ಬಾಲಿವುಡ್ ನಿರ್ದೇಶಕಿ ಫರ್ಹಾ ಖಾನ್ ಅವರ ಹಾಸ್ಯ ಪ್ರಜ್ಞೆಗೆ ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ ಮನಸೋತಿದ್ದಾರೆ. ಫರ್ಹಾ ಖಾನ್, ಉದಿತ್ ನಾರಾಯಣ್ ಅವರ ಕಿಸ್ಸಿಂಗ್ ವಿವಾದವನ್ನು ಹಾಸ್ಯದ ಮೂಲಕ ಟ್ರೋಲ್ ಮಾಡಿದ್ದು, ಸಾನಿಯಾ ಮಿರ್ಜಾ ನಗೆಗಡಲಲ್ಲಿ ತೇಲುವಂತೆ ಮಾಡಿದೆ.
ಬಾಲಿವುಡ್‌ನ ನಿರ್ದೇಶಕಿ ಪರ್ಹಾ ಖಾನ್ ತಮ್ಮ ತಿಳಿ ಹಾಸ್ಯಗಳಿಂದಲೇ ಸದಾ ತಮ್ಮ ಜೊತೆಗಿರುವವರನ್ನು ನಗಿಸುತ್ತಿರುತ್ತಾರೆ. ಸ್ವಲ್ಪವೂ ನಗದೇ ಗಂಭೀರವಾಗಿ ಮಾಡುವ ಅವರ ಹಾಸ್ಯಗಳು ಜೊತೆಯಲ್ಲಿದ್ದವರನ್ನು ಬಿದ್ದು ಬಿದ್ದು ನಗುವಂತೆ ಮಾಡುತ್ತದೆ. ಸಾಮಾಜಿಕ ಜಾಲತಾಣಗಳಲ್ಲಿ ಅವರ ಪೋಸ್ಟ್‌ಗಳು ಕೂಡ ಕೆಲವೊಮ್ಮೆ ನೋಡುಗರನ್ನು ನಗೆಗಡಲಲ್ಲಿ ತೇಲುವಂತೆ ಮಾಡುತ್ತದೆ. ಪ್ರಚಲಿತ ವಿದ್ಯಮಾನಗಳನ್ನು ಅಷ್ಟೇ ನಾಜೂಕಾಗಿ ಹಾಸ್ಯದಲ್ಲಿ ಸೇರಿಸುವ ಅವರ ಹಾಸ್ಯ ಅನೇಕರಿಗೆ ಇಷ್ಟವಾಗುತ್ತದೆ. ಹೀಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮದೇ ಆದ ಫ್ಯಾನ್‌ಬೇಸನ್ನು ಫರ್ಹಾ ಖಾನ್ ಹೊಂದಿದ್ದಾರೆ. ಇತ್ತೀಚೆಗೆ ಭಾರತದ ಟೆನ್ನಿಸ್ ತಾರೆ ಸಾನಿಯಾ ಮಿರ್ಜಾಗೂ ಫರ್ಹಾ ಖಾನ್ ಹಾಸ್ಯದ ರಸದೌತಣದ ಅನುಭವ ಸಿಕ್ಕಿದೆ. ಫರ್ಹಾ ಮಾತು ಕೇಳಿ ಮೂಗುತಿ ಸುಂದರಿ ಬಿದ್ದು ಬಿದ್ದು ನಕ್ಕಿದ್ದಾರೆ.
ಹಾಗಿದ್ದಾರೆ ಫರ್ಹಾ ಮಾಡಿದ ಹಾಸ್ಯ ಏನು?
ಫರ್ಹಾ ಅವರು ಇತ್ತೀಚೆಗೆ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಅಡುಗೆ ಮಾಡುವ ವ್ಲಾಗೊಂದನ್ನು ಪೋಸ್ಟ್ ಮಾಡಿದ್ದಾರೆ. ಅದರಲ್ಲಿ ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ ಕೂಡ ಇದ್ದಾರೆ. ಇದೊಂದು ಪ್ರಮೋಷನ್ ಆಗಿದ್ದು, ಫರ್ಹಾ ಈ ವೀಡಿಯೋದಲ್ಲಿ ವೀಬಾ ಬ್ರಾಂಡ್‌ನ ಸಾಸ್‌ನ್ನು ಪ್ರಮೋಟ್ ಮಾಡಿದ್ದಾರೆ. ಪ್ರಮೋಷನಲ್ ವಿಡಿಯೋ ಆಗಿದ್ದರೂ ಕೂಡ ಸಾನಿಯಾ ಹಾಗೂ ಫರ್ಹಾ ನಡುವಿನ ಮಾತುಕತೆಗಳು ಹಾಸ್ಯದಿಂದ ಕೂಡಿದೆ. ಆ ವೀಡಿಯೋದ ತುಣುಕೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಉದಿತ್ ನಾರಾಯಣ್ ಸಂಗೀತ ಲೋಕದ ದಿಗ್ಗಜ್ಜ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಅವರು ಕೆಲ ದಿನಗಳ ಹಿಂದೆ ಸಂಗೀತಕ್ಕಿಂತಲೂ ಬೇರೆಯದೇ ಕಾರಣಕ್ಕೆ ಸಾಕಷ್ಟು ಸದ್ದು ಮಾಡಿದರು. ಸಂಗೀತ ರಸಮಂಜರಿಯೊಂದರಲ್ಲಿ ಸೆಲ್ಫಿ ಕೇಳಲು ಬಂದ ಮಹಿಳಾ ಅಭಿಮಾನಿಯೊಬ್ಬರ ತುಟಿಗೆ ಕಿಸ್ ಮಾಡಿದ್ದು, ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಅವರ ಈ ಕಿಸ್ಸಿಂಗ್ ವೀಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿ ನೆಟ್ಟಿಗರು ಭಾರಿ ಟೀಕೆ ವ್ಯಕ್ತಪಡಿಸಿದ್ದರು. ಇದರೊಂದಿಗೆ ಉದಿತ್ ನಾರಾಯಣ್ ಅವರು ಇತರ ತಾರೆಯರಾದ ಅಲ್ಕಾ ಯಾಗ್ನಿಕ್, ಶ್ರೇಯಾ ಘೋಷಾಲ್ ಅವರಿಗೂ ಮುತ್ತಿಕ್ಕಿದ ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುವ ಮೂಲಕ ವಿವಾದಕ್ಕೆ ತುಪ್ಪ ಸುರಿದಿದ್ದವು. ಹೀಗಿರುವಾಗ ಫರ್ಹಾ ಖಾನ್ ಸಾನಿಯಾ ಜೊತೆಗೆ ಹಾಸ್ಯ ಮಾಡುತ್ತಲೇ ಹೀಗೆ ಸಿಕ್ಕ ಸಿಕ್ಕವರಿಗೆಲ್ಲಾ ಮುತ್ತಿಕ್ಕುವ ಉದಿತ್‌ಗೆ ಟಾಂಗ್ ನೀಡಿದ್ದಾರೆ.
ಹಾಸ್ಯದಿಂದಲೇ ಉದಿತ್ ನಾರಾಯಣ್ ಟ್ರೋಲ್ ಮಾಡಿದ ಫರ್ಹಾ
ಕಾರ್ಯಕ್ರಮದ ಕಾರಣಕ್ಕೆ ಮನೆಗೆ ಬಂದ ಸಾನಿಯಾ ಮಿರ್ಜಾ ಎದುರು ಫರ್ಹಾ ಖಾನ್ ಅವರು ತಮ್ಮ ಪುಟ್ಟ ಮಗನ ಬಳಿ ಒಂದು ಮುತ್ತು ಕೊಟ್ಟು ತಬ್ಬಿಕೊಳ್ಳುವಂತೆ ಕೇಳಿದ್ದಾರೆ ಆದರೆ ನಾಚಿಕೆಯಿಂದ ಕೂಡಿದ ಈ ಬಾಲಕ ಕಿವಿಗಳೆರಡನ್ನು ಮುಚ್ಚಿಕೊಂಡು ಅಮ್ಮನ ಮಾತು ಕೇಳದೆ ತಿರಸ್ಕರಿಸಿದ್ದಾನೆ. ಈ ವೇಳೆ ಸಾನಿಯಾ ಕೂಡ ಗಿವ್ ಆ ಹಗ್ ಎಂದು ಕೇಳಿದ್ದಾರೆ. ಆದರೆ ಬಾಲಕ ಇನ್ನು ನಾಚಿಕೊಂಡಿದ್ದಾನೆ. ಈ ವೇಳೆ ಫರ್ಹಾ ಆ ಕಾಮನ್ ಗಿವ್ ಅ ಉದಿತ್ ಜೀ ಎಂದು ಹೇಳಿದ್ದಾರೆ. ಇದನ್ನು ಕೇಳಿ ಸಾನಿಯಾ ಬಿದ್ದು ಬಿದ್ದು ನಕ್ಕಿದ್ದಾರೆ, ಇತ್ತ ಫರ್ಹಾ ಖಾನ್ ಎಂದಿನಂತೆ ತಮಾಷೆಯಿಂದ ಕೂಡಿದ ಶಾಕಿಂಗ್ ರಿಯಾಕ್ಷನ್ ನೀಡಿದ್ದರೆ, ಅತ್ತ ಬಾಲಕ ಫರ್ಹಾ ಕೈಯಲ್ಲಿದ್ದ ಪುಟ್ಬಾಲ್ ಕಿತ್ತುಕೊಂಡು ಅಲ್ಲಿಂದ ಎಸ್ಕೇಪ್ ಆಗಿದ್ದಾನೆ.
ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅನೇಕರು ಈ ವೀಡಿಯೋ ನೋಡಿ ಹಲವು ಕಾಮೆಂಟ್ ಮಾಡಿದ್ದಾರೆ. ನ್ಯೂ ಸ್ಟ್ಯಾಂಡ್ ಅಪ್ ಕಾಮಿಡಿಯನ್ ಎಂದು ಫರ್ಹಾಗೆ ಒಬ್ಬರು ಕಾಮೆಂಟ್ ಮಾಡಿದ್ದಾರೆ. ಈಗ ಕಿಸ್‌ಗೆ ಉದಿತ್ ಜಿ ಎಂಬ ಹೊಸ ಹೆಸರು ಬಂದಿದೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು ಫರ್ಹಾ ಮಗನನ್ನು ಕೊಂಡಾಡಿದ್ದಾರೆ. ಒಟ್ಟಿನಲ್ಲಿ ಫರ್ಹಾ ಅವರ ಇನ್ಸ್ಟಾಂಟ್ ಕಾಮಿಡಿ ಅನೇಕರನ್ನು ನಕ್ಕು ನಗಿಸಿದೆ.
