MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Relationship
  • ಪೊಲೀಸ್ ಆಗುವ ಕನಸು ಕಂಡವನಿಗೆ ತಾಳಿ ಭಾಗ್ಯ: ಯುವಕನ ಅಪಹರಿಸಿ ಮದುವೆ ಮಾಡಿದ ಹುಡುಗಿ ಕಡೆಯವರು

ಪೊಲೀಸ್ ಆಗುವ ಕನಸು ಕಂಡವನಿಗೆ ತಾಳಿ ಭಾಗ್ಯ: ಯುವಕನ ಅಪಹರಿಸಿ ಮದುವೆ ಮಾಡಿದ ಹುಡುಗಿ ಕಡೆಯವರು

ಬಿಹಾರದ ಸಮಷ್ಟಿಪುರದಲ್ಲಿ, ಪೊಲೀಸ್ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದ ಯುವಕನನ್ನು ಅಪಹರಿಸಿ, ಅಮಲು ಪದಾರ್ಥ ನೀಡಿ ಬಲವಂತವಾಗಿ ಮದುವೆ ಮಾಡಲಾಗಿದೆ. ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ವರನ ವಿಡಿಯೋ ವೈರಲ್ ಆಗಿ ಜನರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.

3 Min read
Author : Anusha Kb
| Updated : Feb 11 2026, 04:15 PM IST
Share this Photo Gallery
  • FB
  • TW
  • Linkdin
  • Whatsapp
17
ಯುವಕನ ಕಿಡ್ಯ್ಯಾಪ್ ಮಾಡಿ ಮದುವೆ
Image Credit : twitter video

ಯುವಕನ ಕಿಡ್ಯ್ಯಾಪ್ ಮಾಡಿ ಮದುವೆ

ಸಮಷ್ಟಿಪುರ: ಬಿಹಾರದ ಸಮಷ್ಟಿಪುರ ಜಿಲ್ಲೆಯಲ್ಲಿ ಮತ್ತೊಮ್ಮೆ ಬಲವಂತದ ಮದುವೆಯೊಂದು ನಡೆದಿದೆ. ಬಿಹಾರ ಪೊಲೀಸ್ ಇಲಾಖೆಗೆ ಸೇರಬೇಕು ಎಂಬ ಹಂಬಲದಿಂದ ಅದಕ್ಕಾಗಿ ಸಿದ್ಧಗೊಳ್ಳುತ್ತಿದ್ದ ಯುವಕನನ್ನು ಹುಡುಗಿ ಕಡೆಯವರು ಅಪಹರಿಸಿ ಆತನಿಗೆ ಮತ್ತು ಬರುವ ಔಷಧ ನೀಡಿ ಆತ ಹೂವಿನ ಹಾರ ಹಾಕುವುದಕ್ಕೂ ಸಾಧ್ಯವಾಗದ ಸ್ಥಿತಿಯಲ್ಲಿ ಇದ್ದಾಗಲೇ ಆತನಿಗೆ ಯುವತಿ ಜೊತೆ ಮದುವೆ ಮಾಡಲಾಗಿದೆ. ಘಟನೆಯ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.

27
ವಧುವಿನ ಕುಟುಂಬದಿಂದ ಕೃತ್ಯ
Image Credit : Asianet News

ವಧುವಿನ ಕುಟುಂಬದಿಂದ ಕೃತ್ಯ

ಪಕ್ದುವಾ ಮ್ಯಾರೇಜ್ ಅಥವಾ ಬಲವಂತದ ಮದುವೆ ಎಂದು ಕರೆಯಲ್ಪಡುವ ಈ ವಿಚಿತ್ರ ಆಚರಣೆ ಭಾರತದ ಬಿಹಾರ ಹಾಗೂ ಉತ್ತರ ಪ್ರದೇಶದ ಕೆಲ ಗ್ರಾಮೀಣ ಭಾಗಗಳಲ್ಲಿ ಚಾಲನೆಯಲ್ಲಿದ್ದು, ಅದರ ಪ್ರಕಾರ, ಸರ್ಕಾರಿ ಉದ್ಯೋಗಗಳಲ್ಲಿ ಉತ್ತಮ ಸ್ಥಿತಿಯಲ್ಲಿರುವವರು ಅಥವಾ ಉನ್ನತ ಶಿಕ್ಷಣ ಪಡೆದ ಅರ್ಹ ಸ್ನಾತಕೋತ್ತರ ವಿದ್ಯಾರ್ಥಿಗಳನ್ನು ವಧುವಿನ ಕುಟುಂಬದವರು ಅಪಹರಿಸಿ, ಬಂದೂಕಿನಿಂದ ಬೆದರಿಸಿ ಮದುವೆಯಾಗುವಂತೆ ಒತ್ತಾಯಿಸುತ್ತಾರೆ.

Related Articles

Related image1
ಬಲವಂತದ ಮದುವೆ, ಲಿವ್‌ಇನ್‌ಗೆ 7 ವರ್ಷ ಜೈಲು ಫಿಕ್ಸ್! ಸರ್ಕಾರದಿಂದ ಖಡಕ್ ತೀರ್ಮಾನ
Related image2
ಹಿಂದೂ ಯುವಕ ಬಲವಂತದ ಮತಾಂತರ; ಮುಸ್ಲಿಂ ಹುಡುಗಿ ಪ್ರೀತಿಸುವಾಗ ವಿಶಾಲ್ ಕುಮಾರ್ ಮದುವೆ ನಂತರ ವಿರಾಜ್ ಸಾಬ್!
37
ಪೊಲೀಸ್ ನೇಮಕಾತಿಗೆ ಸಿದ್ಧಗೊಳ್ಳುತ್ತಿದ್ದ ಯುವಕನ ಕಿಡ್ಯಾಪ್
Image Credit : twitter video

ಪೊಲೀಸ್ ನೇಮಕಾತಿಗೆ ಸಿದ್ಧಗೊಳ್ಳುತ್ತಿದ್ದ ಯುವಕನ ಕಿಡ್ಯಾಪ್

ಹಾಗೆಯೇ ಇಲ್ಲಿ ಬಿಹಾರ ಪೊಲೀಸ್ ನೇಮಕಾತಿ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ ಯುವಕ ನಿತೀಶ್ ಎಂಬಾತನನ್ನು ದುಷ್ಕರ್ಮಿಗಳು ಅಪಹರಿಸಿ ಆತನಿಗೆ ಅಮಲು ಥಳಿಸಿ ಅಮಲು ಪದಾರ್ಥ ನೀಡಿ ಮದುವೆ ಮಾಡಿದ್ದಾರೆ. ಮದುವೆಯ ಸಮಯದಲ್ಲಿ ಯುವಕ ನಿತೀಶ್ ಪ್ರಜ್ಞೆಕಳೆದುಕೊಂಡು ಹಾರವನ್ನು ಕೂಡ ಹಾಕಲು ಸಾಧ್ಯವಾಗದ ಸ್ಥಿತಿಯಲ್ಲಿ ಇರುವುದನ್ನು ಕಾಣಬಹುದು. ಆದರೆ ಇನ್ನೊಬ್ಬ ಯುವಕ ಬಲವಂತವಾಗಿ ನಿತೀಶ್ ಕೈಯನ್ನು ಹಿಡಿದು ಹುಡುಗಿಯ ಕತ್ತಿಗೆ ಹಾರ ಹಾಕಿಸಿದ್ದಾನೆ.

A case of 'Pakdaua Marriage' has came to light from Samastipur district in Bihar. Here, a young man preparing for the Bihar Police recruitment was allegedly abducted and forcibly married after being given a sedative substance
pic.twitter.com/O9pWBUBe6F

— Ghar Ke Kalesh (@gharkekalesh) February 11, 2026

47
ಬಿಹಾರದ ಸಮಷ್ಟಿಪುರದ ಪಟೋರಿ ಎಂಬಲ್ಲಿ ಘಟನೆ
Image Credit : twitter video

ಬಿಹಾರದ ಸಮಷ್ಟಿಪುರದ ಪಟೋರಿ ಎಂಬಲ್ಲಿ ಘಟನೆ

ಸಮಷ್ಟಿಪುರ ಜಿಲ್ಲೆಯ ಪಟೋರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಘಟನೆಯ ಬಳಿಕ ಈ ವಿಚಾರ ಸ್ಥಳೀಯವಾಗಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಪಟೋರಿ ಪೊಲೀಸ್ ಠಾಣೆ ವ್ಯಾಪ್ತಿಯ ಚಕ್ರಜ್ ಅಲಿ ಗ್ರಾಮದಲ್ಲಿ ಮದುವೆ ನಡೆದಿದ್ದು, ಚಕ್ರಜ್ ಅಲಿ ಗ್ರಾಮದ ನಿವಾಸಿ ಶಂಕರ್ ರೈ ಅವರ ಪುತ್ರಿ ಲಕ್ಷ್ಮಿ ಕುಮಾರಿಯ ಜೊತೆ ಶಿಯುರಾ ಪಂಚಾಯತ್‌ನ ಜೋಡಿ ಪೋಖರ್ ಗ್ರಾಮದ ನಿವಾಸಿ ಕಾಲೇಶ್ವರ ರೈ ಅವರ ಪುತ್ರ ನಿತೀಶ್ ಕುಮಾರ್ ಅವರನ್ನು ಬಲವಂತವಾಗಿ ಮದುವೆ ಮಾಡಲಾಗಿದೆ ವರನೇ ಈ ಮಾಹಿತಿಯನ್ನು ವೀಡಿಯೋ ಮೂಲಕ ತಿಳಿಸಿದ್ದಾನೆ.

ಇದನ್ನೂ ಓದಿ: 

12ನೇ ತರಗತಿ ಮಕ್ಕಳ ಉತ್ತರ ಪತ್ರಿಕೆ ಡಿಜಿಟಲಿ ಮೌಲ್ಯಮಾಪನ ಮಾಡಲಿದೆ ಸಿಬಿಎಸ್ಇ

57
ಗ್ರಂಥಾಲಯಕ್ಕೆ ಹೋಗುತ್ತಿದ್ದಾಗ ಕಿಡ್ಯಾಪ್
Image Credit : Asianet News

ಗ್ರಂಥಾಲಯಕ್ಕೆ ಹೋಗುತ್ತಿದ್ದಾಗ ಕಿಡ್ಯಾಪ್

ತನ್ನನ್ನು ಸಂತ್ರಸ್ತ ವರ ಎಂದು ಹೇಳಿಕೊಂಡ ನಿತೀಶ್‌ಕುಮಾರ್, ಫೆಬ್ರವರಿ 7 ರಂದು ಗ್ರಂಥಾಲಯಕ್ಕೆ ಹೋಗುತ್ತಿದ್ದಾಗ ಗ್ರಾಮದ ಕೆಲವು ಯುವಕರು ನನ್ನನ್ನು ಬಲವಂತವಾಗಿ ಎತ್ತಿಕೊಂಡು ಹೋದರು. ನಂತರ ನನಗೆ ಅಮಲು ಪದಾರ್ಥ ನೀಡಿ ಥಳಿಸಿ, ನಂತರ ಮೋರ್ವಾ ಬ್ಲಾಕ್‌ನಲ್ಲಿರುವ ಖುದೇಶ್ವರ ಸ್ಥಾನ ದೇವಸ್ಥಾನದಲ್ಲಿ ಬಲವಂತವಾಗಿ ಮದುವೆ ಮಾಡಿದರು. ಮದುವೆಯ ನಂತರ, ಯಾರನ್ನೂ ಸಂಪರ್ಕಿಸಲು ಸಾಧ್ಯವಾಗದಂತೆ ಮನೆಯಲ್ಲಿ ಬೀಗ ಹಾಕಿ ಬಂಧನದಲ್ಲಿ ಇರಿಸಿದ್ದರು ಎಂದು ನಿತೀಶ್‌ಕುಮಾರ್ ಆರೋಪಿಸಿದ್ದಾರೆ. ತನ್ನ ಇಚ್ಛೆಗೆ ವಿರುದ್ಧವಾಗಿ ಈ ಮದುವೆ ನಡೆದಿದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಕುರ್ಚಿ ಮೇಲೆ ಮಲಗಿ ಗಾಢ ನಿದ್ದೆಗೆ ಜಾರಿದ ನಾಯಿ: ವೀಡಿಯೋ ವೈರಲ್ ಆಗ್ತಿದ್ದಂತೆ ಆಕ್ರೋಶ

67
ನಿತೀಶ್‌ನನ್ನು ಕರೆತಂದ ಪೊಲೀಸರು
Image Credit : Asianet News

ನಿತೀಶ್‌ನನ್ನು ಕರೆತಂದ ಪೊಲೀಸರು

ಇತ್ತ ವಿಡಿಯೋ ವೈರಲ್ ಆಗುತ್ತಿದ್ದಂತೆ ಪೊಲೀಸರು ತಕ್ಷಣ ಕ್ರಮ ಕೈಗೊಂಡು ಯುವಕ ನಿತೀಶ್ ಕುಮಾರ್ ಅವರನ್ನು ಆತನನ್ನು ಅಡಗಿಸಿಟ್ಟಿದ ಅತ್ತೆ-ಮಾವನ ಮನೆಯಿಂದ ಪೊಲೀಸ್ ಠಾಣೆಗೆ ಕರೆತಂದು ವಿಚಾರಣೆ ಆರಂಭಿಸಿದ್ದಾರೆ. ಪ್ರಕರಣದ ಇಡೀ ವಿಚಾರದ ಬಗ್ಗೆ ಗಂಭೀರವಾಗಿ ತನಿಖೆ ಮಾಡಲಾಗುತ್ತಿದೆ. ಪಟ್ವಾರಿ ಪೊಲೀಸ್ ಠಾಣೆಯ ಉಸ್ತುವಾರಿ ಅನಿಲ್ ಕುಮಾರ್ ಪ್ರತಿಕ್ರಿಯಿಸಿ, ಮದುವೆ ಒಪ್ಪಿಗೆಯಿಂದಾಗಿದೆಯೇ ಅಥವಾ ಬಲವಂತದಿಂದಾಗಿದೆಯೇ ಎಂದು ನಿರ್ಧರಿಸಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿದ್ದಾರೆ. ವೈರಲ್ ವೀಡಿಯೊದಲ್ಲಿ ಮಾಡಲಾದ ಹೇಳಿಕೆಗಳ ಸತ್ಯಾಸತ್ಯತೆಯನ್ನು ಸಹ ತನಿಖೆ ಮಾಡಲಾಗುತ್ತಿದೆ. ತನಿಖೆ ಪೂರ್ಣಗೊಂಡ ನಂತರ, ಸತ್ಯಗಳ ಆಧಾರದ ಮೇಲೆ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ

ಇದನ್ನೂ ಓದಿ: ಶಾಲೆಯಲ್ಲಿ ಮಹಿಳೆಯ ಅಟ್ಟಹಾಸ: ಗುಂಡಿನ ದಾಳಿಗೆ 10 ಬಲಿ, 25ಕ್ಕೂ ಹೆಚ್ಚು ಜನರಿಗೆ ಗಾಯ

77
ಘಟನೆಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ರೋಶ
Image Credit : twitter video

ಘಟನೆಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ರೋಶ

ಇತ್ತ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರಿಂದಲೂ ಈ ಘಟನೆಯ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗ್ತಿದೆ.ಇದು ಸಂಪೂರ್ಣವಾಗಿ ಸ್ವೀಕಾರಾರ್ಹವಲ್ಲ. ಬಲವಂತವಾಗಿ ಯಾರನ್ನಾದರೂ ಅಪಹರಿಸಿ ಮದುವೆಯಾಗುವುದು ಸಂಪ್ರದಾಯವಲ್ಲ, ಅದು ಅಪರಾಧ. ಯಾರಿಗಾದರೂ ಆಮಲು ಪದಾರ್ಥ ನೀಡಿ ನೀಡಿ ಅವರನ್ನು ಮದುವೆಯಲ್ಲಿ ಸಿಲುಕಿಸುವುದು ಕ್ರಿಮಿನಲ್ ಕಿರುಕುಳ ಮತ್ತು ಮೂಲಭೂತ ನಾಗರಿಕ ಪ್ರಜ್ಞೆಯ ಸಂಪೂರ್ಣ ಕುಸಿತ ಎಂದು ಒಬ್ಬರು ಆಕ್ರೋಶ ಹೊರ ಹಾಕಿದ್ದಾರೆ.

ಇದನ್ನೂ ಓದಿ: ಗರ್ಲ್‌ಫ್ರೆಂಡ್ ಜೊತೆ ಶಾಪಿಂಗ್ ವೇಳೆ ಹೆಂಡ್ತಿಗೆ ಸಿಕ್ಕಿಬಿದ್ದ ಗಂಡ: ಇಬ್ಬರು ಕಿತ್ತಾಡುತ್ತಿದ್ದಂತೆ ಪತಿ ಪರಾರಿ

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

AK
Anusha Kb
Anusha KB ಸುದ್ದಿಲೋಕದಲ್ಲಿ 13 ವರ್ಷಗಳ ಅನುಭವ, ರಾಜಕೀಯ, ಸಿನಿಮಾ, ದೇಶ, ವಿದೇಶ ಸುದ್ದಿಗಳಲ್ಲಿ ಆಸಕ್ತಿ. ಸುವರ್ಣ ಡಿಜಿಟಲ್‌ನಲ್ಲೀಗ ಸೀನಿಯರ್ ಸಬ್ ಎಡಿಟರ್.
ಮದುವೆ
ಬಿಹಾರ

Latest Videos
Recommended Stories
Recommended image1
ಸಂಗಾತಿ ಸಂತೃಪ್ತಿಗೊಳಿಸಲು ಕುದುರೆಯಂಥ ಶಕ್ತಿ ಬೇಕಾ ಈ 5 ಗಿಡಮೂಲಿಕೆ ಬಳಸಿ ಸಾಕು
Recommended image2
ಸಲ್ಮಾನ್ ಖಾನ್ ಯಾವ ವರ್ಷದಲ್ಲಿ ಮದುವೆ ಆಗ್ತಾರೆ? ಈ ಸೀಕ್ರೆಟ್ 'ಯಾರಿಗೆ ಗೊತ್ತು' ಅನ್ನೋದು ಹೇಳಿದ ಕತ್ರಿನಾ ಕೈಫ್!
Recommended image3
ಬಂಧನ ಸಿನಿಮಾ ಮಾಡೋಕೆ ವಿಷ್ಣುವರ್ಧನ್‌ಗೆ ಇಷ್ಟವೇ ಇರಲಿಲ್ಲವಂತೆ; ಆದ್ರೆ ಆಮೇಲೆ ನಟಿಸಿದ್ದು ಹೇಗೆ?
Related Stories
Recommended image1
ಬಲವಂತದ ಮದುವೆ, ಲಿವ್‌ಇನ್‌ಗೆ 7 ವರ್ಷ ಜೈಲು ಫಿಕ್ಸ್! ಸರ್ಕಾರದಿಂದ ಖಡಕ್ ತೀರ್ಮಾನ
Recommended image2
ಹಿಂದೂ ಯುವಕ ಬಲವಂತದ ಮತಾಂತರ; ಮುಸ್ಲಿಂ ಹುಡುಗಿ ಪ್ರೀತಿಸುವಾಗ ವಿಶಾಲ್ ಕುಮಾರ್ ಮದುವೆ ನಂತರ ವಿರಾಜ್ ಸಾಬ್!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved