ಮೀನ ರಾಶಿಯಲ್ಲಿ ಗುರು ವಕ್ರಿ: ಯಶಸ್ಸಿಗಾಗಿ ಯಾವ ರಾಶಿ ಏನು ಮಾಡಬೇಕು?
ಜುಲೈ 29, 2022ರಂದು, ಗುರುವು ಮೀನ ರಾಶಿಯಲ್ಲಿ ಹಿಮ್ಮುಖ ಚಲನೆ ಪ್ರಾರಂಭಿಸುತ್ತದೆ. ಇದು ಸುಮಾರು ನಾಲ್ಕು ತಿಂಗಳ ಕಾಲ ಈ ಚಲನೆಯಲ್ಲಿ ಉಳಿಯುತ್ತದೆ. ಗುರು ವಕ್ರಿಯು ರಾಶಿಚಕ್ರಗಳ ಮೇಲೆ ಹೇಗೆ ಪರಿಣಾಮ ಬೀರುತ್ತದೆ, ಈ ಅವಧಿಯಲ್ಲಿ ಯಶಸ್ಸಿಗಾಗಿ ಯಾವ ರಾಶಿಗಳು ಏನು ಮಾಡಬೇಕು ನೋಡೋಣ.
ಜುಲೈ 29, 2022 ರಂದು, ಗುರುವು ಮೀನ ರಾಶಿಯಲ್ಲಿ ಹಿಮ್ಮುಖ ಚಲನೆಗೆ ಪ್ರವೇಶಿಸುತ್ತದೆ. ಇದು ಸುಮಾರು ನಾಲ್ಕು ತಿಂಗಳ ಕಾಲ ಈ ಚಲನೆಯಲ್ಲಿ ಉಳಿಯುತ್ತದೆ ಮತ್ತು ನವೆಂಬರ್ 24, 2022ರಂದು ನೇರ ನಡೆ ಪುನರಾರಂಭಿಸುತ್ತದೆ. ಜ್ಯೋತಿಷ್ಯದಲ್ಲಿ, ಗುರುವು ವಿಸ್ತರಣೆ, ಸಮೃದ್ಧಿ ಮತ್ತು ಶುಭಸಂಗತಿಗಳ ಗ್ರಹವಾಗಿದೆ. ಗುರು ವಕ್ರಿಯು ವಿವಿಧ ರಾಶಿಚಕ್ರಗಳ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ನೋಡೋಣ.
ಮೇಷ(Aries): ಆವೇಶಭರಿತರಾಗಿ ವರ್ತಿಸಬೇಡಿ. ಪ್ರಮುಖ ಆಂತರಿಕ ಕೆಲಸ ಮಾಡಲು ಸಿದ್ಧರಾಗಿ. ನೀವು ಅತಿಯಾದ ಸ್ಪರ್ಧಾತ್ಮಕತೆಯನ್ನು ಹೊಂದಿದ್ದೀರಿ, ನಿಮ್ಮ ಸ್ವಂತ ವೈಯಕ್ತಿಕ ಬೆಳವಣಿಗೆಯನ್ನು ಪರಿಪೂರ್ಣಗೊಳಿಸಬೇಕು ಎಂದು ನೋಡುತ್ತೀರಿ. ದುಡುಕಿನ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ. ಕೋಪವು ನಿಮ್ಮ ವಿರುದ್ಧ ಕೆಲಸ ಮಾಡಬಹುದು, ಆದ್ದರಿಂದ ಶಾಂತವಾಗಿರಿ.
ವೃಷಭ(Taurus): ಕಳೆದ ಕೆಲವು ವಾರಗಳಲ್ಲಿ ನೀವು ಅಸಹಜವಾಗಿ ಹೆಚ್ಚಿನ ಮಟ್ಟದ ಒತ್ತಡವನ್ನು ಅನುಭವಿಸಿರಬಹುದು. ಈಗ ಕೊಂಚ ನಿರಾಳರಾಗುವ ಸಮಯ. ನಿಮ್ಮ ದಿನಗಳಿಗೆ ಲಂಗರು ಹಾಕುತ್ತಿರುವವರು ಯಾರು ಎಂದು ಗಮನಿಸಿ. ಭವಿಷ್ಯದ ಯಶಸ್ಸಿಗಾಗಿ ನಿಮಗಾಗಿ ಸಮಯವನ್ನು ನೀಡಿ ಮತ್ತು ಹೊಸ ಸಂಪರ್ಕಗಳನ್ನು ಮಾಡಿ.
ಮಿಥುನ(Gemini): ನಿಮ್ಮ ವೈಯಕ್ತಿಕ ಮಿತಿಗಳನ್ನು ಹಿಗ್ಗಿಸಿ. ಅಸ್ತಿತ್ವದಲ್ಲಿರುವ ಸಂಬಂಧಗಳ ಗಡಿಗಳನ್ನು ನೀವು ಮರು ವ್ಯಾಖ್ಯಾನಿಸಬೇಕಾಗಿರುವುದರಿಂದ ನಿಮ್ಮ ಹೊಂದಾಣಿಕೆಯನ್ನು ಪರೀಕ್ಷಿಸುವ ಸಾಧ್ಯತೆಯಿದೆ. ನಿಮ್ಮ ವಿಶ್ವ ದೃಷ್ಟಿಕೋನವನ್ನು ವಿಸ್ತರಿಸಲು ಪ್ರಯತ್ನಿಸಿ. ನಿಮ್ಮ ಪೂರ್ವಾಗ್ರಹಪೀಡಿತ ಮನಸ್ಥಿತಿ ಗುರಿಗಳನ್ನು ಬೆನ್ನಟ್ಟುವುದನ್ನು ತಡೆಯುತ್ತದೆ.
ಪ್ರತಿ ದಿನ ಅದೃಷ್ಟ ಆಕರ್ಷಿಸಲು ಯಾವ ವಾರ ಏನು ಮಾಡ್ಬೇಕು?
ಕರ್ಕಾಟಕ(Cancer): ನಿಮ್ಮ ಬಲವಾದ ಗುಣಗಳಲ್ಲಿ ಒಂದು ನಿಮ್ಮ ಭಾವನೆಗಳ ಬಗ್ಗೆ ಸ್ಪಷ್ಟತೆ ಹೊಂದುವ ಸಾಮರ್ಥ್ಯ. ತಾರ್ಕಿಕ ದೃಷ್ಟಿಕೋನದಿಂದ ಇತರರೊಂದಿಗೆ ತೊಡಗಿಸಿಕೊಳ್ಳುವ ಮೂಲಕ ನಿಮ್ಮ ಸಂಬಂಧವನ್ನು ನೀವು ಸುಧಾರಿಸಬೇಕಾಗಿದೆ. ನಿಮ್ಮ ಅಂತಃಪ್ರಜ್ಞೆಯ ಬಲವಾದ ಬೆಂಬಲವನ್ನು ನೀವು ಹೊಂದಿರುತ್ತೀರಿ. ಹೊಸ ಪರಿಚಯಗಳನ್ನು ಮಾಡಿಕೊಳ್ಳಿ.
ಸಿಂಹ(Leo): ಜೀವನದಲ್ಲಿ ನಿಮ್ಮ ಉತ್ಸಾಹವನ್ನು ಹೆಚ್ಚಿಸಲು ನಿಮ್ಮ ಪೂರ್ವಾಗ್ರಹಗಳನ್ನು ಜಯಿಸಬೇಕು. ಎಲ್ಲರನ್ನೂ ಮೆಚ್ಚಿಸುವ ಹಪಹಪಿಗೆ ಬೀಳಬೇಡಿ. ನೀವು ಪ್ರತಿಯೊಬ್ಬರ ಅಭಿಪ್ರಾಯವನ್ನು ಪ್ರಭಾವಿಸಲು ಪ್ರಯತ್ನಿಸಬಾರದು. ನಿಮ್ಮ ಸ್ವಂತ ಚಿಂತನೆಯ ಪ್ರಕ್ರಿಯೆಯನ್ನು ಪ್ರಶ್ನಿಸುವ ಸಮಯ ಇದು.
ಕನ್ಯಾ(Virgo): ಈ ಅವಧಿಯಲ್ಲಿ ವಿಶ್ರಾಂತಿ ಪಡೆಯಲು ಪ್ರಯತ್ನಿಸಿ ಮತ್ತು ನಿಮ್ಮ ಕಠಿಣ ಯೋಜನೆಯನ್ನು ಬಿಟ್ಟುಬಿಡಿ. ನಿಮ್ಮನ್ನು ಪ್ರೇರೇಪಿಸುವ ಜನರ ಮತ್ತು ವಸ್ತುಗಳ ಪಟ್ಟಿ ಮಾಡಿ. ಅಂಥವರೊಂದಿಗೆ ಸಮಯ ಕಳೆಯಿರಿ. ನಕಾರಾತ್ಮಕ ಜನರ ಮೇಲೆ ನಿಮ್ಮ ಶಕ್ತಿಯನ್ನು ವ್ಯರ್ಥ ಮಾಡಬೇಡಿ.
ತುಲಾ(Libra): ನಿಮ್ಮ ಪ್ರಗತಿಗೆ ಅಡ್ಡಿಗಳು ಎದುರಾಗಬಹುದು. ಖ್ಯಾತಿಯನ್ನು ಉಳಿಸಲು ಮತ್ತು ಇತರರೊಂದಿಗೆ ಸ್ನೇಹಪರರಾಗಿರಲೇಬೇಕಾದ ಒತ್ತಡವನ್ನು ಅನುಭವಿಸಬಹುದು. ನಿಮ್ಮನ್ನು ನಿಗ್ರಹಿಸುವವರೊಂದಿಗಿನ ಸಂಬಂಧವನ್ನು ಕಡಿದುಕೊಳ್ಳಿ.
ವೃಶ್ಚಿಕ(Scorpio): ನಿಮ್ಮ ಸೃಜನಾತ್ಮಕ ವ್ಯಕ್ತಿತ್ವದ ಕಡೆ ಗಮನ ಹರಿಸಲು ಇದು ಉತ್ತಮ ಕ್ಷಣವಾಗಿದೆ. ಕೆಲಸದ ಸ್ಥಳದಲ್ಲಿ ಸಮಸ್ಯೆಗಳನ್ನು ಪರಿಹರಿಸಲು ಹೊಸ ಮಾರ್ಗಗಳ ಬಗ್ಗೆ ಯೋಚಿಸಿ, ವಿಶೇಷವಾಗಿ ಮೇಲಧಿಕಾರಿಗಳೊಂದಿಗಿನ ನಿಮ್ಮ ಸಂಬಂಧಗಳನ್ನು ಸರಿಪಡಿಸಿಕೊಳ್ಳಿ.
ಧನು(Sagittarius): ಜೀವನದ ಬಗ್ಗೆ ಸಕಾರಾತ್ಮಕ ದೃಷ್ಟಿಕೋನವು ಅದರ ವ್ಯಾಪಕ ಸಾಧ್ಯತೆಗಳನ್ನು ನಿಭಾಯಿಸಲು ನಿಮಗೆ ಸಹಾಯ ಮಾಡುತ್ತದೆ. ಇದೀಗ ನಿಮ್ಮ ಜೀವನ ಮತ್ತು ಸಂಬಂಧಗಳನ್ನು ಗಣನೆಗೆ ತೆಗೆದುಕೊಳ್ಳುವುದು ಒಳ್ಳೆಯದು ಮತ್ತು ನಿಮ್ಮ ಪ್ರಯತ್ನಗಳು ಯಾವುದೇ ಪರಿಣಾಮ ಬೀರುತ್ತಿದೆಯೇ ಅಥವಾ ಸಮಯ ವ್ಯರ್ಥವಾಗಿದೆಯೇ ಎಂದು ಪರಿಗಣಿಸುವುದು ಒಳ್ಳೆಯದು. ನಿಮ್ಮ ಶಕ್ತಿಯ ಸರಿಯಾದ ಬಳಕೆಯಾಗುತ್ತಿಯೇ ಗಮನಿಸಿ.
ವಾರ ಭವಿಷ್ಯ: ಒಂದು ರಾಶಿಗೆ ಮೊಂಡುತನದಿಂದ ಸಮಸ್ಯೆ, ಮತ್ತೊಂದಕ್ಕೆ ಫಲ ವಿಳಂಬ
ಮಕರ(Capricorn): ಮುಕ್ತ ಮತ್ತು ಪ್ರಾಮಾಣಿಕ ಸಂವಹನವನ್ನು ಹೊಂದುವುದರ ಜೊತೆಗೆ ಹೊಸ ಕೌಶಲ್ಯಗಳ ಅಭಿವೃದ್ಧಿಗೆ ಗಮನ ಕೊಡಿ. ಹೊಸ ಶೈಕ್ಷಣಿಕ ಆಯ್ಕೆಗಳ ಕುರಿತು ಕೆಲವು ಸಂಶೋಧನೆಗಳನ್ನು ಮಾಡಿ. ನಿಮ್ಮ ನಿರ್ಧಾರಗಳನ್ನು ಅತಿಯಾಗಿ ವಿಶ್ಲೇಷಿಸಬೇಡಿ.
ಕುಂಭ(Aquarius): ನಿಮ್ಮ ಪ್ರಸ್ತುತ ಆಯಾಸದ ಸ್ಥಿತಿಯಿಂದಾಗಿ ಅಹಿತಕರ ಭಾವನೆಗಳನ್ನು ಎದುರಿಸಬೇಕಾಗಬಹುದು. ವಿಸ್ತರಣೆ ಮತ್ತು ಆತ್ಮಾವಲೋಕನವು ಅತ್ಯಾಕರ್ಷಕ ಸಾಹಸಕ್ಕಿಂತ ಹೆಚ್ಚಾಗಿ ಹೊರೆಯಂತೆ ತೋರುತ್ತದೆ. ನಿಮ್ಮ ಸ್ವಯಂ ಅರಿವನ್ನು ಆಳವಾಗಿಸಲು ಅವಕಾಶವಿದೆ. ಯಾವುದೇ ಆಂತರಿಕ ವಿರೋಧಾಭಾಸಗಳು ಮುನ್ನೆಲೆಗೆ ಬರುತ್ತವೆ, ಅದನ್ನು ನೀವು ಧೈರ್ಯದಿಂದ ಎದುರಿಸಬೇಕಾಗುತ್ತದೆ.
ಮೀನ(Pisces): ಗುರು ವಕ್ರಿಯು ನಿಮಗೆ ಧನಾತ್ಮಕ ಪ್ರಯಾಣ. ವಾಸ್ತವವಾಗಿ, ನೀವು ಆತ್ಮವಿಶ್ವಾಸವನ್ನು ಅನುಭವಿಸಬಹುದು. ನಿಮ್ಮ ಖರ್ಚು ಅಭ್ಯಾಸಗಳನ್ನು ಪರೀಕ್ಷಿಸಲು ಮತ್ತು ಭವಿಷ್ಯದಲ್ಲಿ ನೀವು ಅವುಗಳನ್ನು ಹೇಗೆ ಸುಧಾರಿಸಬಹುದು ಎಂಬುದನ್ನು ಮೌಲ್ಯಮಾಪನ ಮಾಡಲು ಇದು ಅದ್ಭುತ ಸಮಯ. ಶ್ರೀಮಂತಿಕೆಗಾಗಿ ನಿಮ್ಮ ಅನ್ವೇಷಣೆಗೆ ನಿರ್ದಿಷ್ಟ ಒತ್ತು ನೀಡಲಾಗುವುದು.