Air India ಪ್ರಯಾಣಿಕರಿಗೆ ಸಿಹಿ ಸುದ್ದಿ… ಶೀಘ್ರದಲ್ಲಿ ವಿಮಾನದಲ್ಲಿ ಸಿಗಲಿಗೆ ಈ ಎಲ್ಲಾ ಸೌಲಭ್ಯ!
Air India: ನೀವು ಹೆಚ್ಚಾಗಿ ವಿಮಾನದಲ್ಲಿ ಟ್ರಾವೆಲ್ ಮಾಡುತ್ತೀರಾ? ಹಾಗಿದ್ರೆ ಈ ಮಾಹಿತಿ ನಿಮಗೆ ನಿಜಕ್ಕೂ ತುಂಬಾನೆ ಸಹಾಯ ಮಾಡುತ್ತೆ. ಅದರಲ್ಲೂ ನೀವು ಏರ್ ಇಂಡಿಯಾದಲ್ಲಿ ಟ್ರಾವೆಲ್ ಮಾಡುವವರಾಗಿದ್ದರೆ, ಏರ್ ಲೈನ್ಸ್ ಏನೆಲ್ಲಾ ಬದಲಾವಣೆ ಮಾಡಿದೆ, ಇಲ್ಲಿದೆ ಸಂಪೂರ್ಣ ಮಾಹಿತಿ.

ನೀವು ಹೆಚ್ಚಾಗಿ ಟ್ರಾವೆಲ್ ಮಾಡ್ತೀರಾ?
ನೀವು ಕೂಡ ಕೆಲಸದ ನಿಮಿತ್ತ ಆಗಾಗ್ಗೆ ವಿಮಾನದಲ್ಲಿ ಪ್ರಯಾಣಿಸುತ್ತಿದ್ದರೆ, ನಿಮಗೊಂದು ಒಳ್ಳೆಯ ಸುದ್ದಿ ಇದೆ. ವಾಸ್ತವವಾಗಿ, ಏರ್ ಇಂಡಿಯಾ ಈಗ ತನ್ನ ಪ್ರಯಾಣಿಕರಿಗೆ ಹಿಂದೆಂದಿಗಿಂತಲೂ ಹೆಚ್ಚು ಆರಾಮದಾಯಕ ಪ್ರಯಾಣ ಮತ್ತು ಹೆಚ್ಚು ಅನುಕೂಲಕರ ಅನುಭವವನ್ನು ನೀಡಲು ಸಜ್ಜಾಗಿದೆ. ವಿಮಾನಯಾನ ಸಂಸ್ಥೆಯು ತನ್ನ ವಿಮಾನ ಮತ್ತು ಸೇವೆಗಳಲ್ಲಿ ಪ್ರಮುಖ ಬದಲಾವಣೆಗಳನ್ನು ಪ್ರಾರಂಭಿಸಿದೆ, ಇದು ಪ್ರಯಾಣಿಕರು ದೀರ್ಘ-ಪ್ರಯಾಣದ ವಿಮಾನಗಳಲ್ಲಿ ಕೆಲವು ಸೌಲಭ್ಯಗಳನ್ನು ಆನಂದಿಸಲು ಅನುವು ಮಾಡಿಕೊಡುತ್ತದೆ.
ಪ್ರಯಾಣ ಇನ್ನಷ್ಟು ಆರಾಮದಾಯಕವಾಗಿದೆ
ಏರ್ ಇಂಡಿಯಾ ಪ್ರಸ್ತುತ ತನ್ನ ಹಳೆಯ ವಿಮಾನಗಳಲ್ಲಿ ಕ್ಯಾಬಿನ್‌ಗಳನ್ನು ಸಂಪೂರ್ಣ ಅಪ್‌ಗ್ರೇಡ್ ಮಾಡುತ್ತಿದೆ. ಹೊಸ, ಹೆಚ್ಚು ಆರಾಮದಾಯಕ ಆಸನಗಳನ್ನು ಸ್ಥಾಪಿಸಲಾಗುತ್ತಿದೆ ಮತ್ತು ಪ್ರಯಾಣಿಕರಿಗೆ ಅನುಕೂಲವಾಗುವಂತೆ ಲೆಗ್ ರೂಮನ್ನು ವಿಸ್ತರಿಸಲಾಗುತ್ತಿದೆ. ಈ ಬದಲಾವಣೆಗಳು ಲಾಂಗ್ ಜರ್ನಿ ಮಾಡುವ ಪ್ರಯಾಣಿಕರಿಗೆ ಹೆಚ್ಚು ಆರಾಮದಾಯಕವಾಗಲಿದೆ. ಇದಲ್ಲದೆ, ಅತ್ಯಾಧುನಿಕ ಇನ್-ಫ್ಲೈಟ್ ಎಂಟರ್’ಟೈನ್ಮೆಂಟ್ ಸಿಸ್ಟಮ್ ಕೂಡ ವಿಮಾನದಲ್ಲಿ ಸ್ಥಾಪಿಸಲಾಗುತ್ತಿದೆ, ಪ್ರಯಾಣಿಕರು ತಮ್ಮ ಪ್ರಯಾಣದ ಉದ್ದಕ್ಕೂ ಬೆಸ್ಟ್ ಮನರಂಜನೆಯನ್ನು ಎಂಜಾಯ್ ಮಾಡಬಹುದು.
ಪ್ರಯಾಣಿಕರಿಗೆ ಸುಧಾರಿತ ವಿಮಾನ ನಿಲ್ದಾಣ ಅನುಭವ
ಏರ್ ಇಂಡಿಯಾ ವಿಮಾನದೊಳಗಿನ ಪ್ರಯಾಣವನ್ನು ಮಾತ್ರವಲ್ಲದೆ ಇಡೀ ಟ್ರಾವೆಲ್ ಎಕ್ಸ್’ಪೀರಿಯನ್ಸ್ ಸುಧಾರಿಸುವ ಕೆಲಸ ಮಾಡುತ್ತಿದೆ. ವಿಮಾನಯಾನ ಸಂಸ್ಥೆಯು 28 ಕ್ಕೂ ಹೆಚ್ಚು ಪ್ರಯಾಣಿಕರ ಟಚ್ ಪಾಯಿಂಟ್ಸ್ ನಲ್ಲಿ ಸುಧಾರಣೆಗಳನ್ನು ಪ್ರಾರಂಭಿಸಿದೆ. ಇವುಗಳಲ್ಲಿ ಟಿಕೆಟ್ ಬುಕಿಂಗ್, ಚೆಕ್-ಇನ್, ಭದ್ರತಾ ತಪಾಸಣೆ, ಬೋರ್ಡಿಂಗ್ ಮತ್ತು ಬ್ಯಾಗೇಜ್ ಸೇವೆಗಳು ಸೇರಿವೆ.
ಬಲಿಷ್ಠ ಕಸ್ಟಮರ್ ಸರ್ವೀಸ್ ನೆಟ್’ವರ್
ಏರ್ ಇಂಡಿಯಾ ತನ್ನ ಕಸ್ಟಮರ್ ಸರ್ವೀಸ್ ನೆಟ್’ವರ್ಕ್ ಬಲಪಡಿಸಿದೆ.ಪ್ರಯಾಣಿಕರು ದೀರ್ಘ ಕ್ಯೂ ತಪ್ಪಿಸಲು ಸಹಾಯ ಮಾಡಲು, ವಿಮಾನ ನಿಲ್ದಾಣಗಳಲ್ಲಿ ಸೆಲ್ಫ್ ಸರ್ವೀಸ್ ಕಿಯೋಸ್ಕ್‌ಗಳು ಮತ್ತು ಆಟೋಮ್ಯಾಟಿಕ್ ಬ್ಯಾಗ್ ಡ್ರಾಪ್‌ಗಳಂತಹ ಡಿಜಿಟಲ್ ಸೌಲಭ್ಯಗಳನ್ನು ನೀಡಲಿದೆ. ಇದು ಪ್ರಯಾಣಿಕರ ಸಮಯವನ್ನು ಉಳಿಸುತ್ತದೆ ಮತ್ತು ಸಂಪೂರ್ಣ ಪ್ರಕ್ರಿಯೆಯನ್ನು ಮೊದಲಿಗಿಂತ ಸುಗಮಗೊಳಿಸುತ್ತದೆ. ಜೊತೆಗೆ ಬ್ಯಾಗೇಜ್ ಟ್ರಾನ್ಸ್ಫರ್ ಮತ್ತು ಕನೆಕ್ಟಿಂಗ್ ಫ್ಲೈಟ್ ವ್ಯವಸ್ಥೆಯನ್ನು ಸಹ ಸುಧಾರಿಸಿದೆ.
ರಿವಾರ್ಡ್ ಪಾಯಿಂಟ್ ಬಳಸುವುದು ಸುಲಭವಾಗುತ್ತೆ
ಏರ್ ಇಂಡಿಯಾ ತನ್ನ ಲಾಯಲ್ಟಿ ಮತ್ತು ರಿವಾರ್ಡ್ ಸಿಸ್ಟಮ್ ನ್ನು ಸಹ ಅಪ್‌ಗ್ರೇಡ್ ಮಾಡಿದೆ. ಪ್ರಯಾಣಿಕರು ಈಗ ಟಿಕೆಟ್ ಬುಕಿಂಗ್‌ಗಾಗಿ ಅಥವಾ ಎಕಾನಮಿ ಕ್ಲಾಸ್‌ನಿಂದ ಬಿಸಿನೆಸ್ ಕ್ಲಾಸ್‌ಗೆ ಅಪ್‌ಗ್ರೇಡ್ ಮಾಡಲು ತಮ್ಮ ರಿವಾರ್ಡ್ ಪಾಯಿಂಟ್‌ಗಳನ್ನು ಸುಲಭವಾಗಿ ಬಳಸಿಕೊಳ್ಳಲು ಸಾಧ್ಯವಾಗುತ್ತದೆ. ಸ್ಟಾರ್ ಅಲೈಯನ್ಸ್‌ನ ಸದಸ್ಯರಾಗಿ, ಪ್ರಯಾಣಿಕರು 25 ಕ್ಕೂ ಹೆಚ್ಚು ಅಂತರರಾಷ್ಟ್ರೀಯ ವಿಮಾನಯಾನ ಸಂಸ್ಥೆಗಳಲ್ಲಿ ಈ ಪಾಯಿಂಟ್‌ಗಳನ್ನು ರಿಡೀಮ್ ಮಾಡಲು ಸಾಧ್ಯವಾಗುತ್ತದೆ. ಮುಂದಿನ ದಿನಗಳಲ್ಲಿ, ಈ ಪಾಯಿಂಟ್‌ಗಳು ಏರ್ ಪೋರ್ಟ್ ಲಾಂಜ್, ಎಕ್ಸ್ಟ್ರಾ ಲಗೇಜ್ ಮತ್ತು ಪಾರ್ಟ್ನರ್ ಹೋಟೆಲ್‌ಗಳಂತಹ ಸೌಲಭ್ಯಗಳಿಗೆ ಸಹ ಬಳಸಬಹುದಾಗಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

