MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Duleep Trophy Final
Today's Horoscope in Kannada
Mantralaya Online Scam
Hubballi Ganeshotsava
Kalaburagi Drought List
Pitru Paksha 2026 Date
PM Modi Meeting
Karnataka Farmers
Gulbarga Bus Accident
Western Ghats ESA
Karnataka Taxi Fare Meter
Bigg Boss Kannada 13
  • Home
  • Life
  • Relationship
  • ಮದುವೆಯ ಬಗ್ಗೆ ಕೊನೆಗೂ ಮೌನ ಮುರಿದ 'Jagaddhatri'! ನಟಿ ಮೋಕ್ಷಿತಾ ಪೈ ಕೊಟ್ಟ ನ್ಯೂಸ್​ ಏನು

ಮದುವೆಯ ಬಗ್ಗೆ ಕೊನೆಗೂ ಮೌನ ಮುರಿದ 'Jagaddhatri'! ನಟಿ ಮೋಕ್ಷಿತಾ ಪೈ ಕೊಟ್ಟ ನ್ಯೂಸ್​ ಏನು

'ಪಾರು' ಖ್ಯಾತಿಯ ಮೋಕ್ಷಿತಾ ಪೈ 'ಜಗದ್ಧಾತ್ರಿ' ಸೀರಿಯಲ್ ಮೂಲಕ ಕಮ್‌ಬ್ಯಾಕ್ ಮಾಡುತ್ತಿದ್ದಾರೆ. ಈ ಲೇಖನದಲ್ಲಿ, ಅವರ ಮದುವೆ ಕುರಿತ ಪ್ರಶ್ನೆಗಳಿಗೆ ಉತ್ತರ, ಅವರ ವೈಯಕ್ತಿಕ ಜೀವನದ ನೋವಿನ ಕಥೆ ಮತ್ತು ನಟನೆಗೆ ಅವಕಾಶ ನೀಡಿದ ದಿಲೀಪ್ ರಾಜ್ ಅವರನ್ನು ಸ್ಮರಿಸಿದ ಕ್ಷಣಗಳ ಬಗ್ಗೆ ವಿವರಿಸಲಾಗಿದೆ.

2 Min read
Author : Suchethana D
Published : Aug 17 2026, 08:27 PM IST
Share this Photo Gallery
  • FB
  • TW
  • Linkdin
  • Whatsapp
16
ಪಾರು ಈಗ ಜಗದ್ಧಾತ್ರಿ
Image Credit : Social Media

ಪಾರು ಈಗ ಜಗದ್ಧಾತ್ರಿ

ಮೋಕ್ಷಿತಾ ಪೈ ಎಂದರೆ ಹಲವರಿಗೆ ತಿಳಿಯಲಿಕ್ಕಿಲ್ಲ. 'ಕರುಣೆಯ ಪೈರು, ನಮ್ಮ ಪಾರು...' ಎಂದಾಕ್ಷಣ ಪಾರು ನೆನಪಿಗೆ ಬರ್ತಾಳೆ. ಅವಳೇ ಮೋಕ್ಷಿತಾ ಪೈ. ಬಿಗ್​ಬಾಸ್​​ ಮೂಲಕವೂ ಫೇಮಸ್​ ಆಗಿದ್ದ ಮೋಕ್ಷಿತಾ ಪೈ (Mokshitha Pai) ಅವರು ಈಗ ಜಗದ್ಧಾತ್ರಿ ಸೀರಿಯಲ್​ ಮೂಲಕ ತೆರೆಗೆ ಜಬರ್ದಸ್ತ್​ ಎಂಟ್ರಿ ಕೊಡಲು ಸಜ್ಜಾಗಿದ್ದಾರೆ. ನಾಯಕಿ ಮೋಕ್ಷಿತಾ ಪೈ ಎನ್ನುವುದು ಇದಾಗಲೇ ಬಿಡುಗಡೆಯಾಗಿರುವ ಪ್ರೊಮೋದಿಂದ ತಿಳಿದುಬಂದಿದೆ. ಇದರ ನಡುವೆಯೇ, ಕವಿತಾ ಗೌಡ ಕೂಡ ಸೀರಿಯಲ್​ನಲ್ಲಿ ನಟಿಸುತ್ತಿದ್ದಾರೆ. ಜೊತೆಗೆ ನಟ ವಿಜಯ ಸೂರ್ಯ ನಾಯಕನಾಗಿದ್ದಾರೆ. ಈ ಸೀರಿಯಲ್​ ಆರಂಭಕ್ಕೆ ಎಲ್ಲರೂ ಕಾಯುತ್ತಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ಮದುವೆ ಬಗ್ಗೆ ಪ್ರಶ್ನೆ
Image Credit : zee5

ಮದುವೆ ಬಗ್ಗೆ ಪ್ರಶ್ನೆ

ಇದರ ನಡುವೆಯೇ, ನಟಿ ಮೋಕ್ಷಿತಾ ಪೈ ಅವರಿಗೆ ಹೋದಲ್ಲಿ, ಬಂದಲ್ಲಿ ಮದುವೆಯ ಬಗ್ಗೆ ಪ್ರಶ್ನೆ ಕೇಳಲಾಗುತ್ತದೆ. ಗೂಗಲ್​ ದಾಖಲೆಯ ಪ್ರಕಾರ ನಟಿಗೆ ಈಗ 30 ವರ್ಷ ವಯಸ್ಸು. ಈ ದಾಖಲೆಯ ಪ್ರಕಾರ ನಟಿ ಹುಟ್ಟಿರುವುದು ಅಕ್ಟೋಬರ್ 22, 1995ರಂದು (ಗೂಗಲ್​ ದಾಖಲೆಯನ್ನು ಸಂಪೂರ್ಣವಾಗಿ ನಂಬಲು ಬರುವುದಿಲ್ಲ!). ಆದ್ದರಿಂದ ಮದುವೆಯ ಬಗ್ಗೆ ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆ ಇದೆ.

Related Articles

Related image1
Bigg Bossಗೆ ಹೋಗೋ ಮೊದ್ಲೇ ದಾಖಲೆ ಹರಿದ್ರೆ, ತಲೆ ಬೋಳಿಸಿದ್ರೆ, ಸೆಗಣಿ ಹಚ್ಚಿದ್ರೆ ಮುಂದೆ ಒಳ್ಳೇದು; ಸಂಗೀತಾ ಶೃಂಗೇರಿ
Related image2
Aap Ki Adalat ಷೋನಲ್ಲೂ ದಾಖಲೆ ಬರೆದ ಯಶ್​: 34 ವರ್ಷಗಳಲ್ಲಿ ಮೊದಲ ಬಾರಿಗೆ ಇತಿಹಾಸ ಸೃಷ್ಟಿ
36
ಮದುವೆ ಬಗ್ಗೆ ಏನಂದ್ರು ನಟಿ?
Image Credit : zee5

ಮದುವೆ ಬಗ್ಗೆ ಏನಂದ್ರು ನಟಿ?

ಕಾರ್ಯಕ್ರಮವೊಂದಕ್ಕೆ ಭೇಟಿ ಕೊಟ್ಟ ಸಂದರ್ಭದಲ್ಲಿ, ನಟಿ ಮೋಕ್ಷಿತಾ ಪೈ ಅವರಿಗೆ ಇದೇ ಪ್ರಶ್ನೆ ಎದುರಾಯಿತು. ಅದಕ್ಕೆ ನಟಿ, ಮೊದಲು ನನಗೆ ಸುಧಾರಿಸಿಕೊಳ್ಳಲು ಟೈಮ್​ ಕೊಡಿ. ಹಲವು ತಿಂಗಳ ಬಳಿಕ ಒಂದೊಳ್ಳೆ ಆಫರ್​ ಬಂದಿದೆ. (ಜಗದ್ಧಾತ್ರಿ ಸೀರಿಯಲ್​). ಅದರ ಕಡೆಗೆ ಮೊದಲು ಗಮನ ಹರಿಸುತ್ತೇನೆ. ಮದುವೆಯಾದರೆ ಮೊದಲು ನಿಮಗೇ ತಿಳಿಸುವೆ ಎಂದು ಚಟಾಕಿ ಹಾರಿಸಿದರು.

46
ದಿಲೀಪ್​ ರಾಜ್​ರನ್ನು ನೆನೆದ ನಟಿ
Image Credit : zee kannada

ದಿಲೀಪ್​ ರಾಜ್​ರನ್ನು ನೆನೆದ ನಟಿ

ಅಂದಹಾಗೆ, ನಟಿ ಈಚೆಗೆ ನಿಧನರಾದ ನಟ, ನಿರ್ದೇಶಕ, ನಿರ್ಮಾಪಕ ದಿಲೀಪ್​ ರಾಜ್​ ಅವರನ್ನು ನೆನೆದಿದ್ದರು. ಏಕೆಂದರೆ ಸೀರಿಯಲ್​​ಗೆ ಮೋಕ್ಷಿತಾ ಅವರನ್ನು ಕರೆತಂದದ್ದೇ ಅವರು. 'ನನಗೆ ನಟನೆ ಎಂದರೆ ಏನು ಎಂದೇ ತಿಳಿದಿರಲಿಲ್ಲ. ಆದರೆ ಪಾರು ಸೀರಿಯಲ್​ನ ಲೀಡ್​ ರೋಲ್​ಗೆ ದಿಲೀಪ್​ ರಾಜ್​ ಸರ್​ ಅವರು ಆಯ್ಕೆ ಮಾಡಿದರು. ಇದೆಲ್ಲಾ ನನ್ನ ಕೈಯಲ್ಲಿ ಆಗಲ್ಲ ಸರ್​ ಎಂದು ಕೈಮುಗಿದು ಬೇಡಿಕೊಂಡರೂ ಕೇಳಲಿಲ್ಲ. ಆಗತ್ತೆ ಬನ್ನಿ ಎಂದು ಧೈರ್ಯ ತುಂಬಿದ್ದ ಪರಿಣಾಮ ಇಂದು ಈ ಮಟ್ಟಿನ ಯಶಸ್ಸು ಸಿಕ್ಕಿದೆ' ಎಂದಿದ್ದರು ನಟಿ.

56
ನೋವಿನ ಜೀವನ
Image Credit : Instagram

ನೋವಿನ ಜೀವನ

ಅಂದಹಾಗೆ, ಮೋಕ್ಷಿತಾ ಪೈ ಅವರ ಜೀವನ ನೋವಿನಿಂದ ಕೂಡಿದೆ. ಮೋಕ್ಷಿತಾ ಪೈ ಅವರ ಸಹೋದರ ವಿಕಲಚೇತನ ಆಗಿದ್ದಾರೆ. 22 ವರ್ಷವಾಗಿದ್ದರೂ ಇಂದಿಗೂ ಅವರು 8 ವರ್ಷದ ಮಕ್ಕಳ ರೀತಿ ಇದ್ದರೆ, ಅವರ ಬುದ್ದಿ ಇನ್ನೂ 8 ತಿಂಗಳ ಮಗುವಿನ ಹಾಗೆ ಇದೆ. ಈ ಬಗ್ಗೆ ಬಿಗ್‌ ಬಾಸ್‌ ವೇದಿಕೆಯಲ್ಲೂ ಮೋಕ್ಷಿತಾ ಪೈ ಮಾತನಾಡಿದ್ದರು. ತಮ್ಮನ ಬಗ್ಗೆ ಹೇಳುವಾಗಲೆಲ್ಲಾ ಭಾವುಕರಾಗುವ ಮೋಕ್ಷಿತಾ ಪೈ, ಬಿಗ್‌ ಬಾಸ್‌ ವೇದಿಕೆಯಲ್ಲೂ ಸುದೀಪ್‌ ಈ ಬಗ್ಗೆ ಪ್ರಶ್ನೆ ಮಾಡಿದಾಗ, ನನ್ನ ತಮ್ಮನಿಗೆ ನಾನು ಅಕ್ಕನೂ ಹೌದು, ಅಮ್ಮನೂ ಹೌದು. ಆತನ ಬಗ್ಗೆ ಹೆಚ್ಚು ಮಾತನಾಡೋದು ಇಷ್ಟವಿಲ್ಲ ಎಂದು ಹೇಳಿ ಸುಮ್ಮನಾಗಿದ್ದರು.

66
ಚಿಕ್ಕಂದಿನಿಂದಲೇ ಹೆಚ್ಚಿನ ಜವಾಬ್ದಾರಿ
Image Credit : Instagram

ಚಿಕ್ಕಂದಿನಿಂದಲೇ ಹೆಚ್ಚಿನ ಜವಾಬ್ದಾರಿ

'ನನ್ನ ಬಾಲ್ಯ ಎಲ್ಲರಿದ್ದ ಹಾಗೆ ಇದ್ದಿರಲೇ ಎಲ್ಲ. ಎಲ್ಲರ ಬಾಲ್ಯದಲ್ಲಿ, ತಮಾಷೆ, ತರಲೆಗಳು ಇರುತ್ತವೆ. ನನ್ನ ಬಾಲ್ಯದಲ್ಲಿ ಅಂಥ ಸಂಗತಿಗಳೇ ಇದ್ದಿರಲಿಲ್ಲ. ನನಗೆ ಬುದ್ಧಿಮಾಂದ್ಯನಾದ ಒಬ್ಬ ತಮ್ಮನಿದ್ದಾನೆ. ಆತನ ನೋಡಿಕೊಳ್ಳುವ ಕಾರಣದಿಂದಾಗಿ ಚಿಕ್ಕಂದಿನಿಂದಲೇ ನನ್ನ ಮೇಲೆ ಹೆಚ್ಚಿನ ಜವಾಬ್ದಾರಿಗಳಿದ್ದವು. ನಾನೇ ದೊಡ್ಡವಳಾಗಿದ್ದ ಕಾರಣಕ್ಕೆ ಆತನನ್ನೆ ನೋಡಿಕೊಳ್ಳಬೇಕಾಗುತ್ತಿತ್ತು. ಆತ ಒಂದು ಮಗು ಥರ ಇದ್ದಾನೆ' ಎಂದು ಈ ಹಿಂದೆ ನಟಿ ಹೇಳಿದ್ದರು.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಮೋಕ್ಷಿತಾ ಪೈ
ಮನರಂಜನಾ ಸುದ್ದಿ
ಟಿವಿ ಶೋ
ಸ್ಯಾಂಡಲ್‌ವುಡ್
ನಟಿ

Latest Videos
Recommended Stories
Recommended image1
Bigg Boss 13: 'ಭಾಗ್ಯಲಕ್ಷ್ಮಿ' ತಾಂಡವ್​ಗಾಗಿ ರಿಯಲ್​ ಮತ್ತು ರೀಲ್​ ಹೆಂಡ್ತೀರ ನಡುವೆ ಶುರುವಾಗೇ ಬಿಟ್ಟಿತು ಸಮರ
Recommended image2
ಲವ್​ ಬ್ರೇಕಪ್​, ಮದುವೆ, ಡಿಪ್ರೆಷನ್​, ಮೋಸ: Lakshmi Nivasa ನಟಿ ಅನಿಕಾ ಸಿಂಧ್ಯಾ ಓಪನ್​ ಮಾತು
Recommended image3
ಓದಿಗಾಗಿ ಅಮ್ಮ ಮಾರಿದ್ದರು ಮಾಂಗಲ್ಯ: ಇಂದು ಸಹಸ್ರಾರು ಜೀವ ಉಳಿಸಿದ ಪುತ್ರಿ- ಜೇವರ್ಗಿಯ ಕ್ಯಾನ್ಸರ್​ ತಜ್ಞೆಯ ಯಶೋಗಾಥೆ
Related Stories
Recommended image1
Bigg Bossಗೆ ಹೋಗೋ ಮೊದ್ಲೇ ದಾಖಲೆ ಹರಿದ್ರೆ, ತಲೆ ಬೋಳಿಸಿದ್ರೆ, ಸೆಗಣಿ ಹಚ್ಚಿದ್ರೆ ಮುಂದೆ ಒಳ್ಳೇದು; ಸಂಗೀತಾ ಶೃಂಗೇರಿ
Recommended image2
Aap Ki Adalat ಷೋನಲ್ಲೂ ದಾಖಲೆ ಬರೆದ ಯಶ್​: 34 ವರ್ಷಗಳಲ್ಲಿ ಮೊದಲ ಬಾರಿಗೆ ಇತಿಹಾಸ ಸೃಷ್ಟಿ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved