- Home
- Karnataka Districts
- ನಾಲ್ಕು ವಾರ ಮಂಗಳೂರು - ಮಂತ್ರಾಲಯ ನೇರ ವಿಶೇಷ ಎಕ್ಸ್‌ಪ್ರೆಸ್ ರೈಲು ಸಂಚಾರ: ರಾಯರ ದರ್ಶನ ಸುಲಭ
ನಾಲ್ಕು ವಾರ ಮಂಗಳೂರು - ಮಂತ್ರಾಲಯ ನೇರ ವಿಶೇಷ ಎಕ್ಸ್‌ಪ್ರೆಸ್ ರೈಲು ಸಂಚಾರ: ರಾಯರ ದರ್ಶನ ಸುಲಭ
ಜೂನ್ ತಿಂಗಳ ಪ್ರಯಾಣಿಕರ ದಟ್ಟಣೆ ನಿವಾರಿಸಲು ಭಾರತೀಯ ರೈಲ್ವೆ ಇಲಾಖೆಯು ಹೈದರಾಬಾದ್ ಮತ್ತು ಮಂಗಳೂರು ಸೆಂಟ್ರಲ್ ನಡುವೆ ವಿಶೇಷ ಎಕ್ಸ್‌ಪ್ರೆಸ್ ರೈಲುಗಳ ಸೇವೆಯನ್ನು ಘೋಷಿಸಿದೆ. ಯಲಹಂಕ, ಕೆಆರ್ ಪುರಂ ಸೇರಿದಂತೆ ಹಲವು ಪ್ರಮುಖ ನಿಲ್ದಾಣಗಳಲ್ಲಿ ನಿಲುಗಡೆ ನೀಡಲಿದೆ.

ವಿಶೇಷ ಎಕ್ಸ್‌ಪ್ರೆಸ್ ರೈಲುಗಳ ಸೇವೆ
ಜೂನ್ ತಿಂಗಳ ಪ್ರವಾಸ ಮತ್ತು ಉದ್ಯೋಗದ ನಿಮಿತ್ತ ರೈಲುಗಳಲ್ಲಿ ಉಂಟಾಗಿರುವ ಜನದಟ್ಟಣೆ ನಿಯಂತ್ರಿಸಲು ಭಾರತೀಯ ರೈಲ್ವೆ ಇಲಾಖೆ ಮುಂದಾಗಿದೆ. ಹೈದರಾಬಾದ್ ಮತ್ತು ಮಂಗಳೂರು ಸೆಂಟ್ರಲ್ ನಡುವೆ ಹೆಚ್ಚುವರಿ ಸೀಟುಗಳ ಬೇಡಿಕೆ ಪೂರೈಸಲು 4 ರೌಂಡ್ ಟ್ರಿಪ್‌ಗಳ (ನಾಲ್ಕು ವಾರ ಕಾಲ) ವಿಶೇಷ ಎಕ್ಸ್‌ಪ್ರೆಸ್ ರೈಲುಗಳ ಸೇವೆ ಪ್ರಕಟಿಸಲಾಗಿದೆ.
07097 ಹೈದರಾಬಾದ್-ಮಂಗಳೂರು ಸೆಂಟ್ರಲ್ ವಿಶೇಷ ಎಕ್ಸ್‌ಪ್ರೆಸ್
ದಕ್ಷಿಣ ರೈಲ್ವೆಯ ಪಾಲ್ಘಾಟ್ ವಿಭಾಗ ಹೊರಡಿಸಿರುವ ಪ್ರಕಟಣೆಯ ಪ್ರಕಾರ, ರೈಲು ಸಂಖ್ಯೆ 07097 ಹೈದರಾಬಾದ್-ಮಂಗಳೂರು ಸೆಂಟ್ರಲ್ ವಿಶೇಷ ಎಕ್ಸ್‌ಪ್ರೆಸ್ ಜೂ.3 ರಿಂದ ಜೂ.24 ರವರೆಗೆ ಪ್ರತಿ ಬುಧವಾರ ಸಂಚರಿಸಲಿದೆ. ಈ ರೈಲು ಹೈದರಾಬಾದ್‌ನಿಂದ ಮುಂಜಾನೆ 4.20 ಕ್ಕೆ ಹೊರಟು, ಮರುದಿನ ಬೆಳಗ್ಗೆ 9.30 ಕ್ಕೆ ಮಂಗಳೂರು ಸೆಂಟ್ರಲ್ ತಲುಪಲಿದೆ
ಒಟ್ಟು 24 ಬೋಗಿ
ಪ್ರಯಾಣಿಕರ ಬಜೆಟ್ ಮತ್ತು ಆದ್ಯತೆಗಳಿಗೆ ತಕ್ಕಂತೆ ಈ ವಿಶೇಷ ರೈಲಿನಲ್ಲಿ ಒಟ್ಟು 24 ಬೋಗಿಗಳನ್ನು ಅಳವಡಿಸಲಾಗಿದೆ. 3 ಎಸಿ 2-ಟೈರ್ ಕೋಚ್‌ಗಳು, 5 ಎಸಿ 3-ಟೈರ್ ಕೋಚ್‌ಗಳು, ೧೦ ಸ್ಲೀಪರ್ ಕ್ಲಾಸ್ ಕೋಚ್‌ಗಳು, 4 ಸಾಮಾನ್ಯ ದ್ವಿತೀಯ ದರ್ಜೆ ಕೋಚ್‌ಗಳು, 2 ಲಗೇಜ್ ಹಾಗೂ ಬ್ರೇಕ್ ವ್ಯಾನ್‌ಗಳು ಇರಲಿವೆ.
ನಿಲುಗಡೆ ಮಾಹಿತಿ
ಈ ರೈಲು ತನ್ನ ಪ್ರಯಾಣದ ಅವಧಿಯಲ್ಲಿ ಬೇಗಂಪೇಟೆ, ಲಿಂಗಂಪಲ್ಲಿ, ವಿಕಾರಾಬಾದ್, ಸೇಡಂ, ಯಾದಗಿರಿ, ರಾಯಚೂರು, ಮಂತ್ರಾಲಯಂ ರೋಡ್, ಗುಂತಕಲ್, ಅನಂತಪುರ, ಧರ್ಮಾವರಂ, ಹಿಂದೂಪುರ ಸೇರಿದಂತೆ ಕರ್ನಾಟಕದ ರಾಜಧಾನಿ ಬೆಂಗಳೂರಿನ ಯೆಲಹಂಕ ಮತ್ತು ಕೃಷ್ಣರಾಜಪುರಂ (ಕೆಆರ್ ಪುರಂ), ಬಂಗಾರಪೇಟೆ ಹಾಗೂ ತಮಿಳುನಾಡು-ಕೇರಳದ ಸೇಲಂ, ಈರೋಡ್, ಪಾಲ್ಘಾಟ್, ಕೋಜಿಕೋಡ್, ಕಣ್ಣೂರು ಮತ್ತು ಕಾಸರಗೋಡು ನಿಲ್ದಾಣಗಳಲ್ಲಿ ನಿಲ್ಲಲಿದೆ.

