ಶಿವಮೊಗ್ಗ-ಶೃಂಗೇರಿ-ಮಂಗಳೂರು ನಡುವಿನ ಹೊಸ ರೈಲು ಸಂಪರ್ಕ ಯೋಜನೆಯಲ್ಲಿ ಹೊಸನಗರ ತಾಲೂಕನ್ನು ಸೇರಿಸದೆ ಅನ್ಯಾಯ ಮಾಡಲಾಗುತ್ತಿದೆ ಎಂದು ವರ್ತಕರ ಸಂಘ ಆರೋಪಿಸಿದೆ. ಅನ್ಯಾಯ ಸರಿಪಡಿಸಬೇಕೆಂದು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿ ಆಗ್ರಹಿಸಲಾಗಿದೆ.

ಹೊಸನಗರ: ರೈಲ್ವೆ ಸಂಪರ್ಕಕ್ಕೆ ಹೊಸನಗರವನ್ನು ಸೇರಿಸಿಕೊಳ್ಳುವ ಮೂಲಕ ನಮಗೆ ನ್ಯಾಯ ದೊರಕಿಸಿ ಎಂದು ಹೊಸನಗರ ತಾಲೂಕು ವರ್ತಕರ ಸಂಘದ ಅಧ್ಯಕ್ಷ ಪೂರ್ಣೇಶ್ ಮಲೆಬೈಲು ಮನವಿ ಮೂಲಕ ಆಗ್ರಹಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮಲೆನಾಡು ಕರಾವಳಿ ರೈಲು ಸಂಪರ್ಕಕ್ಕೆ ಶಿವಮೊಗ್ಗ-ಶೃಂಗೇರಿ-ಮಂಗಳೂರು ರೈಲು ಸಂಪರ್ಕಕ್ಕೆ ರೈಲುಮಾರ್ಗ ನಿರ್ಮಾಣಕ್ಕೆ ಡಿಪಿಆರ್‌ (ವಿಸ್ತ್ಕೃತ ಯೋಜನಾ ವರದಿ) ತಯಾರಿಗೆ ಟೆಂಡರ್ ಕರೆಯಾಗಿದ್ದು, ಮಾರ್ಗವು ಸುಮಾರು 332 ಕಿ.ಮೀ ಉದ್ದ ಹೊಂದಿದ್ದು, ಸುಮಾರು 3300 ಕೋಟಿ ರು/ ಅಂದಾಜು ವೆಚ್ಚದ ಯೋಜನೆಯಾಗಿದೆ ಎಂದಿದ್ದಾರೆ.

ಹೊಸ ರೈಲ್ವೆ ಮಾರ್ಗಕ್ಕೆ ಹೊಸನಗರ ಸೇರಿಸಿಕೊಳ್ಳಿ

2018ರಲ್ಲಿ ಸದಾನಂದಗೌಡರು ರೈಲ್ವೆ ಮಂತ್ರಿಯಾಗಿದ್ದಾಗ ಹೊಸನಗರವನ್ನು ಕೂಡ ಈ ಯೋಜನೆಯಲ್ಲಿ ಸಂಪರ್ಕಕ್ಕೆ ಸೇರಿಸುವಂತೆ ಹೊಸನಗರ ಜನತೆ ಮನವಿ ಮಾಡಿದ್ದರು, ಅದಕ್ಕೆ ಪರಿಶೀಲಿಸುತ್ತೇವೆ ಎನ್ನುವ ಪ್ರತ್ಯುತ್ತರ ಕೂಡ ಬಂದಿದೆ. ಈಗ ಅರಸಾಳು-ರಿಪ್ಪನ್‌ಪೇಟೆ, ತೀರ್ಥಹಳ್ಳಿ, ಶೃಂಗೇರಿ ಮೂಲಕ ಸಂಪರ್ಕ ರಸ್ತೆ ಹಾದು ಹೋಗುವ ಮಾತು ನಡೆಯುತ್ತಿದೆ. 

ಹೊಸನಗರ ತಾಲ್ಲೂಕು ಕೇಂದ್ರವಾಗಿದೆ. ಹೊಸನಗರದ ಕೇಂದ್ರ ಸ್ಥಾನವನ್ನು ಈ ಯೋಜನೆಯಿಂದ ಹೊರಗಿಡದೆ ರೈಲು ಮಾರ್ಗವು ಅರಸಾಳಿನಿಂದ ರಿಪ್ಪನ್ ಪೇಟೆ, ಹೊಸನಗರ, ತೀರ್ಥಹಳ್ಳಿ ಮೂಲಕ ಹಾದು ಹೋಗಬೇಕು ದಶಕಗಳಿಂದ ಆದ ಅನ್ಯಾಯಗಳಿಗೆ ಹೊಸನಗರ ಕೇಂದ್ರ ಸ್ಥಾನವನ್ನು ಈ ಯೋಜನೆಗೆ ಸೇರಿಸಿಕೊಳ್ಳುವ ಮೂಲಕ ನಮಗೆ ನ್ಯಾಯ ಒದಗಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಮನವಿಯನ್ನು ಸಲ್ಲಿಸುವುದರ ಮೂಲಕ ಆಗ್ರಹಿಸಿದ್ದಾರೆ.

332 ಕಿಲೋಮೀಟರ್ ಉದ್ದದ ಮಾರ್ಗ

ಶಿವಮೊಗ್ಗ-ಮಂಗಳೂರು ರೈಲು ಮಾರ್ಗ ಬರೋಬ್ಬರಿ 332 ಕಿಲೋಮೀಟರ್ ಉದ್ದವಿರಲಿದ್ದು, ಈ ನೂತನ ರೈಲ್ವೇ ಟ್ರ್ಯಾಕ್‌ಗೆ ಸುಮಾರು 3,300 ಕೋಟಿ ರುಪಾಯಿ ವೆಚ್ಚವಾಗಬಹುದು ಎಂದು ಅಂದಾಜಿಸಲಾಗಿದೆ. ಈ ಬೃಹತ್ ಯೋಜನೆಯ ಕುರಿತಂತೆ ಡಿಪಿಆರ್‌ ತಯಾರಿಕೆಗೆ ಟೆಂಡರ್‌ ಕರೆಯಲು ರೈಲ್ವೇ ಇಲಾಖೆ ಸಿದ್ದತೆ ನಡೆಸಿದೆ