- Home
- Entertainment
- Sandalwood
- 2 ಚಿತ್ರಗಳ ನಂತರ ನನ್ನ ನಿರ್ದೇಶನಕ್ಕೆ ಚಾಲನೆ: ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟ ಉಪೇಂದ್ರ
2 ಚಿತ್ರಗಳ ನಂತರ ನನ್ನ ನಿರ್ದೇಶನಕ್ಕೆ ಚಾಲನೆ: ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟ ಉಪೇಂದ್ರ
ಕನ್ನಡದ ರಿಯಲ್ ಸ್ಟಾರ್ ಉಪೇಂದ್ರ ಮತ್ತೆ ನಿರ್ದೇಶನಕ್ಕೆ ಮರಳಲು ಸಿದ್ಧರಾಗಿದ್ದಾರೆ. 'ಯುಐ' ಚಿತ್ರದ ಬಳಿಕ ಉಪೇಂದ್ರ ನಿರ್ದೇಶನದ ಮುಂದಿನ ಸಿನಿಮಾ ಯಾವಾಗ ಎಂಬ ಅಭಿಮಾನಿಗಳ ಪ್ರಶ್ನೆಗೆ ಉತ್ತರ ಸಿಕ್ಕಿದೆ.

ಮತ್ತೆ ನಿರ್ದೇಶನಕ್ಕೆ ಸಿದ್ಧರಾದ ಉಪೇಂದ್ರ
ಎರಡು ಚಿತ್ರಗಳಿಗೆ ಶೂಟಿಂಗ್ ಮುಗಿಸಿಕೊಂಡು ನನ್ನ ನಿರ್ದೇಶನದ ಚಿತ್ರಕ್ಕೆ ಚಾಲನೆ ನೀಡುತ್ತೇನೆ ಎಂದು ನಟ ಉಪೇಂದ್ರ ಅವರು ಹೇಳಿರುವ ಮಾತುಗಳು ಈ ಸಾಕಷ್ಟು ವೈರಲ್ ಆಗುತ್ತಿದೆ.
ಅಭಿಮಾನಿಗಳಿಗೆ ಸಿಹಿ ಸುದ್ದಿ
ಆ ಮೂಲಕ ‘ಯುಐ’ ಚಿತ್ರದ ನಂತರ ಮತ್ತೆ ಉಪ್ಪಿ ನಿರ್ದೇಶನದ ಸಿನಿಮಾ ಯಾವಾಗ ಎನ್ನುತ್ತಿರುವವರಿಗೆ ಕೊನೆಗೂ ಸಿಹಿ ಸುದ್ದಿ ಸಿಕ್ಕಂತಾಗಿದೆ.
ಸದ್ಯದಲ್ಲೇ ಸಿನಿಮಾ ಘೋಷಣೆ
ತಮ್ಮ ಮುಂದಿನ ನಿರ್ದೇಶನದ ಚಿತ್ರದ ಬಗ್ಗೆ ಮಾತನಾಡಿರುವ ಉಪೇಂದ್ರ, ‘ಈಗ ನಾನು ಕತೆ ಬರೆಯುತ್ತಿದ್ದೇನೆ. ಬರವಣಿಗೆ ಬಹುತೇಕ ಮುಗಿಯುತ್ತಾ ಬಂದಿದೆ. ಕತೆ ಏನು ಎಂಬುದನ್ನು ಚಿತ್ರದ ಟೈಟಲ್ ಜೊತೆಗೆ ಹೇಳುತ್ತೇನೆ. ಸದ್ಯದಲ್ಲೇ ಸಿನಿಮಾ ಘೋಷಣೆ ಮಾಡಲಿದ್ದೇನೆ. ಎರಡು ಸಿನಿಮಾಗಳ ಚಿತ್ರೀಕರಣ ಬಾಕಿ ಇದೆ. ಅವೆರಡನ್ನೂ ಮುಗಿಸಿದ ತಕ್ಷಣ ನಿರ್ದೇಶನದ ಕೆಲಸ ಆರಂಭಿಸುವುದು ಗ್ಯಾರಂಟಿ’ ಎಂದಿದ್ದಾರೆ.
ಎರಡು ಸಿನಿಮಾ ಮುಗಿದ ಕೂಡಲೇ ಡೈರೆಕ್ಷನ್
ಸದ್ಯ ಉಪೇಂದ್ರ ಅವರು ತಮಿಳಿನ ಕಾರ್ತಿಕ್ ಸುಬ್ಬರಾಜು ನಿರ್ದೇಶನದ ಚಿತ್ರ ಹಾಗೂ ಕನ್ನಡದಲ್ಲಿ ಅರವಿಂದ್ ಕೌಶಿಕ್ ನಿರ್ದೇಶನದ ‘ನೆಕ್ಟ್ಸ್ ಲೆವಲ್’ ಚಿತ್ರದಲ್ಲಿ ತೊಡಗಿಸಿಕೊಂಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.















