Kannada

ಏಕರೂಪ ನಾಗರಿಕ ಸಂಹಿತೆಗೆ ಉತ್ತರಖಂಡ ಸರ್ಕಾರ ತಿದ್ದುಪಡಿ

ಉತ್ತರಾಖಂಡದಲ್ಲಿ ಏಕರೂಪ ನಾಗರಿಕ ಸಂಹಿತೆಗೆ (ಯುಸಿಸಿ) ಸುಗ್ರೀವಾಜ್ಞೆ ಮೂಲಕ ತಿದ್ದುಪಡಿ ಮಾಡಲಾಗಿದ್ದು, ಕಾನೂನನ್ನು ಮತ್ತಷ್ಟು ಬಿಗಿಗೊಳಿಸಲಾಗಿದೆ.

Kannada

ಬಲವಂತದ ಮದುವೆಗೆ ಕಠಿಣ ಶಿಕ್ಷೆ ನಿರ್ಧಾರ

ಬಲವಂತದ ಮದುವೆ ಹಾಗೂ ಬಲವಂತದ ಲಿವ್ ಇನ್ ಸಂಬಂಧಕ್ಕೆ 7 ವರ್ಷ ಜೈಲು ಶಿಕ್ಷೆಗೆ ನಿರ್ಧರಿಸಲಾಗಿದೆ.

Image credits: social media
Kannada

ಬಲವಂತದ ಲಿವ್‌ ಇನ್‌ಗೆ 7 ವರ್ಷ ಶಿಕ್ಷೆ

ಮದುವೆ ಅಥವಾ ಸಹಜೀವನಕ್ಕೆ (ಲಿವ್-ಇನ್) ಸಂಗಾತಿಗೆ ಬಲವಂತ ಮಾಡುವ ವ್ಯಕ್ತಿಗೆ 7 ವರ್ಷ ತನಕ ಜೈಲು ಶಿಕ್ಷೆ ವಿಧಿಸಬಹುದು.

Image credits: social media
Kannada

ಕ್ರಿಮಿನಲ್ ಅಪರಾಧ ಎಂದು ಪರಿಗಣನೆ

ಇದರ ಜತೆಗೆ ಜತೆಗೆ ವಿಚ್ಛೇದನ ಪಡೆಯದೇ ಮದುವೆ, ಲಿವ್-ಇನ್ ಸಂಬಂಧಕ್ಕೆ ಒಳಪಟ್ಟರೆ ಅದನ್ನು ಕ್ರಿಮಿನಲ್ ಅಪರಾಧವೆಂದು ಪರಿಗಣಿಸಿ ಗರಿಷ್ಠ ಶಿಕ್ಷೆ ವಿಧಿಸುವ ನಿಯಮ ಜಾರಿ ಮಾಡಲಾಗಿದೆ.

Image credits: social media
Kannada

ಅಪ್ರಾಪ್ತರ ಜತೆ ಸಹಜೀವನ ನಡೆಸಿದರೂ ಶಿಕ್ಷೆ ಕಟ್ಟಿಟ್ಟ ಬುತ್ತಿ

ಅಪ್ರಾಪ್ತರ ಜತೆ ಸಹಜೀವನದ ಸಂಬಂಧದಲ್ಲಿ ಇದ್ದರೆ ಆ ವ್ಯಕ್ತಿಗೆ 6 ತಿಂಗಳು ಜೈಲು ಅಥವಾ 50,000 ರು. ಗಳವರೆಗೆ ದಂಡ ಅಥವಾ ಎರಡನ್ನೂ ವಿಧಿಸುವಂತೆ ತಿದ್ದುಪಡಿ ತರಲಾಗಿದೆ.

Image credits: social media
Kannada

ಸುಳ್ಳು ಹೇಳಿ ಮದುವೆಯಾದರೂ ಗರಿಷ್ಠ ಶಿಕ್ಷೆ

ಇದಲ್ಲದೇ ಮರು ಮದುವೆ, ಲಿವ್ ಇನ್ ಸಂಬಂಧದಲ್ಲಿ ಸುಳ್ಳು ಹೇಳಿದರೂ ಜೈಲು, ದಂಡ ವಿಧಿಸುವ ಕಾನೂನು ಸೇರಿದಂತೆ ಹಲವು ತಿದ್ದುಪಡಿಗಳನ್ನು ತರಲಾಗಿದೆ.

Image credits: INTAGRAM/snehaskmakeovers
Kannada

ಲಿವ್-ಇನ್ ಸಂಬಂಧ ರಿಜಿಸ್ಟ್ರೇಷನ್ ಮಾಡಲು ತಿದ್ದುಪಡಿ

ಈ ಮುಂಚೆ ಲಿವ್‌ ಇನ್‌ ಸಂಬಂಧವನ್ನು ನೋಂದಣಿ ಮಾಡಿಕೊಳ್ಳಲು ಯುಸಿಸಿ ಅಡಿ ನಿಯಮ ರೂಪಿಸಲಾಗಿತ್ತು.

Image credits: social media

ಜನವರಿ ತಿಂಗಳಲ್ಲೇ ವಿಚ್ಛೇದನ ಹೆಚ್ಚಾಗುವುದೇಕೆ? ಕಾರಣವೇನು?

ಸುಖ ಸಂಸಾರಕ್ಕೆ ಪತ್ನಿಯರಲ್ಲಿರಬೇಕಾದ 7 ಶ್ರೇಷ್ಠ ಗುಣಗಳು: ಪತಿಯ ಮನ ಗೆಲ್ಲುವ ಆ 4ನೇ ಸೂತ್ರ ಯಾವುದು?

ಈ ತಿಂಗಳಲ್ಲೇ ದಂಪತಿಗಳು ಹೆಚ್ಚು ವಿಚ್ಛೇದನ ಪಡೆಯೋದಂತೆ!

ಜಗತ್ತಿನಲ್ಲಿಯೇ ಅತಿಹೆಚ್ಚು 'ಅಕ್ರಮ ಸಂಬಂಧ' ವ್ಯಕ್ತಿಗಳು ಹೊಂದಿರುವ ದೇಶಗಳು..