MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Relationship
  • ಮಧುರ ಚುಂಬನಂ ದಂತ ಭಗ್ನಂ: ಲಿಫ್ಟ್‌ನಲ್ಲಿ ಅಜ್ಜಿಗೆ ಅಜ್ಜ ಕಿಸ್ ಕೊಡುವಾಗ ನಡದೇ ಹೋಯ್ತು ಘನಘೋರ ದುರಂತ

ಮಧುರ ಚುಂಬನಂ ದಂತ ಭಗ್ನಂ: ಲಿಫ್ಟ್‌ನಲ್ಲಿ ಅಜ್ಜಿಗೆ ಅಜ್ಜ ಕಿಸ್ ಕೊಡುವಾಗ ನಡದೇ ಹೋಯ್ತು ಘನಘೋರ ದುರಂತ

ಲಿಫ್ಟ್‌ನಲ್ಲಿ ವೃದ್ಧ ಜೋಡಿಯೊಂದು ಪ್ರೇಮ ಸಲ್ಲಾಪದಲ್ಲಿ ತೊಡಗಿದ್ದಾಗ ಅನಿರೀಕ್ಷಿತ ಘಟನೆಯೊಂದು ನಡೆಯುತ್ತದೆ. ಈ ರೊಮ್ಯಾಂಟಿಕ್ ಕ್ಷಣ ಹಾಸ್ಯಮಯವಾಗಿ ಬದಲಾಗುತ್ತದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

2 Min read
Author : Mahmad Rafik
Published : Mar 18 2026, 10:26 AM IST
Share this Photo Gallery
  • FB
  • TW
  • Linkdin
  • Whatsapp
15
ಲಿಫ್ಟ್‌ನಲ್ಲಿ ಅಜ್ಜ ಅಜ್ಜಿ ರೊಮ್ಯಾನ್ಸ್
Image Credit : viralchuski Instagram

ಲಿಫ್ಟ್‌ನಲ್ಲಿ ಅಜ್ಜ-ಅಜ್ಜಿ ರೊಮ್ಯಾನ್ಸ್

ಸೋಶಿಯಲ್ ಮೀಡಿಯಾ ಅಜ್-ಅಜ್ಜಿಯ ರೊಮ್ಯಾನ್ಸ್ ವಿಡಿಯೋ ವೈರಲ್ ಆಗಿದ್ದು, ಇದನ್ನು ನೋಡಿದ ನೆಟ್ಟಿಗರು ಇಂಥಾ ಸಂದರ್ಭದಲ್ಲಿ ಹೀಗಾಗಬಾರದಿತ್ತು ಎಂದು ಮರುಕು ವ್ಯಕ್ತಪಡಿಸಿದ್ದಾರೆ. ಘನಘೋರ ದುರಂತವನ್ನು ಕೆಲವರು ತಮಾಷೆಯಾಗಿ ಪರಿಗಣಿಸಿದ್ರೆ, ಒಂದಿಷ್ಟು ಮಂದಿ ಈ ವಯಸ್ಸಿನಲ್ಲಿ ಇದೆಲ್ಲಾ ಬೇಕಿತ್ತಾ ಎಂದು ಪ್ರಶ್ನೆ ಮಾಡಿದ್ದಾರೆ. ಹಾಗಾದ್ರೆ ಲಿಫ್ಟ್‌ನಲ್ಲಿ ನಡೆದಿದ್ದೇನು?

25
10.5 ಮಿಲಿಯನ್ ವ್ಯೂವ್ ಪಡೆದ ವಿಡಿಯೋ
Image Credit : viralchuski Instagram

10.5 ಮಿಲಿಯನ್ ವ್ಯೂವ್ ಪಡೆದ ವಿಡಿಯೋ

ಮಧುರ ಚುಂಬನಂ ದಂತ ಭಗ್ನಂ ಎಂಬ ಮಾತಿನಂತೆ ಇಲ್ಲಿ ನಡೆದಿದೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ವಿಡಿಯೋಗೆ ಈವರೆಗೆ 10 ಮಿಲಿಯನ್‌ಗೂ ಅಧಿಕ ವ್ಯೂವ್ ಬಂದಿದ್ದು, 1.35 ಲಕ್ಷಕ್ಕೂ ಲೈಕ್ಸ್ ಜೊತೆ ಸಾವಿರಾರು ಕಮೆಂಟ್‌ಗಳು ಬಂದಿವೆ. ಕೆಲವರು ಇದನ್ನು AI ವಿಡಿಯೋ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ. ಬಹುಶಃ ಅಜ್ಜನಿಗೆ ತನ್ನ ಮಾಜಿ ಪ್ರೇಯಸಿ ಸಿಕ್ಕಿರಬಹುದು ಎಂಬ ಕಮೆಂಟ್‌ಗಳು ಬಂದಿವೆ.

Related Articles

Related image1
ಸರಸದಲ್ಲಿದ್ದಾಗಲೇ ಹೆಂಡ್ತಿಯನ್ನ ಹಿಡಿದ ಗಂಡ; ಚಿನ್ನ, ರನ್ನ ಅಂತಿದ್ದವ್ಳ ಅಸಲಿಯತ್ತು ಬಯಲು
Related image2
ಒಂದೂವರೆ ಗಂಟೆಯಿಂದ ರೈಲಿನ ಟಾಯ್ಲೆಟ್ ಬಂದ್; ಡೋರ್ ತೆರೆಯ್ತಿದ್ದಂತೆ ಹೊರ ಬಂತು ಜೋಡಿ
35
ವೈರಲ್ ವಿಡಿಯೋದಲ್ಲಿ ಏನಿದೆ?
Image Credit : viralchuski Instagram

ವೈರಲ್ ವಿಡಿಯೋದಲ್ಲಿ ಏನಿದೆ?

ಲಿಫ್ಟ್‌ನಲ್ಲಿ ಅಜ್ಜ ಮತ್ತು ಅಜ್ಜಿ ಮಾತ್ರ ಇರುತ್ತಾರೆ. ಅಜ್ಜ ನೋಡ ನೋಡುತ್ತಿದ್ದಂತೆ ಪಕ್ಕದಲ್ಲಿರುವ ಅಜ್ಜಿಗೆ ಕಿಸ್ ಮಾಡಲು ಪ್ರಾರಂಭಿಸುತ್ತಾರೆ. ಅಜ್ಜಿಯೂ ಸಹ ವಿರೋಧ ವ್ಯಕ್ತಪಡಿಸದೇ ಚುಂಬನಕ್ಕೆ ಸಾಥ್ ನೀಡುತ್ತಾರೆ. ಇಬ್ರು ಮೈಮರೆಯುತ್ತಿರುವ ಸಂದರ್ಭದಲ್ಲಿಯೇ ಅಜ್ಜಿಯ ಹಲ್ಲಿನ ಸೆಟ್ ಹೊರಗೆ ಬೀಳುತ್ತದೆ. ಹಲ್ಲಿನ ಸೆಟ್ ಬೀಳುತ್ತಿದ್ದಂತೆ ಇಬ್ಬರ ರೊಮ್ಯಾನ್ಸ್ ನಿಲ್ಲುತ್ತದೆ.

45
ಹಾಸ್ಯಮಯವಾಗಿ ಬದಲಾದ ರೊಮ್ಯಾಂಟಿಕ್ ದೃಶ್ಯ
Image Credit : Asianet News

ಹಾಸ್ಯಮಯವಾಗಿ ಬದಲಾದ ರೊಮ್ಯಾಂಟಿಕ್ ದೃಶ್ಯ

ಹಲ್ಲಿನ ಸೆಟ್ ಹೋಗಿ ನೇರವಾಗಿ ಅಜ್ಜನ ಕಾಲಡಿಯಲ್ಲಿಯೇ ಬೀಳುತ್ತಿರೋದನ್ನು ನೀವು ವಿಡಿಯೋದಲ್ಲಿ ಗಮನಿಸಬಹುದು. ರೊಮ್ಯಾಂಟಿಕ್ ಕ್ಷಣವೊಂದು ಹಾಸ್ಯ ಪ್ರಸಂಗವಾಗಿ ಬದಲಾದ ವಿಡಿಯೋ ನೋಡುಗರನ್ನು ನಗೆಗಡಿಲಿನಲ್ಲಿ ತೇಲಾಡುವಂತೆ ಮಾಡುತ್ತಿದೆ. ಹಲ್ಲಿನ ಸೆಟ್ ಬೀಳುತ್ತಿದ್ದಂತೆ ಅಜ್ಜ-ಅಜ್ಜಿ ಸಹ ಒಂದು ನಗುತ್ತಾರೆ. viralchuski ಹೆಸರಿನ ಇನ್‌ಸ್ಟಾಗ್ರಾಂನಲ್ಲಿ ಈ ವಿಡಿಯೋ ಶೇರ್ ಮಾಡಿಕೊಳ್ಳಲಾಗಿದೆ.

ಇದನ್ನೂ ಓದಿ: ಚಲಿಸುತ್ತಿದ್ದ ರೈಲಿನಲ್ಲಿಯೇ ಕಾಮದ ಅಮಲಿನಲ್ಲಿ ತೇಲಾಡಿದ ಜೋಡಿ; ಬೆತ್ತಲಾದವರಿಗೆ ಬಿಗ್ ಶಾಕ್

55
ಪ್ರೀತಿಗೆ ವಯಸ್ಸಿಲ್ಲ
Image Credit : gemini

ಪ್ರೀತಿಗೆ ವಯಸ್ಸಿಲ್ಲ

ಈ ವಿಡಿಯೋ ದಿನದ ಅತ್ಯಂತ ತಮಾಷೆಯ ಪ್ರೀತಿಯ ಕ್ಷಣ ಎಂದು ಕಮೆಂಟ್ ಮಾಡಿದ್ದಾರೆ. ಪ್ರೀತಿಗೆ ವಯಸ್ಸಿಲ್ಲ ಎಂಬುದಕ್ಕೆ ಈ ಘಟನೆಯೇ ಉದಾಹರಣೆ. ವಿದೇಶಗಳಲ್ಲಿ ಚುಂಬಿಸುವ ಮೂಲಕ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುತ್ತಾರೆ. ಇದರಲ್ಲಿ ಯಾವುದೇ ಅಶ್ಲೀಲತೆ ಇಲ್ಲ ಎಂದು ನೆಟ್ಟಿಗರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ವಿಡಿಯೋ ಎಲ್ಲಿಯದ್ದು ಎಂದು ತಿಳಿದು ಬಂದಿಲ್ಲ.

ಇದನ್ನೂ ಓದಿ: Viral Video: ಯಾರಿಗೂ ಕಾಣಲ್ಲ ಅಂದ್ಕೊಂಡು ಬಸ್‌ಸ್ಟ್ಯಾಂಡ್‌ನಲ್ಲೇ ಶುರು ಹಚ್ಕೊಂಡ ಪ್ರೇಮಿಗಳು, ಆದ್ರೆ ಕ್ಯಾಮೆರಾ ಕಣ್ಣಿಗೆ ಬೀಳ್ದೆ ಇರುತ್ತಾ?

 
 
 
 
View this post on Instagram
 
 
 
 
 
 
 
 
 
 
 

A post shared by @viralchuski

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

MR
Mahmad Rafik
ಮಹ್ಮದ್ ರಫಿಕ್ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ವೈರಲ್ ವಿಡಿಯೋ
ಸಂಬಂಧಗಳು
ದಂಪತಿಗಳು
Latest Videos
Recommended Stories
Recommended image1
ಕೌಟುಂಬಿಕ ಕಲಹದ ಬಳಿಕ ಸನ್ಯಾಸಿಯಾದ ಪತಿಗೆ ಬೀದಿಯಲ್ಲೇ ಥಳಿಸಿದ ಮಹಿಳೆ: ವೀಡಿಯೋ
Recommended image2
ಪ್ರೀತಿಗೆ ಅಡ್ಡಿಯಾದ ಜಾತಿ; ಪೊಲೀಸ್‌ ಭದ್ರತೆ ಪಡೆದು, ದೇವಸ್ಥಾನದಲ್ಲಿ ಮದುವೆಯಾದ ಬೆಂಗಳೂರಿನ ಜೋಡಿ
Recommended image3
ಜೆನ್‌ ಝೀಗೆ ಬೇಕಂತೆ ‘ಲೇಝಿ ಗರ್ಲ್ ಜಾಬ್ಸ್’ ! ಇದೇನಿದು ಹೊಸ ಟ್ರೆಂಡ್!
Related Stories
Recommended image1
ಸರಸದಲ್ಲಿದ್ದಾಗಲೇ ಹೆಂಡ್ತಿಯನ್ನ ಹಿಡಿದ ಗಂಡ; ಚಿನ್ನ, ರನ್ನ ಅಂತಿದ್ದವ್ಳ ಅಸಲಿಯತ್ತು ಬಯಲು
Recommended image2
ಒಂದೂವರೆ ಗಂಟೆಯಿಂದ ರೈಲಿನ ಟಾಯ್ಲೆಟ್ ಬಂದ್; ಡೋರ್ ತೆರೆಯ್ತಿದ್ದಂತೆ ಹೊರ ಬಂತು ಜೋಡಿ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved