MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Travel
  • ಪ್ರಪಂಚದ ಏಕೈಕ Airport… ಅಲ್ಲಿ ರನ್’ವೇನಲ್ಲಿ ಅಲ್ಲ, ಸಮುದ್ರದ ಮರಳಿನ ಮೇಲೆ ಲ್ಯಾಂಡ್ ಆಗುತ್ತೆ ವಿಮಾನ

ಪ್ರಪಂಚದ ಏಕೈಕ Airport… ಅಲ್ಲಿ ರನ್’ವೇನಲ್ಲಿ ಅಲ್ಲ, ಸಮುದ್ರದ ಮರಳಿನ ಮೇಲೆ ಲ್ಯಾಂಡ್ ಆಗುತ್ತೆ ವಿಮಾನ

Unique Airport: ಪ್ರಪಂಚದಾದ್ಯಂತದ ವಿಮಾನಗಳು ಕಾಂಕ್ರೀಟ್ ರನ್‌ವೇಗಳಲ್ಲಿ ಇಳಿಯುತ್ತವೆ. ಅದರಲ್ಲೇನಿದೆ ವಿಶೇಷ ಎನ್ನಬೇಡಿ. ಪ್ರಪಂಚದ ಈ ಒಂದು ಸುಂದರ ಸ್ಥಳದಲ್ಲಿ, ವಿಮಾನಗಳು ರನ್ ವೇನಲ್ಲಿ ಅಲ್ಲ ಬದಲಾಗಿ, ನೇರವಾಗಿ ಕಡಲತೀರದ ಮರಳಿನ ಮೇಲೆ ಇಳಿಯುತ್ತವೆ. ಆ ಸುಂದರ ತಾಣ ಯಾವುದು ಗೊತ್ತಾ?

2 Min read
Author : Pavna Das
Published : Jul 16 2026, 12:31 PM IST
Share this Photo Gallery
  • FB
  • TW
  • Linkdin
  • Whatsapp
16
ವಿಮಾನ ಎಲ್ಲಿ ಲ್ಯಾಂಡ್ ಆಗುತ್ತೆ?
Image Credit : social media

ವಿಮಾನ ಎಲ್ಲಿ ಲ್ಯಾಂಡ್ ಆಗುತ್ತೆ?

ಏನಿದು ಪ್ರಶ್ನೆ ವಿಮಾನ ಎಲ್ಲಿ ಲ್ಯಾಂಡ್ ಆಗುತ್ತೆ ಅಂದ್ರೆ ರನ್ ವೇ ನಲ್ಲಿ ತಾನೆ? ಎಂದು ನೀವು ಹೇಳಬಹುದು. ಆದರೆ ಇವತ್ತು ನಿಮಗೊಂದು ವಿಶೇಷವಾದ ವಿಮಾನ ನಿಲ್ದಾಣದ ಕುರಿತು ಮಾಹಿತಿ ನೀಡುತ್ತಿದ್ದೇವೆ. ಇಲ್ಲಿ ವಿಮಾನಗಳು ಖಂಡಿತವಾಗಿಯೂ ಕಾಂಕ್ರೀಟ್ ನಿಂದ ಮಾಡಿದ ರನ್ ವೇನಲ್ಲಿ ಇಳಿಯೋದಿಲ್ಲ. ಮತ್ತೆಲ್ಲಿ ಇಳಿಯುತ್ತೆ ಗೊತ್ತಾ?

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ಸ್ಕಾಟ್’ಲ್ಯಾಂಡಿನ ಬಾರ್ರಾ ದ್ವೀಪ
Image Credit : social media

ಸ್ಕಾಟ್’ಲ್ಯಾಂಡಿನ ಬಾರ್ರಾ ದ್ವೀಪ

ಈ ವಿಶಿಷ್ಟ ವಿಮಾನ ನಿಲ್ದಾಣವು ಇರುವುದು ಸ್ಕಾಟ್ಲೆಂಡ್‌ನ ಔಟರ್ ಹೆಬ್ರೈಡ್ಸ್‌ನಲ್ಲಿರುವ ಬಾರ್ರಾ ದ್ವೀಪದಲ್ಲಿ. ಈ ಪುಟ್ಟ ಸುಂದರ ದ್ವೀಪಕ್ಕೆ ಭೇಟಿ ನೀಡಬೇಕೆಂದರೆ, ನೀವು ವಿಮಾನದಲ್ಲಿ ಪ್ರಯಾಣಿಸಿ, ಮರಳಿನ ತೀರದಲ್ಲಿ ಲ್ಯಾಂಡ್ ಆಗಬೇಕು. ಇಲ್ಲಿ ಹಾರಾಟದ ಸಮಯವನ್ನು ಸಂಚಾರದಿಂದಲ್ಲ, ಬದಲಾಗಿ ಸಮುದ್ರ ಉಬ್ಬರವಿಳಿತಗಳಿಂದ ನಿರ್ಧರಿಸಲಾಗುತ್ತದೆ.

Related Articles

Related image1
Bihar travel Mandatory: ಬಿಹಾರ ಸರ್ಕಾರಿ ನೌಕರರಿಗೆ 3 ತಿಂಗಳಿಗೊಮ್ಮೆ ಪ್ರವಾಸ ಹೋಗುವುದು ಕಡ್ಡಾಯ!
Related image2
ಈ 5 ಕಾರಣಕ್ಕಾಗಿ ನಿಮಗೆ 30ವರ್ಷ ಆಗುವ ಮುನ್ನ Solo Travel ಮಾಡಿ
36
ಒಂದು ವಿಶಿಷ್ಟ ಮರಳಿನ ರನ್‌ವೇ
Image Credit : social media

ಒಂದು ವಿಶಿಷ್ಟ ಮರಳಿನ ರನ್‌ವೇ

ಸಮುದ್ರ ಉಬ್ಬರವಿಳಿತದ ಸಮಯದಲ್ಲಿ, ಈ ರನ್‌ವೇ ಸಂಪೂರ್ಣವಾಗಿ ಮುಳುಗಿರುತ್ತದೆ. ನೀರು ಕಡಿಮೆಯಾದ ನಂತರ, ಮರಳಿನ ಮೇಲೆ ವಿಮಾನಗಳ ಮಾರ್ಗವನ್ನು ಗುರುತಿಸಲು ಮರದ ಕಂಬಗಳನ್ನು ಬಳಸಲಾಗುತ್ತದೆ. ಈ ಸುಂದರ ಅನುಭವ ಪಡೆಯಲು ನೀವು ಸ್ಕಾಟ್ ಲ್ಯಾಂಡ್ ಗೆ ಭೇಟಿ ನೀಡಬೇಕಾಗುತ್ತದೆ.

46
ಪ್ರವಾಸಿಗರಿಗೆ ರನ್‌ವೇ ಮುಕ್ತವಾಗಿದೆ
Image Credit : social media

ಪ್ರವಾಸಿಗರಿಗೆ ರನ್‌ವೇ ಮುಕ್ತವಾಗಿದೆ

ವಿಮಾನಗಳು ನಿಗದಿತ ಸಮಯಕ್ಕೆ ಲಭ್ಯವಿಲ್ಲದಿದ್ದಾಗ, ಅಥವಾ ಅಲ್ಲಿ ಬರದೇ ಇದ್ದಾಗ, ಸಮುದ್ರದ ಉಬ್ಬರ ಇಳಿತ ಇದ್ದಾಗ ಈ ರನ್‌ವೇ ಸಾರ್ವಜನಿಕರಿಗೆ ತೆರೆದಿರುತ್ತದೆ. ಜನರು ಅಲ್ಲಿ ಸುತ್ತಲೂ ನಡೆದುಕೊಂಡು ಹೋಗಬಹುದು ಮತ್ತು ಸಮುದ್ರದ ಸುಂದರ ನೋಟಗಳನ್ನು ಆನಂದಿಸಬಹುದು. ಸಮುದ್ರದ ಅಲೆಗಳ ಜೊತೆ ಆಟ ಆಡಲೂ ಬಹುದು.

56
ಭೇಟಿ ನೀಡಲು ಉತ್ತಮ ಸ್ಥಳ
Image Credit : social media

ಭೇಟಿ ನೀಡಲು ಉತ್ತಮ ಸ್ಥಳ

ಬಾರ್ರಾ ದ್ವೀಪವು ಬಿಳಿ ಮರಳು ಮತ್ತು ಸುಂದರವಾದ ಕಡಲತೀರಗಳಿಗೆ ಹೆಸರುವಾಸಿಯಾಗಿದೆ. ಪ್ರವಾಸಿಗರು ಐತಿಹಾಸಿಕ ಕಿಸಿಮುಲ್ ಕೋಟೆ ಮತ್ತು ರುಚಿಕರವಾದ ಸ್ಥಳೀಯ ಸಮುದ್ರಾಹಾರವನ್ನು ಆನಂದಿಸಬಹುದು. ಈ ಪ್ರದೇಶವು ಯಾವುದೋ ಪೈಂಟಿಂಗ್ ನಂತೆ ಭಾಸವಾಗುತ್ತದೆ. ನಿಮಗೆ ಟ್ರಾಫಿಕ್ ನಿಂದ ದೂರವಾಗಿರುವ ಸುಂದರ ಸಮುದ್ರ ತೀರಕ್ಕೆ ತೆರಳಬೇಕು ಅಂದ್ರೆ, ಖಂಡಿತವಾಗಿಯೂ ಇಲ್ಲಿಗೆ ಭೇಟಿ ನೀಡಬಹುದು.

66
ಈ ಮಾಂತ್ರಿಕ ದ್ವೀಪವನ್ನು ತಲುಪುವುದು ಹೇಗೆ?
Image Credit : social media

ಈ ಮಾಂತ್ರಿಕ ದ್ವೀಪವನ್ನು ತಲುಪುವುದು ಹೇಗೆ?

ಈ ಮ್ಯಾಜಿಕಲ್ ಬಾರ್ರಾ ದ್ವೀಪಕ್ಕೆ ಮೇ ಮತ್ತು ಸೆಪ್ಟೆಂಬರ್ ನಡುವಿನ ಸಮಯ ಭೇಟಿ ನೀಡಲು ಉತ್ತಮ ಸಮಯವಾಗಿದೆ. ನೀವು ಗ್ಲ್ಯಾಸ್ಗೋದಿಂದ ವಿಮಾನದಲ್ಲಿ ಹೋಗಿ ಈ ಬೀಚ್ ರನ್‌ವೇಯಲ್ಲಿ ನೇರವಾಗಿ ಇಳಿಯಬಹುದು, ಅಥವಾ ನೀವು ದೋಣಿ ಮೂಲಕ ಇಲ್ಲಿಗೆ ತಲುಪಬಹುದು. ಆಯ್ಕೆ ನಿಮ್ಮದು. ಆದರೆ ಒಂದು ವಿಶಿಷ್ಟ ಅನುಭವ ಪಡೆಯಲು ಖಂಡಿತವಾಗಿಯೂ ವಿಮಾನದಲ್ಲಿ ಸಂಚಾರ ಮಾಡಬಹುದು.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

PD
Pavna Das
ಮೂಲತಃ ಮಂಗಳೂರಿನವಳು. ಮಂಗಳೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮದ ಸ್ನಾತಕೋತ್ತರ ಪದವಿ . ಕಳೆದ 12 ವರ್ಷಗಳಿಂದ ಪತ್ರಿಕೆ ಹಾಗೂ ಡಿಜಿಟಲ್ ಮಾಧ್ಯಮಗಳಲ್ಲಿ ಕೆಲಸ . ಸುದ್ದಿ ಬಿಡುಗಡೆ, ಗಲ್ಫ್ ಕನ್ನಡಿಗ, ಈ ಟಿವಿ ಭಾರತ್, ಕನ್ನಡ ನ್ಯೂಸ್ ನೌ, ವಿಜಯಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ. ಈಗ ಏಷ್ಯಾನೆಟ್ ಸುವರ್ಣದಲ್ಲಿ ಫ್ರೀಲಾನ್ಸರ್ . ಮನೋರಂಜನೆ, ಲೈಫ್ ಸ್ಟೈಲ್, ಟ್ರಾವೆಲ್ ಬರವಣಿಗೆ ಇಷ್ಟ.
ವಿಮಾನ ನಿಲ್ದಾಣ
ಪ್ರವಾಸ
ವಿದೇಶ ಪ್ರವಾಸ
ಜೀವನಶೈಲಿ

Latest Videos
Recommended Stories
Recommended image1
IRCTC ಹೊಸ ವೆಬ್‌ಸೈಟ್‌ ಬೀಟಾ ಆವೃತ್ತಿ ರಿಲೀಸ್‌: ಕ್ಯಾಪ್ಚಾ ಕಿರಿಕಿರಿ ಇಲ್ಲ, ಟಿಕೆಟ್ ಬುಕಿಂಗ್ ಇನ್ಮುಂದೆ ಮತ್ತಷ್ಟು ಸುಲಭ
Recommended image2
ವಿದ್ಯಾರ್ಥಿನಿ ದೂರಿನಿಂದ ಬದಲಾಯ್ತು ಭಾರತೀಯ ರೈಲ್ವೆ IRCTC ವೆಬ್‌ಸೈಟ್, ಪ್ರತಿ ನಿಮಿಷಕ್ಕೆ 1.5 ಲಕ್ಷ ಬುಕಿಂಗ್!
Recommended image3
ಬೆಂಗಳೂರು TO ತುಮಕೂರು: ಐಟಿ ಉದ್ಯೋಗಿಗಳಿಗೆ BMTC ಭರ್ಜರಿ ಗಿಫ್ಟ್​; 101 ಕಿ.ಮೀ ಬಸ್​ ಸೇವೆ ಹೀಗಿದೆ
Related Stories
Recommended image1
Bihar travel Mandatory: ಬಿಹಾರ ಸರ್ಕಾರಿ ನೌಕರರಿಗೆ 3 ತಿಂಗಳಿಗೊಮ್ಮೆ ಪ್ರವಾಸ ಹೋಗುವುದು ಕಡ್ಡಾಯ!
Recommended image2
ಈ 5 ಕಾರಣಕ್ಕಾಗಿ ನಿಮಗೆ 30ವರ್ಷ ಆಗುವ ಮುನ್ನ Solo Travel ಮಾಡಿ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved