MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • MBBS ಕೋರ್ಸ್ ಮುಗಿಸಿ ಅಧಿಕೃತವಾಗಿ ವೈದ್ಯೆಯಾದ ನಟಿ ಶ್ರೀಲೀಲಾ: ಕಿಸ್ ಬೆಡಗಿ ಬಗ್ಗೆ ನೆಟ್ಟಿಗರಿಗೇಕೆ ಅನುಮಾನ?

MBBS ಕೋರ್ಸ್ ಮುಗಿಸಿ ಅಧಿಕೃತವಾಗಿ ವೈದ್ಯೆಯಾದ ನಟಿ ಶ್ರೀಲೀಲಾ: ಕಿಸ್ ಬೆಡಗಿ ಬಗ್ಗೆ ನೆಟ್ಟಿಗರಿಗೇಕೆ ಅನುಮಾನ?

ದಕ್ಷಿಣ ಭಾರತದ ಖ್ಯಾತ ನಟಿ ಶ್ರೀಲೀಲಾ ತಮ್ಮ ನಟನಾ ವೃತ್ತಿಯ ಜೊತೆಗೆ ವೈದ್ಯಕೀಯ ಪದವಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ ಡಾಕ್ಟರ್ ಆಗಿದ್ದಾರೆ. ಘಟಿಕೋತ್ಸವದ ವೀಡಿಯೋ ವೈರಲ್ ಆಗಿದ್ದು, ಕೆಲವರು ಅಭಿನಂದನೆ ಸಲ್ಲಿಸಿದ್ದರೆ ಮತ್ತೆ ಕೆಲವರು ಅನುಮಾನವ್ಯಕ್ತಪಡಿಸಿದ್ದಾರೆ.

2 Min read
Author : Anusha Kb
| Updated : Feb 11 2026, 08:10 PM IST
Share this Photo Gallery
  • FB
  • TW
  • Linkdin
  • Whatsapp
16
ಅಧಿಕೃತವಾಗಿ ವೈದ್ಯೆ ಆದ ಶ್ರೀಲೀಲಾ
Image Credit : social Media

ಅಧಿಕೃತವಾಗಿ ವೈದ್ಯೆ ಆದ ಶ್ರೀಲೀಲಾ

ದಕ್ಷಿಣ ಭಾರತದ ಸುಂದರ ನಟಿ ಶ್ರೀಲೀಲಾ. ಕೇವಲ ನಟನೆ ಮಾತ್ರವಲ್ಲದೇ ಓದಿನಲ್ಲೂ ಪ್ರತಿಭಾನ್ವಿತೆಯಾಗಿರುವ ಶ್ರೀಲೀಲಾ ತಮ್ಮ ಸಿನಿಮಾದ ಜೊತೆ ಜೊತೆಗೆ ಈಗ ವೈದ್ಯಕೀಯ ಪದವಿ ಪೂರ್ಣಗೊಳಿಸಿ ಡಾಕ್ಟರ್ ಆಗಿದ್ದಾರೆ. ಹೌದು ಅಲ್ಲು ಅರ್ಜುನ್ ಅಭಿನಯದ ಆಕ್ಷನ್ ಡ್ರಾಮಾ ಪುಷ್ಪ 2 ನಲ್ಲಿ ಕಿಸ್ಸಿಕ್' ಐಟಂ ಹಾಡಿಗೆ ಡಾನ್ಸ್ ಮಾಡಿ ಎಲ್ಲರ ಹೃದಯ ಗೆದ್ದಿರುವ ಶ್ರೀಲೀಲಾ ಈಗ ಡಾಕ್ಟರ್ ಆಗಿದ್ದಾರೆ. ಹಾಗಂತ ಇವರೇನು ಇತರ ನಟ ನಟಿಯರಂತೆ ಗೌರವ ಡಾಕ್ಟರೇಟ್ ಪಡೆದು ಡಾಕ್ಟರ್ ಆಗಿದ್ದಲ್ಲ, ನಟನೆಯ ಜೊತೆ ಜೊತೆಗೆ ಸ್ವತ: ಓದಿ ಡಾಕ್ಟರ್ ಎನಿಸಿಕೊಂಡಿದ್ದಾರೆ ಶ್ರೀಲೀಲಾ..

26
ಎಂಬಿಬಿಎಸ್ ಪದವಿ ಪಡೆಯುತ್ತಿರುವ ವೀಡಿಯೋ ವೈರಲ್
Image Credit : social Media

ಎಂಬಿಬಿಎಸ್ ಪದವಿ ಪಡೆಯುತ್ತಿರುವ ವೀಡಿಯೋ ವೈರಲ್

ಶ್ರೀಲೀಲಾ ಅವರು ಘಟಿಕೋತ್ಸವದಲ್ಲಿ ವೈದ್ಯಕೀಯ ಪದವಿ ಪಡೆಯುತ್ತಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ವೈರಲ್ ಆಗಿದೆ. ಎಂಬಿಬಿಎಸ್ ಪದವಿಯನ್ನು ಪೂರ್ಣಗೊಳಿಸಿದ ಶ್ರೀಲೀಲಾ ಅವರ ಸಂತೋಷವು ಈ ವೀಡಿಯೊದಲ್ಲಿ ಸ್ಪಷ್ಟವಾಗಿ ಕಾಣುತ್ತಿದೆ. ಅಭಿಮಾನಿಗಳು ಅವರು ಅಧ್ಯಯನ ಪೂರ್ಣಗೊಳಿಸಿ ವೈದ್ಯರಾಗಿದ್ದಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.

Related Articles

Related image1
Now Playing
ವೈರಲ್ ಆದ ಶ್ರೀಲೀಲಾ ಬಾತ್ರೂಮ್ ಫೋಟೋ! ಎಐ, ಡೀಪ್ ಫೇಕ್ ಕಾಟಕ್ಕೆ ಬೇಸತ್ತ ಕಿಸ್ಸಿಕ್ ಬೆಡಗಿ!
Related image2
'ಕೈಮುಗಿದು ಬೇಡಿಕೊಳ್ತೇನೆ ಹೀಗೆಲ್ಲಾ ಮಾಡ್ಬೇಡಿ..' ನಟಿ ಶ್ರೀಲೀಲಾ ಮನವಿ ಮಾಡಿದ್ದು ಯಾರಿಗೆ?
36
2020ರಲ್ಲಿ ಕೋರ್ಸ್ ಆರಂಭಿಸಿದ ಶ್ರೀಲೀಲಾ
Image Credit : social Media

2020ರಲ್ಲಿ ಕೋರ್ಸ್ ಆರಂಭಿಸಿದ ಶ್ರೀಲೀಲಾ

ಈ ವೀಡಿಯೊದಲ್ಲಿ ಘಟಿಕೋತ್ಸವದ ಕೆಂಪು ಬಣ್ಣದ ವೇಷಭೂಷಣವನ್ನು ಧರಿಸಿ ಶ್ರೀಲಾ ಕೆಂಪು ಪದವಿ ಪಡೆಯುವುದನ್ನು ನೋಡಬಹುದು. ನಟಿ ಕೈಯಲ್ಲಿ ಪದವಿಯ ಜೊತೆ ಮುಖದಲ್ಲಿ ಅರಳಿದ ನಗುವನ್ನು ಕಾಣಬಹುದು. 2020 ರಲ್ಲಿ ತಮ್ಮ ವೈದ್ಯಕೀಯ ಅಧ್ಯಯನವನ್ನು ಪ್ರಾರಂಭಿಸಿದ ಶ್ರೀಲೀಲಾ ಈಗ ವೈದ್ಯರಾಗಿದ್ದಾರೆ. ನಟನೆಯ ಜೊತೆ ಜೊತೆಗೆ ಕಷ್ಟಕರವೆನಿಸಿದ ವೈದ್ಯಕೀಯ ಕೋರ್ಸ್‌ನ್ನು ಅವರು ಸುಗಮವಾಗಿ ಪೂರ್ಣಗೊಳಿಸಿರುವುದಕ್ಕೆ ಅನೇಕರು ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

46
ನೆಟ್ಟಿಗರು ಅನುಮಾನ ವ್ಯಕ್ತಪಡಿಸಿದ್ದು ಏಕೆ?
Image Credit : social Media

ನೆಟ್ಟಿಗರು ಅನುಮಾನ ವ್ಯಕ್ತಪಡಿಸಿದ್ದು ಏಕೆ?

ಆದರೆ ಎಂಬಿಬಿಎಸ್ ಒಂದು ಆಕಸ್ಮಿಕ ಪದವಿಯಲ್ಲ. ಇದು ಭಾರತದಲ್ಲಿ ಅತ್ಯಂತ ನಿಯಂತ್ರಿತ ವೃತ್ತಿಪರ ಕೋರ್ಸ್‌ಗಳಲ್ಲಿ ಒಂದಾಗಿದೆ. ಆದ್ದರಿಂದ ಸ್ವಾಭಾವಿಕವಾಗಿಯೇ ಯಾರಾದರೂ ಹಲವಾರು ಚಲನಚಿತ್ರಗಳನ್ನು ಮಾಡುತ್ತಲೇ ವೈದ್ಯಕೀಯ ಶಿಕ್ಷಣವನ್ನು ಪೂರ್ಣಗೊಳಿಸುವುದು ನೋಡಿದರೆ ಅನುಮಾನವಾಗುತ್ತದೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ವೈದ್ಯಕೀಯ ಕೋರ್ಸ್‌ನಲ್ಲಿ 75% ಥಿಯರಿ ಹಾಜರಾತಿ ಮತ್ತು 80% ಪ್ರಾಯೋಗಿಕ ಹಾಜರಾತಿ ಇದ್ದರೆ ಮಾತ್ರ ನೀವು ಪರೀಕ್ಷೆಗೆ ಅರ್ಹರು, ಹಾಗಾದರೆ ಹೇಗೆ? ಅವಳು ಅರ್ಹತಾ ಮಾನದಂಡಗಳನ್ನುಪಡೆದಳು. ಆದ್ದರಿಂದ ಇದು ಸ್ಪಷ್ಟವಾಗಿ ಅನುಮಾನಾಸ್ಪದವಾಗಿದೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ: ಗಂಡನ ಮೇಲೆ ಅನೈತಿಕ ಸಂಬಂಧದ ಆರೋಪ ಮಾಡಿದ ಕೆಲ ದಿನಗಳಲ್ಲೇ ಮರು ಮದ್ವೆಯಾದ್ರಾ ಬಿಗ್‌ಬಾಸ್ ಒಟಿಟಿ ಸ್ಪರ್ಧಿ

56
ಭಾರತೀಯ ಮೂಲದ ಅಮೆರಿಕನ್ ಪ್ರಜೆ ನಟಿ ಶ್ರೀಲೀಲಾ
Image Credit : social Media

ಭಾರತೀಯ ಮೂಲದ ಅಮೆರಿಕನ್ ಪ್ರಜೆ ನಟಿ ಶ್ರೀಲೀಲಾ

ಅವರು ನಟನೆಯನ್ನು ಮುಂದುವರಿಸುವುದರ ಜೊತೆಗೆ ತಮ್ಮ ವೈದ್ಯಕೀಯ ಅಧ್ಯಯನವನ್ನು ಮುಂದುವರಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ನನಗೆ ನಂಬಲು ಸಾಧ್ಯವಾಗ್ತಿಲ್ಲ ಎಂದು ಒಬ್ಬರು ಕಾಮೆಂಟ್ ಮಾಡಿದ್ದರೆ ಇನ್ನೊಬ್ಬರು ಅಭಿನಂದನೆಗಳು, ಕಿಸ್ಸಿಕ್ ಗರ್ಲ್ ಎಂದು ಶುಭ ಹಾರೈಸಿದ್ದಾರೆ. ನಟನೆಯ ಜೊತೆ ಜೊತೆಗೆ ಈಗ ವೈದ್ಯೆ ಎಂಬ ಹೆಗ್ಗಳಿಕೆ ಗಳಿಸಿರುವ ಶ್ರೀಲಾ ಅವರು ಚಲನಚಿತ್ರಗಳಲ್ಲಿ ಕೆಲಸ ಮಾಡುವುದನ್ನು ಮುಂದುವರಿಸುತ್ತಾರೆಯೇ? ಎಂಬ ಪ್ರಶ್ನೆ ಅಭಿಮಾನಿಗಳ ಮುಂದಿದೆ. ಶ್ರೀಲೀಲಾ ವೈಯಕ್ತಿಕ ವಿಚಾರಕ್ಕೆ ಬರುವುದಾದರೆ ಅವರು ಭಾರತೀಯರಾಗಿದ್ದರು ಅಮೆರಿಕನ್ ಪ್ರಜೆ. ಜೂನ್ 14, 2001 ರಂದು ಅಮೆರಿಕದಲ್ಲಿ ಜನಿಸಿದ ಶ್ರೀಲಾ 2019 ರ ಕನ್ನಡ ಚಿತ್ರ ಕಿಸ್ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು.

ಇದನ್ನೂ ಓದಿ: ಬಿಹಾರದಲ್ಲಿ ಪೊಲೀಸ್ ಪರೀಕ್ಷೆಗೆ ಸಿದ್ಧಗೊಳ್ಳುತ್ತಿದ್ದ ಯುವಕನ ಅಪಹರಿಸಿ ಮದುವೆ 

66
ಬಾಲಿವುಡ್‌ಗೆ ಪಾದಾರ್ಪಣೆ ಮಾಡಲು ಸಿದ್ಧರಾಗಿರುವ ಶ್ರೀಲೀಲಾ
Image Credit : social Media

ಬಾಲಿವುಡ್‌ಗೆ ಪಾದಾರ್ಪಣೆ ಮಾಡಲು ಸಿದ್ಧರಾಗಿರುವ ಶ್ರೀಲೀಲಾ

ಆದರೆ ಅವರಿಗೆ ಸಾಕಷ್ಟು ಜನಪ್ರಿಯತೆ ಸಿಕ್ಕ ಸಿನಿಮಾ ಟಾಲಿವುಡ್ ಸ್ಟಾರ್ ರವಿತೇಜ ಅಭಿನಯದ ಧಮಾಕಾ. ನಂತರ ಅವರು ಮಹೇಶ್ ಬಾಬು ಅವರ ಗುಂಟೂರು ಕರಮ್ ಚಿತ್ರದಲ್ಲಿ ಕಾಣಿಸಿಕೊಂಡರು. ಇದರ ನಂತರ, ಅವರು ಅಲ್ಲು ಅರ್ಜುನ್ ಅವರ ಪುಷ್ಪ 2 ಚಿತ್ರದಲ್ಲಿ ಐಟಂ ಹಾಡಿಗೆ ಹೆಜ್ಜೆ ಹಾಕಿದರು. ನಟಿ ಈಗ ಬಾಲಿವುಡ್‌ಗೆ ಪಾದಾರ್ಪಣೆ ಮಾಡಲು ಸಿದ್ಧರಾಗಿದ್ದಾರೆ. ಅವರು ಬಾಲಿವುಡ್‌ನ ನಟ ಕಾರ್ತಿಕ್ ಆರ್ಯನ್ ಅವರೊಂದಿಗೆ ಸಿನಿಮಾವೊಂದರಲ್ಲಿ ನಟಿಸಲಿದ್ದು, ಚಿತ್ರದ ಚಿತ್ರೀಕರಣ ಈಗಾಗಲೇ ಪೂರ್ಣಗೊಂಡಿದೆ. ಆದರೆ ಚಿತ್ರದ ಬಿಡುಗಡೆ ದಿನಾಂಕದ ಬಗ್ಗೆ ಯಾವುದೇ ಮಾಹಿತಿಯನ್ನು ಹಂಚಿಕೊಳ್ಳಲಾಗಿಲ್ಲ.

#SreeLeela has officially graduated, completing her medical degree ❤️

Acting + academics - win win! pic.twitter.com/sisosEPRTZ

— Siddarth Srinivas (@sidhuwrites) February 11, 2026

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

AK
Anusha Kb
Anusha KB ಸುದ್ದಿಲೋಕದಲ್ಲಿ 13 ವರ್ಷಗಳ ಅನುಭವ, ರಾಜಕೀಯ, ಸಿನಿಮಾ, ದೇಶ, ವಿದೇಶ ಸುದ್ದಿಗಳಲ್ಲಿ ಆಸಕ್ತಿ. ಸುವರ್ಣ ಡಿಜಿಟಲ್‌ನಲ್ಲೀಗ ಸೀನಿಯರ್ ಸಬ್ ಎಡಿಟರ್.
ಶ್ರೀಲೀಲಾ
ಟಾಲಿವುಡ್

Latest Videos
Recommended Stories
Recommended image1
ಪಿಕ್‌ಬಾಲ್ ಮೈದಾನದಲ್ಲಿ ಸಮಂತಾ ರೌದ್ರಾವತಾರ! ಪತಿ ರಾಜ್ ನಿಡಿಮೋರು ಜೊತೆ ನಟಿ ಮಾಡಿದ್ದೇನು?
Recommended image2
ಅರವಿಂದ್ ರೆಡ್ಡಿಗೆ ಬೆದರಿಕೆ ಪತ್ರ ಪ್ರಕರಣ, ಸ್ಯಾಂಡಲ್‌ವುಡ್ ನಟಿಯ ಗೆಳೆಯ ವೈಶಾಕ್ ಬಂಧನ ಕ್ರಮಕ್ಕೆ ಹೈಕೋರ್ಟ್ ಅಸಮಾಧಾನ
Recommended image3
ವೈವಾಹಿಕ ಜೀವನಕ್ಕೆ ಕಾಲಿಟ್ಟ ‘ಮುದ್ದು ಸೊಸೆ’ ಧಾರಾವಾಹಿಯ ಕ್ವಾಟ್ಲೆ ನಿಶಿತ್ ರಾಜ್ ಶೆಟ್ಟಿ
Related Stories
Recommended image1
Now Playing
ವೈರಲ್ ಆದ ಶ್ರೀಲೀಲಾ ಬಾತ್ರೂಮ್ ಫೋಟೋ! ಎಐ, ಡೀಪ್ ಫೇಕ್ ಕಾಟಕ್ಕೆ ಬೇಸತ್ತ ಕಿಸ್ಸಿಕ್ ಬೆಡಗಿ!
Recommended image2
'ಕೈಮುಗಿದು ಬೇಡಿಕೊಳ್ತೇನೆ ಹೀಗೆಲ್ಲಾ ಮಾಡ್ಬೇಡಿ..' ನಟಿ ಶ್ರೀಲೀಲಾ ಮನವಿ ಮಾಡಿದ್ದು ಯಾರಿಗೆ?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved