MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Travel
  • ರೈಲಿನಲ್ಲಿ ಇವರಿಗೆ ಟಿಕೆಟ್ ಬೇಕಿಲ್ಲ, ಫ್ರೀಯಾಗಿ ಪ್ರಯಾಣಿಸಿ! ಯಾರು ಗೊತ್ತಾ ಈ ಅದೃಷ್ಟವಂತರು?

ರೈಲಿನಲ್ಲಿ ಇವರಿಗೆ ಟಿಕೆಟ್ ಬೇಕಿಲ್ಲ, ಫ್ರೀಯಾಗಿ ಪ್ರಯಾಣಿಸಿ! ಯಾರು ಗೊತ್ತಾ ಈ ಅದೃಷ್ಟವಂತರು?

Indian Railways Free Travel Policy: ಭಾರತೀಯ ರೈಲ್ವೆಯ ನಿಯಮಗಳ ಪ್ರಕಾರ ಕೆಲವರು ಉಚಿತವಾಗಿ ಪ್ರಯಾಣ ಮಾಡಬಹುದಾಗಿದೆ. ಹಾಗೆಯೇ ಈ ನಿಯಮಗಳಲ್ಲಿ ಕೆಲವೊಂದು ಷರತ್ತುಗಳು ಅನ್ವಯವಾಗುತ್ತವೆ. ಹಾಗಾಗಿ ಪ್ರಯಾಣಿಕರು ಟಿಕೆಟ್ ಬುಕ್ ಮಾಡುವಾಗ ನಿಯಮಗಳನ್ನು ಪಾಲನೆ ಮಾಡಬೇಕಾಗುತ್ತದೆ.

2 Min read
Author : Mahmad Rafik
Published : Jun 06 2026, 12:07 PM IST
Share this Photo Gallery
  • FB
  • TW
  • Linkdin
  • Whatsapp
15
ರೈಲ್ವೆ ಟಿಕೆಟ್ ನಿಯಮಗಳು
Image Credit : Gemini

ರೈಲ್ವೆ ಟಿಕೆಟ್ ನಿಯಮಗಳು

ಭಾರತೀಯರ ದೈನಂದಿನ ಜೀವನದಲ್ಲಿ ರೈಲು ಪ್ರಯಾಣ ಒಂದು ಪ್ರಮುಖ ಭಾಗವಾಗಿದೆ. ಅದರಲ್ಲೂ ಕುಟುಂಬದ ಜೊತೆ ಪ್ರಯಾಣಿಸುವಾಗ ಮಕ್ಕಳ ಟಿಕೆಟ್ ನಿಯಮಗಳ ಬಗ್ಗೆ ಹಲವರಿಗೆ ಗೊಂದಲಗಳಿರುತ್ತವೆ. 'ಯಾವ ವಯಸ್ಸಿನವರೆಗೆ ಟಿಕೆಟ್ ಬೇಕಿಲ್ಲ?', 'ಅರ್ಧ ಟಿಕೆಟ್ ಯಾವಾಗ ತಗೋಬೇಕು?' ಎಂಬ ಪ್ರಶ್ನೆಗಳು ಸಾಮಾನ್ಯವಾಗಿ ಕಾಡುತ್ತವೆ. ಹಾಗಾಗಿ, ರೈಲ್ವೆ ಟಿಕೆಟ್ ನಿಯಮಗಳ ಬಗ್ಗೆ ಇಲ್ಲಿ ತಿಳಿದುಕೊಳ್ಳೋಣ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
ಮಕ್ಕಳಿಗೆ ಫ್ರೀ, ಷರತ್ತು ಅನ್ವಯ
Image Credit : Gemini

ಮಕ್ಕಳಿಗೆ ಫ್ರೀ, ಷರತ್ತು ಅನ್ವಯ

ಭಾರತೀಯ ರೈಲ್ವೆ ನಿಯಮಗಳ ಪ್ರಕಾರ, 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಪ್ರತ್ಯೇಕವಾಗಿ ಟಿಕೆಟ್ ಖರೀದಿಸುವ ಅಗತ್ಯವಿಲ್ಲ. ಹುಟ್ಟಿದ ಮಗುವಿನಿಂದ 4 ವರ್ಷದವರೆಗಿನ ಮಕ್ಕಳು ಪೋಷಕರೊಂದಿಗೆ ಉಚಿತವಾಗಿ ಪ್ರಯಾಣಿಸಬಹುದು. ನಿಯಮಗಳ ಪ್ರಕಾರ, ಮಕ್ಕಳಿಗೆ ಪ್ರತ್ಯೇಕ ಸೀಟು ಅಥವಾ ಬರ್ತ್ ನೀಡಲಾಗುವುದಿಲ್ಲ. ಮಕ್ಕಳು ತಮ್ಮ ಪೋಷಕರ ಸೀಟ್ ಅಥವಾ ಬರ್ತ್‌ನಲ್ಲೇ ಹೊಂದಿಕೊಂಡು ಪ್ರಯಾಣಿಸಬೇಕು. 

ಒಂದು ವೇಳೆ ಪೋಷಕರು ಬಯಸಿದರೆ, ಹೆಚ್ಚುವರಿ ಸೌಕರ್ಯಕ್ಕಾಗಿ ಮಕ್ಕಳಿಗೆ ಪ್ರತ್ಯೇಕ ಟಿಕೆಟ್ ಬುಕ್ ಮಾಡಬಹುದು. ಕೆಲವರು ದೀರ್ಘ ಪ್ರಯಾಣದ ಸಂದರ್ಭದಲ್ಲಿ ಮಕ್ಕಳಿಗಾಗಿ ಪ್ರತ್ಯೇಕವಾದ ಸೀಟ್ ಬುಕ್ ಮಾಡಿಕೊಂಡಿರುತ್ತಾರೆ.

Related Articles

Related image1
ನಾಲ್ಕು ವಾರ ಮಂಗಳೂರು - ಮಂತ್ರಾಲಯ ನೇರ ವಿಶೇಷ ಎಕ್ಸ್‌ಪ್ರೆಸ್ ರೈಲು ಸಂಚಾರ: ರಾಯರ ದರ್ಶನ ಸುಲಭ
Related image2
ಶಿವಮೊಗ್ಗ-ಶೃಂಗೇರಿ-ಮಂಗಳೂರು ರೈಲು ಸಂಪರ್ಕದಿಂದ ಹೊರಗುಳಿದ ಅರಸಾಳು, ರಿಪ್ಪನ್‌ಪೇಟೆ, ಹೊಸನಗರ, ತೀರ್ಥಹಳ್ಳಿ
35
ಅರ್ಧ ಟಿಕೆಟ್ ತೆಗೆದುಕೊಂಡ್ರೂ ಸಿಗಲ್ಲ ಸೀಟ್
Image Credit : AI image - Gemini

ಅರ್ಧ ಟಿಕೆಟ್ ತೆಗೆದುಕೊಂಡ್ರೂ ಸಿಗಲ್ಲ ಸೀಟ್

5 ರಿಂದ 12 ವರ್ಷದೊಳಗಿನ ಮಕ್ಕಳಿಗೆ ರೈಲು ನಿಯಮಗಳು ಸ್ವಲ್ಪ ಭಿನ್ನವಾಗಿವೆ. ಈ ವಯಸ್ಸಿನವರಿಗೆ ಶುಲ್ಕದಲ್ಲಿ ರಿಯಾಯಿತಿ ಸಿಗಬಹುದು. ರಿಯಾಯ್ತಿ ಸಿಕ್ರೂ ಪ್ರತ್ಯೇಕ ಸೀಟ್ ನೀಡಲ್ಲ. ಪ್ರಯಾಣದ ಸಮಯದಲ್ಲಿ ಮಕ್ಕಳಿಗೆ ಪ್ರತ್ಯೇಕ ಸೀಟು ಅಥವಾ ಬರ್ತ್ ಬೇಕೆಂದರೆ, ಪೂರ್ಣ ಶುಲ್ಕ ಪಾವತಿಸಿ ಟಿಕೆಟ್ ಬುಕ್ ಮಾಡಬೇಕು. 

12 ವರ್ಷ ಮೇಲ್ಪಟ್ಟ ಮಕ್ಕಳನ್ನು ವಯಸ್ಕ ಪ್ರಯಾಣಿಕರು ಎಂದು ಪರಿಗಣಿಸಲಾಗುತ್ತದೆ. ಆನ್‌ಲೈನ್‌ನಲ್ಲಿ ಟಿಕೆಟ್ ಬುಕ್ ಮಾಡುವಾಗ ಮಕ್ಕಳ ವಯಸ್ಸನ್ನು ನಮೂದಿಸಬೇಕಾಗುತ್ತದೆ. TTEಗಳು ವಯಸ್ಸಿನ ದೃಢೀಕರಣಕ್ಕಾಗಿ ದಾಖಲೆಗಳನ್ನು ಕೇಳಿದ್ರೆ ಒದಗಿಸಬೇಕಾಗುತ್ತದೆ.

45
ಟಿಕೆಟ್ ಬುಕ್ ಮಾಡುವಾಗ ನಿಯಮಗಳ ಪಾಲನೆ
Image Credit : Gemini

ಟಿಕೆಟ್ ಬುಕ್ ಮಾಡುವಾಗ ನಿಯಮಗಳ ಪಾಲನೆ

ಕುಟುಂಬದೊಂದಿಗೆ ರೈಲು ಪ್ರಯಾಣ ಮಾಡುವ ಮೊದಲು, ಮಕ್ಕಳ ವಯಸ್ಸಿಗೆ ಅನುಗುಣವಾಗಿ ಸರಿಯಾದ ಟಿಕೆಟ್ ಆಯ್ಕೆ ಮಾಡಿಕೊಳ್ಳಬೇಕು. ಹಣ ಉಳಿಸಲು ಹೋಗಿ ತೊಂದರೆಗೆ ಸಿಲುಕುವುದಕ್ಕಿಂತ ನಿಯಮಗಳನ್ನು ಪಾಲಿಸುವುದು ಸುರಕ್ಷಿತ. ಸರಿಯಾದ ಮಾಹಿತಿಯೊಂದಿಗೆ ಟಿಕೆಟ್ ಬುಕ್ ಮಾಡಿದರೆ ದಂಡದಿಂದ ತಪ್ಪಿಸಿಕೊಳ್ಳಬಹುದು. ಅದೇ ಸಮಯದಲ್ಲಿ ಆರಾಮದಾಯಕ ಹಾಗೂ ಸಂತೋಷದ ಪ್ರಯಾಣದ ಅನುಭವ ಪಡೆಯಬಹುದು.

55
ಇವರಿಗೂ ಫ್ರೀ ಟಿಕೆಟ್
Image Credit : Gemini AI

ಇವರಿಗೂ ಫ್ರೀ ಟಿಕೆಟ್

ಮಕ್ಕಳಿಗೆ ಮಾತ್ರವಲ್ಲದೆ, ಕೆಲವು ವಯಸ್ಕರಿಗೂ ರೈಲಿನಲ್ಲಿ ಉಚಿತವಾಗಿ ಪ್ರಯಾಣಿಸುವ ಸೌಲಭ್ಯವಿದೆ. ಭಾರತ ಸರ್ಕಾರ ನೀಡುವ ಅತ್ಯುನ್ನತ ಶೌರ್ಯ ಪ್ರಶಸ್ತಿಗಳನ್ನು ಪಡೆದವರನ್ನು ಗೌರವಿಸಲು ರೈಲ್ವೆ ಇಲಾಖೆ ಈ ಉಚಿತ ಪ್ರಯಾಣದ ಸೌಲಭ್ಯವನ್ನು ಕಲ್ಪಿಸಿದೆ. ವೀರ ಚಕ್ರ, ಅಶೋಕ ಚಕ್ರ, ಕೀರ್ತಿ ಚಕ್ರ, ಮಹಾವೀರ ಚಕ್ರ, ಪರಮವೀರ ಚಕ್ರ, ಮತ್ತು ಶೌರ್ಯ ಚಕ್ರ ಪ್ರಶಸ್ತಿಗಳನ್ನು ಪಡೆದವರು ರೈಲಿನಲ್ಲಿ ಉಚಿತವಾಗಿ ಪ್ರಯಾಣಿಸಬಹುದು. ಪ್ರಶಸ್ತಿ ಪಡೆದವರ ಜೊತೆಗೆ ಒಬ್ಬ ಸಹಾಯಕರಿಗೂ ರೈಲ್ವೆ ಇಲಾಖೆ ಉಚಿತ ಪ್ರಯಾಣದ ಸೌಲಭ್ಯವನ್ನು ನೀಡುತ್ತದೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

MR
Mahmad Rafik
ಮಹ್ಮದ್ ರಫಿಕ್ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ಭಾರತೀಯ ರೈಲ್ವೆ
ರೈಲು
Latest Videos
Recommended Stories
Recommended image1
ಬೆಂಗಳೂರು, ಮೈಸೂರು- ಚೆನ್ನೈ ನಡುವಿನ 42 ರೈಲುಗಳು 2 ತಿಂಗಳು ರದ್ದು: ಫುಲ್​ ಡಿಟೇಲ್ಸ್​ ಇಲ್ಲಿದೆ
Recommended image2
ಕಾಲಚಕ್ರದಲ್ಲಿ ಮೌನವಾದ ಸಿಗಂದೂರು ಲಾಂಚ್‌: ಸೇತುವೆ ಉದ್ಘಾಟನೆ ಬಳಿಕ ಇದನ್ನ ಕೇಳುವವರೇ ಇಲ್ಲ
Recommended image3
ಮುಂಗಾರು ಸಮಯದಲ್ಲಿ ಈ ರಾಜ್ಯಕ್ಕೆ ಭೇಟಿ ಕೊಡ್ತೀರಾ? ಅತಿ ಹೆಚ್ಚು ಹಾವುಗಳಿರುವ ಪ್ರದೇಶಗಳಿವು
Related Stories
Recommended image1
ನಾಲ್ಕು ವಾರ ಮಂಗಳೂರು - ಮಂತ್ರಾಲಯ ನೇರ ವಿಶೇಷ ಎಕ್ಸ್‌ಪ್ರೆಸ್ ರೈಲು ಸಂಚಾರ: ರಾಯರ ದರ್ಶನ ಸುಲಭ
Recommended image2
ಶಿವಮೊಗ್ಗ-ಶೃಂಗೇರಿ-ಮಂಗಳೂರು ರೈಲು ಸಂಪರ್ಕದಿಂದ ಹೊರಗುಳಿದ ಅರಸಾಳು, ರಿಪ್ಪನ್‌ಪೇಟೆ, ಹೊಸನಗರ, ತೀರ್ಥಹಳ್ಳಿ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved