MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Life
  • Relationship
  • ನಿಮ್ಮವರು ನವೆಂಬರ್ ನಲ್ಲಿ ಹುಟ್ಟಿರೋದಾ? ಹಾಗಿದ್ರೆ ಅವರ ಗುಣ ಹೇಗಿದೆ ತಿಳಿಯಿರಿ….

ನಿಮ್ಮವರು ನವೆಂಬರ್ ನಲ್ಲಿ ಹುಟ್ಟಿರೋದಾ? ಹಾಗಿದ್ರೆ ಅವರ ಗುಣ ಹೇಗಿದೆ ತಿಳಿಯಿರಿ….

ನವೆಂಬರ್ ನಲ್ಲಿ ಜನಿಸಿದ ಜನರ ಬಗ್ಗೆ ಹೇಳೋದಾದ್ರೆ, ಅವರೊಳಗೆ ಅನೇಕ ವಿಶೇಷ ವಿಷಯಗಳಿವೆ, ಅವು ಅವರನ್ನು ಇತರ ಜನರಿಗಿಂತ ಭಿನ್ನವಾಗಿಸುತ್ತವೆ. ಅವರು ವ್ಯಕ್ತಿತ್ವದಲ್ಲಿ ಶ್ರೀಮಂತರಾಗುವುದರ ಜೊತೆಗೆ ಕಠಿಣ ಪರಿಶ್ರಮ ಮತ್ತು ಕರ್ಮವನ್ನು ನಂಬುತ್ತಾರೆ ಎಂದು ಹೇಳಲಾಗುತ್ತೆ . ನೀವು ಕೂಡ ನವೆಂಬರ್ ನಲ್ಲಿ ಜನಿಸಿದ್ದರೆ, ಅಥವಾ ನಿಮ್ಮ‌ ಪ್ರೀತಿ ಪಾತ್ರರು ನವಂಬರ್ ನಲ್ಲಿ ಜನಿಸಿದ್ದರೆ ಅವರ ಕುರಿತಾದ ಈ ವಿಶೇಷ ವಿಷಯಗಳನ್ನು ತಿಳಿದುಕೊಳ್ಳಿ.

2 Min read
Suvarna News
Published : Nov 02 2022, 04:23 PM IST
Share this Photo Gallery
  • FB
  • TW
  • Linkdin
  • Whatsapp
18

ವರ್ಷದ ಪ್ರತಿ ತಿಂಗಳು ವಿಶೇಷವಾಗಿದ್ದರೂ, ನವೆಂಬರ್ ನಲ್ಲಿ (November)ಜನಿಸಿದ ಜನರು ಬೇರೆಯೇ ಆಗಿರುತ್ತಾರೆ. ಈ‌ ಜನರು ವಿಭಿನ್ನ ವ್ಯಕ್ತಿತ್ವವನ್ನು ಹೊಂದಿರುವ ಜನರು. ಜ್ಯೋತಿಷ್ಯದ ಲೆಕ್ಕಾಚಾರಗಳ ಪ್ರಕಾರ, ನವೆಂಬರ್ ನಲ್ಲಿ ಜನಿಸಿದ ಜನರು ಕೆಲವು ಗುಣಗಳನ್ನು ಹೊಂದಿರುತ್ತಾರೆ, ಅದು ಅವರನ್ನು ಇತರರಿಗಿಂತ ಭಿನ್ನವಾಗಿಸುತ್ತೆ. 

28

ಶಾರುಖ್ ಖಾನ್, ವಿನ್ಸ್ಟನ್ ಚರ್ಚಿಲ್, ಜವಾಹರಲಾಲ್ ನೆಹರು, ಇಂದಿರಾ ಗಾಂಧಿ, ವಿರಾಟ್ ಕೊಹ್ಲಿ, ಐಶ್ವರ್ಯ ರೈ, ಸಾನಿಯಾ ಮಿರ್ಜಾ, ನೀತಾ ಅಂಬಾನಿ, ಅಮರ್ತ್ಯ ಸೇನ್, ಕಮಲ್ ಹಾಸನ್, ಯಾಮಿ ಗೌತಮ್ ಮತ್ತು ಖ್ಯಾತ ಕವಿ ಹರಿವಂಶ್ ರಾಯ್ ಬಚ್ಚನ್ ಅವರಂತಹ ಸೆಲೆಬ್ರಿಟಿಗಳು ನವೆಂಬರ್ ನಲ್ಲಿ ಜನಿಸಿದ್ದಾರೆ. ನವೆಂಬರ್ ನಲ್ಲಿ ಜನಿಸಿದ ಜನರ ಗುಣಲಕ್ಷಣ ಮತ್ತು ಅವರ ಮೇಲೆ ಗುರು(Jupiter) ಗ್ರಹವು ಏಕೆ ವಿಶೇಷ ಅನುಗ್ರಹವನ್ನು ಹೊಂದಿದೆ ಎಂಬುದನ್ನು ಇಲ್ಲಿ ತಿಳಿಯೋಣ.

38

ನವೆಂಬರ್ ನಲ್ಲಿ ಜನಿಸಿದ ಜನರು ಸೃಜನಶೀಲತೆಯಿಂದ ತುಂಬಿರುತ್ತಾರೆ. ಅವರು ಯಾವಾಗಲೂ ವಿಭಿನ್ನವಾದದ್ದನ್ನು ಮಾಡುವುದರಲ್ಲಿ ನಂಬಿಕೆ ಹೊಂದಿದ್ದಾರೆ. ಅವರ ಆಲೋಚನೆಯು ಇತರರಿಗಿಂತ ಭಿನ್ನವಾಗಿರುತ್ತೆ ಮತ್ತು ಅವರು ಯಾವಾಗಲೂ ತಮ್ಮ ಭವಿಷ್ಯವನ್ನು ತಮ್ಮ ಮನಸ್ಸಿಗೆ ಅನುಗುಣವಾಗಿ ಯೋಜಿಸುತ್ತಾರೆ. ಅವರು ಪ್ರತಿಯೊಂದು ಕೆಲಸದಲ್ಲೂ ತಮಗೆ ಸಾಧ್ಯವಾದಷ್ಟು ಪರಿಶ್ರಮದಿಂದ(Hard work) ಕೆಲಸ ಮಾಡುತ್ತಾರೆ..

48

ನೋಡಲು ತುಂಬಾ ಆಕರ್ಷಕವಾಗಿರ್ತ್ತಾರೆ 
ನವೆಂಬರ್ ನಲ್ಲಿ ಜನಿಸಿದ ಜನರು ಬುದ್ಧಿವಂತರು ಮತ್ತು ನೋಡಲು ತುಂಬಾ ಆಕರ್ಷಕವಾಗಿರ್ತ್ತಾರೆ(Attractive). ಇವರು ಸರಳತೆಯನ್ನು ತುಂಬಾ ಇಷ್ಟಪಡುತ್ತಾರೆ ಮತ್ತು ಇವರ ಈ ಶೈಲಿಯು  ಜನರಲ್ಲಿ ಇವರನ್ನು ಜನಪ್ರಿಯಗೊಳಿಸುತ್ತೆ. ಇತರರು ಸಹ ಅವರ ಬಗ್ಗೆ ಅಸೂಯೆ ಪಡುತ್ತಾರೆ.
 

58

ಕೇಳಿಸಿಕೊಳ್ಳುವುದನ್ನೆಲ್ಲಾ  ನಂಬೋದಿಲ್ಲ 
ನವೆಂಬರ್ ನಲ್ಲಿ ಜನಿಸಿದ ಜನರ ಬಗ್ಗೆ ಮತ್ತೊಂದು ವಿಷಯವಿದೆ, ಅದು ಅವರನ್ನು ಇತರರಿಗಿಂತ ಭಿನ್ನವಾಗಿಸುತ್ತೆ(Different), ಅವರು ಯಾರ ಮಾತನ್ನೂ ಸುಲಭವಾಗಿ ನಂಬೋದಿಲ್ಲ. ಅವರು ತಮ್ಮ ಸ್ವಂತ ಕಣ್ಣುಗಳಿಂದ ನೋಡುವುದನ್ನು ಮಾತ್ರ ನಂಬುತ್ತಾರೆ. ಅವರು ಯೋಚಿಸದೆ ಯಾರ ಮಾತನ್ನೂ ಕೇಳೋದಿಲ್ಲ.

68

ಗೌಪ್ಯತೆಗೆ(Secret) ಆದ್ಯತೆ ನೀಡುತ್ತಾರೆ 
ನವೆಂಬರ್ ನಲ್ಲಿ ಜನಿಸಿದ ಜನರು ತಮ್ಮ ಖಾಸಗಿತನದಲ್ಲಿ ರಾಜಿ ಮಾಡಿಕೊಳ್ಳೋದಿಲ್ಲ. ಅವರು ಬುದ್ಧಿವಂತ ಜನರಿಂದ ದೂರವಿರಲು ಇಷ್ಟಪಡುತ್ತಾರೆ ಮತ್ತು ಬಹಳ ಸೀಮಿತ ಸಂಖ್ಯೆಯ ಸ್ನೇಹಿತರನ್ನು ಹೊಂದಿರುತ್ತಾರೆ. ಆದರೆ ಆ ಸ್ನೇಹಿತರು ತಮ್ಮ ಜೀವನದುದ್ದಕ್ಕೂ ಇರುವ ಹಾಗೆ ಅ ಸಂಬಂಧವನ್ನು ಹೊಂದುತ್ತಾರೆ. ಇವರು ಶಾಂತ, ದಯಾಳು ಮತ್ತು ಸ್ವಭಾವತಃ ತುಂಬಾ ಸೌಮ್ಯ ಸ್ವಭಾವದವರು.

78

ಗುರು ಗ್ರಹಕ್ಕೆ ವಿಶೇಷ ಅನುಗ್ರಹವಿದೆ
ನವೆಂಬರ್ 1 ರಿಂದ 22 ರ ನಡುವೆ ಜನಿಸಿದವರನ್ನು ವೃಶ್ಚಿಕ ರಾಶಿಯವರು(Scorpio) ಎಂದು ಪರಿಗಣಿಸಲಾಗುತ್ತೆ ಮತ್ತು ಅವರ ಅಧಿಪತಿ ಮಂಗಳವಾಗಿರುತ್ತೆ. ಈ ಕಾರಣಕ್ಕಾಗಿ, ಅಂತಹ ಜನರು ಧೈರ್ಯಶಾಲಿಗಳು, ಮಹತ್ವಾಕಾಂಕ್ಷೆಯುಳ್ಳವರು ಮತ್ತು ಪ್ರಕೃತಿಯಲ್ಲಿ ಪ್ರಭುತ್ವವನ್ನು ಹೊಂದಿರುತ್ತಾರೆ ಎಂದು ನಂಬಲಾಗಿದೆ.

88

ಹಾಗೆ ನವೆಂಬರ್ 22 ರ ನಂತರ ಜನಿಸಿದ ಜನರನ್ನು ಧನು ರಾಶಿಗೆ ಸೇರಿದವರು ಎಂದು ಪರಿಗಣಿಸಲಾಗುತ್ತೆ ಮತ್ತು ಧನು ರಾಶಿಯು ಗುರುವಿನ ಸಂಬಂಧಿಯಾಗಿರೋದರಿಂದ, ಅವರು ಗುರುವಿನ ಕೃಪೆಯಿಂದ ವೃತ್ತಿ ಮತ್ತು ವ್ಯವಹಾರದಲ್ಲಿ(Business) ವಿಶೇಷ ಪ್ರಗತಿಯನ್ನು ಪಡೆಯುತ್ತಾರೆ. ಅವರ ಜೀವನದಲ್ಲಿ ಎಂದಿಗೂ ಹಣದ ಕೊರತೆ ಇರೋದಿಲ್ಲ.

About the Author

SN
Suvarna News
ಜ್ಯೋತಿಷ್ಯ
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved