MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Varamahalakshmi Wishes
Darshan Renukaswamy Case
Farm Chemicals Under Scanner
Kanteerava Stadium Renovation
Karnataka Electoral Roll
Bengaluru 2nd International Airport
Bengaluru Land Scam
Mahatma Gandhi Manuscript Auction
Divorce Laws India
ISI Backed Terror Network
Mohan Bhagavat Canada Visit
  • Home
  • Life
  • Travel
  • ಸಾಯುವ ಮುನ್ನ ಒಮ್ಮೆಯಾದರೂ ಸ್ವರ್ಗ ನೋಡಬೇಕು ಅಂದ್ರೆ ಇಲ್ಲಿಗೆ ಬನ್ನಿ! ಹಿಮಾಲಯದ ಮಡಿಲಲ್ಲಿದೆ ಈ ಅದ್ಭುತ ತಾಣ

ಸಾಯುವ ಮುನ್ನ ಒಮ್ಮೆಯಾದರೂ ಸ್ವರ್ಗ ನೋಡಬೇಕು ಅಂದ್ರೆ ಇಲ್ಲಿಗೆ ಬನ್ನಿ! ಹಿಮಾಲಯದ ಮಡಿಲಲ್ಲಿದೆ ಈ ಅದ್ಭುತ ತಾಣ

Madhyamaheshwar: ಉತ್ತರಾಖಂಡದ ಮದ್ಮಹೇಶ್ವರವು ಪಂಚ ಕೇದಾರಗಳಲ್ಲಿ ಒಂದಾಗಿದೆ. ನೀವು ಸಾಯುವ ಮುನ್ನ ಒಂದು ಬಾರಿಯಾದರು ಸ್ವರ್ಗ ನೋಡಬೇಕು ಅಂದ್ರೆ, ನೀವು ಈ ತಾಣಕ್ಕೆ ಭೇಟಿ ನೀಡಲೇಬೇಕು. ಹಿಮಚ್ಚಾಧಿತ ಪರ್ವತಗಳು, ಶಿವನ ದೇವಾಲಯ, ಸುಂದರ ಪ್ರಕೃತಿ, ಹಸಿರು ಹೊದ್ದ ಬೆಟ್ಟಗಳು, ಇದೇ ನಿಜವಾದ ಸ್ವರ್ಗ.

2 Min read
Author : Pavna Das
Published : Aug 21 2026, 07:05 PM IST
Share this Photo Gallery
  • FB
  • TW
  • Linkdin
  • Whatsapp
16
ಮದ್ಮಹೇಶ್ವರ ಪ್ರವಾಸ
Image Credit : social media

ಮದ್ಮಹೇಶ್ವರ ಪ್ರವಾಸ

ಪರ್ವತಗಳು, ಹಸಿರು ಕಾಡುಗಳು, ಜಲಪಾತಗಳು, ನದಿಗಳು ಮತ್ತು ಹಿಮದಿಂದ ಆವೃತವಾಗಿರುವ ಎತ್ತರದ ಶಿಖರಗಳ ನಡುವೆ ನೆಮ್ಮದಿಯ ಕ್ಷಣಗಳನ್ನು ಕಳೆಯಬೇಕು ಅನ್ನೋ ಆಸೆ ನಿಮಗಿದ್ದರೆ, ಉತ್ತರಾಖಂಡದ ಮದ್ಮಹೇಶ್ವರ ನಿಮ್ಮ ಮುಂದಿನ ಪ್ರವಾಸದ ತಾಣವಾಗಬಹುದು. ರುದ್ರಪ್ರಯಾಗ ಜಿಲ್ಲೆಯಲ್ಲಿರುವ ಮದ್ಮಹೇಶ್ವರವು ಪಂಚಕೇದಾರಗಳಲ್ಲಿ ಒಂದಾಗಿದ್ದು, ಇಲ್ಲಿ ಶಿವನ ಮಧ್ಯಭಾಗ ಅಂದರೆ ನಾಭಿಯನ್ನು ಪೂಜಿಸಲಾಗುತ್ತದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
3,497 ಮೀಟರ್ ಎತ್ತರದಲ್ಲಿರುವ ದೇವಾಲಯ
Image Credit : social media

3,497 ಮೀಟರ್ ಎತ್ತರದಲ್ಲಿರುವ ದೇವಾಲಯ

ಸಮುದ್ರಮಟ್ಟದಿಂದ ಸುಮಾರು 3,497 ಮೀಟರ್ ಎತ್ತರದಲ್ಲಿರುವ ಮದ್ಮಹೇಶ್ವರ ದೇವಾಲಯದ ಸುತ್ತಲಿನ ಪ್ರಕೃತಿ ಸೌಂದರ್ಯ ಪ್ರವಾಸಿಗರನ್ನು ಮಂತ್ರಮುಗ್ಧರನ್ನಾಗಿಸುತ್ತದೆ. ಇಲ್ಲಿಂದ ಚೌಖಂಭಾ ಸೇರಿದಂತೆ ಹಿಮಾಲಯದ ಎತ್ತರದ ಶಿಖರಗಳ ಅದ್ಭುತ ದೃಶ್ಯಗಳನ್ನು ಕಣ್ತುಂಬಿಕೊಳ್ಳಬಹುದು. ಕುಟುಂಬದೊಂದಿಗೆ ಪ್ರವಾಸ ಕೈಗೊಳ್ಳುವವರಿಗೂ ಇದು ವಿಶೇಷ ಅನುಭವ ನೀಡುವ ತಾಣವಾಗಿದೆ.

Related Articles

Related image1
ಈ 5 ಕಾರಣಕ್ಕಾಗಿ ನಿಮಗೆ 30ವರ್ಷ ಆಗುವ ಮುನ್ನ Solo Travel ಮಾಡಿ
Related image2
Kedarnath Yatra 2025: ಕೇದರನಾಥ-ಬದರಿನಾಥ ಭವಿಷ್ಯದಲ್ಲಿ ಕಣ್ಮರೆ; ಸ್ಕಂದ ಪುರಾಣದ ಆಘಾತಕಾರಿ ಭವಿಷ್ಯವಾಣಿ!
36
ದೆಹಲಿಯಿಂದ ಮದ್ಮಹೇಶ್ವರಕ್ಕೆ ಹೇಗೆ ಹೋಗುವುದು?
Image Credit : social media

ದೆಹಲಿಯಿಂದ ಮದ್ಮಹೇಶ್ವರಕ್ಕೆ ಹೇಗೆ ಹೋಗುವುದು?

ದೆಹಲಿಯಿಂದ ರಸ್ತೆ ಮಾರ್ಗವಾಗಿ ಪ್ರಯಾಣಿಸುವವರು ಹರಿದ್ವಾರ, ಋಷಿಕೇಶ, ದೇವಪ್ರಯಾಗ, ಶ್ರೀನಗರ, ರುದ್ರಪ್ರಯಾಗ ಮತ್ತು ಊಖಿಮಠ ಮಾರ್ಗವಾಗಿ ರಾಂಸಿ ಗ್ರಾಮ ತಲುಪಬಹುದು. ರಾಂಸಿಯನ್ನು ಮದ್ಮಹೇಶ್ವರ ಟ್ರೆಕ್‌ನ ಪ್ರಮುಖ ಬೇಸ್ ಪಾಯಿಂಟ್ ಎಂದು ಪರಿಗಣಿಸಲಾಗುತ್ತದೆ. ರಾಂಸಿಯ ನಂತರ ವಾಹನ ಸಂಚಾರದ ಮಾರ್ಗ ಮುಗಿಯುತ್ತದೆ. ಅಲ್ಲಿಂದ ಸುಮಾರು 16ರಿಂದ 17 ಕಿಲೋಮೀಟರ್‌ಗಳಷ್ಟು ಕಾಲ್ನಡಿಗೆ ಟ್ರೆಕ್ ಮಾಡಬೇಕಾಗುತ್ತದೆ.

46
ದಾರಿಯುದ್ದಕ್ಕೂ ಸಿಗಲಿದೆ ಪ್ರಕೃತಿಯ ಅದ್ಭುತ ಅನುಭವ
Image Credit : social media

ದಾರಿಯುದ್ದಕ್ಕೂ ಸಿಗಲಿದೆ ಪ್ರಕೃತಿಯ ಅದ್ಭುತ ಅನುಭವ

ಟ್ರೆಕ್ ಆರಂಭಿಸಿದ ಬಳಿಕ ಗೊಂಡಾರ್ ಮತ್ತು ಬಂತೋಲಿ ಸೇರಿದಂತೆ ಹಲವು ಸುಂದರ ಬೆಟ್ಟದ ಹಳ್ಳಿಗಳು ಎದುರಾಗುತ್ತವೆ. ಕಾಡು, ನದಿ, ಜಲಪಾತ ಮತ್ತು ಎತ್ತರದ ಪರ್ವತಗಳ ನಡುವೆ ಸಾಗುವ ಈ ಟ್ರೆಕ್ ಸ್ವತಃ ಒಂದು ಮರೆಯಲಾಗದ ಅನುಭವ. ಮಾರ್ಗಮಧ್ಯೆ ಪ್ರವಾಸಿಗರಿಗೆ ತಂಗಲು ಮತ್ತು ಊಟ ಮಾಡಲು ಮೂಲಭೂತ ಸೌಲಭ್ಯಗಳಿರುವ ಹೋಂಸ್ಟೇಗಳು ಹಾಗೂ ಸಣ್ಣ ವಸತಿ ಸ್ಥಳಗಳು ಕೂಡ ಸಿಗುತ್ತವೆ.

56
ಮದ್ಮಹೇಶ್ವರದಿಂದ ಕಾಣುತ್ತೆ ಅದ್ಭುತ ದೃಶ್ಯ
Image Credit : social media

ಮದ್ಮಹೇಶ್ವರದಿಂದ ಕಾಣುತ್ತೆ ಅದ್ಭುತ ದೃಶ್ಯ

ಮದ್ಮಹೇಶ್ವರ ದೇವಾಲಯದಿಂದ ಸುಮಾರು 2 ಕಿಲೋಮೀಟರ್ ಮುಂದೆ ಬುದ್ಧ ಮದ್ಮಹೇಶ್ವರ ಇದೆ. ಇಲ್ಲಿಂದ ಚೌಖಂಭಾ, ನೀಲಕಂಠ ಸೇರಿದಂತೆ ಹಿಮದಿಂದ ಆವೃತವಾಗಿರುವ ಹಲವು ಪರ್ವತ ಶಿಖರಗಳ ಅದ್ಭುತ ನೋಟ ಕಾಣಿಸುತ್ತದೆ. ಇದರ ಜೊತೆಗೆ ಕಾಂಚನಿ ತಾಲ್ ಎಂಬ ಎತ್ತರ ಪ್ರದೇಶದಲ್ಲಿರುವ ಹಿಮನದಿ ಸರೋವರವೂ ಇದೆ. ಆದರೆ ಅಲ್ಲಿಗೆ ತಲುಪಲು ಪ್ರತ್ಯೇಕ ಟ್ರೆಕ್ ಮಾಡಬೇಕಾಗುತ್ತದೆ.

66
ಟ್ರೆಕ್‌ಗೂ ಮುನ್ನ ಈ ವಿಷಯ ಮರೆಯಬೇಡಿ
Image Credit : social media

ಟ್ರೆಕ್‌ಗೂ ಮುನ್ನ ಈ ವಿಷಯ ಮರೆಯಬೇಡಿ

ಮದ್ಮಹೇಶ್ವರ ಟ್ರೆಕ್ ಸುಲಭವಾದ ಪ್ರಯಾಣ ಅಲ್ಲ. ಎತ್ತರ ಮತ್ತು ಬದಲಾಗುವ ಹವಾಮಾನವನ್ನು ಗಮನದಲ್ಲಿಟ್ಟುಕೊಂಡು ದೈಹಿಕ ಸಾಮರ್ಥ್ಯ, ಬೆಚ್ಚಗಿನ ಬಟ್ಟೆ, ಸಾಕಷ್ಟು ನೀರು ಮತ್ತು ಅಗತ್ಯ ವಸ್ತುಗಳನ್ನು ಕೊಂಡೊಯ್ಯಬೇಕು. ವಿಶೇಷವಾಗಿ ಮಳೆಗಾಲದಲ್ಲಿ ರಸ್ತೆಗಳು ಮತ್ತು ಟ್ರೆಕ್ ಮಾರ್ಗಗಳ ಪರಿಸ್ಥಿತಿ ಬದಲಾಗುವ ಸಾಧ್ಯತೆ ಇರುವುದರಿಂದ ಸ್ಥಳೀಯ ಆಡಳಿತ ಅಥವಾ ಅನುಭವಿ ಗೈಡ್‌ಗಳಿಂದ ಹವಾಮಾನ ಹಾಗೂ ಮಾರ್ಗದ ಮಾಹಿತಿ ಪಡೆದುಕೊಂಡ ನಂತರವೇ ಪ್ರಯಾಣ ಆರಂಭಿಸುವುದು ಉತ್ತಮ. ಮದ್ಮಹೇಶ್ವರವು ಕೇವಲ ಧಾರ್ಮಿಕ ತಾಣವಲ್ಲ; ಹಿಮಾಲಯದ ಅದ್ಭುತ ಪ್ರಕೃತಿ ಸೌಂದರ್ಯವನ್ನು ಹತ್ತಿರದಿಂದ ಅನುಭವಿಸಲು ಬಯಸುವವರಿಗೆ ಇದು ನೆನಪಿನಲ್ಲಿ ಉಳಿಯುವ ಪ್ರವಾಸದ ಅನುಭವವಾಗಬಹುದು.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

PD
Pavna Das
ಮೂಲತಃ ಮಂಗಳೂರಿನವಳು. ಮಂಗಳೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮದ ಸ್ನಾತಕೋತ್ತರ ಪದವಿ . ಕಳೆದ 12 ವರ್ಷಗಳಿಂದ ಪತ್ರಿಕೆ ಹಾಗೂ ಡಿಜಿಟಲ್ ಮಾಧ್ಯಮಗಳಲ್ಲಿ ಕೆಲಸ . ಸುದ್ದಿ ಬಿಡುಗಡೆ, ಗಲ್ಫ್ ಕನ್ನಡಿಗ, ಈ ಟಿವಿ ಭಾರತ್, ಕನ್ನಡ ನ್ಯೂಸ್ ನೌ, ವಿಜಯಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ. ಈಗ ಏಷ್ಯಾನೆಟ್ ಸುವರ್ಣದಲ್ಲಿ ಫ್ರೀಲಾನ್ಸರ್ . ಮನೋರಂಜನೆ, ಲೈಫ್ ಸ್ಟೈಲ್, ಟ್ರಾವೆಲ್ ಬರವಣಿಗೆ ಇಷ್ಟ.
ಪ್ರವಾಸ
ದೇವಸ್ಥಾನ
ಉತ್ತರಾಖಂಡ
ಹಿಮಾಚಲ ಪ್ರದೇಶ

Latest Videos
Recommended Stories
Recommended image1
ಫ್ಲೈಟ್ ಟೇಕಾಫ್ ಆದ ತಕ್ಷಣ ಕಿವಿ ಯಾಕೆ ಬಂದ್ ಆಗುತ್ತೆ? ENT ವೈದ್ಯರು ಬಿಚ್ಚಿಟ್ರು ಅಸಲಿ ಕಾರಣ
Recommended image2
ವರ್ಷದ ಕೆಲವು ತಿಂಗಳು ಮಾತ್ರ ಕಾಣಿಸಿ ಮರೆಯಾಗುವ ‘ನಾಗ ದೇವತೆಯ ಕಣ್ಣು’; ಪ್ರವಾಸಿಗರಿಗೆ ಎಚ್ಚರಿಕೆ ನೀಡಿದ ಅರಣ್ಯ ಇಲಾಖೆ
Recommended image3
ಬೆಂಗಳೂನಿಂದ 3 ವಿಶೇಷ ರೈಲು ಸೇವೆ ಆರಂಭ; ಊರಿಗೆ ಹೋಗುವವರಿಗೆ ಇಲ್ಲಿದೆ ವೇಳಾಪಟ್ಟಿ
Related Stories
Recommended image1
ಈ 5 ಕಾರಣಕ್ಕಾಗಿ ನಿಮಗೆ 30ವರ್ಷ ಆಗುವ ಮುನ್ನ Solo Travel ಮಾಡಿ
Recommended image2
Kedarnath Yatra 2025: ಕೇದರನಾಥ-ಬದರಿನಾಥ ಭವಿಷ್ಯದಲ್ಲಿ ಕಣ್ಮರೆ; ಸ್ಕಂದ ಪುರಾಣದ ಆಘಾತಕಾರಿ ಭವಿಷ್ಯವಾಣಿ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved