4 ವಿಮಾನ ನಿಲ್ದಾಣಗಳಲ್ಲಿ 10 ರೂ.ಗೆ ಸಿಗುತ್ತೆ ಸಮೋಸಾ? ಬೆಂಗಳೂರಲ್ಲಿ ಸಿಗೋದು ಯಾವಾಗ?
Udan Yatri Cafe : ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರಿಗೆ ಕಡಿಮೆ ಬೆಲೆಯಲ್ಲಿ ಚಹಾ-ಕಾಫಿ ಮತ್ತು ತಿಂಡಿಗಳನ್ನು ಒದಗಿಸುವ ಉದ್ದೇಶದಿಂದ ಉಡಾನ್ ಯಾತ್ರಿ ಕೆಫೆಯು ಚೆನ್ನೈ, ಕೋಲ್ಕತ್ತಾ, ಅಹಮದಾಬಾದ್ ಮತ್ತು ಪುಣೆ ವಿಮಾನ ನಿಲ್ದಾಣಗಳಲ್ಲಿ ತನ್ನ ಮಳಿಗೆಗಳನ್ನು ಆರಂಭಿಸಿದೆ. ಇದರ ದರಪಟ್ಟಿ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.

ಉಡಾನ್ ಯಾತ್ರಿ ಕೆಫೆಯಲ್ಲಿ ಕಡಿಮೆ ಬೆಲೆಗೆ ತಿಂಡಿ
ಉಡಾನ್ ಯಾತ್ರಿ ಕೆಫೆಯು ದೇಶದ ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರಿಗೆ ಕಡಿಮೆ ಬೆಲೆಯಲ್ಲಿ ಚಹಾ-ತಿಂಡಿಗಳನ್ನು ಒದಗಿಸುತ್ತಿದೆ.
4 ವಿಮಾನ ನಿಲ್ದಾಣಗಳಲ್ಲಿ ಉಡಾನ್ ಕೆಫೆ
ಉಡಾನ್ ಯಾತ್ರಿ ಕೆಫೆಯು ಚೆನ್ನೈ, ಕೋಲ್ಕತ್ತಾ, ಅಹಮದಾಬಾದ್ ಮತ್ತು ಪುಣೆ ವಿಮಾನ ನಿಲ್ದಾಣಗಳಲ್ಲಿ ತನ್ನ ಮಳಿಗೆಗಳನ್ನು ಆರಂಭಿಸಿದೆ.
ವೈರಲ್ ಆಗುತ್ತಿರುವ ಉಡಾನ್ ಕೆಫೆಯ ದರಪಟ್ಟಿ
ಉಡಾನ್ ಯಾತ್ರಿ ಕೆಫೆಯಲ್ಲಿ ಚಹಾ, ನೀರು ಮತ್ತು ತಿಂಡಿಗಳು ಕಡಿಮೆ ಬೆಲೆಯಲ್ಲಿ ಲಭ್ಯವಿದ್ದು, ಇದರ ದರಪಟ್ಟಿ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.
೧೦ ರೂ.ಗೆ ಚಹಾ, ೨೦ ರೂ.ಗೆ ಕಾಫಿ
ಉಡಾನ್ ಯಾತ್ರಿ ಕೆಫೆಯಲ್ಲಿ 10 ರೂ.ಗೆ ಚಹಾ, 20 ರೂ.ಗೆ ಕಾಫಿ, 20 ರೂ.ಗೆ ಸಮೋಸಾ/ವಡಾಪಾವ್ ಮತ್ತು 20 ರೂ.ಗೆ ಸಿಹಿ ತಿಂಡಿಗಳು ಲಭ್ಯವಿದೆ.
ಪುಣೆ ವಿಮಾನ ನಿಲ್ದಾಣದಲ್ಲಿ ಉಡಾನ್ ಕೆಫೆ
ಕೇಂದ್ರ ನಾಗರಿಕ ವಿಮಾನಯಾನ ಖಾತೆ ರಾಜ್ಯ ಸಚಿವ ಮುರಳೀಧರ್ ಮೋಹೋಲ್ ಅವರು ಪುಣೆ ವಿಮಾನ ನಿಲ್ದಾಣದಲ್ಲಿ ಉಡಾನ್ ಯಾತ್ರಿ ಕೆಫೆಯನ್ನು ಉದ್ಘಾಟಿಸಿದರು.
ಮುಂಬೈನಲ್ಲಿ ಶೀಘ್ರದಲ್ಲೇ ಉಡಾನ್ ಕೆಫೆ
ಕೋಲ್ಕತ್ತಾ, ಚೆನ್ನೈ ಮತ್ತು ಅಹಮದಾಬಾದ್ ನಂತರ ಮುಂಬೈ ವಿಮಾನ ನಿಲ್ದಾಣದಲ್ಲಿಯೂ ಉಡಾನ್ ಯಾತ್ರಿ ಕೆಫೆಯನ್ನು ಶೀಘ್ರದಲ್ಲೇ ಆರಂಭಿಸಲಾಗುವುದು.
ಕಡಿಮೆ ಬೆಲೆಯ ತಿಂಡಿಗೆ ಉತ್ತಮ ಆಯ್ಕೆ
ಉಡಾನ್ ಯಾತ್ರಿ ಕೆಫೆಯು ಕಡಿಮೆ ಬೆಲೆಯಲ್ಲಿ ತಿಂಡಿ ತಿನ್ನಲು ಬಯಸುವ ಪ್ರಯಾಣಿಕರಿಗೆ ಉತ್ತಮ ಆಯ್ಕೆಯಾಗಿದೆ. ಮಧ್ಯಮ ವರ್ಗದ ಪ್ರಯಾಣಿಕರು ಸಹ ಏರ್‌ಪೋರ್ಟ್‌ನಲ್ಲಿ ಕಡಿಮೆ ಬೆಲೆಗೆ ಆಹಾರ ಸವಿಯಬಹುದಾಗಿದೆ.
ಮಹಿಳೆಯರಿಂದ ನಿರ್ವಹಣೆ
ಪುಣೆಯ ಉಡಾನ್ ಯಾತ್ರಿ ಕೆಫೆಯನ್ನು ಸಂಪೂರ್ಣವಾಗಿ ಮಹಿಳೆಯರೇ ನಿರ್ವಹಿಸುತ್ತಿದ್ದಾರೆ. ಈ ಉಡಾನ್ ಕೆಫೆ ಬೆಂಗಳೂರಿನಲ್ಲಿ ಯಾವಾಗ ಆರಂಭವಾಗುತ್ತೆ ಎಂಬುದರ ಬಗ್ಗೆ ತಿಳಿದು ಬಂದಿಲ್ಲ.