MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Relationship
  • ಏಕಕಾಲಕ್ಕೆ ಇಬ್ಬರೊಂದಿಗೆ ಡೇಟಿಂಗ್, ಒಂದೇ ಮಂಟಪದಲ್ಲಿ ಇಬ್ಬರ ಮದುವೆಯಾದ ಮಹಿಳೆ: ಸಿಕ್ತು 29 ಲಕ್ಷ ರೂ ವಧುದಕ್ಷಿಣೆ

ಏಕಕಾಲಕ್ಕೆ ಇಬ್ಬರೊಂದಿಗೆ ಡೇಟಿಂಗ್, ಒಂದೇ ಮಂಟಪದಲ್ಲಿ ಇಬ್ಬರ ಮದುವೆಯಾದ ಮಹಿಳೆ: ಸಿಕ್ತು 29 ಲಕ್ಷ ರೂ ವಧುದಕ್ಷಿಣೆ

ಥೈಲ್ಯಾಂಡ್‌ನ 37 ವರ್ಷದ ಮಹಿಳೆಯೊಬ್ಬರು ಒಂದೇ ಮಂಟಪದಲ್ಲಿ ಇಬ್ಬರು ಆಸ್ಟ್ರೇಲಿಯಾದ ಪುರುಷರನ್ನು ವಿವಾಹವಾಗಿದ್ದಾರೆ. ಹಲವು ವರ್ಷಗಳ ಸಂಬಂಧದ ನಂತರ, ಕುಟುಂಬದವರ ಒಪ್ಪಿಗೆಯೊಂದಿಗೆ ಸ್ಥಳೀಯ ಸಂಪ್ರದಾಯದಂತೆ ಈ ಮದುವೆ ನಡೆದಿದೆ. ಆದರೆ ಥಾಯ್ ಕಾನೂನಿನಡಿ ಇದಕ್ಕೆ ಮಾನ್ಯತೆ ಇಲ್ಲ.

2 Min read
Author : Anusha Kb
Published : Mar 03 2026, 05:17 PM IST
Share this Photo Gallery
  • FB
  • TW
  • Linkdin
  • Whatsapp
15
ಒಂದೇ ಮಂಟಪದಲ್ಲಿ ಇಬ್ಬರ ಮದುವೆಯಾದ ಮಹಿಳೆ
Image Credit : Faccebook

ಒಂದೇ ಮಂಟಪದಲ್ಲಿ ಇಬ್ಬರ ಮದುವೆಯಾದ ಮಹಿಳೆ

ಒಂದೇ ಮದುವೆ ಮಂಟಪದಲ್ಲಿ ಥೈಲ್ಯಾಂಡ್ ಮಹಿಳೆಯೊಬ್ಬಳು ಇಬ್ಬರು ಪುರುಷರನ್ನು ಮದುವೆಯಾದಂತಹ ಅಚ್ಚರಿಯ ಘಟನೆ ನಡೆದಿದೆ. ಥೈಲ್ಯಾಂಡ್‌ನ ಪ್ರಖೋನ್ ಚಾಯ್ ಜಿಲ್ಲೆಯಲ್ಲಿ ಈ ವಿಚಿತ್ರ ಘಟನೆ ನಡೆದಿದೆ. 37 ವರ್ಷದ ಥಾಯ್ ಮಹಿಳೆಯೊಬ್ಬರು ಆಸ್ಟ್ರೇಲಿಯಾ ಮೂಲದ ಇಬ್ಬರು ಪುರುಷರನ್ನು ಮದುವೆಯಾಗುವ ಮೂಲಕ ಸುದ್ದಿಯಾಗಿದ್ದಾರೆ. ಅಲ್ಲಿನ ಸ್ಥಳೀಯ ಮಾಧ್ಯಮಗಳ ವರದಿಯ ಪ್ರಕಾರ ಡುವಾಂಗ್ಡುವಾನ್ ಕೆಟ್ಸಾರೊ ಎಂಬು ಮಹಿಳೆ ತಮ್ಮ ಇಬ್ಬರು ಸ್ನೇಹಿತರು ಈ ಮದುವೆಗೆ ಒಪ್ಪಿಕೊಂಡ ನಂತರ ಇಬ್ಬರನ್ನು ಒಂದೇ ಮಂಟಪದಲ್ಲಿ ಮದುವೆಯಾಗಿದ್ದಾರೆ. ಮೂವರು ವರ್ಷಗಳಿಂದ ಪರಸ್ಪರ ಸಂಬಂಧದಲ್ಲಿದ್ದರು.

25
ಇಬ್ಬರ ಜೊತೆ ಡೇಟಿಂಗ್ ಮದುವೆ
Image Credit : Faccebook

ಇಬ್ಬರ ಜೊತೆ ಡೇಟಿಂಗ್ ಮದುವೆ

ಮಾಜಿ ಗಾಯಕಿ ಹಾಗೂ ಹಾಡುಗಳ ಬರಹಗಾರ್ತಿ ಆಗಿರುವ ಡುವಾಂಗ್ಡುವಾನ್ ಕೆಟ್ಸಾರೊ 5 ವರ್ಷಗಳ ಹಿಂದೆ ಮೊದಲಿಗೆ ಆಸ್ಟೇಲಿಯಾದ ನಿವೃತ್ತ ಪೊಲೀಸ್ ಅಧಿಕಾರಿ ರೋಮನ್ ಅವರನ್ನು ಥೈಲ್ಯಾಂಡ್‌ನ ಪತ್ತಾಯದಲ್ಲಿ ಮೊದಲಿಗೆ ಭೇಟಿ ಆದರು. ನಂತರ ಪ್ರಸ್ತುತ ಆಸ್ಟ್ರಿಯನ್ ಪೊಲೀಸ್ ಅಧಿಕಾರಿಯಾಗಿರುವ ತಮ್ಮ ಮೊದಲ ಗೆಳೆಯ ರೋಮನ್ ಸ್ನೇಹಿತನು ಆಗಿರುವ ಮ್ಯಾಕಿಯನ್ನು ಭೇಟಿ ಮಾಡಿದರು. ಐದು ವರ್ಷಗಳ ಕಾಲ ರೋಮನ್ ಮತ್ತು ಮ್ಯಾಕಿ ಇಬ್ಬರ ಜೊತೆಗೂ ಅವರು ಡೇಟಿಂಗ್ ಮಾಡುತ್ತಿದ್ದು, ಇಬ್ಬರೊಂದಿಗೂ ಸಂಬಂಧವನ್ನು ಬೆಳೆಸಿಕೊಂಡ ನಂತರ ತಮ್ಮ ಈ ಸಂಬಂಧವನ್ನು ಮೂವರಾಗಿ ಆಚರಿಸುವುದಕ್ಕೆ ಅವರು ನಿರ್ಧರಿಸಿದರು.

35
ಇದು ಮೊದಲ ಮದುವೆ ಅಲ್ಲ, ಮಕ್ಕಳು ಮೊಮ್ಮಕ್ಕಳನ್ನು ಹೊಂದಿರುವ ಮಹಿಳೆ
Image Credit : Faccebook

ಇದು ಮೊದಲ ಮದುವೆ ಅಲ್ಲ, ಮಕ್ಕಳು ಮೊಮ್ಮಕ್ಕಳನ್ನು ಹೊಂದಿರುವ ಮಹಿಳೆ

ಇನ್ನೊಂದು ಕುತೂಹಲಕಾರಿ ವಿಚಾರ ಎಂದರೆ ಡುವಾಂಗ್ಡುವಾನ್‌ಗೆ ಇದು ಮೊದಲ ಮದುವೆ ಅಲ್ಲ, ಮೊದಲ ಮದುವೆಯಲ್ಲಿ ಅವರು ಮೂವರು ಮಕ್ಕಳು ಮತ್ತು ಇಬ್ಬರು ಮೊಮ್ಮಕ್ಕಳನ್ನು ಹೊಂದಿದ್ದಾರೆ. ವರ್ಷಗಳ ಕಾಲ, ಅವರು ತಮ್ಮ ಪೋಷಕರ ಆರೈಕೆ ಮಾಡುವುದಕ್ಕೆ ಹಾಗೂ ತಮ್ಮ ಮಕ್ಕಳಿಬ್ಬರನ್ನು ನೋಡಿಕೊಳ್ಳುವುದಕ್ಕೆ ನಿರಂತರವಾಗಿ ಶ್ರಮಿಸಿದರು. ಈ ಹೊಸ ಸಂಬಂಧವನ್ನು ಬೆಳೆಸುವುದಕ್ಕೆ ಮೊದಲು ಡುವಾಂಗ್ಡುವಾನ್ ತನ್ನ ಮಕ್ಕಳು ಹಾಗೂ ಪೋಷಕರ ಜೊತೆಗೆ ಬಹಳ ಆತ್ಮೀಯವಾದ ಸಂಬಂಧವನ್ನು ಹೊಂದಿದ್ದರು. ಈ ಸಂಬಂಧವನ್ನು ತನ್ನ ಮನೆಯವರು ಒಪ್ಪಿಕೊಳ್ಳಬಹುದು ಎಂಬ ಧೈರ್ಯ ಅವರಿಗೆ ಇರಲಿಲ್ಲ, ಆದರೆ ಅಚ್ಚರಿ ಎಂಬಂತೆ ಆಕೆಯ ಕುಟುಂಬದವರು ಈ ಸಂಬಂಧಕ್ಕೆ ಓಕೆ ಎಂದಿದ್ದಾರಂತೆ ಇವರ ಇಬ್ಬರು ಪತಿಯರು ಅವರ ಕುಟುಂಬಕ್ಕೆ ನಿರಂತರವಾಗಿ ನೆರವಾಗಿದ್ದನ್ನು ನೋಡಿ ಅವರು ಈ ಮದುವೆಗೆ ಒಪ್ಪಿಗೆ ಸೂಚಿಸಿದ್ದಾರೆ.

45
ಮದುವೆಗಾಗಿ 29 ಲಕ್ಷ ರೂ ವಧು ದಕ್ಷಿಣೆ ನೀಡಿದ
Image Credit : Faccebook

ಮದುವೆಗಾಗಿ 29 ಲಕ್ಷ ರೂ ವಧು ದಕ್ಷಿಣೆ ನೀಡಿದ

ಫೆಬ್ರವರಿ 28 ರಂದು, ಈ ಮೂವರು ಥೈಲ್ಯಾಂಡ್‌ನ ಪ್ರಖೋನ್ ಚಾಯ್ ಜಿಲ್ಲೆಯಲ್ಲಿ ಪರಸ್ಪರ ಮದುವೆಯಾಗಿದ್ದು, ಬಹುಪತಿತ್ವದ ಈ ಮದುವೆಯಲ್ಲಿ ಆಪ್ತ ಸ್ನೇಹಿತರು ಮತ್ತು ಕುಟುಂಬ ಸದಸ್ಯರು ಭಾಗವಹಿಸಿದ್ದರು.

ಸ್ಥಳೀಯ ಥಾಯ್ ಸಂಪ್ರದಾಯದಂತೆ ಈ ಮದುವೆ ನಡೆದಿದೆ. ಸ್ಥಳೀಯವಾಗಿ ಪೂಜಿಸುವ ಬಾಯಿ ಶ್ರೀ ಸು ಕ್ವಾನ್ ಆಶೀರ್ವಾದ ಮತ್ತು ಮಣಿಕಟ್ಟು ಕಟ್ಟುವ ಆಚರಣೆಯನ್ನು ಈ ಸಮಾರಂಭ ಒಳಗೊಂಡಿತ್ತು ಈ ಕ್ಷಣವನ್ನು ಇಬ್ಬರು ವರರು ಒಟ್ಟಿಗೆ ಕೊಳಕ್ಕೆ ಹಾರುವ ಮೂಲಕ ಆಚರಿಸಿದರು. ಈ ಮದುವೆಗೆ ವರದಕ್ಷಿಣೆಯಾಗಿ ಇವರ ಇಬ್ಬರು ಪತಿಯರು 1 ಮಿಲಿಯನ್ ಬಹ್ತ್ ವಧುದಕ್ಷಿಣೆ ಅಂದರೆ ಸುಮಾರು 29 ಲಕ್ಷ ರೂ.ಗಳನ್ನು ನೀಡಿದರು.

ಇದನ್ನೂ ಓದಿ: ಭದ್ರಾವತಿ ಕೇತ್ರ ಶಿಕ್ಷಣಾಧಿಕಾರಿಯ ಲಂಚವತಾರ: ನ್ಯಾಯಯುತವಾಗಿ ಬರಬೇಕಿದ್ದ ವೇತನ ಮಂಜೂರು ಮಾಡುವುದಕ್ಕೂ ಲಂಚ

55
ಬಹಳ ಕಷ್ಟಪಟ್ಟಿದ್ದಾಳೆ ಅವಳುಈಗಲಾದರು ಖುಷಿಯಾಗಿರಲಿ ಎಂದ ತಾಯಿ
Image Credit : Faccebook

ಬಹಳ ಕಷ್ಟಪಟ್ಟಿದ್ದಾಳೆ ಅವಳುಈಗಲಾದರು ಖುಷಿಯಾಗಿರಲಿ ಎಂದ ತಾಯಿ

ಈ ಬಗ್ಗೆ ಸಂತಸ ವ್ಯಕ್ತಪಡಿಸಿದ ಆಕೆಯ ತಾಯಿ ತನ್ನ ಮಗಳು ಹಲವು ವರ್ಷಗಳಿಂದ ಕಷ್ಟಪಡುತ್ತಿದ್ದಿದ್ದನ್ನು ನೋಡಿದ್ದೇನೆ ಈಗಲಾದರು ಆಕೆ ಖುಷಿಯಾಗಿರಲಿ. ಇಬ್ಬರು ಆಕೆಯನ್ನು ಚೆನ್ನಾಗಿ ನೋಡಿಕೊಳ್ಳಲಿ. ನನ್ನ ಮಗಳು ವರ್ಷಗಳಿಂದ ಕಷ್ಟಪಡುವುದನ್ನು ನಾನು ನೋಡಿದ್ದೇನೆ. ಅವಳ ಸಂತೋಷ ನನಗೆ ಅತ್ಯಂತ ಮುಖ್ಯವಾಗಿದೆ ಎಂದು ಅವರು ಹೇಳಿದರು. ಒಬ್ಬರನ್ನು ಮದುವೆಯಾದರೆ ಯಾರು ನೆನಪಿಸಿಕೊಳ್ಳುವುದಿಲ್ಲ, ಆದರೆ ಇಬ್ಬರನ್ನು ಮದುವೆಯಾದರೆ ಎಲ್ಲರೂ ನೆನಪಿಸಿಕೊಳ್ಳುತ್ತಾರೆ ಎಂದುತಮ್ಮ ಮದುವೆ ಬಗ್ಗೆ ವಧು ತಮಾಷೆಯಾಗಿ ಪ್ರತಿಕ್ರಿಯಿಸಿದ್ದಾರೆ.

ಸ್ಥಳೀಯ ಸಮುದಾಯದಲ್ಲಿ ಈ ಸಮಾರಂಭವನ್ನು ಸಾಮಾಜಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಆಚರಿಲಾಗಿದ್ದರೂ ಬಹುಪತಿತ್ವವನ್ನು ಥಾಯ್ ನಾಗರಿಕ ಕಾನೂನಿನಡಿಯಲ್ಲಿ ಕಾನೂನುಬದ್ಧವಾಗಿ ಗುರುತಿಸಲಾಗಿಲ್ಲ. ಒಂದು ಮದುವೆಯನ್ನು ಮಾತ್ರ ದೇಶದಲ್ಲಿ ಅಧಿಕೃತವಾಗಿ ನೋಂದಾಯಿಸಬಹುದಾಗಿದೆ.

ಇದನ್ನೂ ಓದಿ:  ಖಮೇನಿ ಸಾವಿನ ಬಗ್ಗೆ ಮೌನ: ಕೇಂದ್ರ ಸರ್ಕಾರದ ನಡೆ ವಿರುದ್ಧ ಸೋನಿಯಾ ಗಾಂಧಿ ಆಕ್ರೋಶ

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

AK
Anusha Kb
Anusha KB ಸುದ್ದಿಲೋಕದಲ್ಲಿ 13 ವರ್ಷಗಳ ಅನುಭವ, ರಾಜಕೀಯ, ಸಿನಿಮಾ, ದೇಶ, ವಿದೇಶ ಸುದ್ದಿಗಳಲ್ಲಿ ಆಸಕ್ತಿ. ಸುವರ್ಣ ಡಿಜಿಟಲ್‌ನಲ್ಲೀಗ ಸೀನಿಯರ್ ಸಬ್ ಎಡಿಟರ್.
ಥೈಲ್ಯಾಂಡ್
ಸಂಬಂಧಗಳು
ಮಹಿಳೆಯರು

Latest Videos
Recommended Stories
Recommended image1
Thalapathy Vijay ಎಂದೆಂದೂ ನನ್ನವನೇ ಎಂದಾಕೆ ನಟಿ ತ್ರಿಷಾ ಅಲ್ವೇ ಅಲ್ಲಾ! ಏನಿದು ವೈರಲ್​ ಪೋಸ್ಟ್​ ಗಲಾಟೆ?
Recommended image2
ಟ್ರಾನ್ಸ್‌ಜೆಂಡರ್ ಮದುವೆಯಾಗಿ 'ಒಂದು ದಿನವೂ ದೈಹಿಕ ಸಂಬಂಧ ಬೆಳೆಸಲಿಲ್ಲ'; ಡಿವೋರ್ಸ್ ಕಾರಣ ಬಿಚ್ಚಿಟ್ಟ ಪತ್ರಕರ್ತೆ!
Recommended image3
ಮಗನಿಗೆ ನಾನೇ ಅಪ್ಪನೂ ಆಗ್ತೇನೆಂದು ಆಗ ಹೇಳಿಬಿಟ್ಟೆ, ಆದ್ರೆ ಆಗಿದ್ದೇ ಬೇರೆ: Meghana Raj ನೋವಿನ ನುಡಿ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved