ವಿರಾಟ್ ಅನುಷ್ಕಾ, ರಣ್ಬೀರ್ ಕಪೂರ್ ಅಲಿಯಾ ದಾಖಲೆ ಬ್ರೇಕ್ ಮಾಡಿದ ವಿಜಯ್ ದೇವರಕೊಂಡ ರಶ್ಮಿಕಾ
ನಟರಾದ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಉದಯಪುರದಲ್ಲಿ ಖಾಸಗಿಯಾಗಿ ವಿವಾಹವಾಗಿದ್ದಾರೆ. ತಮ್ಮ ಮದುವೆಯ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು ಅವರ ಮದುವೆ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ದಾಖಲೆ ಬ್ರೇಕ್ ಮಾಡಿವೆ.

ರಶ್ಮಿಕಾ ವಿಜಯ್ ಮದುವೆ ಫೋಟೋಗಳಿಗೆ ಭಾರಿ ಲೈಕ್ಸ್
ಸ್ನೇಹಿತರಾಗಿ ಪ್ರೇಮಿಗಳಾಗಿದ್ದ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಈಗ ಗಂಡ ಮತ್ತು ಹೆಂಡತಿಯಾಗಿದ್ದಾರೆ. 2026 ರ ಫೆಬ್ರವರಿ 26ರಂದು ಗೀತ ಗೋವಿಂದಂ ನ ವಿಜಯ್ ಮತ್ತು ಗೀತಾ ಉದಯಪುರದ ಸುಂದರ ಕಣಿವೆಗಳ ನಡುವೆ ಸಾಂಪ್ರದಾಯಿಕ ಆಚರಣೆಗಳೊಂದಿಗೆ ತಮ್ಮ ಸಂಬಂಧವನ್ನು ಹೊಸದಾಗಿ ಪ್ರಾರಂಭಿಸಿದ್ದಾರೆ.
ಫೋಟೋಗಳಿಗಾಗಿ ಕಾಯ್ತಿದ್ದ ಫ್ಯಾನ್ಸ್
ಅನೇಕ ಸ್ಟಾರ್ ಜೋಡಿಗಳಂತೆ, ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಕೂಡ ತಮ್ಮ ಮದುವೆಯನ್ನು ಖಾಸಗಿಯಾಗಿ ಇಟ್ಟುಕೊಂಡಿದ್ದರು. ಅಭಿಮಾನಿಗಳು ಅವರ ಮದುವೆಯ ಬಗ್ಗೆ ಉತ್ಸುಕರಾಗಿದ್ದರು ಮತ್ತು ಫೋಟೋಗಳಿಗಾಗಿ ಕಾತರದಿಂದ ಕಾಯುತ್ತಿದ್ದರು.
ಇದನ್ನೂ ಓದಿ: ದೆಹಲಿ ಅಬಕಾರಿ ಹಗರಣದಲ್ಲಿ ಕೇಜ್ರಿವಾಲ್‌ಗೆ ಬಿಗ್ ರಿಲೀಫ್: ಎಲ್ಲಾ ಆರೋಪಿಗಳ ಖುಲಾಸೆ: ಸಿಬಿಐಗೆ ಶಾಕ್
ಏಕಕಾಲದಲ್ಲಿ ಮದುವೆ ಫೋಟೋ ಪೋಸ್ಟ್ ಮಾಡಿದ್ದ ಜೋಡಿ
ಕೊನೆಗೂ, ಫೆಬ್ರವರಿ 26 ರ ಸಂಜೆ, ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ತಮ್ಮ ಮದುವೆಯ ನಂತರ ಸೋಶಿಯಲ್ ಮೀಡಿಯಾಗಳಲ್ಲಿ ಏಕಕಾಲಕ್ಕೆ ತಮ್ಮ ಮೊದಲ ಪೋಸ್ಟ್ ಅನ್ನು ಮಾಡಿದರು. ಅದರಲ್ಲಿ ತಮ್ಮ ಸುಂದರವಾದ ಮದುವೆಯ ಚಿತ್ರಗಳನ್ನು ಇಬ್ಬರೂ ಹಂಚಿಕೊಳ್ಳುವ ಮೂಲಕ ಅಂತರ್ಜಾಲದಲ್ಲಿ ಅಭಿಮಾನಿಗಳನ್ನು ಹುಚ್ಚರನ್ನಾಗಿ ಮಾಡಿದರು.
ಇದನ್ನೂ ಓದಿ: ಆಸ್ಪತ್ರೆಯಿಂದ ಮನುಷ್ಯನ ಕಾಲನ್ನು ಹೊತ್ತೊಯ್ದ ಬೀದಿ ನಾಯಿ: ವೀಡಿಯೋ ವೈರಲ್ ಆಗ್ತಿದಂಗೆ ತನಿಖೆಗೆ ಆದೇಶ
ಹಲವರ ದಾಖಲೆ ಧೂಳೀಪಟ ಮಾಡಿದ ವಿರೋಶ್ ಜೋಡಿ
ರಶ್ಮಿಕಾ ಮತ್ತು ವಿಜಯ್ ಅವರ ಮದುವೆಯ ಫೋಟೋಗಳು ಅಪ್‌ಲೋಡ್ ಮಾಡಿದ ಕೆಲವೇ ನಿಮಿಷಗಳಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದವು. ಕಡಿಮೆ ಸಮಯದಲ್ಲಿ ಲಕ್ಷಾಂತರ ಲೈಕ್‌ಗಳು ಮತ್ತು ಕಾಮೆಂಟ್‌ಗಳು ಬಂದವು. 24 ಗಂಟೆಗಳಲ್ಲಿ, ನವವಿವಾಹಿತ ವಿರೋಶ್ ಜೋಡಿ, ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಅವರಂತಹ ಸ್ಟಾರ್ ಜೋಡಿಗಳನ್ನು ಹಿಂದಿಕ್ಕಿದರು.
ಇದನ್ನೂ ಓದಿ: ಕೇರಳ ಸಚಿವೆ ವೀಣಾ ಜಾರ್ಜ್ ಮೇಲೆ ಹಲ್ಲೆ ಪ್ರಕರಣ: ವಿದ್ಯಾರ್ಥಿ ನಾಯಕ ಬಿಥುಲ್ ನಿವಾಸದ ಮೇಲೆ ಸ್ಫೋಟಕ ಎಸೆದ ದುಷ್ಕರ್ಮಿಗಳು
ಗಂಡನ ಮೀರಿಸಿದ ಹೆಂಡ್ತಿ
ವಿಜಯ್ ದೇವರಕೊಂಡ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ ಮದುವೆಯ ಫೋಟೋಗಳು 24 ಗಂಟೆಗಳಲ್ಲಿ 15 ಮಿಲಿಯನ್ ಲೈಕ್‌ಗಳನ್ನು ಪಡೆದಿರೆ ಪತ್ನಿ ರಶ್ಮಿಕಾ ಮಂದಣ್ಣ ಅವರ ಇನ್‌ಸ್ಟಾಗ್ರಾಮ್ ಫೋಟೋಗಳು ಗಂಡನನ್ನು ಮೀರಿ 18.2 ಮಿಲಿಯನ್ ಲೈಕ್‌ಗಳನ್ನು ಗಿಟ್ಟಿಸಿದವು. ಈ ಮೂಲಕ ದಕ್ಷಿಣ ಭಾರತದ ಈ ಜೋಡಿ ವಿರಾಟ್- ಅನುಷ್ಕಾ , ರಣಬೀರ್ ಕಪೂರ್-ಆಲಿಯಾ ಭಟ್ ಮತ್ತು ಕಿಯಾರಾ ಅಡ್ವಾಣಿ-ಸಿದ್ಧಾರ್ಥ್ ಮಲ್ಹೋತ್ರಾ ಅವರ ದಾಖಲೆಗಳನ್ನು ಮುರಿದರು.
ಇದನ್ನೂ ಓದಿ: ತನ್ನ ತಾಯಿಯ ಸಾವು ಜೀವನದ ಅತ್ಯಂತ ನೋವಿನ ಕ್ಷಣ : ಮೋಹನ್‌ಲಾಲ್ ಜೊತೆ ಮನಸ್ಸು ಬಿಚ್ಚಿ ಮಾತನಾಡಿದ ಕೇರಳ ಸಿಎಂ
8 ವರ್ಷಗಳ ಹಿಂದೆ ವಿರಾಟ್ ಅನುಷ್ಕಾ ಬಗ್ಗೆ ಇದೇ ಕ್ರೇಜ್ ಇತ್ತು
8 ವರ್ಷಗಳ ಹಿಂದೆ, ಅನುಷ್ಕಾ-ವಿರಾಟ್ ಮದುವೆ ಬಗ್ಗೆ ಅಭಿಮಾನಿಗಳಿಗೆ ಈ ಕ್ರೇಜ್ ಇತ್ತು. ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ 2017 ರಲ್ಲಿ ಇಟಲಿಯಲ್ಲಿ ವಿವಾಹವಾದರು. ಅವರು ಮದುವೆಯ ಮೊದಲ ಫೋಟೋಗಳನ್ನು ಹಂಚಿಕೊಂಡಾಗ, ಅವು 3.4 ಮಿಲಿಯನ್ ಲೈಕ್‌ಗಳನ್ನು ಪಡೆದಿದ್ದವು.
ಇದನ್ನೂ ಓದಿ: ಸೊಂಟಕ್ಕೆ ಹಗ್ಗ ಕಟ್ಟಿ 40 ಅಡಿ ಆಳದ ಬಾವಿಗೆ ಇಳಿದು ಮೇಕೆ ಮರಿಯ ರಕ್ಷಿಸಿದ ಪುಟ್ಟ ಬಾಲಕ
ಟ್ರೆಂಡಿಗ್‌ನಲ್ಲಿರುವ ವಿರೋಶ್ ಜೋಡಿ
ಇದಾದ ನಂತರ 2022ರಲ್ಲಿ ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಸರಳವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಈ ವೇಳೆ ಆಲಿಯಾ ಅವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡ ಫೋಟೋಗಳು ಸುಮಾರು 12 ಮಿಲಿಯನ್ ಲೈಕ್‌ಗಳನ್ನು ಗಳಿಸಿದವು ಹಾಗೆಯೇ ಕಿಯಾರಾ ಅಡ್ವಾಣಿ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ಅವರ ಮದುವೆಯ ಫೋಟೋಗಳು 2023 ರಲ್ಲಿ ಸುಮಾರು 15 ಮಿಲಿಯನ್ ಲೈಕ್‌ಗಳನ್ನು ಪಡೆದಿವೆ. ಆದರೆ ವಿಜಯ್ ಮತ್ತು ರಶ್ಮಿಕಾ ಇವರೆಲ್ಲರನ್ನು ಮೀರಿಸಿದ್ದು, ಪ್ರಸ್ತುತ ಆನ್‌ಲೈನ್‌ನಲ್ಲಿ ಟ್ರೆಂಡಿಂಗ್‌ನಲ್ಲಿದ್ದಾರೆ.
ಇದನ್ನೂ ಓದಿ: ಸಿಎಂ ಪತಿಗೆ ಸವಾಲೆಸೆದ ಎಂಎಲ್‌ಎ ಪತ್ನಿ: ಅಪರೂಪದ ಘಟನೆಗೆ ಸಾಕ್ಷಿಯಾದ ಮೇಘಾಲಯ ವಿಧಾನಸಭೆ
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

