MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Gowri Ganesha Habba Wishes
Ind vs Afg T20 Series
Bengaluru Metro Stations
Karnataka Power Crisis
Belagavi Cantonment Board
Today's Horoscope in Kannada
Satish Jarkiholi ED Complaint
BRICS Summit 2026
Agumbe Ghat Road Development
SSLC Toppers Reward
Bengaluru Tunnel Road Project
India-Russia Relations
Vijay Mallya
ED Investigation Satish Jarkiholi
Mangaluru Railway Zone
Devanahalli Land Dispute
Ganesh Festival Restrictions
  • Home
  • Life
  • Travel
  • ಮೈಸೂರಿನಿಂದ ವಿಶಾಖಪಟ್ಟಣಂಗೆ ನೇರ ರೈಲು ಸೇವೆ ಆರಂಭಕ್ಕೆ ಮನವಿ; ರೂಟ್‌ ಈ ರೀತಿಯಾಗಿರಲಿದೆ

ಮೈಸೂರಿನಿಂದ ವಿಶಾಖಪಟ್ಟಣಂಗೆ ನೇರ ರೈಲು ಸೇವೆ ಆರಂಭಕ್ಕೆ ಮನವಿ; ರೂಟ್‌ ಈ ರೀತಿಯಾಗಿರಲಿದೆ

ಮೈಸೂರಿನಿಂದ ವಿಶಾಖಪಟ್ಟಣಂಗೆ ನೇರ ರೈಲು ಸೇವೆ ಆರಂಭಿಸುವಂತೆ ದಾವಣಗೆರೆ ರೈಲ್ವೆ ಪ್ರಯಾಣಿಕರ ಸಂಘವು ನೈಋತ್ಯ ರೈಲ್ವೆಗೆ ಮನವಿ ಮಾಡಿದೆ. ಈ ಹೊಸ ಮಾರ್ಗವು ಮೈಸೂರು, ದಾವಣಗೆರೆ, ಹೊಸಪೇಟೆ ಭಾಗದ ಪ್ರಯಾಣಿಕರಿಗೆ ಅನುಕೂಲವಾಗಲಿದ್ದು, ಹಂಪಿ ಪ್ರವಾಸೋದ್ಯಮಕ್ಕೂ ಉತ್ತೇಜನ ನೀಡಲಿದೆ.

1 Min read
Author : Kannadaprabha News
Published : Jun 02 2026, 07:55 AM IST
Share this Photo Gallery
  • FB
  • TW
  • Linkdin
  • Whatsapp
14
ವಿಶಾಖಪಟ್ಟಣಂಗೆ ನೇರ ರೈಲು
Image Credit : stockPhoto

ವಿಶಾಖಪಟ್ಟಣಂಗೆ ನೇರ ರೈಲು

ಮೈಸೂರು, ದಾವಣಗೆರೆ, ಹೊಸಪೇಟೆ, ಬಳ್ಳಾರಿ ಭಾಗದ ಸಾವಿರಾರು ಪ್ರಯಾಣಿಕರು ಆಂಧ್ರ ಪ್ರದೇಶದ ಪ್ರಮುಖ ನಗರವಾದ ವಿಶಾಖಪಟ್ಟಣಂಗೆ ಉದ್ಯೋಗ, ಶಿಕ್ಷಣ, ವ್ಯಾಪಾರ ಹಾಗೂ ಪ್ರವಾಸ ಉದ್ದೇಶಗಳಿಂದ ಪ್ರಯಾಣಿಸುತ್ತಿದ್ದಾರೆ. ಆದರೆ, ಈ ಮಾರ್ಗದಲ್ಲಿ ನೇರ ರೈಲು ಸೇವೆಯ ಕೊರತೆಯಿಂದ ಪ್ರಯಾಣಿಕರು ಬೆಂಗಳೂರಿನಲ್ಲಿ ರೈಲು ಬದಲಾಯಿಸುವ ಅನಿವಾರ್ಯತೆ ಎದುರಿಸುತ್ತಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
24
ನೈಋತ್ಯ ರೈಲ್ವೆ ಮಹಾ ಪ್ರಬಂಧಕರಿಗೆ ಪತ್ರ
Image Credit : Gemini

ನೈಋತ್ಯ ರೈಲ್ವೆ ಮಹಾ ಪ್ರಬಂಧಕರಿಗೆ ಪತ್ರ

ಪ್ರಸ್ತುತ ಮೈಸೂರು- ವಿಶಾಖಪಟ್ಟಣಂ ನಡುವೆ ಸೀಮಿತ ನೇರ ಸಂಪರ್ಕ ಮಾತ್ರ ಲಭ್ಯವಿದೆ. ಆದ್ದರಿಂದ ಈ ರೀತಿ ಮಾರ್ಗದಲ್ಲಿ ಹೊಸ ದೈನಂದಿನ ವಾರಾಂತ್ಯ ಎಕ್ಸ್ ಪ್ರೆಸ್‌ ರೈಲು ಆರಂಭಿಸುವಂತೆ ದಾವಣಗೆರೆ ನೈಋತ್ಯ ರೈಲ್ವೆ ಪ್ರಯಾಣಿಕರ ಸಂಘದ ಕಾರ್ಯದರ್ಶಿ ರೋಹಿತ್ ಎಸ್.ಜೈನ್ ನೈಋತ್ಯ ರೈಲ್ವೆ ಮಹಾ ಪ್ರಬಂಧಕರಿಗೆ ಪತ್ರ ಬರೆದು ಮೇಲ್ ಮೂಲಕ ಮನವಿ ಮಾಡಿದ್ದಾರೆ.

Related Articles

Related image1
ದಾವಣಗೆರೆ ರೈಲ್ವೆ ನಿಲ್ದಾಣದಲ್ಲಿ ಕಾಮಗಾರಿ ಹಿನ್ನೆಲೆ, ಬೆಂಗಳೂರಿಂದ ಹೊರಡುವ ರೈಲು ಸಂಚಾರದಲ್ಲಿ ಭಾರಿ ವ್ಯತ್ಯಯ!
Related image2
ಭಾರತೀಯ ರೈಲ್ವೆಯ ಮಹತ್ವಾಕಾಂಕ್ಷಿ ಯೋಜನೆ, ರೈಲು ಉತ್ಪಾದನಾ ಘಟಕ: 5ವರ್ಷದಲ್ಲಿ 200ಹೈಟೆಕ್ ಇಂಟರ್‌ಸಿಟಿ ರೈಲು ನಿರ್ಮಾಣ!
34
ಹೊಸಪೇಟೆ- ಹಂಪಿ ಪ್ರವಾಸೋದ್ಯಮ
Image Credit : Indian Railways

ಹೊಸಪೇಟೆ- ಹಂಪಿ ಪ್ರವಾಸೋದ್ಯಮ

ಮೈಸೂರು- ತುಮಕೂರು- ದಾವಣಗೆರೆ- ಹೊಸಪೇಟೆ- ಬಳ್ಳಾರಿ- ಗೂಟಿ- ವಿಜಯವಾಡ- ವಿಶಾಖಪಟ್ಟಣಂ ರೈಲು ಸೇವೆಯನ್ನು ಮಾಡುವುದರಿಂದ ದಾವಣಗೆರೆ ಮತ್ತು ಮಧ್ಯ ಕರ್ನಾಟಕಕ್ಕೆ ಆಂಧ್ರ ಪ್ರದೇಶದೊಂದಿಗೆ ಉತ್ತಮ ಸಂಪರ್ಕ ಸಿಗುತ್ತದೆ. ಹೊಸಪೇಟೆ- ಹಂಪಿ ಪ್ರವಾಸೋದ್ಯಮಕ್ಕೆ ಉತ್ತೇಜನ ಸಿಗುತ್ತದೆ. ವಿದ್ಯಾರ್ಥಿಗಳು, ಕಾರ್ಮಿಕರು ಮತ್ತು ವ್ಯಾಪಾರಿಗಳಿಗೆ ಅನುಕೂಲವಾಗುತ್ತದೆ. ಉತ್ತರ ಕರ್ನಾಟಕ ಹಾಗೂ ಹೈದರಾಬಾದ್ ಮಾರ್ಗದ ಪ್ರಯಾಣ ಒತ್ತಡ ಕಡಿಮೆಯಾಗುತ್ತದೆ.

44
ಹೊಸ ಮಾರ್ಗಗಳ ಬೇಡಿಕೆ
Image Credit : Social Media

ಹೊಸ ಮಾರ್ಗಗಳ ಬೇಡಿಕೆ

ಇತ್ತೀಚಿನ ದಿನಗಳಲ್ಲಿ ಹಲವು ರೈಲು ಬಳಕೆದಾರ ಸಂಘಗಳು ಹೊಸ ರೈಲುಗಳು ಹಾಗೂ ಹೊಸ ಮಾರ್ಗಗಳ ಬೇಡಿಕೆ ಸಲ್ಲಿಸಿರುವುದು ಗಮನಾರ್ಹವಾಗಿದೆ. ಆದ್ದರಿಂದ ಸಾರ್ವಜನಿಕರ ಬಹುಕಾಲದ ಬೇಡಿಕೆಯನ್ನು ಪರಿಗಣಿಸಿ ಶೀಘ್ರವೇ ಈ ಹೊಸ ನೇರ ರೈಲು ಸೇವೆಯನ್ನು ಘೋಷಿಸುವಂತೆ ಮನವಿ ಮಾಡಿದ್ದಾರೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

KN
Kannadaprabha News
1967ರ ನವೆಂಬರ್ 4ರಂದು ಆರಂಭವಾದ ಕನ್ನಡಪ್ರಭ ಕನ್ನಡ ಪತ್ರಿಕೋದ್ಯಮದಲ್ಲಿಯೇ ವಿಶೇಷ ಛಾಪು ಮೂಡಿಸಿದ ಕನ್ನಡ ದಿನ ಪತ್ರಿಕೆ. ದೇಶ, ವಿದೇಶ, ವಾಣಿಜ್ಯ, ಕ್ರೀಡೆ, ಮನೋರಂಜನೆ ಸೇರಿ ವೈವಿಧ್ಯಮಯ ಸುದ್ದಿಗಳ ಹೂರಣ ಹೊತ್ತು ತರುವ ಕನ್ನಡಪ್ರಭ, ಕನ್ನಡಿಗರ ಅಸ್ಮಿತೆಯ ಸಂಕೇತ. ಸದಾ ಕರುನಾಡು, ನುಡಿ, ಸಂಸ್ಕೃತಿ ಪರ ಧ್ವನಿ ಎತ್ತುವ ಕನ್ನಡಪ್ರಭ ದಿನ ಪತ್ರಿಕೆಯಲ್ಲಿ ಪ್ರಕಟಗೊಳ್ಳುವ ಸುದ್ದಿಗಳು ಸುವರ್ಣ ನ್ಯೂಸ್ ವೆಬ್‌ಸೈಟಲ್ಲೂ ಲಭ್ಯ.
ಭಾರತೀಯ ರೈಲ್ವೆ
ಮೈಸೂರು
ರೈಲು
ಪ್ರವಾಸ

Latest Videos
Recommended Stories
Recommended image1
Google Maps ಟ್ರಾಫಿಕ್ ಜಾಮ್ ಹೇಗೆ ಪತ್ತೆ ಮಾಡುತ್ತೆ? 99% ಜನರಿಗೆ ಗೊತ್ತಿಲ್ಲದ ಸತ್ಯ!
Recommended image2
ಭಾರತದ ಅತಿ ಉದ್ದದ ತಡೆರಹಿತ ರೈಲು! 528 ಕಿ.ಮೀ. ಚಲಿಸಿದರೂ ಒಂದೇ ಒಂದು ನಿಲ್ದಾಣದಲ್ಲಿ ನಿಲ್ಲೋದಿಲ್ಲ!
Recommended image3
Indian Railways: ರೈಲಿನ ಜನರಲ್ ಬೋಗಿಗಳು ಮುಂದೆ-ಹಿಂದೆ ಯಾಕಿರುತ್ತೆ? ಇಲ್ಲಿದೆ ಇಂಟ್ರೆಸ್ಟಿಂಗ್ ಡೀಟೈಲ್ಸ್
Related Stories
Recommended image1
ದಾವಣಗೆರೆ ರೈಲ್ವೆ ನಿಲ್ದಾಣದಲ್ಲಿ ಕಾಮಗಾರಿ ಹಿನ್ನೆಲೆ, ಬೆಂಗಳೂರಿಂದ ಹೊರಡುವ ರೈಲು ಸಂಚಾರದಲ್ಲಿ ಭಾರಿ ವ್ಯತ್ಯಯ!
Recommended image2
ಭಾರತೀಯ ರೈಲ್ವೆಯ ಮಹತ್ವಾಕಾಂಕ್ಷಿ ಯೋಜನೆ, ರೈಲು ಉತ್ಪಾದನಾ ಘಟಕ: 5ವರ್ಷದಲ್ಲಿ 200ಹೈಟೆಕ್ ಇಂಟರ್‌ಸಿಟಿ ರೈಲು ನಿರ್ಮಾಣ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved