MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Travel
  • 'ಕಾಳಿಂಗ ಸರ್ಪಗಳ ರಾಜಧಾನಿ', 'ದಕ್ಷಿಣದ ಚಿರಾಪುಂಜಿ' ಖ್ಯಾತಿಯ ಕರ್ನಾಟಕದ ಈ ಪುಟ್ಟ ಹಳ್ಳಿ ಬಗ್ಗೆ ನಿಮಗೆಷ್ಟು ಗೊತ್ತು?

'ಕಾಳಿಂಗ ಸರ್ಪಗಳ ರಾಜಧಾನಿ', 'ದಕ್ಷಿಣದ ಚಿರಾಪುಂಜಿ' ಖ್ಯಾತಿಯ ಕರ್ನಾಟಕದ ಈ ಪುಟ್ಟ ಹಳ್ಳಿ ಬಗ್ಗೆ ನಿಮಗೆಷ್ಟು ಗೊತ್ತು?

Travel Guide Kannada: ಕರ್ನಾಟಕದ ಈ ಪುಟ್ಟ ಗ್ರಾಮ ಅತಿ ಹೆಚ್ಚು ಮಳೆಗೆ ಮಾತ್ರವಲ್ಲ, ಕಾಳಿಂಗ ಸರ್ಪಗಳು ಮತ್ತು ಮಾಲ್ಗುಡಿ ಡೇಸ್ ಚಿತ್ರೀಕರಣಕ್ಕೂ ಪ್ರಸಿದ್ಧ. ಈ ಸುಂದರ ತಾಣದ ಬಗ್ಗೆ ಹೆಚ್ಚಿನ ಮಾಹಿತಿ ಓದಿ.

2 Min read
Author : Ashwini HR
Published : Jun 28 2026, 06:15 PM IST
Share this Photo Gallery
  • FB
  • TW
  • Linkdin
  • Whatsapp
16
 'ದಕ್ಷಿಣ ಭಾರತದ ಚಿರಾಪುಂಜಿ'
Image Credit : Asianet News

'ದಕ್ಷಿಣ ಭಾರತದ ಚಿರಾಪುಂಜಿ'

‘ದಕ್ಷಿಣ ಭಾರತದ ಚಿರಾಪುಂಜಿ’
ಪಶ್ಚಿಮ ಘಟ್ಟಗಳ ಮಡಿಲಲ್ಲಿರುವ ಆಗುಂಬೆ ಪ್ರಕೃತಿ ಪ್ರೇಮಿಗಳ ಪಾಲಿನ ಸ್ವರ್ಗ. ಮಂಜಿನಿಂದ ಆವೃತವಾದ ಬೆಟ್ಟಗಳು, ಧುಮ್ಮಿಕ್ಕುವ ಜಲಪಾತಗಳು ಮತ್ತು ದಟ್ಟವಾದ ಮಳೆಕಾಡುಗಳನ್ನು ಹೊಂದಿರುವ ಈ ಸುಂದರ ತಾಣವನ್ನು 'ದಕ್ಷಿಣ ಭಾರತದ ಚಿರಾಪುಂಜಿ' ಎಂದೇ ಕರೆಯಲಾಗುತ್ತದೆ. ಅತಿ ಹೆಚ್ಚು ಮಳೆ ಮತ್ತು ಶ್ರೀಮಂತ ಜೀವವೈವಿಧ್ಯಕ್ಕೆ ಹೆಸರಾದ ಆಗುಂಬೆಯ ಸೌಂದರ್ಯದ ಪರಿಚಯ ಇಲ್ಲಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ಪ್ರಕೃತಿಯನ್ನು ಇಷ್ಟಪಡುವವರಿಗೆ ಬೆಸ್ಟ್
Image Credit : stockPhoto

ಪ್ರಕೃತಿಯನ್ನು ಇಷ್ಟಪಡುವವರಿಗೆ ಬೆಸ್ಟ್

ಪ್ರಕೃತಿಯನ್ನು ಇಷ್ಟಪಡುವವರಿಗೆ ಬೆಸ್ಟ್
ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನಲ್ಲಿರುವ ಆಗುಂಬೆ, ಪಶ್ಚಿಮ ಘಟ್ಟಗಳ ರಮಣೀಯ ತಾಣಗಳಲ್ಲಿ ಒಂದು. ಭಾರತದಲ್ಲೇ ಅತಿ ಹೆಚ್ಚು ಮಳೆ ಪಡೆಯುವ ಪ್ರದೇಶಗಳಲ್ಲಿ ಒಂದಾಗಿರುವ ಕಾರಣ ಇದಕ್ಕೆ 'ದಕ್ಷಿಣ ಭಾರತದ ಚೆರಾಪುಂಜಿ' ಎಂಬ ಹೆಗ್ಗಳಿಕೆ ಇದೆ. ಜನದಟ್ಟಣೆಯ ಗಿರಿಧಾಮಗಳಿಗಿಂತ ಭಿನ್ನವಾಗಿರುವ ಆಗುಂಬೆ, ಪ್ರಕೃತಿಯ ಶಾಂತತೆಯನ್ನು ಬಯಸುವವರಿಗೆ ಅತ್ಯುತ್ತಮ ಆಯ್ಕೆ.

Related Articles

Related image1
ಈ 5 ಕಾರಣಕ್ಕಾಗಿ ನಿಮಗೆ 30ವರ್ಷ ಆಗುವ ಮುನ್ನ Solo Travel ಮಾಡಿ
Related image2
Solo Travel ಮಾಡೋ ಮಹಿಳೆಯರಿಗೆ ಭಾರತದ ಈ ನಗರಗಳು ಫುಲ್ ಸೇಫ್… ಮಧ್ಯರಾತ್ರಿಯೂ ಭಯ ಇರಲ್ಲ
36
ಜಲಪಾತಗಳ ತಾಣ
Image Credit : Kannada Prabha

ಜಲಪಾತಗಳ ತಾಣ

ಜಲಪಾತಗಳ ತಾಣ
ಮಳೆಗಾಲದಲ್ಲಿ ಆಗುಂಬೆ ಹಸಿರು ಹೊದಿಕೆಯನ್ನು ಹೊದ್ದಂತೆ ಕಂಗೊಳಿಸುತ್ತದೆ. ಇಲ್ಲಿನ ಬರ್ಕಣ ಜಲಪಾತ ಭಾರತದ ಎತ್ತರದ ಜಲಪಾತಗಳಲ್ಲಿ ಒಂದಾಗಿದೆ. ಇದರೊಂದಿಗೆ ಜೋಗಿಗುಂಡಿ, ಒನಕೆ ಅಬ್ಬಿ ಮತ್ತು ಕೂಡ್ಲು ತೀರ್ಥ ಜಲಪಾತಗಳು ಪ್ರವಾಸಿಗರನ್ನು ಸೆಳೆಯುತ್ತವೆ. ದಟ್ಟ ಕಾಡುಗಳ ನಡುವೆ ಇರುವ ಈ ಜಲಪಾತಗಳನ್ನು ತಲುಪಲು ಇರುವ ಟ್ರೆಕ್ಕಿಂಗ್ ಹಾದಿಗಳು ಸಾಹಸ ಪ್ರಿಯರಿಗೆ ಸಖತ್ ಇಷ್ಟವಾಗುತ್ತವೆ.

46
ಕಾಳಿಂಗ ಸರ್ಪಗಳ ರಾಜಧಾನಿ
Image Credit : Asianet News

ಕಾಳಿಂಗ ಸರ್ಪಗಳ ರಾಜಧಾನಿ

ಕಾಳಿಂಗ ಸರ್ಪಗಳ ರಾಜಧಾನಿ
ಆಗುಂಬೆಯನ್ನು "ಭಾರತದ ಕಾಳಿಂಗ ಸರ್ಪಗಳ ರಾಜಧಾನಿ" (Cobra Capital of India) ಎಂದೂ ಕರೆಯಲಾಗುತ್ತದೆ. ಪ್ರಸಿದ್ಧ ಉರಗ ತಜ್ಞ ರೋಮುಲಸ್ ವಿಟೇಕರ್ ಸ್ಥಾಪಿಸಿದ 'ಆಗುಂಬೆ ಮಳೆಕಾಡು ಸಂಶೋಧನಾ ಕೇಂದ್ರ' (ARRS) ಇಲ್ಲಿನ ಪರಿಸರ ವ್ಯವಸ್ಥೆ ಮತ್ತು ಕಾಳಿಂಗ ಸರ್ಪಗಳ ಸಂರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಇಲ್ಲಿನ ಸೋಮೇಶ್ವರ ವನ್ಯಜೀವಿ ಅಭಯಾರಣ್ಯವು ಅಪರೂಪದ ಪಕ್ಷಿಗಳು, ಚಿಟ್ಟೆಗಳು ಮತ್ತು ಪ್ರಾಣಿಗಳಿಗೆ ನೆಲೆಯಾಗಿದೆ.

56
ಸೂರ್ಯಾಸ್ತದ ಸೊಬಗು ಮತ್ತು ಮಾಲ್ಗುಡಿ ಡೇಸ್
Image Credit : Wikipedia

ಸೂರ್ಯಾಸ್ತದ ಸೊಬಗು ಮತ್ತು ಮಾಲ್ಗುಡಿ ಡೇಸ್

ಸೂರ್ಯಾಸ್ತದ ಸೊಬಗು ಮತ್ತು ಮಾಲ್ಗುಡಿ ಡೇಸ್
ಆಗುಂಬೆಯ 'ಸನ್‌ಸೆಟ್ ಪಾಯಿಂಟ್' ಅತ್ಯಂತ ಜನಪ್ರಿಯ ಸ್ಥಳ. ಇಲ್ಲಿಂದ ಕಣಿವೆಯ ಆಳದಲ್ಲಿ ಸೂರ್ಯ ಮುಳುಗುವ ದೃಶ್ಯ ಮತ್ತು ಅರಬ್ಬಿ ಸಮುದ್ರದ ಕಡೆಗೆ ಚಾಚಿಕೊಂಡಿರುವ ಕಾಡುಗಳ ನೋಟ ಅದ್ಭುತವಾಗಿರುತ್ತದೆ. ಅಲ್ಲದೆ, ಪ್ರಸಿದ್ಧ ದೂರದರ್ಶನ ಸರಣಿ 'ಮಾಲ್ಗುಡಿ ಡೇಸ್'ನ ಚಿತ್ರೀಕರಣ ಇಲ್ಲಿನ ದೊಡ್ಡಮನೆಯಲ್ಲಿ ನಡೆದಿದ್ದು, ಇಂದಿಗೂ ಇದು ಪ್ರವಾಸಿಗರ ಆಕರ್ಷಣೆಯ ಕೇಂದ್ರವಾಗಿದೆ.

66
ಸುತ್ತಾಡಲು ಉತ್ತಮ ಸಮಯ
Image Credit : our own

ಸುತ್ತಾಡಲು ಉತ್ತಮ ಸಮಯ

ಸುತ್ತಾಡಲು ಉತ್ತಮ ಸಮಯ
ಕುಂದಾದ್ರಿ ಬೆಟ್ಟ ಮತ್ತು ನಿಶಾನಿ ಮೊಟ್ಟೆ ಇಲ್ಲಿನ ಇತರ ಪ್ರಮುಖ ಟ್ರೆಕ್ಕಿಂಗ್ ತಾಣಗಳು. ಜೂನ್‌ನಿಂದ ಸೆಪ್ಟೆಂಬರ್‌ವರೆಗೆ ಮಳೆಗಾಲದ ಸೌಂದರ್ಯ ಸವಿಯಲು ಸೂಕ್ತ ಸಮಯವಾದರೆ, ಅಕ್ಟೋಬರ್‌ನಿಂದ ಫೆಬ್ರವರಿವರೆಗೆ ಹಿತವಾದ ವಾತಾವರಣದಲ್ಲಿ ಸುತ್ತಾಡಲು ಉತ್ತಮ ಸಮಯ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

AH
Ashwini HR
ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ದಿನಪತ್ರಿಕೆ 'ಕ್ರಾಂತಿದೀಪ'ದಲ್ಲಿ ಉಪ ಸಂಪಾದಕಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 14 ವರ್ಷಗಳ ಅನುಭವ. ರಾಜ್ಯಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ರಾಜಕೀಯ, ಮನರಂಜನೆ, ಶಿಕ್ಷಣ, ಆರೋಗ್ಯ, ಟ್ರೆಂಡಿಂಗ್‌, ಲೈಫ್‌ಸ್ಟೈಲ್‌ ಕುರಿತಾದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ.ಪ್ರಸ್ತುತ ಸುವರ್ಣ ಡಿಜಿಟಲ್‌ ತಂಡದ ಭಾಗವಾಗಿ ವೃತ್ತಿ ಜೀವನ ಮುಂದುವರಿಸುತ್ತಿದ್ದೇನೆ.
ಜೀವನಶೈಲಿ
ಪ್ರವಾಸ

Latest Videos
Recommended Stories
Recommended image1
ಟ್ರಿಪ್ ಹೋಗುವಾಗ ಇರಲಿ ಎಚ್ಚರ, ಪ್ಯಾಂಗಾಂಗ್ ಲೇಕ್‍ನಲ್ಲಿ ಕಾರು ಇಳಿಸಿದ ಪ್ರವಾಸಿಗರಿಗೆ 2 ಲಕ್ಷ ರೂ ದಂಡ
Recommended image2
ಹೋಟೆಲ್ ರೂಂಗೆ ಹೋದ ತಕ್ಷಣ ಲೈಟ್ ಆನ್ ಮಾಡ್ಬೇಡಿ! ಇಲ್ಲಿದೆ 99% ಜನರಿಗೆ ತಿಳಿಯದ 'ಸೀಕ್ರೆಟ್' ಟ್ರಿಕ್
Recommended image3
White Bed Sheets Train: ರೈಲು ಪ್ರಯಾಣಿಕರಿಗೆ ಬಿಳಿ ಬೆಡ್‌ ಶೀಟ್‌ ಕೊಡೋದು ಯಾಕೆ? ಇದೆ ಬಲವಾದ ಕಾರಣ!
Related Stories
Recommended image1
ಈ 5 ಕಾರಣಕ್ಕಾಗಿ ನಿಮಗೆ 30ವರ್ಷ ಆಗುವ ಮುನ್ನ Solo Travel ಮಾಡಿ
Recommended image2
Solo Travel ಮಾಡೋ ಮಹಿಳೆಯರಿಗೆ ಭಾರತದ ಈ ನಗರಗಳು ಫುಲ್ ಸೇಫ್… ಮಧ್ಯರಾತ್ರಿಯೂ ಭಯ ಇರಲ್ಲ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved