MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Travel
  • ಬೀಚ್‌ ನೋಡಲೆಂದು ಹೋದವರು ಅಕಸ್ಮಾತ್ ಈ 5 ವಸ್ತುಗಳನ್ನ ಮನೆಗೆ ತಂದ್ರೆ ಜೈಲೂಟ ಗ್ಯಾರಂಟಿ

ಬೀಚ್‌ ನೋಡಲೆಂದು ಹೋದವರು ಅಕಸ್ಮಾತ್ ಈ 5 ವಸ್ತುಗಳನ್ನ ಮನೆಗೆ ತಂದ್ರೆ ಜೈಲೂಟ ಗ್ಯಾರಂಟಿ

Beach vacation laws: ಸಮುದ್ರದ ಅಲೆಗಳ ಸೌಂದರ್ಯ ಸವಿಯುವ ಆತುರದಲ್ಲಿ ನಾವು ಮಾಡುವ ಸಣ್ಣ ತಪ್ಪು ನಮ್ಮನ್ನು ದೊಡ್ಡ ಕಾನೂನು ಸಂಕಷ್ಟಕ್ಕೆ ಗುರಿ ಮಾಡಬಹುದು. ನೆನಪಿಗಾಗಿ ಬೀಚ್‌ನಿಂದ ಇವುಗಳನ್ನ ಸಂಗ್ರಹಿಸಿ ತರುವುದು ಕೇವಲ ಪರಿಸರಕ್ಕೆ ಹಾನಿಕಾರಕವಲ್ಲ, ಬದಲಾಗಿ ಶಿಕ್ಷಾರ್ಹ ಅಪರಾಧವೂ ಹೌದು. 

2 Min read
Author : Ashwini HR
Published : Feb 17 2026, 07:16 PM IST
Share this Photo Gallery
  • FB
  • TW
  • Linkdin
  • Whatsapp
17
ಪ್ರಕೃತಿಗೆ ಭಾರಿ ಹಾನಿ
Image Credit : Getty

ಪ್ರಕೃತಿಗೆ ಭಾರಿ ಹಾನಿ

ಸಮುದ್ರ ತೀರದಲ್ಲಿ ವಿಹರಿಸುವಾಗ ನಮ್ಮ ಒಂದು ಸಣ್ಣ ನಿರ್ಲಕ್ಷ್ಯವು ದೊಡ್ಡ ಸಂಕಷ್ಟಕ್ಕೆ ಗುರಿ ಮಾಡಬಹುದು. ಪ್ರಕೃತಿಯ ಈ ಸಂಪತ್ತನ್ನು ರಕ್ಷಿಸಲು ಮತ್ತು ಭಾರಿ ದಂಡ ಅಥವಾ ಜೈಲು ಶಿಕ್ಷೆಯಿಂದ ಪಾರಾಗಲು ಪ್ರವಾಸಿಗರು ಕೆಲವು ಪ್ರಮುಖ ವಿಷಯಗಳ ಬಗ್ಗೆ ಗಮನ ಹರಿಸಬೇಕು. ಸಮುದ್ರದ ಅಲೆಗಳು ಮತ್ತು ಮರಳಿನ ತೀರ ಪ್ರತಿಯೊಬ್ಬರಿಗೂ ನೆಮ್ಮದಿ ನೀಡುತ್ತವೆ. ರಜೆಯ ಉತ್ಸಾಹದಲ್ಲಿ ನಾವು ಅನೇಕ ಬಾರಿ ನಮ್ಮ ಸಣ್ಣ ಕೆಲಸಗಳು ಪ್ರಕೃತಿಗೆ ಭಾರಿ ಹಾನಿ ಉಂಟುಮಾಡಬಹುದು ಎಂಬುವುದನ್ನು ಮರೆಯುತ್ತೇವೆ.

27
ಆ 5 ವಸ್ತುಗಳು ಯಾವುವು?
Image Credit : Getty

ಆ 5 ವಸ್ತುಗಳು ಯಾವುವು?

ಉದಾಹರಣೆಗೆ ಬೀಚ್‌ನಲ್ಲಿ ವಿಹರಿಸುವಾಗ ನೆನಪಿಗಾಗಿ ನಾವು ಸುಂದರವಾದ ಚಿಪ್ಪನ್ನು (Sea Shell) ಎತ್ತಿಕೊಳ್ಳುತ್ತೇವೆ ಅಥವಾ ಒಂದು ಮುಷ್ಠಿ ಮರಳನ್ನು ಜೊತೆಯಲ್ಲಿ ತರುತ್ತೇವೆ. ನಮಗೆ ಇದು ಸಣ್ಣ ವಿಷಯ ಎನಿಸಬಹುದು, ಆದರೆ ಇದು ದೊಡ್ಡ ತಪ್ಪು. ಸಮುದ್ರಕ್ಕೆ ತನ್ನದೇ ಆದ ಸೂಕ್ಷ್ಮ ನಿಯಮಗಳಿವೆ ಮತ್ತು ಅದನ್ನು ಮೀರುವುದು ಪ್ರಕೃತಿಗೆ ಮಾತ್ರವಲ್ಲದೆ, ಹಲವು ಕಡೆಗಳಲ್ಲಿ ಕಾನೂನು ಅಪರಾಧವೂ ಹೌದು. ಬೀಚ್ ವೆಕೇಶನ್ ಸಮಯದಲ್ಲಿ ಸಮುದ್ರ ತೀರದಿಂದ ನೀವು ಎಂದಿಗೂ ಮನೆಗೆ ತರಬಾರದ ಆ 5 ವಸ್ತುಗಳು ಯಾವುವು ಎಂದು ತಿಳಿಯೋಣ.

Related Articles

Related image1
Railway Insurance: ರೈಲ್ವೆ ಟಿಕೆಟ್ ಬುಕ್ ಮಾಡುವಾಗ ಈ ತಪ್ಪು ಮಾಡಲೇಬೇಡಿ
Related image2
ಭಾರತೀಯರು ಬ್ಯಾಂಕಾಕ್‌ಗೆ ಏಕೆ ಹೋಗ್ತಾರೆ? 99% ಜನಕ್ಕೆ ಈ ಸತ್ಯ ಗೊತ್ತಿಲ್ಲ
37
1. ಸಮುದ್ರದ ಚಿಪ್ಪುಗಳು
Image Credit : Getty

1. ಸಮುದ್ರದ ಚಿಪ್ಪುಗಳು

ಚಿಪ್ಪುಗಳು ನೋಡಲು ಸುಂದರವಾಗಿರುತ್ತವೆ, ಆದರೆ ಅವುಗಳ ಅಸಲಿ ಮನೆ ಸಮುದ್ರವೇ ಆಗಿದೆ. ಇವು ಕೇವಲ ಅಲಂಕಾರಿಕ ವಸ್ತುಗಳಲ್ಲ, ಬದಲಾಗಿ ಹರ್ಮಿಟ್ ಏಡಿಗಳಂತಹ ಸಣ್ಣ ಜೀವಿಗಳ ಮನೆಗಳು. ಈ ಚಿಪ್ಪುಗಳು ಒಡೆದಾಗ ಮರಳಿನೊಂದಿಗೆ ಸೇರಿ ಮರಳನ್ನು ಬಲಪಡಿಸುತ್ತವೆ. ಪ್ರತಿಯೊಬ್ಬ ಪ್ರವಾಸಿಗನೂ ಚಿಪ್ಪುಗಳನ್ನು ಒಯ್ಯತೊಡಗಿದರೆ ಸಮುದ್ರ ಜೀವಿಗಳ ವಾಸಸ್ಥಾನವು ಕೊನೆಗೊಳ್ಳುತ್ತದೆ.

ಇದೇ ಕಾರಣಕ್ಕಾಗಿ ಭಾರತ, ಥೈಲ್ಯಾಂಡ್ ಮತ್ತು ಮಾಲ್ಡೀವ್ಸ್‌ನಂತಹ ದೇಶಗಳಲ್ಲಿ ಚಿಪ್ಪುಗಳನ್ನು ಸಂಗ್ರಹಿಸುವುದು ಕಾನೂನು ಅಪರಾಧವಾಗಿದೆ ಮತ್ತು ಇದಕ್ಕಾಗಿ ನೀವು ಭಾರಿ ದಂಡವನ್ನು ಪಾವತಿಸಬೇಕಾಗಬಹುದು.

47
2. ಮರಳು, ಜಲ್ಲಿ ಅಥವಾ ಕಲ್ಲು
Image Credit : gemini

2. ಮರಳು, ಜಲ್ಲಿ ಅಥವಾ ಕಲ್ಲು

ಬೀಚ್‌ನಲ್ಲಿ ರಾಶಿ ರಾಶಿ ಮರಳಿದೆ, ಸ್ವಲ್ಪ ತೆಗೆದುಕೊಂಡು ಹೋದರೆ ಏನು ವ್ಯತ್ಯಾಸವಾಗುತ್ತದೆ ಎಂದು ನಮಗೆ ಅನ್ನಿಸಬಹುದು. ಆದರೆ ಸತ್ಯವೇನೆಂದರೆ, ಈ ಮರಳು ತಯಾರಾಗಲು ಸಾವಿರಾರು ವರ್ಷಗಳು ಬೇಕಾಗುತ್ತವೆ. ಲಕ್ಷಾಂತರ ಪ್ರವಾಸಿಗರು ಮರಳನ್ನು ಒಯ್ದರೆ ಸಮುದ್ರ ತೀರಗಳು ಕ್ರಮೇಣ ಕುಗ್ಗುತ್ತವೆ, ಇದರಿಂದ ತೀರ ಸವೆತ ಉಂಟಾಗಿ ಪರಿಸರಕ್ಕೆ ಹಾನಿಯಾಗುತ್ತದೆ.

ಹಲವು ದೇಶಗಳ ವಿಮಾನ ನಿಲ್ದಾಣಗಳಲ್ಲಿ ನಿಮ್ಮ ಬಳಿ ಮರಳು ಕಂಡುಬಂದಲ್ಲಿ ಅದನ್ನು ವಶಪಡಿಸಿಕೊಳ್ಳಲಾಗುತ್ತದೆ ಮತ್ತು ಕಾನೂನು ಕ್ರಮ ಜರುಗಿಸಬಹುದು.

57
3. ಹವಳದ ತುಣುಕುಗಳು
Image Credit : Getty

3. ಹವಳದ ತುಣುಕುಗಳು

ಹವಳಗಳನ್ನು ಸಮುದ್ರದ ಶ್ವಾಸಕೋಶ ಎನ್ನಲಾಗುತ್ತದೆ. ಹವಳ ಜೀವಂತವಿರಲಿ ಅಥವಾ ಸತ್ತಿರಲಿ, ಅವುಗಳನ್ನು ತಮ್ಮ ಸ್ಥಾನದಿಂದ ತೆಗೆಯುವುದು ಸಮುದ್ರ ಜೀವನವನ್ನು ನಾಶಪಡಿಸಿದಂತೆ. ಸತ್ತ ಹವಳಗಳು ಸಮುದ್ರದೊಳಗೆ ಹೊಸ ಜೀವಿಗಳು ಬೆಳೆಯಲು ಸಹಾಯ ಮಾಡುತ್ತವೆ. ಹವಳಗಳನ್ನು ಸ್ಮರಣಿಕೆಯಾಗಿ ಮನೆಗೆ ಒಯ್ಯುವುದು ಅವುಗಳ ಅಸ್ತಿತ್ವವನ್ನೇ ಕೊನೆಗೊಳಿಸಬಹುದು.

ನೆನಪಿಡಿ, ಹವಳದ ತುಣುಕುಗಳನ್ನು ಜೊತೆಗೆ ಒಯ್ಯುವುದು ಜೈಲು ಶಿಕ್ಷೆಗೆ ಕಾರಣವಾಗಬಹುದು.

67
4. ಸಮುದ್ರ ಜೀವಿಗಳು
Image Credit : Getty

4. ಸಮುದ್ರ ಜೀವಿಗಳು

ಅನೇಕ ಬಾರಿ ಜನರು ಫೋಟೋಗಾಗಿ ಅಥವಾ ಮನೆಗೆ ಒಯ್ಯಲು ಸ್ಟಾರ್‌ಫಿಶ್, ಏಡಿ ಅಥವಾ ಸಮುದ್ರ ಅರ್ಚಿನ್‌ಗಳನ್ನು ಎತ್ತಿಕೊಳ್ಳುತ್ತಾರೆ. ಸ್ಟಾರ್‌ಫಿಶ್‌ನಂತಹ ಜೀವಿಗಳು ನೀರು ಬಿಟ್ಟು ಹೊರಬಂದ ತಕ್ಷಣ ಸಾಯುತ್ತವೆ. ಸತ್ತ ಜೀವಿಗಳು ಸಮುದ್ರ ಮತ್ತು ಮರಳಿಗೆ ಅಗತ್ಯ ಪೋಷಕಾಂಶಗಳನ್ನು ನೀಡುತ್ತವೆ, ಇದರಿಂದ ಪ್ರಕೃತಿಯ ಚಕ್ರವು ನಡೆಯುತ್ತದೆ.

ವನ್ಯಜೀವಿ ಕಾಯಿದೆಯಡಿ ಸಮುದ್ರ ಜೀವಿಗಳಿಗೆ ತೊಂದರೆ ನೀಡುವುದು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.

77
5. ಒಣ ಮರ ಮತ್ತು ಸಮುದ್ರ ಪಾಚಿ
Image Credit : Asianet News

5. ಒಣ ಮರ ಮತ್ತು ಸಮುದ್ರ ಪಾಚಿ

ತೀರಕ್ಕೆ ಕೊಚ್ಚಿ ಬಂದ ಮರ ಮತ್ತು ಪಾಚಿ ನಮಗೆ ಕಸದಂತೆ ಕಂಡರೂ ಅವು ಸಮುದ್ರ ತೀರವನ್ನು ರಕ್ಷಿಸುತ್ತವೆ. ಸಮುದ್ರದ ಪಾಚಿಯು ಮರಳು ಹಾರಿ ಹೋಗದಂತೆ ತಡೆಯುತ್ತದೆ ಮತ್ತು ಮಣ್ಣಿನ ಸವೆತವನ್ನು ಕಡಿಮೆ ಮಾಡುತ್ತದೆ. ಕೊಚ್ಚಿ ಬಂದ ಮರವು ಸಣ್ಣ ಕೀಟ ಮತ್ತು ಹಕ್ಕಿಗಳಿಗೆ ವಾಸಸ್ಥಾನವಾಗಿರುತ್ತದೆ.

ಆದ್ದರಿಂದ ಬೀಚ್‌ನಿಂದ ಕೇವಲ ನಿಮ್ಮ ನೆನಪುಗಳು ಮತ್ತು ಫೋಟೋಗಳನ್ನು ಮಾತ್ರ ತನ್ನಿ, ಅಲ್ಲಿನ ನೈಸರ್ಗಿಕ ಸಂಪತ್ತನ್ನು ಮುಟ್ಟಬೇಡಿ. 

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

AH
Ashwini HR
ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ದಿನಪತ್ರಿಕೆ 'ಕ್ರಾಂತಿದೀಪ'ದಲ್ಲಿ ಉಪ ಸಂಪಾದಕಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 14 ವರ್ಷಗಳ ಅನುಭವ. ರಾಜ್ಯಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ರಾಜಕೀಯ, ಮನರಂಜನೆ, ಶಿಕ್ಷಣ, ಆರೋಗ್ಯ, ಟ್ರೆಂಡಿಂಗ್‌, ಲೈಫ್‌ಸ್ಟೈಲ್‌ ಕುರಿತಾದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ.ಪ್ರಸ್ತುತ ಸುವರ್ಣ ಡಿಜಿಟಲ್‌ ತಂಡದ ಭಾಗವಾಗಿ ವೃತ್ತಿ ಜೀವನ ಮುಂದುವರಿಸುತ್ತಿದ್ದೇನೆ.
ಜೀವನಶೈಲಿ
ಪ್ರವಾಸ

Latest Videos
Recommended Stories
Recommended image1
ಶಿವಮೊಗ್ಗ ವಿಮಾನ ನಿಲ್ದಾಣ ಲೈಸೆನ್ಸ್ ನವೀಕರಣ ಪೂರ್ಣ: ನೈಟ್ ಲ್ಯಾಂಡಿಂಗ್ ಕಾಮಗಾರಿ ಈ ವಾರ ಆರಂಭ
Recommended image2
Travel Guide: ಜನವರಿ - ಡಿಸೆಂಬರ್… ಯಾವ ತಿಂಗಳು, ಯಾವ ತಾಣ ಟ್ರಾವೆಲ್ ಮಾಡಲು ಬೆಸ್ಟ್?
Recommended image3
Railway Insurance: ರೈಲ್ವೆ ಟಿಕೆಟ್ ಬುಕ್ ಮಾಡುವಾಗ ಈ ತಪ್ಪು ಮಾಡಲೇಬೇಡಿ
Related Stories
Recommended image1
Railway Insurance: ರೈಲ್ವೆ ಟಿಕೆಟ್ ಬುಕ್ ಮಾಡುವಾಗ ಈ ತಪ್ಪು ಮಾಡಲೇಬೇಡಿ
Recommended image2
ಭಾರತೀಯರು ಬ್ಯಾಂಕಾಕ್‌ಗೆ ಏಕೆ ಹೋಗ್ತಾರೆ? 99% ಜನಕ್ಕೆ ಈ ಸತ್ಯ ಗೊತ್ತಿಲ್ಲ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved