ಹೋಟೆಲ್ ರೂಂಗೆ ಹೋದ ತಕ್ಷಣ ಲೈಟ್ ಆನ್ ಮಾಡ್ಬೇಡಿ! ಇಲ್ಲಿದೆ 99% ಜನರಿಗೆ ತಿಳಿಯದ 'ಸೀಕ್ರೆಟ್' ಟ್ರಿಕ್
Hotel Safety Tips: ಪ್ರವಾಸಕ್ಕೆ ಹೋದಾಗ ಹೋಟೆಲ್‌ಗಳಲ್ಲಿ ತಂಗುವುದು ಸಾಮಾನ್ಯ. ಆದರೆ ರೂಂಗೆ ಕಾಲಿಟ್ಟ ಕೂಡಲೇ ಲೈಟ್ ಆನ್ ಮಾಡುವ ನಿಮ್ಮ ಅಭ್ಯಾಸ ಸುರಕ್ಷತೆಗೆ ಅಪಾಯ ತಂದೊಡ್ಡಬಹುದು. ನಿಮ್ಮ ಖಾಸಗಿತನವನ್ನು ಕಾಪಾಡಿಕೊಳ್ಳಲು ಈ ಸಣ್ಣ ಟ್ರಿಕ್ ಹೇಗೆ ಸಹಾಯ ಮಾಡುತ್ತದೆ ಎಂಬ ಮಾಹಿತಿ ಇಲ್ಲಿದೆ.
ತಜ್ಞರು ಹೇಳಿದ ಟ್ರಿಕ್
ತಜ್ಞರು ಹೇಳಿದ ಟ್ರಿಕ್
ಹೋಟೆಲ್‌ಗೆ ಚೆಕ್-ಇನ್ ಮಾಡುವಾಗ ನಾವು ಅನೇಕ ವಿಷಯಗಳ ಬಗ್ಗೆ ಗಮನ ಹರಿಸಬೇಕಾಗುತ್ತದೆ. ಸಾಮಾನ್ಯವಾಗಿ ಜನರು ಹೋಟೆಲ್ ರೂಂಗೆ ಪ್ರವೇಶಿಸುತ್ತಿದ್ದಂತೆ ಮೊದಲು ಮಾಡುವುದು ಲೈಟ್ ಸ್ವಿಚ್ ಆನ್ ಮಾಡುವುದು. ಆದರೆ ಸುರಕ್ಷತೆಯ ದೃಷ್ಟಿಯಿಂದ ಇದು ಸರಿಯಾದ ಕ್ರಮವಲ್ಲ. ರೂಂಗೆ ಹೋದ ತಕ್ಷಣ ಲೈಟ್ ಹಾಕುವ ಬದಲು ಮೊದಲು ಕೆಲವು ಮುಖ್ಯ ವಿಷಯಗಳನ್ನು ಪರಿಶೀಲಿಸಬೇಕು ಎಂದು ತಜ್ಞರು ಹೇಳುತ್ತಾರೆ. ಅದರ ಸಂಪೂರ್ಣ ವಿವರ ಇಲ್ಲಿದೆ.
ಲೈಟ್ ಏಕೆ ಆನ್ ಮಾಡಬಾರದು?
ಹಿಡನ್ ಕ್ಯಾಮೆರಾಗಳ ಪತ್ತೆ
ರೂಂನಲ್ಲಿ ಕತ್ತಲೆ ಇದ್ದರೆ, ಅಲ್ಲಿ ಅಡಗಿಸಿಟ್ಟಿರುವ ಹಿಡನ್ ಕ್ಯಾಮೆರಾಗಳ ಸಣ್ಣ ಎಲ್‌ಇಡಿ (LED) ಲೈಟ್ ಅಥವಾ ಅವುಗಳ ಮಿನುಗುವಿಕೆ (Blinking) ಸುಲಭವಾಗಿ ಕಣ್ಣಿಗೆ ಬೀಳುತ್ತದೆ. ಲೈಟ್ ಆನ್ ಮಾಡಿದರೆ ಈ ಸಣ್ಣ ಬೆಳಕು ನಮಗೆ ಕಾಣಿಸುವುದಿಲ್ಲ. ಹಾಗಾಗಿ ಮೊದಲು ಕತ್ತಲೆಯಲ್ಲಿಯೇ ರೂಂ ಅನ್ನು ಒಮ್ಮೆ ಸ್ಕ್ಯಾನ್ ಮಾಡುವುದು ಉತ್ತಮ.
ತಿಗಣೆಗಳ (Bedbugs) ತಪಾಸಣೆ
ತಿಗಣೆಗಳ (Bedbugs) ತಪಾಸಣೆ
ತಿಗಣೆಗಳ (Bedbugs) ತಪಾಸಣೆ ಹೋಟೆಲ್ ಬೆಡ್‌ಗಳ ಮೇಲೆ ಹೆಚ್ಚಾಗಿ ಬಿಳಿ ಚಾದರ ಇರುತ್ತದೆ. ಕತ್ತಲಿನಲ್ಲಿ ತಿಗಣೆಗಳು ಬಿಳಿ ಚಾದರದ ಮೇಲೆ ಓಡಾಡುವುದು ಅಥವಾ ಅಡಗಿಕೊಂಡಿರುವುದು ಸುಲಭವಾಗಿ ಗೋಚರಿಸುತ್ತದೆ. ರೂಂಗೆ ಹೋದ ತಕ್ಷಣ ಹಾಸಿಗೆ, ದಿಂಬು, ಪರದೆ ಮತ್ತು ಪೀಠೋಪಕರಣಗಳ ಮೂಲೆಗಳನ್ನು ಎಚ್ಚರಿಕೆಯಿಂದ ಗಮನಿಸಿ. ಏನಾದರೂ ಅನುಮಾನ ಬಂದರೆ ತಕ್ಷಣ ರೂಂ ಬದಲಿಸಲು ತಿಳಿಸಿ.
ಕಣ್ತಪ್ಪಿ ಹೋಗಲ್ಲ
ಕಣ್ತಪ್ಪಿ ಹೋಗಲ್ಲ
ನೀವು ಕತ್ತಲೆ ಇರುವ ಕೋಣೆಯಲ್ಲಿ ಸ್ವಲ್ಪ ಸಮಯ ಕಳೆದರೆ, ನಿಮ್ಮ ಕಣ್ಣುಗಳು ಆ ಕತ್ತಲೆಗೆ ಹೊಂದಿಕೊಳ್ಳುತ್ತವೆ. ಇದರಿಂದ ಕೋಣೆಯಲ್ಲಿರುವ ಯಾವುದೇ ಅಸಹಜ ಚಲನೆ, ನೆರಳು ಅಥವಾ ಅನುಮಾನಾಸ್ಪದ ವಸ್ತುಗಳು ಬೇಗನೆ ನಿಮ್ಮ ಗಮನಕ್ಕೆ ಬರುತ್ತವೆ. ಲೈಟ್ ಆನ್ ಮಾಡಿದರೆ ಇಂತಹ ಸಣ್ಣಪುಟ್ಟ ವಿಷಯಗಳು ಕಣ್ಣಿಗೆ ತಪ್ಪಿ ಹೋಗಬಹುದು.
ಏನು ಮಾಡಬೇಕು?
ಏನು ಮಾಡಬೇಕು?
ಹೋಟೆಲ್ ಕೋಣೆಗೆ ಪ್ರವೇಶಿಸಿದ ನಂತರ ಮೊದಲು ಬಾಗಿಲಿನ ಬಳಿ ಕೆಲವು ಸೆಕೆಂಡುಗಳ ಕಾಲ ನಿಂತು ಇಡೀ ಕೋಣೆಯನ್ನು ಗಮನಿಸಿ. ನಂತರ ಬಾಗಿಲುಗಳು, ಕಿಟಕಿಗಳು, ಕಪಾಟುಗಳು, ಬಾತ್‌ರೂಂ, ಬಾಲ್ಕನಿ ಮತ್ತು ಹಾಸಿಗೆಯ ಕೆಳಭಾಗವನ್ನು ಚೆನ್ನಾಗಿ ಪರೀಕ್ಷಿಸಿ. ಕೋಣೆಯಲ್ಲಿ ಎಲ್ಲವೂ ಸರಿಯಾಗಿದೆ ಎಂದು ಖಚಿತಪಡಿಸಿಕೊಂಡ ನಂತರವೇ ಲೈಟ್ ಆನ್ ಮಾಡಿ ನಿಮ್ಮ ವಾಸ್ತವ್ಯವನ್ನು ಮುಂದುವರಿಸಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.