MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Relationship
  • ಕಿಸ್ ಮಾಡಿ ವಿವಾದಕ್ಕೀಡಾಗಿದ್ದ ಗಾಯಕನಿಗೆ ಮತ್ತೆ ಸಂಕಷ್ಟ: ಕೋರ್ಟ್ ಮೆಟ್ಟಿಲೇರಿದ ಉದಿತ್ ನಾರಾಯಣ್ ಮೊದಲ ಪತ್ನಿ

ಕಿಸ್ ಮಾಡಿ ವಿವಾದಕ್ಕೀಡಾಗಿದ್ದ ಗಾಯಕನಿಗೆ ಮತ್ತೆ ಸಂಕಷ್ಟ: ಕೋರ್ಟ್ ಮೆಟ್ಟಿಲೇರಿದ ಉದಿತ್ ನಾರಾಯಣ್ ಮೊದಲ ಪತ್ನಿ

Udit Narayan first wife complaint: ಖ್ಯಾತ ಗಾಯಕ ಉದಿತ್ ನಾರಾಯಣ್ ಅವರ ಮೊದಲ ಪತ್ನಿ ರಂಜನಾ ತಮ್ಮ ಮಾಜಿ ಪತಿ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಹಲವು ಗಂಭೀರ ಆರೋಪಗಳನ್ನು ಮಾಡಿದ್ದಾರೆ.

3 Min read
Author : Anusha Kb
Published : Feb 11 2026, 09:30 PM IST
Share this Photo Gallery
  • FB
  • TW
  • Linkdin
  • Whatsapp
15
ಉದಿತ್ ನಾರಾಯಣ್ ವಿರುದ್ಧ ಠಾಣೆ ಮೆಟ್ಟಿಲೇರಿದ ಮೊದಲ ಪತ್ನಿ
Image Credit : our own

ಉದಿತ್ ನಾರಾಯಣ್ ವಿರುದ್ಧ ಠಾಣೆ ಮೆಟ್ಟಿಲೇರಿದ ಮೊದಲ ಪತ್ನಿ

ವೇದಿಕೆಯಲ್ಲಿ ಸಹ ಗಾಯಕಿಯರಿಗೆ, ಮಹಿಳಾ ಅಭಿಮಾನಿಗಳಿಗೆ ಚುಂಬಿಸಿ ವಿವಾದ ಸೃಷ್ಟಿಸಿದ್ದ ಖ್ಯಾತ ಹಿನ್ನೆಲೆ ಗಾಯಕ ಉದಿತ್ ನಾರಾಯಣ್ ಅವರು ಈಗ ಹೊಸ ವಿವಾದದಲ್ಲಿ ಸಿಲುಕಿದ್ದು, ಸ್ವತಃ ಅವರ ಮೊದಲ ಪತ್ನಿಯೇ ಅವರ ವಿರುದ್ಧ ಗಂಭೀರ ಆರೋಪ ಮಾಡಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಹೌದು ಗಾಯಕ ಉದಿತ್ ನಾರಾಯಣ್ ಅವರ ಮೊದಲ ಪತ್ನಿ ರಂಜನಾ ಬಿಹಾರದ ಸುಪೌಲ್‌ನಲ್ಲಿರುವ ಮಹಿಳಾ ಪೊಲೀಸ್ ಠಾಣೆಗೆ ಉದಿತ್ ನಾರಾಯಣ್ ವಿರುದ್ಧ ದೂರು ನೀಡಿದ್ದು, ಉದಿತ್ ನಾರಾಯಣ್, ಅವರ ಇಬ್ಬರು ಸಹೋದರರು ಮತ್ತು ಎರಡನೇ ಪತ್ನಿಯ ವಿರುದ್ಧವೂ ಗಂಭೀರ ಕ್ರಿಮಿನಲ್ ಅಪರಾಧಗಳ ಆರೋಪ ಹೊರಿಸಿದ್ದಾರೆ.

25
1984 ರಲ್ಲಿ ಉದಿತ್ ನಾರಾಯಣ್ ಜೊತೆ ಮದುವೆ
Image Credit : facebook

1984 ರಲ್ಲಿ ಉದಿತ್ ನಾರಾಯಣ್ ಜೊತೆ ಮದುವೆ

ರಂಜನಾ ಮಂಗಳವಾರ ತಮ್ಮ ವಕೀಲ ಕರುಣಾಕಾಂತ್ ಝಾ ಅವರೊಂದಿಗೆ ಪೊಲೀಸ್ ಠಾಣೆ ಮೆಟ್ಟಿಲೇರಿ ಔಪಚಾರಿಕ ದೂರು ದಾಖಲಿಸಿದರು. ತಮ್ಮ ದೂರಿನಲ್ಲಿ ರಂಜನಾ ಅವರು, ತಮ್ಮ ಪತಿ ಉದಿತ್ ನಾರಾಯಣ್ ತಮಗೆ ತಿಳಿಯದೆಯೇ ತಮ್ಮ ಗರ್ಭಕೋಶವನ್ನು ತೆಗೆದುಹಾಕುವ ಮೂಲಕ ಕ್ರಿಮಿನಲ್ ಪಿತೂರಿ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ. ವರ್ಷಗಳ ನಂತರ ವೈದ್ಯಕೀಯ ಚಿಕಿತ್ಸೆಯ ಸಮಯದಲ್ಲಿ ಈ ವಿಚಾರದ ಬಗ್ಗೆ ತಮಗೆ ಅರಿವಾಯಿತು ಎಂದು ಅವರು ಹೇಳಿಕೊಂಡಿದ್ದಾರೆ.

ತಾನು ಸುಪೌಲ್ ಜಿಲ್ಲೆಯ ಬಲುವಾ ಬಜಾರ್ ಪೊಲೀಸ್ ಠಾಣೆ ಪ್ರದೇಶದ ಸಂಸ್ಕೃತ ನಿರ್ಮಲಿ ವಾರ್ಡ್ ಸಂಖ್ಯೆ 11 ರ ನಿವಾಸಿ ಚಂದ್ರಕಾಂತ್ ಝಾ ಅವರ 61 ವರ್ಷದ ಮಗಳು ರಂಜನಾ ಝಾ ಎಂದು ಉದಿತ್ ಪತ್ನಿ ರಂಜನಾ ತಮ್ಮ ದೂರಿನಲ್ಲಿ ಹೇಳಿಕೊಂಡಿದ್ದಾರೆ. ಹಿಂದೂ ವಿವಾಹದ ಸಂಪ್ರದಾಯಗಳಂತೆ 1984 ರ ಡಿಸೆಂಬರ್ 7ರಂದು ಉದಿತ್ ನಾರಾಯಣ್ ಜೊತೆ ತಮ್ಮ ವಿವಾಹ ನಡೆದಿದ್ದಾಗಿ ಅವರು ಮಾಹಿತಿ ನೀಡಿದ್ದಾರೆ.

Related Articles

Related image1
ಇಮ್ರಾನ್ ಹಶ್ಮಿಯನ್ನೇ ಮೀರಿಸಿದ ಸೀರಿಯಲ್ ಕಿಸ್ಸರ್ ಉದಿತ್ ನಾರಾಯಣ್, ಮತ್ತೊಂದು ವಿಡಿಯೋ ವೈರಲ್!
Related image2
ಉದಿತ್ ನಾರಾಯಣ್ ಬಗ್ಗೆ ಫರ್ಹಾ ಖಾನ್ ಮಾಡಿದ ಹಾಸ್ಯ ಕೇಳಿ ಬಿದ್ದು ಬಿದ್ದು ನಕ್ಕ ಸಾನಿಯಾ
35
ಗರ್ಭಕೋಶವನ್ನು ಪತ್ನಿಗೆ ತಿಳಿಸದೇ ತೆಗೆಸಿದ ಆರೋಪ
Image Credit : google

ಗರ್ಭಕೋಶವನ್ನು ಪತ್ನಿಗೆ ತಿಳಿಸದೇ ತೆಗೆಸಿದ ಆರೋಪ

ರಂಜನಾ ಅವರ ಪ್ರಕಾರ, ಉದಿತ್ 1985 ರಲ್ಲಿ ಸಂಗೀತ ವೃತ್ತಿಜೀವನವನ್ನು ಮುಂದುವರಿಸಲು ಮುಂಬೈಗೆ ತೆರಳಿದರು. ಈ ಅವಧಿಯಲ್ಲಿ, ಅವರು ದೀಪಾ ನಾರಾಯಣ್ ಎಂಬ ಇನ್ನೊಬ್ಬ ಮಹಿಳೆಯನ್ನು ಮದುವೆಯಾಗಿದ್ದಾರೆಂದು ನಂತರ ಮಾಧ್ಯಮ ವರದಿಗಳ ಮೂಲಕ ತಮಗೆ ತಿಳಿದು ಬಂತು. ಆದರೂ ತಾನು ಈ ಬಗ್ಗೆ ಪ್ರಶ್ನಿಸಿದಾಗಲೆಲ್ಲಾ ಅವರು ನನ್ನನ್ನು ದಾರಿ ತಪ್ಪಿಸುತ್ತಿದ್ದರು ಎಂದು ರಂಜನಾ ಹೇಳಿಕೊಂಡಿದ್ದಾರೆ.

1996 ರಲ್ಲಿ, ವೈದ್ಯಕೀಯ ಚಿಕಿತ್ಸೆಯ ನೆಪದಲ್ಲಿ, ಉದಿತ್ ಮತ್ತು ಅವರ ಸಹೋದರರಾದ ಸಂಜಯ್ ಕುಮಾರ್ ಝಾ ಮತ್ತು ಲಲಿತ್ ನಾರಾಯಣ್ ಝಾ ಅವರು ದೆಹಲಿಯ ಪ್ರಮುಖ ಆಸ್ಪತ್ರೆಗೆ ಕರೆದೊಯ್ದರು. ಅಲ್ಲಿ ನನ್ನ ಒಪ್ಪಿಗೆ ಅಥವಾ ಅರಿವಿಲ್ಲದೆಯೇ ಅವರು ನನ್ನ ಗರ್ಭಕೋಶವನ್ನು ತೆಗೆದು ಹಾಕುವಂತೆ ಮಾಡಿದರು. ಆ ಸಮಯದಲ್ಲಿ ದೀಪಾ ನಾರಾಯಣ್ ಕೂಡ ಆಸ್ಪತ್ರೆಯಲ್ಲಿದ್ದರು ಎಂದು ರಂಜನಾ ಹೇಳಿದ್ದಾರೆ.

45
ಉದಿತ್ ಹಾಗೂ 2ನೇ ಪತ್ನಿ ದೀಪಾರಿಂದ ದೌರ್ಜನ್ಯ
Image Credit : our own

ಉದಿತ್ ಹಾಗೂ 2ನೇ ಪತ್ನಿ ದೀಪಾರಿಂದ ದೌರ್ಜನ್ಯ

2006 ರಲ್ಲಿ ಮುಂಬೈಗೆ ಭೇಟಿ ನೀಡಿದ್ದಾಗ ಉದಿತ್ ಮತ್ತು ದೀಪಾ ತನ್ನ ಮೇಲೆ ದೌರ್ಜನ್ಯ ಎಸಗಿದ್ದರು ಮತ್ತು ಅವರ ಮನೆಗೆ ಪ್ರವೇಶಿಸಲು ಅವಕಾಶ ನೀಡಲಿಲ್ಲ ಎಂದು ರಂಜನಾ ಹೇಳಿದ್ದಾರೆ. ನಂತರ ನೇಪಾಳದಲ್ಲಿರುವ ತನ್ನ ಅತ್ತೆಯ ಮನೆಗೆ ಹೋದಾಗ, ಅಲ್ಲಿ ನನಗೆ ಅವಮಾನಿಸಿ ಓಡಿಸಿದರು. ಅಂದಿನಿಂದ, ತಾನು ತನ್ನ ಪೋಷಕರ ಮನೆಯಲ್ಲಿ ವಾಸಿಸುತ್ತಿರುವುದಾಗಿ ರಂಜನಾ ಝಾ ಹೇಳಿದ್ದಾರೆ.

ತಾನು ಈ ಹಿಂದೆ ಸುಪೌಲ್‌ನಲ್ಲಿರುವ ಕುಟುಂಬ ನ್ಯಾಯಾಲಯ ಮತ್ತು ಮಹಿಳಾ ಆಯೋಗವನ್ನು ಸಂಪರ್ಕಿಸಿದ್ದೆ, ಅಲ್ಲಿ ಉದಿತ್ ತನ್ನನ್ನು ತನ್ನ ಹೆಂಡತಿಯಾಗಿ ಒಪ್ಪಿಕೊಂಡು ರಾಜಿ ಒಪ್ಪಂದವನ್ನು ಸಲ್ಲಿಸಿದ್ದರು. ಆದರೆ, ನಂತರ ಅವರು ತಮ್ಮ ಬದ್ಧತೆಗಳನ್ನು ಪೂರೈಸಲು ವಿಫಲರಾಗಿದ್ದಾರೆ ಮತ್ತು ತನಗೆ ಗೌರವ ಅಥವಾ ಬೆಂಬಲವನ್ನು ನೀಡಲಿಲ್ಲ ಎಂದು ಅವರು ಆರೋಪಿಸಿದ್ದಾರೆ. ನಂತರದಲ್ಲಿ ಅನಾರೋಗ್ಯ ಮತ್ತು ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದ್ದ ರಂಜನಾ ಅವರಿಗೆ ನಂತರ ವೈದ್ಯಕೀಯ ಚಿಕಿತ್ಸೆಗೆಂದು ಹೋದ ಸಮಯದಲ್ಲಿ ತನ್ನ ಗರ್ಭಕೋಶವನ್ನೇ ತೆಗೆದು ಹಾಕಿರುವುದು ತಿಳಿದು ಬಂತು, ಇದರಿಂದಾಗಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಹೊಸ ದೂರು ದಾಖಲಿಸಲಾಯಿತು ಎಂದು ಅವರು ಹೇಳಿದರು.

ಇದನ್ನೂ ಓದಿ: ನಟನೆಯ ಜೊತೆಗೆ MBBS ಕೋರ್ಸ್ ಮುಗಿಸಿ ವೈದ್ಯೆಯಾದ ಶ್ರೀಲೀಲಾ: ನೆಟ್ಟಿಗರು ಅನುಮಾನ ವ್ಯಕ್ತಪಡಿಸಿದ್ದೇಕೆ?

55
ಮತ್ತೊಮ್ಮೆ ಠಾಣೆ ಮೆಟ್ಟಿಲೇರಿದ ರಂಜನಾ ಝಾ
Image Credit : our own

ಮತ್ತೊಮ್ಮೆ ಠಾಣೆ ಮೆಟ್ಟಿಲೇರಿದ ರಂಜನಾ ಝಾ

ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ರಂಜನಾ, ಹೀಗಾಗಿ ಮತ್ತೊಮ್ಮೆ ನ್ಯಾಯಾಲಯವನ್ನು ಸಂಪರ್ಕಿಸಲು ನಿರ್ಧರಿಸಿದ್ದಾಗಿ ಹೇಳಿದ್ದಾರೆ. ಉದಿತ್ ನಾರಾಯಣ್ ಜಿ ಪದೇ ಪದೇ ಭರವಸೆಗಳನ್ನು ನೀಡುತ್ತಾರೆ ಆದರೆ ಅವುಗಳನ್ನು ಈಡೇರಿಸುವುದಿಲ್ಲ ಎಂದು ನಿಮಗೆಲ್ಲರಿಗೂ ತಿಳಿದಿದೆ. ಅವರು ಇಲ್ಲಿಯವರೆಗೆ ಏನನ್ನೂ ಮಾಡಿಲ್ಲ, ಅದಕ್ಕಾಗಿಯೇ ನಾನು ಮಹಿಳಾ ಪೊಲೀಸ್ ಠಾಣೆಗೆ ಬಂದಿದ್ದೇನೆ. ನನಗೆ ನ್ಯಾಯ ಸಿಗಬೇಕು ಎಂದು ಅವರು ಹೇಳಿದ್ದಾರೆ.

ನಾವು ಮಹಿಳಾ ಆಯೋಗಕ್ಕೆ ಹೋದಾಗ, ಅವರು ಆರಂಭದಲ್ಲಿ ನಮ್ಮ ದೂರನ್ನು ಸ್ವೀಕರಿಸಲು ನಿರಾಕರಿಸಿದರು. ನಾವು ಲಿಖಿತ ಅರ್ಜಿಯನ್ನು ಸಲ್ಲಿಸಿದ ನಂತರ, ಅದನ್ನು ಸ್ವೀಕರಿಸಲಾಯಿತು. ಆದರೆ ಇಂದಿಗೂ ಅವರು ನನ್ನನ್ನು ಮೋಸ ಮಾಡುತ್ತಲೇ ಇದ್ದಾರೆ. ಅವರು ಹಳ್ಳಿಗೆ ಬಂದಾಗಲೆಲ್ಲಾ ಮತ್ತೆ ಅದೇ ಭರವಸೆಗಳನ್ನು ನೀಡುತ್ತಾರೆ ಎಂದು ಅವರು ಹೇಳಿದರು. ಇತ್ತೀಚಿನ ದಿನಗಳಲ್ಲಿ, ನಾನು ನಿರಂತರವಾಗಿ ಅಸ್ವಸ್ಥನಾಗಿದ್ದೇನೆ ಮತ್ತು ಅವರ ಬೆಂಬಲದ ಅಗತ್ಯವಿದೆ. ಆದರೆ ಉದಿತ್ ನಾರಾಯಣ್ ಏನನ್ನೂ ಹೇಳುತ್ತಿಲ್ಲ ಅಥವಾ ಏನನ್ನೂ ಮಾಡುತ್ತಿಲ್ಲ. ಅವರು ಇತ್ತೀಚೆಗೆ ಹಳ್ಳಿಗೆ ಬಂದು ಮತ್ತೊಮ್ಮೆ ಭರವಸೆ ನೀಡಿ ಹೊರಟುಹೋದರು ಎಂದು ಅವರು ರಂಜನಾ ಹೇಳಿದ್ದಾರೆ.

ಈ ಬಗ್ಗೆ ಮಹಿಳಾ ಪೊಲೀಸ್ ಠಾಣೆಯ ಉಸ್ತುವಾರಿ ಅಧಿಕಾರಿ ಅಂಜು ತಿವಾರಿ ಪ್ರತಿಕ್ರಿಯಿಸಿದ್ದು, ದೂರಿನಲ್ಲಿ ಉಲ್ಲೇಖಿಸಲಾದ ಘಟನೆಗಳು ಸುಮಾರು ಮೂರು ದಶಕಗಳ ಹಿಂದಿನವು. ಈ ವಿಷಯ ತನಿಖೆ ಹಂತದಲ್ಲಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಗಂಡನ ಮೇಲೆ ಅನೈತಿಕ ಸಂಬಂಧದ ಆರೋಪ ಮಾಡಿದ ಕೆಲ ದಿನಗಳಲ್ಲೇ ಮರು ಮದ್ವೆಯಾದ್ರಾ ಬಿಗ್‌ಬಾಸ್ ಒಟಿಟಿ ಸ್ಪರ್ಧಿ

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

AK
Anusha Kb
Anusha KB ಸುದ್ದಿಲೋಕದಲ್ಲಿ 13 ವರ್ಷಗಳ ಅನುಭವ, ರಾಜಕೀಯ, ಸಿನಿಮಾ, ದೇಶ, ವಿದೇಶ ಸುದ್ದಿಗಳಲ್ಲಿ ಆಸಕ್ತಿ. ಸುವರ್ಣ ಡಿಜಿಟಲ್‌ನಲ್ಲೀಗ ಸೀನಿಯರ್ ಸಬ್ ಎಡಿಟರ್.
ಬಾಲಿವುಡ್
ಸಂಗೀತ
ಸಂಬಂಧಗಳು

Latest Videos
Recommended Stories
Recommended image1
ಅಣ್ಣನ ಎದುರೇ ಶ್ರೀದೇವಿ ಬಗ್ಗೆ ಅಷ್ಟೆಲ್ಲಾ ಹೇಳಿದ್ರು ಅನಿಲ್ ಕಪೂರ್; ಪ್ರತಿಬಾರಿ ಸಿಕ್ಕಾಗ ಅತ್ತಿಗೆ ಕಾಲಿಗೆ ನಮಸ್ಕಾರ ಮಾಡಿದ್ದು ಏಕೆ?
Recommended image2
70 ವರ್ಷದ ಗೂಗಲ್‌ ಮಾಜಿ ಸಿಇಒಗೆ 27 ವರ್ಷದ ಮಾಡೆಲ್‌ ಪ್ರೇಯಸಿ!
Recommended image3
‘ಆ’​ ವಿಡಿಯೋ ಇಟ್ಕೊಂಡು ಭಟ್ಟನಿಗೆ ಸುಚಿತ್ರಾ ‘ಹನಿ’ಟ್ರ್ಯಾಪ್? ಮುಸ್ಲಿಂ ಮಹಿಳೆ ಜೊತೆಯೂ ಕಮಲಾಕರ ಮದುವೆ!
Related Stories
Recommended image1
ಇಮ್ರಾನ್ ಹಶ್ಮಿಯನ್ನೇ ಮೀರಿಸಿದ ಸೀರಿಯಲ್ ಕಿಸ್ಸರ್ ಉದಿತ್ ನಾರಾಯಣ್, ಮತ್ತೊಂದು ವಿಡಿಯೋ ವೈರಲ್!
Recommended image2
ಉದಿತ್ ನಾರಾಯಣ್ ಬಗ್ಗೆ ಫರ್ಹಾ ಖಾನ್ ಮಾಡಿದ ಹಾಸ್ಯ ಕೇಳಿ ಬಿದ್ದು ಬಿದ್ದು ನಕ್ಕ ಸಾನಿಯಾ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved