ದೆಹಲಿಯಿಂದ ಇಂದೋರ್‌ಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನದ ಎಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡ ಕಾರಣ ತುರ್ತು ಭೂಸ್ಪರ್ಶ ಮಾಡಲಾಯಿತು. ಪೈಲಟ್‌ನ ಸಮಯಪ್ರಜ್ಞೆಯಿಂದ ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿ ಪಾರಾದರು.

Air India Flight AI2913 returns to Delhi after fire indication: ದೆಹಲಿಯಿಂದ ಇಂದೋರ್‌ಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನ AI2913 ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ ಬಲ ಎಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡ ಕಾರಣ ತುರ್ತು ಭೂಸ್ಪರ್ಶ ಮಾಡಿದ ಘಟನೆ ಇಂದು ನಡೆದಿದೆ.

ಪೈಲಟ್‌ನ ಜಾಗರೂಕತೆಯಿಂದ ತಪ್ಪಿದ ಅನಾಹುತ

ಅಲಾರಾಂ ಬಾರಿಸಿ ಕಾಕ್‌ಪಿಟ್‌ನಲ್ಲಿ ಬೆಂಕಿಯ ಸಂಕೇತ ಬಂದ ತಕ್ಷಣ, ವಿಮಾನದಲ್ಲಿ ಕುಳಿತಿದ್ದ ಪ್ರಯಾಣಿಕರಲ್ಲಿ ಭಯಭೀತರಾದರು. ಆದರೆ ಪೈಲಟ್ ತಕ್ಷಣ ಅಗತ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡು ಎಂಜಿನ್ ಅನ್ನು ಸ್ವಿಚ್ ಆಫ್ ಮಾಡುವ ಮೂಲಕ ವಿಮಾನವನ್ನು ಗಾಳಿಯಲ್ಲಿ ನಿಯಂತ್ರಣದಲ್ಲಿಟ್ಟರು, ನಂತರ ಪೈಲಟ್ ವಿಮಾನವನ್ನು ದೆಹಲಿ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಇಳಿಸಿದರು. ಕೆಲವೇ ನಿಮಿಷಗಳಲ್ಲಿ ಎಲ್ಲಾ ಪ್ರಯಾಣಿಕರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಯಿತು.

ಪೈಲಟ್‌ನ ತ್ವರಿತ ಕ್ರಿಯೆಯಿಂದ ಸಂಭಾವ್ಯ ಅಪಘಾತ ತಪ್ಪಿದೆ. ಏರ್ ಇಂಡಿಯಾ ವಕ್ತಾರರ ಪ್ರಕಾರ, ತನಿಖೆಗಾಗಿ ವಿಮಾನವನ್ನು ಸ್ಥಗಿತಗೊಳಿಸಲಾಗಿದೆ. ಪ್ರಯಾಣಿಕರಿಗೆ ಅನುಕೂಲವಾಗುವಂತೆ ಪರ್ಯಾಯ ವಿಮಾನವನ್ನು ಇಂದೋರ್‌ಗೆ ಕಳುಹಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಏರ್‌ ಇಂಡಿಯಾದಲ್ಲಿ ಪದೇಪದೆ ತಾಂತ್ರಿಕ ದೋಷಗಳು:

ಏರ್ ಇಂಡಿಯಾದಲ್ಲಿ ತಾಂತ್ರಿಕ ದೋಷಗಳು ಆಗಾಗ ಕಂಡುಬರುತ್ತಿವೆ. ಇತ್ತೀಚೆಗೆ ಆಗಸ್ಟ್ 18ರಂದು ಕೊಚ್ಚಿಯಿಂದ ದೆಹಲಿಗೆ ತೆರಳುತ್ತಿದ್ದ ವಿಮಾನವನ್ನು ಟೇಕ್ ಆಫ್ ಮೊದಲು ನಿಲ್ಲಿಸಲಾಗಿತ್ತು. ಇದೇ ತಿಂಗಳ 16ರಂದು ಮಿಲನ್‌ನಿಂದ ದೆಹಲಿಗೆ ಬರುವ ವಿಮಾನವನ್ನು ರದ್ದುಗೊಳಿಸಲಾಗಿತ್ತು. ಈ ಸತತ ತಾಂತ್ರಿಕ ಸಮಸ್ಯೆಗಳಿಂದ ಪ್ರಯಾಣಿಕರು ತೊಂದರೆ, ಆತಂಕ ಎದುರಿಸುತ್ತಿದ್ದಾರೆ. ತನಿಖೆಯ ಫಲಿತಾಂಶಕ್ಕಾಗಿ ಕಾಯಲಾಗುತ್ತಿದ್ದು, ಏರ್ ಇಂಡಿಯಾದಿಂದ ಮುಂದಿನ ಮಾಹಿತಿಯನ್ನು ಶೀಘ್ರದಲ್ಲಿ ನೀಡಲಾಗುವುದು.