MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Travel
  • ಭಾರತೀಯರೆಂದರೆ ಹಣವೇ ಬೇಡ ಅಂತಾರೆ! ಈ ಮುಸ್ಲಿಂ ರಾಷ್ಟ್ರದಲ್ಲಿ ಕನ್ನಡಿಗನಿಗೆ ಸಿಕ್ಕ ರಾಜಾತಿಥ್ಯ ಹೇಗಿತ್ತು ಗೊತ್ತಾ?

ಭಾರತೀಯರೆಂದರೆ ಹಣವೇ ಬೇಡ ಅಂತಾರೆ! ಈ ಮುಸ್ಲಿಂ ರಾಷ್ಟ್ರದಲ್ಲಿ ಕನ್ನಡಿಗನಿಗೆ ಸಿಕ್ಕ ರಾಜಾತಿಥ್ಯ ಹೇಗಿತ್ತು ಗೊತ್ತಾ?

Street Food Tour: ಗಡಿ ಭಾಗದ ನಗರವೊಂದಕ್ಕೆ ಕಾಲಿಟ್ಟ ಕನ್ನಡಿಗನಿಗೆ ಅಲ್ಲಿನ ಬೀದಿಗಳಲ್ಲಿ ಎದುರಾಗಿದ್ದು ನಂಬಲಸಾಧ್ಯ ದೃಶ್ಯಗಳು! ಭಾರತೀಯರಿಗೆ ರಾಜಾತಿಥ್ಯ ನೀಡುವ ಈ ವಿಶಿಷ್ಟ ಜಾಗ ಯಾವುದು ಗೊತ್ತಾ? ಇಲ್ಲಿದೆ ಮೈನವಿರೇಳಿಸುವ ಸತ್ಯ ನೋಡಿ...

2 Min read
Author : Ashwini HR
Published : Oct 02 2026, 01:50 PM IST
Share this Photo Gallery
  • FB
  • TW
  • Linkdin
  • Whatsapp
17
ಆತಿಥ್ಯ ಮತ್ತು ಆಹಾರ ಸಂಸ್ಕೃತಿ ಹೇಗಿದೆ?
Image Credit : Global Kannadiga

ಆತಿಥ್ಯ ಮತ್ತು ಆಹಾರ ಸಂಸ್ಕೃತಿ ಹೇಗಿದೆ?

ಆತಿಥ್ಯ ಮತ್ತು ಆಹಾರ ಸಂಸ್ಕೃತಿ ಹೇಗಿದೆ?
ಯುದ್ಧ ಮತ್ತು ತಾಲಿಬಾನ್ ಆಡಳಿತದ ಕಾರಣಕ್ಕೆ ಸುದ್ದಿಯಾಗುವ ಅಫ್ಘಾನಿಸ್ತಾನದ ಜನರ ಅಸಲಿ ಬದುಕು, ಆತಿಥ್ಯ ಮತ್ತು ಆಹಾರ ಸಂಸ್ಕೃತಿ ಹೇಗಿದೆ? ಅಫ್ಘಾನಿಸ್ತಾನದ ಗಡಿ ನಗರ ಜಲಾಲಾಬಾದ್‌ನ ಬೀದಿಗಳಲ್ಲಿ ಕನ್ನಡಿಗ ಯೂಟ್ಯೂಬರ್ ನಡೆಸಿದ ಫುಡ್ ಟೂರ್‌ನಲ್ಲಿ 10 ರೂಪಾಯಿಯ ಬಿರಿಯಾನಿಯಿಂದ ಹಿಡಿದು, ಒಂದೂವರೆ ಕೆಜಿಯ ‘ಪಿಜ್ಜಾ ಚಪ್ಪಲಿ ಕಬಾಬ್’ವರೆಗೆ ತೆರೆದುಕೊಂಡ ಅಚ್ಚರಿಯ ಸಂಗತಿಗಳು ಇಲ್ಲಿವೆ ನೋಡಿ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
27
ತೀರಾ ವಿಭಿನ್ನ
Image Credit : Global Kannadiga

ತೀರಾ ವಿಭಿನ್ನ

ತೀರಾ ವಿಭಿನ್ನ
ಪಾಕಿಸ್ತಾನ-ಅಫ್ಘಾನಿಸ್ತಾನ ಗಡಿ ಭಾಗದ ಪ್ರಮುಖ ನಗರವಾದ ಜಲಾಲಾಬಾದ್‌ನಲ್ಲಿ ಜನರು ಬೆಳ್ಳಂಬೆಳಗ್ಗೆ ಮಾಡುವ ಉಪಾಹಾರ ಮತ್ತು ಅಲ್ಲಿನ ಜೀವನಶೈಲಿ ಜಗತ್ತಿನ ಇತರ ಭಾಗಗಳಿಗಿಂತ ತೀರಾ ವಿಭಿನ್ನವಾಗಿದೆ.

