬ ಚೆನ್ನಾಗಿರುತ್ತೆ.
ಕುರಿಂಜಾಲ್ ಚಾರಣ
ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಕಡೆ ಬರುತ್ತದೆ. ಇಲ್ಲಿ ಅಷ್ಟು ಜನರು ಇರೋದಿಲ್ಲ. ಸೈಲೆಂಟ್ ವಾತಾವರಣ, ಕಲ್ಲುಬಂಡೆಗಳ ಹಾದಿಯಿರುವ ಈ ಜಾಗವು ಪ್ರಕೃತಿ ಪ್ರೇಮಿಗಳಿಗೆ ಇದು ಸೂಕ್ತ ಜಾಗ.
ಆಗುಂಬೆ ರೇನ್‌ಫಾರೆಸ್ಟ್ ಚಾರಣ
ದಕ್ಷಿಣದ ಚಿರಪುಂಜಿ ಎಂದೇ ಕರೆಯಲ್ಪಡುವ ಆಗುಂಬೆ, ದೇಶದಲ್ಲೇ ಅತಿ ಹೆಚ್ಚು ಮಳೆ ಪಡೆಯುವ ಪ್ರದೇಶಗಳಲ್ಲಿ ಒಂದಾಗಿದೆ. ದಟ್ಟ ಅರಣ್ಯ, ಒನಕೆ ಅಬ್ಬಿ ಜಲಪಾತ, ಮಂಜಿನಿಂದ ಆವೃತವಾದ ಕಣಿವೆಗಳು ಇವೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

