ಮಂಗಳೂರು, ಹಾಸನ, ಸಕಲೇಶಪುರದ ತಿರುಪತಿ ಭಕ್ತಾದಿಗಳಿಗೆ ಗುಡ್‌ನ್ಯೂಸ್; ಪ್ರಯಾಣ ಸುಲಭ, ಆರಾಮದಾಯಕ!
Good News for Tirumala Devotees: ಮಂಗಳೂರಿನಿಂದ ತಿರುಪತಿಗೆ ನೇರ ಬಸ್ ಸೇವೆ ಆರಂಭವಾಗಿದ್ದು, ಭಕ್ತರಿಗೆ ಅನುಕೂಲವಾಗಿದೆ. ಐರಾವತ ಕ್ಲಬ್ ಕ್ಲಾಸ್ ಬಸ್ ಹೊರಡಲಿದೆ.

ತಿರುಪತಿ ನಿವಾಸಿ ಶ್ರೀನಿವಾಸನ ದರ್ಶನ ಪಡೆಯೋದು ಇಂದು ಸವಾಲಿನ ಕೆಲಸ. ತಿಮ್ಮಪ್ಪನ ದರ್ಶನ ಪಡೆದುಕೊಳ್ಳಲು ಪ್ರತಿನಿತ್ಯ ಸಾವಿರಾರು ಭಕ್ತರು ಆಗಮಿಸುತ್ತಾರೆ. ನೆರೆಯ ರಾಜ್ಯದಲ್ಲಿರುವ ತಿರುಪತಿಗೆ ತೆರಳಲು ರಾಜ್ಯದಿಂದ ಬಸ್, ರೈಲು ವ್ಯವಸ್ಥೆ ಇದೆ.
ಬೆಂಗಳೂರು, ಆಂಧ್ರ ಪ್ರದೇಶ ಮತ್ತು ತೆಲಂಗಾಣ ಗಡಿ ಭಾಗದ ಜನರಿಗೆ ನೇರ ಬಸ್ ವ್ಯವಸ್ಥೆಗಳಿವೆ. ಹಾಗೆಯೇ ಭಾರತೀಯ ರೈಲ್ವೆಯಿಂದ ಹಲವು ರೈಲುಗಳು ತಿರುಪತಿಯನ್ನು ತಲುಪುತ್ತವೆ. ಆದ್ರೆ ಕರಾವಳಿ ಭಾಗದ ಜನರು ಎರಡು ಬಾರಿ ಬಸ್ ಚೇಂಜ್ ಮಾಡಬೇಕಿತ್ತು. ಇದೀಗ ಈ ಸಮಸ್ಯೆಯನ್ನು ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯನ್ನು ದೂರ ಮಾಡಿದೆ.
ಹೌದು, ಮಂಗಳೂರಿನಿಂದ ನೇರವಾಗಿ ತಿರುಪತಿಗೆ ಸಂಪರ್ಕ ಕಲ್ಪಿಸುವ ಬಸ್ ಆರಂಭಗೊಂಡಿದೆ. ಪ್ರತಿದಿನ ಮಧ್ಯಾಹ್ಮ 2 ಗಂಟೆಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಐರಾವತ ಕ್ಲಬ್ ಕ್ಲಾಸ್ ಬಸ್ ಹೊರಡಲಿದೆ. ಮಂಗಳೂರಿನಿಂದ ತಿರುಪತಿಗೆ ಎಕ್ಸ್‌ಪ್ರೆಸ್ ಬಸ್ ಆರಂಭವಾಗಿರೋದಕ್ಕೆ ವೈಕುಂಠ ವಾಸಿಯ ಭಕ್ತರು ಸಂತಸ ವ್ಯಕ್ತಪಡಿಸಿದ್ದಾರೆ.
ಮಂಗಳೂರಿನಿಂದ ಹೊರಡುವ ಎಕ್ಸ್‌ಪ್ರೆಸ್ ಬಸ್ ಸಕಲೇಶಪುರ, ಹಾಸನ, ಬೆಂಗಳೂರು, ಚಿತ್ತೂರು ಮಾರ್ಗವಾಗಿ ತಿರುಪತಿ ತಲುಪಲಿದೆ. ಮಂಗಳೂರು ಡಿಪೋ-2ರಿಂದ ಬಸ್ ತನ್ನ ಪ್ರಯಾಣ ಆರಂಭಿಸುತ್ತದೆ. ಬಸ್ ಸಂಖ್ಯೆ KA.57 F.3602 ಆಗಿದೆ.
ಇದು ಹಿಂದೂ ಧರ್ಮದ ಪವಿತ್ರ ಕ್ಷೇತ್ರಗಳಲ್ಲೊಂದಾಗಿದ್ದು, ಭಕ್ತರು ಇದನ್ನು ಭೂವೈಕುಂಠ ಎಂದು ಕರೆಯುತ್ತಾರೆ. ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿರುವ ತಿರುಪತಿ ತಿಮ್ಮಪ್ಪ ದೇವಸ್ಥಾನ ಜಗತ್ತಿನಲ್ಲಿಯೇ ಅತಿ ಹೆಚ್ಚು ಆದಾಯವಿರುವ ದೇವಾಲಯಗಳ ಪೈಕಿ ಒಂದಾಗಿದೆ. ತಿರುಪತಿಯ ವೆಂಕಟೇಶ್ವರ ದೇವಾಲಯ ಬೆಂಗಳೂರಿನಿಂದ 250 ಕಿ.ಮೀ. ದೂರದಲ್ಲಿದೆ. ಬೆಂಗಳೂರಿನಿಂದ ಬಸ್, ರೈಲು ಮತ್ತು ವಿಮಾನ ಮಾರ್ಗದ ಮೂಲಕ ತೆರಳಬಹುದಾಗಿದೆ.