Related Articles

Related image1
ಈ 5 ಕಾರಣಕ್ಕಾಗಿ ನಿಮಗೆ 30ವರ್ಷ ಆಗುವ ಮುನ್ನ Solo Travel ಮಾಡಿ
Related image2
ಇನ್ಮುಂದೆ ಕೇವಲ 1 ನಿಮಿಷ ಚಾರ್ಜ್ ಮಾಡಿದ್ರೆ ಎಲೆಕ್ಟ್ರಿಕ್ ಕಾರಿನಲ್ಲಿ 100 ಕಿ.ಮೀ ಪ್ರಯಾಣ
37
ಕೆನೆಭರಿತ ಹಾಲು ಮತ್ತು ನೈಸರ್ಗಿಕ ಆಹಾರ
Image Credit : Global Kannadiga

ಕೆನೆಭರಿತ ಹಾಲು ಮತ್ತು ನೈಸರ್ಗಿಕ ಆಹಾರ

ಕೆನೆಭರಿತ ಹಾಲು ಮತ್ತು ನೈಸರ್ಗಿಕ ಆಹಾರ
ಇಲ್ಲಿನ ಬೆಳಗಿನ ತಿಂಡಿ ಶುರುವಾಗುವುದೇ ಬಿಸಿಬಿಸಿ, ದಪ್ಪ ಕೆನೆ ತುಂಬಿದ ತಾಜಾ ಹಸುವಿನ ಹಾಲಿನಿಂದ. ಇಲ್ಲಿ ಹಾಲನ್ನು ಗ್ಲಾಸ್‌ಗಳಲ್ಲಿ ಮಾತ್ರವಲ್ಲ, ಕಿಲೋ ಲೆಕ್ಕದಲ್ಲೂ ಕುಡಿಯುತ್ತಾರೆ! ಇದರ ಜೊತೆಗೆ ಬೆಂಡೆಕಾಯಿ ಪಲ್ಯ, ದಾಲ್, ಛೋಲೆ ಮತ್ತು ನಾಣ್ (ಅಫ್ಘಾನಿ ರೊಟ್ಟಿ) ಇಲ್ಲಿನ ಪ್ರಮುಖ ಆಹಾರ.

47
ಅಫ್ಘಾನಿಸ್ತಾನದಲ್ಲಿ ಪನ್ನೀರ್ ಕೂಡ ‘ನಾನ್‌ವೆಜ್’!
Image Credit : Global Kannadiga

ಅಫ್ಘಾನಿಸ್ತಾನದಲ್ಲಿ ಪನ್ನೀರ್ ಕೂಡ ‘ನಾನ್‌ವೆಜ್’!

ಅಫ್ಘಾನಿಸ್ತಾನದಲ್ಲಿ ಪನ್ನೀರ್ ಕೂಡ ‘ನಾನ್‌ವೆಜ್’!
ಭಾರತದಲ್ಲಿ ಪನ್ನೀರ್ ಅನ್ನು ಸಂಪೂರ್ಣ ಸಸ್ಯಾಹಾರಿ ಎನ್ನಲಾಗುತ್ತದೆ. ಆದರೆ ಅಫ್ಘಾನಿಸ್ತಾನದಲ್ಲಿ ಪನ್ನೀರ್ ಕೂಡ ಒಂದು ರೀತಿಯಲ್ಲಿ ಮಾಂಸಾಹಾರವೇ! ಏಕೆಂದರೆ, ಇಲ್ಲಿ ಹಾಲನ್ನು ಒಡೆದು ಪನ್ನೀರ್ ಮಾಡುವಾಗ ಅದನ್ನು ಶೋಧಿಸಿ ಗಟ್ಟಿಗೊಳಿಸಲು ಬಟ್ಟೆಯ ಬದಲಾಗಿ ಕುರಿ ಅಥವಾ ದನಗಳ ಕರುಳು ಮತ್ತು ಹೊಟ್ಟೆಯ ಚೀಲವನ್ನು (Animal Intestine) ಬಳಸುತ್ತಾರೆ. ಹೀಗಾಗಿ ಇದು ಸಸ್ಯಾಹಾರಿಗಳ ಪಾಲಿಗೆ ನಾನ್‌ವೆಜ್ ಆಗಿಬಿಡುತ್ತದೆ!

57
ಬಡವರಿಗಾಗಿ ₹10 ಕ್ಕೂ ಬಿರಿಯಾನಿ
Image Credit : Global Kannadiga

ಬಡವರಿಗಾಗಿ ₹10 ಕ್ಕೂ ಬಿರಿಯಾನಿ

ಬಡವರಿಗಾಗಿ ₹10 ಕ್ಕೂ ಬಿರಿಯಾನಿ
ಇಲ್ಲಿನ ರಸ್ತೆ ಬದಿಯಲ್ಲಿ ಜನರು ರೌಂಡ್ ಟೇಬಲ್ ಕಾನ್ಫರೆನ್ಸ್‌ನಂತೆ ಕುಳಿತು ಬೆಳಗ್ಗೆಯೇ ಬಿರಿಯಾನಿ ಸವಿಯುತ್ತಾರೆ. ವಿಶೇಷವೆಂದರೆ, ಇಲ್ಲಿ ಬಡವರು ಬಂದು ₹10 ಅಥವಾ ₹20 ಕೊಟ್ಟು ಕೇಳಿದರೂ ವ್ಯಾಪಾರಿಗಳು ಪ್ರೀತಿಯಿಂದ ಬಿರಿಯಾನಿ ಬಡಿಸುತ್ತಾರೆ. ಭಾರತೀಯರನ್ನು ಕಂಡರೆ ಇಲ್ಲಿನ ಜನರಿಗೆ ಅಪಾರ ಪ್ರೀತಿ. 'ಮೆಹಮಾನ್' (ಅತಿಥಿ) ಎಂದು ಕರೆದು ಹಲವು ಅಂಗಡಿಯವರು ಊಟಕ್ಕೆ ಹಣವನ್ನೇ ಪಡೆಯುವುದಿಲ್ಲ!

67
57 ವರ್ಷ ಹಳೆಯ ಅಂಗಡಿ: 1.5 ಕೆಜಿಯ ‘ಪಿಜ್ಜಾ ಚಪ್ಲಿ ಕಬಾಬ್’
Image Credit : Global Kannadiga

57 ವರ್ಷ ಹಳೆಯ ಅಂಗಡಿ: 1.5 ಕೆಜಿಯ ‘ಪಿಜ್ಜಾ ಚಪ್ಲಿ ಕಬಾಬ್’

57 ವರ್ಷ ಹಳೆಯ ಅಂಗಡಿ: 1.5 ಕೆಜಿಯ ‘ಪಿಜ್ಜಾ ಚಪ್ಲಿ ಕಬಾಬ್’
ಈ ನಗರದ ಮತ್ತೊಂದು ಅಚ್ಚರಿ ಎಂದರೆ ಬೃಹತ್ ಗಾತ್ರದ ‘ಚಪ್ಲಿ ಕಬಾಬ್’. ಈಜುಕೊಳದಂತಹ ದೊಡ್ಡ ತವಾದಲ್ಲಿ ಮಟನ್ ಖೈಮಾ, ಮೊಟ್ಟೆ, ಟೊಮೆಟೊ, ಈರುಳ್ಳಿ, ಸಾಂಬಾರ ಪದಾರ್ಥಗಳು, ಆಲಿವ್ಸ್ ಮತ್ತು ಚೀಸ್ ಬೆರೆಸಿ ಬರೋಬ್ಬರಿ ಒಂದೂವರೆ ಕೆಜಿಯ ಮೆಗಾ ಕಬಾಬ್ ತಯಾರಿಸುತ್ತಾರೆ. ಇದಕ್ಕೆ ‘ಪಿಜ್ಜಾ ಕಬಾಬ್’ ಎಂದೇ ಕರೆಯಲಾಗುತ್ತದೆ. ಇದೇ ರೀತಿ 500 ಮೊಟ್ಟೆಗಳನ್ನು ಒಡೆದು ಮಾಡುವ ಬೃಹತ್ ಆಮ್ಲೆಟ್ ಕೂಡ ಇಲ್ಲಿನ ಬೀದಿಗಳಲ್ಲಿ ಸಾಮಾನ್ಯ.

77
ತಾಲಿಬಾನ್‌ನ ‘ಬ್ಲೂ ಕ್ಯಾಬ್’ ನಿಯಮ
Image Credit : Global Kannadiga

ತಾಲಿಬಾನ್‌ನ ‘ಬ್ಲೂ ಕ್ಯಾಬ್’ ನಿಯಮ

ತಾಲಿಬಾನ್‌ನ ‘ಬ್ಲೂ ಕ್ಯಾಬ್’ ನಿಯಮ
ನಗರದ ಮತ್ತೊಂದು ಪ್ರಮುಖ ಬದಲಾವಣೆಯೆಂದರೆ, ತಾಲಿಬಾನ್ ಆಡಳಿತವು ನಗರದಲ್ಲಿ ಓಡಾಡುವ ಎಲ್ಲಾ ಟ್ಯಾಕ್ಸಿಗಳಿಗೂ ಕಡ್ಡಾಯವಾಗಿ ‘ನೀಲಿ ಮತ್ತು ಬಿಳಿ’ (Blue & White) ಬಣ್ಣವನ್ನೇ ಹೊಂದಿರಬೇಕು ಎಂದು ಕಟ್ಟುನಿಟ್ಟಿನ ನಿಯಮ ಮಾಡಿದೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

AH
Ashwini HR
ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ದಿನಪತ್ರಿಕೆ 'ಕ್ರಾಂತಿದೀಪ'ದಲ್ಲಿ ಉಪ ಸಂಪಾದಕಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 14 ವರ್ಷಗಳ ಅನುಭವ. ರಾಜ್ಯಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ರಾಜಕೀಯ, ಮನರಂಜನೆ, ಶಿಕ್ಷಣ, ಆರೋಗ್ಯ, ಟ್ರೆಂಡಿಂಗ್‌, ಲೈಫ್‌ಸ್ಟೈಲ್‌ ಕುರಿತಾದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ.ಪ್ರಸ್ತುತ ಸುವರ್ಣ ಡಿಜಿಟಲ್‌ ತಂಡದ ಭಾಗವಾಗಿ ವೃತ್ತಿ ಜೀವನ ಮುಂದುವರಿಸುತ್ತಿದ್ದೇನೆ.
ಜೀವನಶೈಲಿ
ಪ್ರವಾಸ
 

Latest Videos
Recommended Stories
Recommended image1
ಬೆಂಗಳೂರು-ಮುಂಬೈ ವಂದೇ ಭಾರತ್ ಸ್ಲೀಪರ್ ರೈಲು ವೇಳಾಪಟ್ಟಿ ಪ್ರಕಟ: ನಿಲ್ದಾಣ, ಸಮಯದ ವಿವರ ಇಲ್ಲಿದೆ
Recommended image2
ನೆಲವೇ ಇಲ್ಲದ ವಿಚಿತ್ರ ಹಳ್ಳಿ! ಇಡೀ ಗ್ರಾಮ ನೀರಿನ ಮೇಲೆ ತೇಲುತ್ತಿರುವುದರ ಹಿಂದಿದೆ ರೋಮಾಂಚಕ ಇತಿಹಾಸ!
Recommended image3
Goa Tourism: ಗೋವಾ ಅಂದ್ರೆ ಬರೀ ಬೀಚ್ ಅಲ್ಲ, ಈ ಜಾಗಗಳನ್ನೂ ಮಿಸ್ ಮಾಡ್ಬೇಡಿ
Related Stories
Recommended image1
ಈ 5 ಕಾರಣಕ್ಕಾಗಿ ನಿಮಗೆ 30ವರ್ಷ ಆಗುವ ಮುನ್ನ Solo Travel ಮಾಡಿ
Recommended image2
ಇನ್ಮುಂದೆ ಕೇವಲ 1 ನಿಮಿಷ ಚಾರ್ಜ್ ಮಾಡಿದ್ರೆ ಎಲೆಕ್ಟ್ರಿಕ್ ಕಾರಿನಲ್ಲಿ 100 ಕಿ.ಮೀ ಪ್ರಯಾಣ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved