Asianet Suvarna News Asianet Suvarna News

November 2022 Planet Changes: 4 ರಾಶಿಯವರಿಗೆ ಅದೃಷ್ಟದ ನವೆಂಬರ್

ಜ್ಯೋತಿಷ್ಯದ ಪ್ರಕಾರ, ನವೆಂಬರ್‌ನಲ್ಲಿ 5 ಗ್ರಹಗಳ ಚಲನೆಯಲ್ಲಿ ಬದಲಾವಣೆಯಾಗಲಿದೆ. ಗ್ರಹಗಳ ಈ ರಾಶಿ ಬದಲಾವಣೆಯು 4 ರಾಶಿಚಕ್ರಗಳ ಜನರಿಗೆ ಪ್ರಯೋಜನಕಾರಿಯಾಗಿದೆ. ನಿಮ್ಮ ರಾಶಿ ನವೆಂಬರ್‌ನ ಅದೃಷ್ಟವಂತ ರಾಶಿಯಲ್ಲಿದೆಯೇ ಚೆಕ್ ಮಾಡಿಕೊಳ್ಳಿ..

November 2022 Planet Changes bring benefits to 4 zodiac signs skr
Author
First Published Oct 30, 2022, 4:20 PM IST

ಜ್ಯೋತಿಷ್ಯದ ಪ್ರಕಾರ, ಗ್ರಹದ ರಾಶಿಚಕ್ರವು ಬದಲಾದಾಗ, ಅದು ನೇರವಾಗಿ ಮಾನವ ಜೀವನ ಮತ್ತು ಎಲ್ಲಾ ರಾಶಿಚಕ್ರದ ಚಿಹ್ನೆಗಳ ಮೇಲೆ ಪರಿಣಾಮ ಬೀರುತ್ತದೆ. ನವೆಂಬರ್‌ನಲ್ಲಿ 5 ಗ್ರಹಗಳ ಚಲನೆಯಲ್ಲಿ ಬದಲಾವಣೆಯಾಗಲಿದೆ. ಇದು ದೇಶ ಮತ್ತು ಪ್ರಪಂಚವನ್ನು ಒಳಗೊಂಡಂತೆ ಎಲ್ಲಾ ರಾಶಿಚಕ್ರ ಚಿಹ್ನೆಗಳಿಗೆ ಸೇರಿದ ಜನರ ಮೇಲೆ ಪರಿಣಾಮ ಬೀರುತ್ತದೆ. ಆದರೆ 4 ರಾಶಿಚಕ್ರ ಚಿಹ್ನೆಗಳಿಗೆ ಅದೃಷ್ಟದಾಯಕ ಬದಲಾವಣೆ ಇದಾಗಿದೆ. ಈ ತಿಂಗಳು ವೃತ್ತಿ ಮತ್ತು ವ್ಯವಹಾರದಲ್ಲಿ ಈ ನಾಲ್ಕು ರಾಶಿಯವರು ಉತ್ತಮ ಯಶಸ್ಸನ್ನು ಪಡೆಯಬಹುದು. ಈ ರಾಶಿಚಕ್ರ ಚಿಹ್ನೆಗಳು ಯಾವುವು ಎಂದು ತಿಳಿಯೋಣ.

ಈ ಗ್ರಹಗಳ ಚಲನೆಯಲ್ಲಿ ಬದಲಾವಣೆಗಳು
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಐಶ್ವರ್ಯ ಮತ್ತು ಸಂಪತ್ತು ನೀಡುವ ಶುಕ್ರನು ನವೆಂಬರ್ 11ರಂದು ವೃಶ್ಚಿಕ ರಾಶಿಯಲ್ಲಿ ಸಾಗುತ್ತಾನೆ. ಅದೇ ಸಮಯದಲ್ಲಿ, ನವೆಂಬರ್ 13ರಂದು, ಗ್ರಹಗಳ ಕಮಾಂಡರ್ ಮಂಗಳ ಹಿಮ್ಮುಖ ಸ್ಥಿತಿಯಲ್ಲಿ ಮಿಥುನದಿಂದ ವೃಷಭ ರಾಶಿಗೆ ಸಾಗುತ್ತದೆ. ಅದೇ ದಿನ ಅಂದರೆ ನವೆಂಬರ್ 13ರಂದು ವ್ಯಾಪಾರ ಮತ್ತು ಬುದ್ಧಿವಂತಿಕೆಕಾರಕ ಬುಧ ಕೂಡ ವೃಶ್ಚಿಕ ರಾಶಿಗೆ ಸಂಕ್ರಮಿಸಿ ಪ್ರವೇಶಿಸುತ್ತಾನೆ. ಇದರ ನಂತರ, ನವೆಂಬರ್ 16ರಂದು, ಗ್ರಹಗಳ ರಾಜ ಸೂರ್ಯನು ವೃಶ್ಚಿಕ ರಾಶಿಯಲ್ಲಿ ಸಾಗುತ್ತಾನೆ. ಅಲ್ಲದೆ ಮಾಸಾಂತ್ಯದಲ್ಲಿ ನವೆಂಬರ್ 24ರಂದು ದೇವತೆಗಳ ಗುರುವಾದ ಗುರು ಮೀನ ರಾಶಿಯಲ್ಲಿದ್ದಾನೆ.

ನವೆಂಬರ್, ಡಿಸೆಂಬರ್‌ನಲ್ಲಿ ವಿವಾಹಕ್ಕೆ ಶುಭ ಮುಹೂರ್ತಗಳು..

ಈ ರಾಶಿಚಕ್ರದವರಿಗೆ ನವೆಂಬರ್ ಮಂಗಳಕರವಾಗಿರುತ್ತದೆ..
ಮಿಥುನ ರಾಶಿ(Gemini): ನವೆಂಬರ್ ತಿಂಗಳು ನಿಮಗೆ ಮಂಗಳಕರವಾಗಿರುತ್ತದೆ. ಬುಧ ಮತ್ತು ಗುರುಗ್ರಹಗಳ ಪ್ರಭಾವದಿಂದ ನೀವು ಹೊಸ ಉದ್ಯೋಗದ ಪ್ರಸ್ತಾಪವನ್ನು ಪಡೆಯಬಹುದು. ಅಲ್ಲದೆ, ನೀವು ವೃತ್ತಿ ಕ್ಷೇತ್ರದಲ್ಲಿ ಬಡ್ತಿ ಪಡೆಯಬಹುದು ಮತ್ತು ನಿಮ್ಮ ಹಿರಿಯ ಉದ್ಯೋಗಿಗಳು ನಿಮ್ಮ ಕೆಲಸದಿಂದ ತೃಪ್ತರಾಗುತ್ತಾರೆ. ಈ ಸಮಯದಲ್ಲಿ ನೀವು ಹೊಸ ವಾಹನ ಮತ್ತು ಆಸ್ತಿಯನ್ನು ಖರೀದಿಸಲು ಮನಸ್ಸು ಮಾಡಬಹುದು. ಈ ತಿಂಗಳು ಕೆಲಸದ ಸ್ಥಳದಲ್ಲಿ ನಿಮ್ಮ ಪ್ರಯತ್ನಗಳ ಸಂಪೂರ್ಣ ಫಲವನ್ನು ನೀವು ಪಡೆಯುತ್ತೀರಿ. ವ್ಯವಹಾರದಲ್ಲಿ ಹೊಸ ಆರ್ಡರ್‌ಗಳನ್ನು ಪಡೆಯುವುದರಿಂದ ಉತ್ತಮ ಹಣವನ್ನು ಗಳಿಸಬಹುದು.

ಸಿಂಹ ರಾಶಿ(Leo): ನವೆಂಬರ್ ತಿಂಗಳು ನಿಮಗೆ ಹಣಕಾಸಿನ ವಿಷಯದಲ್ಲಿ ಪ್ರಯೋಜನಕಾರಿಯಾಗಿದೆ. ಏಕೆಂದರೆ ಗುರು ಗ್ರಹವು ನಿಮ್ಮ ಎಂಟನೇ ಮನೆಯಲ್ಲಿರುತ್ತದೆ. ಸಂಶೋಧನಾ ಕ್ಷೇತ್ರದೊಂದಿಗೆ ಸಂಬಂಧ ಹೊಂದಿರುವವರಿಗೆ ಈ ಸಮಯವು ಅತ್ಯುತ್ತಮವೆಂದು ಸಾಬೀತುಪಡಿಸಬಹುದು. ಈ ತಿಂಗಳು ನೀವು ವೃತ್ತಿ ಕ್ಷೇತ್ರದಲ್ಲಿ ಕೆಲವು ಸಾಧನೆಗಳನ್ನು ಮಾಡಬಹುದು. ಆದಾಯದಲ್ಲಿ ಹೆಚ್ಚಳವಾಗುವ ಸಾಧ್ಯತೆಯೂ ಇದೆ. ವ್ಯಾಪಾರಸ್ಥರು ಈ ತಿಂಗಳು ಮಾಡಿದ ಹೂಡಿಕೆಯಿಂದ ಹೆಚ್ಚಿನ ಲಾಭ ಪಡೆಯಬಹುದು.

ಕನ್ಯಾ ರಾಶಿ(Virgo): ನವೆಂಬರ್ ನಿಮಗೆ ಲಾಭದಾಯಕವೆಂದು ಸಾಬೀತುಪಡಿಸಬಹುದು. ಏಕೆಂದರೆ ಗುರು ಗ್ರಹವು ನಿಮ್ಮ ರಾಶಿಯಿಂದ ಏಳನೇ ಮನೆಯಲ್ಲಿ ಚಲಿಸಲಿದೆ. ಇದನ್ನು ವೈವಾಹಿಕ ಜೀವನ ಮತ್ತು ಪಾಲುದಾರಿಕೆಯ ಅರ್ಥ ಎಂದು ಕರೆಯಲಾಗುತ್ತದೆ. ಆದ್ದರಿಂದ, ಈ ಸಮಯದಲ್ಲಿ ವೈವಾಹಿಕ ಜೀವನದಲ್ಲಿ ಮಾಧುರ್ಯವನ್ನು ಕಾಣಬಹುದು. ಅವಿವಾಹಿತರಿಗೆ ಕಂಕಣಬಲ ಕೂಡಿ ಬರಬಹುದು. ನೀವು ಪಾಲುದಾರಿಕೆ ಕೆಲಸದಲ್ಲಿ ಉತ್ತಮ ಯಶಸ್ಸನ್ನು ಪಡೆಯಬಹುದು.

ಪ್ರೀತಿ ಬೇಕು, Commitment ಬೇಡ ಅನ್ನೋ ರಾಶಿಗಳಿವು!

ಮಕರ ರಾಶಿ(Capricorn): ಪಂಚಗ್ರಹಗಳ ಸಂಚಾರದಿಂದ ಮಕರ ರಾಶಿಯವರು ಈ ತಿಂಗಳಲ್ಲಿ ಉತ್ತಮ ಹಣ ಪಡೆಯಬಹುದು. ಈ ತಿಂಗಳು ನೀವು ನ್ಯಾಯಾಲಯದ ವಿಷಯಗಳಲ್ಲಿ ಯಶಸ್ಸನ್ನು ಪಡೆಯಬಹುದು. ಮತ್ತೊಂದೆಡೆ, ಶನಿದೇವನು ನಿಮ್ಮ ರಾಶಿಯಲ್ಲಿ ಚಲಿಸಿದ್ದಾನೆ. ಈ ಸಮಯದಲ್ಲಿ ನೀವು ಅನೇಕ ಮೂಲಗಳಿಂದ ಹಣವನ್ನು ಗಳಿಸಲು ಸಾಧ್ಯವಾಗುತ್ತದೆ. ನಿರುದ್ಯೋಗಿಗಳು ಹೊಸ ಉದ್ಯೋಗದ ಪ್ರಸ್ತಾಪವನ್ನು ಪಡೆಯಬಹುದು. ಇದರಿಂದ ಮನೆಯ ಆರ್ಥಿಕ ಪರಿಸ್ಥಿತಿ ಬದಲಾಗಬಹುದು. 

Follow Us:
Download App:
  • android
  • ios