ಬಿಹಾರ ಸರ್ಕಾರವು ರಾಜ್ಯದ ಪ್ರವಾಸೋದ್ಯಮ ಉತ್ತೇಜಿಸಲು ಹೊಸ ನಿಯಮ ಜಾರಿಗೆ ತಂದಿದೆ. ಈ ಪ್ರಕಾರ, ಎಲ್ಲಾ ಸರ್ಕಾರಿ ನೌಕರರು ಪ್ರತಿ 3 ತಿಂಗಳಿಗೊಮ್ಮೆ ತಮ್ಮ ಕುಟುಂಬದೊಂದಿಗೆ 2 ದಿನಗಳ ಪ್ರವಾಸ ಕಡ್ಡಾಯ. ಈ ಯೋಜನೆ ಸ್ಥಳೀಯ ಆರ್ಥಿಕತೆ ಬಲಪಡಿಸುವ, ಪ್ರವಾಸಿ ತಾಣಗಳನ್ನು ಸುಧಾರಿಸುವ ಗುರಿಯನ್ನು ಹೊಂದಿದೆ.
ಪಟನಾ (ಮೇ.27): ರಾಜ್ಯದಲ್ಲಿನ ಪ್ರವಾಸೋದ್ಯಮ(Bihar tourism) ಉತ್ತೇಜಿಸುವ ನಿಟ್ಟಿನಲ್ಲಿ ಎಲ್ಲಾ ಸರ್ಕಾರಿ ನೌಕರರುGovernment employees) ಪ್ರತಿ 3 ತಿಂಗಳಿಗೊಮ್ಮೆ ಕುಟುಂಬ ಸಮೇತ ಕನಿಷ್ಠ 2 ದಿನಗಳ ಪ್ರವಾಸ ಕೈಗೊಳ್ಳುವುದನ್ನು ಬಿಹಾರದ ಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ನೇತೃತ್ವದ ಬಿಜೆಪಿ ಸರ್ಕಾರ ಕಡ್ಡಾಯ ಮಾಡಿದೆ.

ಬಿಹಾರ ಪ್ರವಾಸೋದ್ಯಮ ಹೊಸ ಯೋಜನೆ ಹೇಗಿದೆ?
- ಪ್ರತಿ ಸರ್ಕಾರಿ ಅಧಿಕಾರಿ ಪ್ರತಿ 3 ತಿಂಗಳಿಗೆ ಒಮ್ಮೆ ಕುಟುಂಬ ಸಮೇತ ಕಡ್ಡಾಯ ಪ್ರವಾಸ ಕೈಗೊಳ್ಳಬೇಕು.
- ಇಂಥ ಪ್ರವಾಸ ಅವರ ವಾಸವಿರುವ ಜಿಲ್ಲೆಯನ್ನು ಹೊರತುಪಡಿಸಿದ ಬೇರೆ ಜಿಲ್ಲೆಗಳಲ್ಲಿ ವ್ಯಾಪ್ತಿಯಲ್ಲಿರಬೇಕು.
- ಶುಕ್ರವಾರ, ಶನಿವಾರ ಪ್ರವಾಸಕ್ಕೆ ತೆರಳಬೇಕು. ಒಟ್ಟು 2 ರಾತ್ರಿ, 2 ಹಗಲು ಪ್ರವಾಸದ ಭಾಗ ಆಗಿರಬೇಕು.
- ಪ್ರವಾಸದ ವೇಳೆ ಕನಿಷ್ಠ 3 ಸ್ಥಳೀಯ ಪ್ರದೇಶಗಳಿಗೆ ಭೇಟಿ ನೀಡಬೇಕು. ಸರ್ಕಾರಕ್ಕೆ ಕೆಲಸಕ್ಕೆ ಅವಕಾಶ ಇಲ್ಲ.
- ಮುಖ್ಯವಾಗಿ ರಾಜ್ಯದ ಪರಿಸರ ಪ್ರವಾಸೋದ್ಯಮ ಮತ್ತು ಗ್ರಾಮೀಣ ಪ್ರವಾಸಿ ತಾಣಗಳಿಗೆ ಭೇಟಿ ನೀಡಬೇಕು.
- ಪ್ರವಾಸದ ವೇಳೆ ಅಲ್ಲಿನ ಫೋಟೋ ತೆಗೆದು ಸಲ್ಲಿಸಬೇಕು. ಅಲ್ಲಿ ಇನ್ನೇನು ಬೇಕು ಎಂಬ ಸಲಹೆ ನೀಡಬೇಕು.
- ಪ್ರವಾಸದ ದಿನಗಳನ್ನು ರಜೆಯ ದಿನದಿಂದ ಕಡಿತ ಮಾಡಲ್ಲ. ಕರ್ತವ್ಯದ ದಿನ ಎಂದು ಪರಿಗಣಿಸಲಾಗುತ್ತದೆ.
ಉದ್ದೇಶ ಏನು?:
- ಸ್ಥಳೀಯ ಪ್ರವಾಸೋದ್ಯಮಕ್ಕೆ ಚೇತರಿಕೆ. ಪ್ರವಾಸೋದ್ಯಮ ಭೂಪಟಕ್ಕೆ ಹೊಸ ಪ್ರದೇಶಗಳ ಸೇರ್ಪಡೆ
- ಸಾವಿರಾರು ಜನರ ಭೇಟಿಯ ಪರಿಣಾಮ ಸ್ಥಳೀಯ ಆರ್ಥಿಕತೆಗೆ ಭಾರೀ ಉತ್ತೇಜನ. ಜನರ ಸ್ಥಿತಿಗತಿ ಚೇತರಿಕೆ
- ಪ್ರವಾಸೋದ್ಯಮ ಸ್ಥಳಗಳ ನ್ಯೂನತೆ ಪಟ್ಟಿ ಮಾಡಿ ಅವುಗಳನ್ನು ಸುಧಾರಣೆ ಮಾಡಲು ಸರ್ಕಾರಕ್ಕೆ ಅವಕಾಶ
ಖರ್ಚು?/ವೆಚ್ಚ?:
ಸರ್ಕಾರ ಹೊರಡಿಸಿ ಆದೇಶದಲ್ಲಿ ಪ್ರವಾಸದ ವೆಚ್ಚದ ಬಗ್ಗೆ ಸ್ಪಷ್ಟ ಮಾಹಿತಿ ನೀಡಿಲ್ಲ. ಒಂದು ಮೂಲಗಳ ಪ್ರಕಾರ ಅಧಿಕಾರಿಗೆ ಪ್ರವಾಸದ ಸಂಚಾರ, ಊಟದ ವೆಚ್ಚ ನೀಡಲಾಗುವುದು. ಕುಟುಂಬ ಸದಸ್ಯರ ಖರ್ಚನ್ನು ಅಧಿಕಾರಿಗಳೇ ಭರಿಸಬೇಕು. ಇನ್ನೊಂದು ಮೂಲದ ಪ್ರಕಾರ ಸಂಪೂರ್ಣ ಖರ್ಚುವೆಚ್ಚವನ್ನು ಅಧಿಕಾರಿಗಳೇ ಭರಿಸಬೇಕಾಗಿ ಬರಲಿದೆ.


