ಬೆಂಗಳೂರು ವಿಮಾನ ನಿಲ್ದಾಣದಲ್ಲಿ ದುರಸ್ತಿಗಾಗಿ ನಿಲ್ಲಿಸಿದ್ದ ಇಂಡಿಗೋ ವಿಮಾನಕ್ಕೆ ಟಿಟಿ ವಾಹನ ಡಿಕ್ಕಿ ಹೊಡೆದಿದೆ. ಚಾಲಕನ ಅಜಾಗರೂಕತೆಯಿಂದ ಈ ಅಪಘಾತ ಸಂಭವಿಸಿದ್ದು, ಟಿಟಿ ವಾಹನ ಜಖಂಗೊಂಡಿದೆ. ಚಾಲಕ ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದು, ಘಟನೆಯ ತನಿಖೆ ನಡೆಯುತ್ತಿದೆ.
ಬೆಂಗಳೂರು (ಏ.20): ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಿಲ್ಲಿಸಿದ್ದ ಇಂಡಿಗೋ ವಿಮಾನಕ್ಕೆ ಟಿಟಿ ಡಿಕ್ಕಿ ಹೊಡೆದ ಘಟನೆ ನಡೆದಿದೆ. ಇಂಜಿನ್ ರಿಪೇರಿಯಿಂದಾಗಿ ಕೆಟ್ಟು ನಿಂತಿದ್ದ ವಿಮಾನಕ್ಕೆ ಟಿಟಿ ವಾಹನ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಬಸಕ್ಕೆ ಟಿಟಿ ವಾಹನದ ಟಾಪ್ ನಜ್ಜುಗುಜ್ಜಾಗಿದೆ. ಟಿಟಿ ವಾಹನದ ಚಾಲಕ ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ.
ವಿಶ್ವದ ಟಾಪ್-100 ವಿಮಾನ ನಿಲ್ದಾಣಗಳು:ಬೆಂಗಳೂರಿಗೆ ಬೆಸ್ಟ್ ರ‍್ಯಾಂಕ್
ಏರ್ಪೋಟ್ ಒಳಭಾಗದ ಆಲ್ಪಾ ಪಾರ್ಕಿಂಗ್ ಬೇ 71 ರಲ್ಲಿ ನಿಂತಿದ್ದ ಇಂಡಿಗೋ ವಿಮಾನ ನಿಂತಿತ್ತು. ಕಳೆದ ಹಲವು ದಿನಗಳಿಂದ ಇಂಜಿನ ರಿಪೇರಿಯಿಂದ ವಿಮಾನ ಕೆಟ್ಟು ನಿಂತಿತ್ತು. ಟಿಟಿ ವಾಹನದ ಚಾಲಕನ ಅಜಾಗರೂಕತೆಯಿಂದ ಪ್ಲೈಟ್ ನ ಮುಂಭಾಗಕ್ಕೆ ಡಿಕ್ಕಿ ಹೊಡೆಯಿತು. ಈ ವಾಹನ ಏರ್ಪೋಟ್ ಒಳ ಭಾಗದಲ್ಲಿ ವಿಮಾನಗಳಿಗೆ ಸಿಬ್ಬಂದಿಯನ್ನ ಕರೆದುಕೊಂಡು ಹೋಗಿ ಬಿಡುತ್ತಿತ್ತು. ಸಿಬ್ಬಂದಿಯನ್ನ ಬಿಟ್ಟು ವಾಪಸ್ ಬರ್ತಿದ್ದ ವೇಳೆ ನಿಂತಿದ್ದ ವಿಮಾನಕ್ಕೆ ಡಿಕ್ಕಿ ಹೊಡೆದಿದೆ. ಈ ಮೂಲಕ ಕೂದಲಳತೆ ಅಂತರದಲ್ಲಿ ಏರ್ಪೋಟ್ ನಲ್ಲಿ ಅನಾಹುತ ತಪ್ಪಿದೆ.
ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಸುಧಾರಿತ ಟ್ರಕ್ ನಿರ್ವಹಣಾ ವ್ಯವಸ್ಥೆ!
ನಿನ್ನೆ ಮಧ್ಯಾಹ್ನ 12.15ಕ್ಕೆ ಆಕ್ಸಿಡೆಂಟ್ ನಡೆದಿದೆ . ಘಟನೆಯಲ್ಲಿ ಯಾವುದೇ ಇಂಜೂರಿ ಆಗಿಲ್ಲ. ಅದೃಷ್ಟವಶಾತ್ ಈ ಸಂದರ್ಭ ಟೆಂಪೋದಲ್ಲಿ ಚಾಲಕ ಹೊರತು ಪಡಿಸಿ ಯಾರು ಇರಲಿಲ್ಲ. ನಾಗರೀಕ ವಿಮಾನಯಾನ ಇಲಾಖೆ ಅಧಿಕಾರಿಗಳು ಮತ್ತು ಏರ್ಪೋಟ್ ಸಿಬ್ಬಂದಿ ಘಟನೆ ಕುರಿತು ತನಿಖೆ ನಡೆಸುತ್ತಿದ್ದಾರೆ.
ಬೆಂಗಳೂರು ಮೆಟ್ರೋ ನೀಲಿ ಮಾರ್ಗ ಮೊದಲ ಹಂತ ಯಾವಾಗ ಓಪನ್?
ವಿಮಾನ ಹೈಜಾಕ್‌ಗೆ ಯತ್ನ ಮಾಡಿದವ ಸಂಚರಿಸುವ ಫ್ಲೈಟಲ್ಲೇ ಗುಂಡಿಗೆ ಬಲಿ
ಮೆಕ್ಸಿಕೋ: ಮಧ್ಯ ಅಮೆರಿಕದ ರಾಷ್ಟ್ರವಾಗಿರುವ ಬಲಿಜ್‌ನಲ್ಲಿ ಸಿನಿಮೀಯ ರೀತಿಯಲ್ಲಿ ವಿಮಾನ ಹೈಜಾಕ್ ಘಟನೆಯೊಂದು ನಡೆದಿದೆ. ಮೆಕ್ಸಿಕೋ ಗಡಿಯ ಸಮೀಪವಿರುವ ಕೊರೊಜಲ್‌ನಿಂದ ಸ್ಯಾನ್ ಪೆಡ್ರೊಗೆ ತೆರಳುತ್ತಿದ್ದ ಸಣ್ಣ ವಿಮಾನವನ್ನು ಹೈಜಾಕ್ ಮಾಡಿದ ವ್ಯಕ್ತಿಯೊಬ್ಬ ಅದನ್ನು ಅಮೆರಿಕದ ಕಡೆ ತಿರುಗಿಸಿವಂತೆ ಆಗ್ರಹಿಸಿ, ಓರ್ವ ಸಿಬ್ಬಂದಿ ಸೇರಿ 2 ಪ್ರಯಾಣಿಕರಿಗೆ ಇರಿದಿದ್ದಾನೆ. ಬಳಿಕ ಇರಿತಕ್ಕೊಳಗಾದ ಪ್ರಯಾಣಿಕನಿಂದಲೇ ಗುಂಡೇಟಿಗೆ ಬಲಿಯಾಗಿದ್ದಾನೆ. ಬಳಿಕ ವಿಮಾನವನ್ನು ಸುರಕ್ಷಿತವಾಗಿ ಲೇಡಿವಿಲ್ಲೆ ಎಂಬಲ್ಲಿ ಇಳಿಸಲಾಗಿದೆ. ಹೈಜಾಕ್ ಮಾಡಿದವನನ್ನು ಅಕಿನ್ಯೆಲಾ ಟೇಲರ್ ಎಂದು ಗುರುತಿಸಲಾಗಿದ್ದು, ಆತ ಅಮೆರಿಕದ ಸೇನೆಯಲ್ಲಿದ್ದವ ಎನ್ನಲಾಗಿದೆ.
