MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Travel
  • ಮಂತ್ರಾಲಯಕ್ಕೆ ವಿಶೇಷ ರೈಲುಗಳ ಸಂಚಾರ: ಕಡಿಮೆ ದರದಲ್ಲಿ ರಾಯರ ದರ್ಶನವಿನ್ನು ಬಲು ಸುಲಭ

ಮಂತ್ರಾಲಯಕ್ಕೆ ವಿಶೇಷ ರೈಲುಗಳ ಸಂಚಾರ: ಕಡಿಮೆ ದರದಲ್ಲಿ ರಾಯರ ದರ್ಶನವಿನ್ನು ಬಲು ಸುಲಭ

ದಕ್ಷಿಣ ಮಧ್ಯ ರೈಲ್ವೆ ಇಲಾಖೆಯು ಮಂತ್ರಾಲಯಕ್ಕೆ ಭೇಟಿ ನೀಡುವ ಭಕ್ತರಿಗಾಗಿ ಕಡಿಮೆ ವೆಚ್ಚದಲ್ಲಿ ವಿಶೇಷ ರೈಲುಗಳ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟಿದೆ. ಬೆಂಗಳೂರು, ಮೈಸೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಸಂಚರಿಸುವ ಈ ರೈಲುಗಳ ಸಂಪೂರ್ಣ ಮಾರ್ಗ, ಸಮಯ ಮತ್ತು ನಿಲ್ದಾಣಗಳ ವಿವರ ಇಲ್ಲಿ ನೀಡಲಾಗಿದೆ.

2 Min read
Author : Suchethana D
Published : Aug 12 2026, 05:30 PM IST
Share this Photo Gallery
  • FB
  • TW
  • Linkdin
  • Whatsapp
15
ಮಂತ್ರಾಲಯಕ್ಕೆ ಭೇಟಿ...
Image Credit : AI Image

ಮಂತ್ರಾಲಯಕ್ಕೆ ಭೇಟಿ...

ಜೀವನದಲ್ಲಿ ಒಮ್ಮೆಯಾದರೂ ಮಂತ್ರಾಲಯಕ್ಕೆ ಹೋಗಿ ಶ್ರೀರಾಘವೇಂದ್ರರ ದರ್ಶನ ಮಾಡಬೇಕು ಎಂದು ಬಯಸುವವರು ಹಲವರು. ರಾಜ್ಯದ ವಿವಿಧ ಭಾಗಗಳಿಂದ ಹಲವಾರು ಬಸ್​, ಟ್ರೈನ್​ಗಳು ಲಭ್ಯವಿದೆ. ಬಸ್ಸುಗಳಲ್ಲಿ ದರ ಹೆಚ್ಚಳ ಇರುವುದರಿಂದ ಹಲವರಿಗೆ ಇದರಲ್ಲಿ ಪ್ರಯಾಣಿಸುವುದು ಕಷ್ಟವಾದರೆ, ರೈಲಿನ ಸೌಲಭ್ಯಗಳು ಕಡಿಮೆ ಇವೆ ಎನ್ನುವುದು ಬಹುತೇಕ ಮಂದಿಯ ಅಳಲಾಗಿತ್ತು. ಇದನ್ನು ಮನಗಂಡಿರುವ ದಕ್ಷಿಣ ಮಧ್ಯ ರೈಲ್ವೆ ಇಲಾಖೆ (South Central Railway) , ಕಡಿಮೆ ವೆಚ್ಚದಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಮಂತ್ರಾಲಯಕ್ಕೆ ವಿಶೇಷ ರೈಲುಗಳನ್ನು ಸಂಚರಿಸಲು ಅವಕಾಶ ಮಾಡಿಕೊಟ್ಟಿದೆ. ಇದರ ಸಂಪೂರ್ಣ ಡಿಟೇಲ್ಸ್​ ಇಲ್ಲಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
ಆಗಸ್ಟ್​ 27 ಮತ್ತು ಸೆಪ್ಟೆಂಬರ್​ 1ರಂದು ಸಂಚಾರ
Image Credit : Asianet News

ಆಗಸ್ಟ್​ 27 ಮತ್ತು ಸೆಪ್ಟೆಂಬರ್​ 1ರಂದು ಸಂಚಾರ

ರೈಲು ಸಂಖ್ಯೆ 09059: ಇದು ಆಂಧ್ರಪ್ರದೇಶದ ಬಾಂದ್ರಾದಿಂದ ವೆಲಂಕಣಿಗೆ ಹೋಗುವ ರೈಲಾಗಿದೆ. ಈ ವಿಶೇಷ ರೈಲು ಆಗಸ್ಟ್​ 27 ಮತ್ತು ಸೆಪ್ಟೆಂಬರ್​ 1ರಂದು ವಿಶೇಷವಾಗಿ ಸಂಚರಿಸಲಿದೆ. ಈ ವಿಶೇಷ ರೈಲುಗಳು ಆಂಧ್ರ, ಮಹಾರಾಷ್ಟ್ರದ ಕೆಲವೆಡೆ ನಿಲುಗಡೆ ಹೊಂದಲಿವೆ. ಕರ್ನಾಟಕದ ಯಾದಗಿರಿ, ಕೃಷ್ಣಾ, ರಾಯಚೂರು ರೈಲ್ವೆ ನಿಲ್ದಾಣಗಳಲ್ಲಿಯೂ ಈ ರೈಲು ಲಭ್ಯವಿದ್ದು, ಬಳಿಕ ಇದು ಮಂತ್ರಾಲಯ ರಸ್ತೆಗೆ ಹೋಗಲಿದೆ.

Related Articles

Related image1
ರೈಲಿಗೆ ಕಾದೂ ಕಾದೂ ಸುಸ್ತಾದ: ನಿಲ್ದಾಣದಲ್ಲಿ ಕುಳಿತು 240 ಕೋಟಿ ರೂ. ಗಳಿಸಿ ಇತಿಹಾಸವನ್ನೇ ಸೃಷ್ಟಿಸಿಬಿಟ್ಟ
Related image2
ಮಗುವನ್ನು ರೈಲಿನಲ್ಲೇ ಮರೆತ 'ಮಹಾನ್'​ ತಾಯಿ: ದೇವರಂತೆ ಬಂದ ಅನಾಮಿಕ- ಶಾಕಿಂಗ್​ ವಿಡಿಯೋ ವೈರಲ್​
35
ಕಾಕಿನಾಡ-ಮೈಸೂರು ಎಕ್ಸ್​ಪ್ರೆಸ್​
Image Credit : Gemini AI

ಕಾಕಿನಾಡ-ಮೈಸೂರು ಎಕ್ಸ್​ಪ್ರೆಸ್​

ಕಾಕಿನಾಡ-ಮೈಸೂರು ಎಕ್ಸ್​ಪ್ರೆಸ್​ (Kakinada Town - Mysuru Express) ಇದಾಗಿದೆ. ರೈಲಿನ ಸಂಖ್ಯೆ 17289/17290. ಇದು ಮೈಸೂರು, ಮಂಡ್ಯ ಹಾಗೂ ಬೆಂಗಳೂರಿನ ಆಸುಪಾಸು ಜನರಿಗೆ ಇದು ತುಂಬಾ ಅನುಕೂಲ ಕಲ್ಪಿಸಲಿದೆ. ಮೈಸೂರಿನಿಂದ ಸಂಜೆ 5:05ಕ್ಕೆ ಹೊರಡುವ ಈ ರೈಲು, ಬೆಂಗಳೂರು ಸಿಟಿಯಿಂದ ರಾತ್ರಿ 8:25ಕ್ಕೆ ಹೊರಡಲಿದೆ. ಇದು ಮರುದಿನ ನಸುಕಿನ 3:28ಕ್ಕೆ ಮಂತ್ರಾಲಯ ರಸ್ತೆ (Mantralayam Road) ನಿಲ್ದಾಣವನ್ನು ತಲುಪಲಿದೆ. ಇದರಿಂದಾಗಿ ಬೆಳಗ್ಗೆ ತುಂಗಭದ್ರೆಯಲ್ಲಿ ಸ್ನಾನಮಾಡಿ, ರಾಘವೇಂದ್ರ ಸ್ವಾಮಿಗಳ ದರ್ಶನ ಪಡೆಯಬಹುದಾಗಿದೆ.

ಇದರ ಜೊತೆಗೆ, ಉತ್ತರ ಕರ್ನಾಟಕದ ಜನತೆಗೂ ತುಂಬಾ ಅನುಕೂಲ ಆಗಿದೆ. ರಾಯಚೂರು, ಕೃಷ್ಣ, ಯಾದಗಿರಿ ಮತ್ತು ಸೇಡಂ ಭಾಗದ ಪ್ರಯಾಣಿಕರು ಬೆಂಗಳೂರು ಅಥವಾ ಮೈಸೂರಿಗೆ ಬರಲು ಇದು ಅನುಕೂಲ ಕಲ್ಪಿಸಿದೆ. ಕಾಕಿನಾಡದಿಂದ ಸೋಮವಾರ ಮತ್ತು ಶುಕ್ರವಾರ ಹಾಗೂ ಮೈಸೂರಿನಿಂದ ಮಂಗಳವಾರ ಮತ್ತು ಶನಿವಾರ ಈ ರೈಲು ಸಂಚರಿಸಲಿದೆ.

ಕಾಕಿನಾಡದಿಂದ ಬರುವ ರೈಲು ನಸುಕಿನ 2:30ಕ್ಕೆ ಯಾದಗಿರಿ, 3:48ಕ್ಕೆ ರಾಯಚೂರು ಮೂಲಕ ಮಧ್ಯಾಹ್ನ 12:20ಕ್ಕೆ ಕೆ.ಎಸ್.ಆರ್ ಬೆಂಗಳೂರು ಸಿಟಿ ತಲುಪುತ್ತದೆ. ಮೈಸೂರಿನಿಂದ ಸಂಜೆ ಹೊರಡುವ ರೈಲು ನಸುಕಿನ 4:43ಕ್ಕೆ ರಾಯಚೂರು ಹಾಗೂ 5:58ಕ್ಕೆ ಯಾದಗಿರಿಯನ್ನು ತಲುಪುತ್ತದೆ.

45
17289 ರೈಲ್ವೆಯ ರೂಟ್​ ಹೀಗಿದೆ...
Image Credit : Social Media

17289 ರೈಲ್ವೆಯ ರೂಟ್​ ಹೀಗಿದೆ...

ಆಂಧ್ರ ಪ್ರದೇಶ: ಕಾಕಿನಾಡ ಟೌನ್, ಸಮಲ್ಕೋಟ್, ರಾಜಮಂಡ್ರಿ, ನಿಡದವೋಲು, ತನುಕು, ಭೀಮಾವರಂ ಟೌನ್, ಅಕಿವಿಡು, ಕೈಕಲೂರು, ಗುಡಿವಾಡ, ವಿಜಯವಾಡ, ಗುಂಟೂರು

ತೆಲಂಗಾಣ: ನಲ್ಗೊಂಡ, ಸಿಕಂದರಾಬಾದ್, ಬೇಗಂಪೇಟ್, ಲಿಂಗಂಪಲ್ಲಿ, ವಿಕಾರಾಬಾದ್

ಕರ್ನಾಟಕ/ಗಡಿ: ಸೇಡಂ, ಯಾದಗಿರಿ, ರಾಯಚೂರು, ಮಂತ್ರಾಲಯ ರಸ್ತೆ, ಆದೋನಿ, ಗುಂತಕಲ್, ಅನಂತಪುರ, ಧರ್ಮಾವರಂ, ಹಿಂದೂಪುರ, ಯಲಹಂಕ, ಬೆಂಗಳೂರು ಕ್ಯಾಂಟ್, ಕೆಎಸ್‌ಆರ್ ಬೆಂಗಳೂರು, ಕೆಂಗೇರಿ, ರಾಮನಗರ, ಮಂಡ್ಯ, ಮೈಸೂರು

55
17290 ರೈಲ್ವೆ ರೂಟ್​ ಹೀಗಿದೆ...
Image Credit : Social Media

17290 ರೈಲ್ವೆ ರೂಟ್​ ಹೀಗಿದೆ...

ಕರ್ನಾಟಕ: ಮೈಸೂರು, ಮಂಡ್ಯ, ಕೆಎಸ್ಆರ್ ಬೆಂಗಳೂರು, ಯಲಹಂಕ

ತೆಲಂಗಾಣ: ವಿಕಾರಾಬಾದ್, ಸಿಕಂದರಾಬಾದ್, ಲಿಂಗಂಪಲ್ಲಿ, ನಲ್ಗೊಂಡ

ಆಂಧ್ರಪ್ರದೇಶ: ಗುಂಟೂರು, ವಿಜಯವಾಡ, ರಾಜಮಂಡ್ರಿ, ಸಮಲ್ಕೋಟ್, ಕಾಕಿನಾಡ ಪಟ್ಟಣ

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಮಂತ್ರಾಲಯ
ಭಾರತೀಯ ರೈಲ್ವೆ
ರೈಲು
ಪ್ರವಾಸ
Latest Videos
Recommended Stories
Recommended image1
ಜಾಗತಿಕ ರೋಗಿಗಳ ನೆಚ್ಚಿನ ತಾಣವಾದ ಇಂಡಿಯಾ: ಬ್ರಿಟನ್ ರೋಗಿಗೆ ಹೊಸ ಜೀವನ ಕೊಟ್ಟ ಭಾರತದ ವೈದ್ಯರು!
Recommended image2
ಹುಬ್ಬಳ್ಳಿ ಆಂಕೋಲಾ ನಡುವೆ ₹18,424 ಕೋಟಿ ವೆಚ್ಚದ ಹೊಸ ರೈಲ್ವೆ ಯೋಜನೆ; ಬರೋಬ್ಬರಿ 57 ಸುರಂಗ ನಿರ್ಮಾಣ
Recommended image3
300 ಅಡಿ ಕುಸಿದ ಏರ್‌ ಇಂಡಿಯಾ, ವಿಮಾನದಲ್ಲಿದ್ದ ಪ್ರಯಾಣಿಕರಿಗೆ ಗಾಯ, ಪೈಲಟ್‌ ಡ್ರಗ್‌ ಸೇವಿಸಿದ್ದು ಪತ್ತೆ!
Related Stories
Recommended image1
ರೈಲಿಗೆ ಕಾದೂ ಕಾದೂ ಸುಸ್ತಾದ: ನಿಲ್ದಾಣದಲ್ಲಿ ಕುಳಿತು 240 ಕೋಟಿ ರೂ. ಗಳಿಸಿ ಇತಿಹಾಸವನ್ನೇ ಸೃಷ್ಟಿಸಿಬಿಟ್ಟ
Recommended image2
ಮಗುವನ್ನು ರೈಲಿನಲ್ಲೇ ಮರೆತ 'ಮಹಾನ್'​ ತಾಯಿ: ದೇವರಂತೆ ಬಂದ ಅನಾಮಿಕ- ಶಾಕಿಂಗ್​ ವಿಡಿಯೋ ವೈರಲ್​
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved