- Home
- Technology
- ಕ್ಯಾಲ್ಕುಲೇಟರ್‌ನಲ್ಲಿರುವ ಈ 3 ಬಟನ್ ಬಗ್ಗೆ 90% ಜನರಿಗೆ ಗೊತ್ತೇ ಇಲ್ಲ! ಗೊತ್ತಾದ್ರೆ ಲೆಕ್ಕ ಇನ್ನೂ ಸುಲಭ!
ಕ್ಯಾಲ್ಕುಲೇಟರ್‌ನಲ್ಲಿರುವ ಈ 3 ಬಟನ್ ಬಗ್ಗೆ 90% ಜನರಿಗೆ ಗೊತ್ತೇ ಇಲ್ಲ! ಗೊತ್ತಾದ್ರೆ ಲೆಕ್ಕ ಇನ್ನೂ ಸುಲಭ!
Calculator Tips: ಸಾಮಾನ್ಯವಾಗಿ ಕ್ಯಾಲ್ಕುಲೇಟರ್ ಕೈಗೆ ಸಿಕ್ಕಾಗ ನಾವು +, -, ×, ÷ ಮತ್ತು C ಬಟನ್‌ಗಳನ್ನು ಬಳಸುತ್ತೇವೆ. ಆದರೆ ಕ್ಯಾಲ್ಕುಲೇಟರ್‌ನಲ್ಲಿ ಇವುಗಳ ಹೊರತಾಗಿಯೂ ಹಲವು ಉಪಯುಕ್ತ ಬಟನ್‌ಗಳಿವೆ.

ಕ್ಯಾಲ್ಕುಲೇಟರ್ ಟ್ರಿಕ್
Calculator Tips: ಸಾಮಾನ್ಯವಾಗಿ ಕ್ಯಾಲ್ಕುಲೇಟರ್ ಕೈಗೆ ಸಿಕ್ಕಾಗ ನಾವು +, -, ×, ÷ ಮತ್ತು C ಬಟನ್‌ಗಳನ್ನು ಬಳಸುತ್ತೇವೆ. ಆದರೆ ಕ್ಯಾಲ್ಕುಲೇಟರ್‌ನಲ್ಲಿ ಇವುಗಳ ಹೊರತಾಗಿಯೂ ಹಲವು ಉಪಯುಕ್ತ ಬಟನ್‌ಗಳಿವೆ. ಅವುಗಳಲ್ಲಿ GT, CE ಮತ್ತು MU ಬಟನ್‌ಗಳು ಸಾಕಷ್ಟು ಕೆಲಸಕ್ಕೆ ಬರುತ್ತವೆ. ಈ ಬಟನ್‌ಗಳ ಕೆಲಸ ತಿಳಿದಿದ್ದರೆ ದೈನಂದಿನ ಲೆಕ್ಕಾಚಾರವನ್ನು ಇನ್ನಷ್ಟು ವೇಗವಾಗಿ ಮಾಡಬಹುದು.
1. GT ಬಟನ್: ಒಟ್ಟು ಮೊತ್ತ ಒಂದೇ ಕ್ಷಣದಲ್ಲಿ!
GT ಎಂದರೆ Grand Total. ಹಲವು ಪ್ರತ್ಯೇಕ ಲೆಕ್ಕಾಚಾರಗಳನ್ನು ಮಾಡಿದ ನಂತರ ಅವುಗಳ ಒಟ್ಟು ಮೊತ್ತವನ್ನು ತಿಳಿಯಲು ಈ ಬಟನ್ ಸಹಾಯ ಮಾಡುತ್ತದೆ. ಉದಾಹರಣೆಗೆ, ನೀವು ₹2.5 ಬೆಲೆಯ 8 ಶ್ಯಾಂಪೂ ಖರೀದಿಸಿದರೆ ₹20 ಆಗುತ್ತದೆ. ನಂತರ ₹27ರ 4 ಸೋಪು ಖರೀದಿಸಿದರೆ ₹108 ಮತ್ತು ಕೆಜಿಗೆ ₹27ರಂತೆ 12 ಕೆಜಿ ಹಿಟ್ಟು ಖರೀದಿಸಿದರೆ ₹324 ಆಗುತ್ತದೆ. ಈ ಲೆಕ್ಕಗಳನ್ನು ಕ್ಯಾಲ್ಕುಲೇಟರ್‌ನಲ್ಲಿ ಪ್ರತ್ಯೇಕವಾಗಿ ಮಾಡಿದ ಬಳಿಕ GT ಒತ್ತಿದರೆ, ಒಟ್ಟು ಮೊತ್ತವನ್ನು ಒಂದೇ ಕಡೆ ಪಡೆಯಬಹುದು.
ಅಂದರೆ:
₹20 + ₹108 + ₹324 = ₹452 ಬಹು ಲೆಕ್ಕಾಚಾರಗಳನ್ನು ಮಾಡುವವರಿಗೆ ಈ ಬಟನ್ ಸಾಕಷ್ಟು ಉಪಯುಕ್ತ.
2. CE ಬಟನ್: ತಪ್ಪಾದ ಸಂಖ್ಯೆಯನ್ನು ಮಾತ್ರ ಅಳಿಸಿ
ಲೆಕ್ಕಾಚಾರ ಮಾಡುವಾಗ ಒಂದು ಸಂಖ್ಯೆ ತಪ್ಪಾಗಿ ಟೈಪ್ ಆಗುವುದು ಸಾಮಾನ್ಯ. ಅಂತಹ ಸಂದರ್ಭದಲ್ಲಿ AC ಅಥವಾ ON ಒತ್ತಿದರೆ ಕೆಲ ಕ್ಯಾಲ್ಕುಲೇಟರ್‌ಗಳಲ್ಲಿ ಸಂಪೂರ್ಣ ಲೆಕ್ಕಾಚಾರವೇ ಕ್ಲಿಯರ್ ಆಗಬಹುದು. ಇಲ್ಲಿಯೇ CE ಎಂದರೆ Clear Entry ಬಟನ್ ಉಪಯೋಗಕ್ಕೆ ಬರುತ್ತದೆ.
ಉದಾಹರಣೆಗೆ ನೀವು:
235 + 166 + 286 + 734 ಎಂದು ಟೈಪ್ ಮಾಡಿದ್ದೀರಿ ಎಂದುಕೊಳ್ಳಿ. ಆದರೆ ಕೊನೆಯ ಸಂಖ್ಯೆ 734 ಬದಲಿಗೆ 374 ಆಗಬೇಕಿತ್ತು. ಈ ಸಂದರ್ಭದಲ್ಲಿ ಇಡೀ ಲೆಕ್ಕವನ್ನು ಮತ್ತೆ ಮಾಡುವ ಬದಲು CE ಒತ್ತಿ. ಸಾಮಾನ್ಯವಾಗಿ ಇದು ಪ್ರಸ್ತುತ ನಮೂದಿಸಿದ ಸಂಖ್ಯೆಯನ್ನು ಮಾತ್ರ ತೆರವುಗೊಳಿಸಲು ಬಳಸಲಾಗುತ್ತದೆ. ನಂತರ ಸರಿಯಾದ 374 ನಮೂದಿಸಿ ಲೆಕ್ಕ ಮುಂದುವರಿಸಬಹುದು.
3. MU ಬಟನ್: ಲಾಭದ ಬೆಲೆ ಲೆಕ್ಕ ಹಾಕಲು
ವ್ಯಾಪಾರಿಗಳು ಹಾಗೂ ವಸ್ತುವಿನ ಮಾರಾಟ ಬೆಲೆ ಲೆಕ್ಕ ಹಾಕುವವರಿಗೆ MU ಎಂದರೆ Mark-Up ಬಟನ್ ಉಪಯುಕ್ತವಾಗಬಹುದು. ಉದಾಹರಣೆಗೆ, ಒಂದು ವಸ್ತುವನ್ನು ₹150ಕ್ಕೆ ಖರೀದಿಸಿದ್ದೀರಿ. ಅದಕ್ಕೆ 20% ಮಾರ್ಕ್‌ಅಪ್ ಸೇರಿಸಿ ಬೆಲೆ ನಿಗದಿಪಡಿಸಬೇಕಾದರೆ, MU ಕಾರ್ಯವಿರುವ ಕ್ಯಾಲ್ಕುಲೇಟರ್‌ನಲ್ಲಿ ಸಂಬಂಧಿಸಿದ ಕ್ರಮದಲ್ಲಿ ಲೆಕ್ಕ ಹಾಕಬಹುದು. ಇಲ್ಲಿ ಒಂದು ವಿಷಯ ಗಮನದಲ್ಲಿರಲಿ: Mark-up ಮತ್ತು profit margin ಒಂದೇ ಅರ್ಥವಲ್ಲ. 20% mark-up ಎಂದರೆ ₹150ರ ಮೇಲೆ 20% ಸೇರಿಸಿದರೆ ₹180 ಆಗುತ್ತದೆ. ಆದರೆ ₹150 ವೆಚ್ಚದ ಮೇಲೆ 20% profit margin ಬೇಕಾದರೆ ಮಾರಾಟ ಬೆಲೆ ₹187.50 ಆಗುತ್ತದೆ. ಆದ್ದರಿಂದ MU ಬಟನ್ ಬಳಸುವಾಗ ನಿಮ್ಮ ಕ್ಯಾಲ್ಕುಲೇಟರ್‌ನ ಮಾದರಿ ಮತ್ತು ಅದರ ಕಾರ್ಯವಿಧಾನವನ್ನು ಗಮನಿಸುವುದು ಮುಖ್ಯ.
ಕ್ಯಾಲ್ಕುಲೇಟರ್ ಅಂದರೆ ಕೇವಲ +, -, ×, ÷ ಅಲ್ಲ
ನಾವು ವರ್ಷಗಳಿಂದ ಕ್ಯಾಲ್ಕುಲೇಟರ್ ಬಳಸುತ್ತಿದ್ದರೂ ಅದರಲ್ಲಿರುವ ಹಲವು ಬಟನ್‌ಗಳ ಸಂಪೂರ್ಣ ಉಪಯೋಗ ಗೊತ್ತಿರುವುದಿಲ್ಲ. GT, CE, MU ಸೇರಿದಂತೆ ಕೆಲವು ಬಟನ್‌ಗಳು ನಿರ್ದಿಷ್ಟ ಲೆಕ್ಕಾಚಾರಗಳಲ್ಲಿ ಸಮಯ ಉಳಿಸಲು ಸಹಾಯ ಮಾಡುತ್ತವೆ. ಹೀಗಾಗಿ ಮುಂದಿನ ಬಾರಿ ಕ್ಯಾಲ್ಕುಲೇಟರ್ ಕೈಗೆತ್ತಿಕೊಂಡಾಗ ಕೇವಲ +, -, ×, ÷ ಬಟನ್‌ಗಳಿಗಷ್ಟೇ ಸೀಮಿತವಾಗದೆ, ಅದರಲ್ಲಿರುವ ಇತರ ಬಟನ್‌ಗಳ ಕಾರ್ಯವನ್ನೂ ಒಮ್ಮೆ ತಿಳಿದುಕೊಳ್ಳಿ.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.