Couple Caught on Camera ಹಗಲು ಹೊತ್ತಿನಲ್ಲಿ ಬಸ್ ನಿಲ್ದಾಣದಲ್ಲಿ ಯುವ ಜೋಡಿಯೊಂದು ಪ್ರೇಮದಾಟದಲ್ಲಿ ತೊಡಗಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋ ಸಾರ್ವಜನಿಕ ಸ್ಥಳಗಳಲ್ಲಿನ ನಡವಳಿಕೆಯ ಬಗ್ಗೆ ಚರ್ಚೆಯನ್ನು ಹುಟ್ಟುಹಾಕಿದೆ.

ಸೋಶಿಯಲ್‌ ಮೀಡಿಯಾ ಬಂದಾಗಿನಿಂದ ವ್ಯಕ್ತಿಗಳ ಖಾಸಗಿತನ ಅನ್ನೋದೇ ದೊಡ್ಡ ಜೋಕ್‌ ಅಂತಾ ಅನಿಸುತ್ತದೆ. ಸೋಶಿಯಲ್‌ ಮೀಡಿಯಾ ಜಮಾನದಲ್ಲೂ ವ್ಯಕ್ತಿಗಳು ಮೊದಲಿದ್ದ ಹಾಗೆ ಇರುತ್ತೇವೆ ಅಂದರೆ ಅದು ಸಾಧ್ಯವಾಗೋದೂ ಇಲ್ಲ. ಮೊದಲೆಲ್ಲಾ ಪಾರ್ಕ್‌ಗಳಲ್ಲಿ, ಸಿನಿಮಾ ಥಿಯೇಟರ್‌ಗಳಲ್ಲಿ ಎಲ್ಲೆಂದಲ್ಲಿ ಲವ್‌ ಮಾಡಿದ್ದರೆ ಅಲ್ಲಿದ್ದ ಕೆಲ ವ್ಯಕ್ತಿಗಳಿಗೆ ಗೊತ್ತಾಗುತ್ತಿತ್ತೋ ವಿನಃ ಜಗಜ್ಜಾಹೀರಾಗುತ್ತಿರಲಿಲ್ಲ. ಆದರೆ, ಸೋಶಿಯಲ್‌ ಮೀಡಿಯಾ ಬಂದಿದ್ದೇ ಸಾರ್ವಜನಿಕ ಸ್ಥಳಗಳಲ್ಲಿ ಮಾಡುವ ಇಂಥ ಅನಾಹುತಗಳು ಕ್ಷಣಮಾತ್ರದಲ್ಲಿ ಜಗತ್ತಿಗೆ ಗೊತ್ತಾಗಿಬಿಡುತ್ತದೆ.

ಅದೇ ರೀತಿಯ ಪ್ರಕರಣವೊಂದು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಈ ವಿಡಿಯೋ ಯಾವ ರಾಜ್ಯದ್ದು, ಯಾವ ಸಮಯದ್ದು ಎನ್ನುವುದು ಗೊತ್ತಾಗಿಲ್ಲ. ಆದರೆ, ವೈರಲ್‌ ಆಗಿರುವ ವಿಡಿಯೋದಲ್ಲಿ ಪ್ರೇಮಿಗಳು ಪ್ರೇಮದಾಟ ನೇರವಾಗಿ ಕ್ಯಾಮೆರಾ ಕಣ್ಣಿಗೆ ಸಿಕ್ಕಿಬಿದ್ದಿದೆ. ಹಗಲು ವೇಳೆಯಲ್ಲೇ ಬಸ್‌ಸ್ಟ್ಯಾಂಡ್‌ನಲ್ಲಿಯೇ ಯುವ ಜೋಡಿ ಪ್ರೇಮದಾಟದಲ್ಲಿ ತೊಡಗಿಕೊಂಡಿದೆ.

Scroll to load tweet…

ವಿಡಿಯೋದಲ್ಲಿ ಇರೋದೇನು?

ಬಿಳಿ ಬಣ್ಣದ ಮಲಯಾಳಿ ಸೀರೆಯುಟ್ಟು ಬಂದ ಹುಡುಗಿಯನ್ನು ಬಸ್‌ಸ್ಟ್ಯಾಂಡ್‌ನಲ್ಲಿಯೇ ಹುಡುಗ ಚುಂಬಿಸಿದ್ದಾನೆ. ಮೊದಲಿಗೆ ಸಣ್ಣಕೆ ಕೆನ್ನೆಗೆ ತಟ್ಟಿ ಪ್ರತಿರೋಧ ಒಡ್ಡುವ ಯುವತಿ ಬಳಿಕ ತಾನೂ ಶುರು ಮಾಡುತ್ತಾಳೆ. ಯಾರಾದರೂ ನಮ್ಮನ್ನು ನೋಡಬಹುದು ಎನ್ನುವ ಭಯವೇ ಇವರಲ್ಲಿ ಕಾಣೋದಿಲ್ಲ ಅನ್ನೋದು ಅಚ್ಚರಿಯ ಸಂಗತಿ.ಬಳಿಕ ಅಕ್ಕಪಕ್ಕ ನೋಡುವ ಜೋಡಿ ಅಲ್ಲಿಯೇ ಕೆಲ ಕ್ಷಣ ಕಿಸ್‌ ಕೊಟ್ಟು ಚಕ್ಕಂದವಾಡುತ್ತದೆ. ಇವರು ಇಷ್ಟೆಲ್ಲಾ 'ಕೆಲಸ' ಮಾಡುತ್ತಿರುವ ಸಮಯದಲ್ಲಿ ಬಸ್‌ಸ್ಟ್ಯಾಂಡ್‌ನಲ್ಲಿ ಜನರು ಕೂಡ ಇದ್ದರು ಅನ್ನೋದು ವಿಶೇಷ. ಇದ್ದ ಒಂದಿಬ್ಬರು ಫೋನ್‌ನಲ್ಲಿ ಮಾತನಾಡುತ್ತಾ ಮುಂದೆ ಬರುವ ಬಸ್‌ ನೋಡುತ್ತಿದ್ದರೆ, ಇನ್ನೂ ಕೆಲವರು ಹಿಂದೆ ಒಂದು ಜೋಡಿ ಕೆಲಸದಲ್ಲಿ ನಿರತವಾಗಿದೆ ಅನ್ನೋ ವಿಚಾರವೇ ಗೊತ್ತಿಲ್ಲದಂತೆ ಇದ್ದರು. ಆದರೆ, ದುರಂತಕ್ಕೆ ಇವರ ಎಲ್ಲಾ ಕೃತ್ಯಗಳು ವ್ಯಕ್ತಿಯೊಬ್ಬರ ಕ್ಯಾಮೆರಾದಲ್ಲಿ ಸಲೀಸಾಗಿ ಸೆರೆಯಾಗಿದ್ದು, ಅಷ್ಟೇ ವೇಗವಾಗಿ ಸೋಶಿಯಲ್‌ ಮೀಡಿಯಾ ವೇದಿಕೆಗೂ ಬಂದುಬಿಟ್ಟಿದೆ.

ಸೋಶಿಯಲ್‌ ಮೀಡಿಯಾದಲ್ಲಿ ವರ್ತನೆಯ ಬಗ್ಗೆ ಚರ್ಚೆ

ದಿವ್ಯಾ ಕುಮಾರಿ ಎನ್ನುವವರು ಈ ವಿಡಿಯೋವನ್ನು ಶೇರ್‌ ಮಾಡಿದ್ದು, ಇತ್ತೀಚಿನ ದಿನಗಳಲ್ಲಿ ಜನರು ತುಂಬಾ ಕ್ರೇಜಿಯಾಗಿ ಹೋಗಿದ್ದಾರೆ. ಬಸ್‌ಸ್ಟ್ಯಾಂಡ್‌ನಲ್ಲೇ ಎಲ್ಲವನ್ನೂ ಮುಕ್ತವಾಗಿ ಮಾಡುವ ಮಟ್ಟಕ್ಕೆ ಹೋಗಿದ್ದಾರೆ. ಇಂಥ ವ್ಯಕ್ತಿಗಳಿಗೆ ಮೋದಿಜೀ ಯಾಕೆ ಓಯೋ ರೂಮ್‌ಗಳ ಬೆಲೆಯನ್ನು ಕಡಿಮೆ ಮಾಡಬಾರದು ಎಂದು ಪ್ರಶ್ನೆ ಮಾಡಿದ್ದಾರೆ.

ಇದಕ್ಕೆ ಕಾಮೆಂಟ್‌ ಮಾಡಿರುವ ಹಲವರು, 'ಈಗಿನ ಜನರೇಷನ್‌ಗೆ ಏನಾಗಿದೆ' ಎಂದು ಪ್ರಶ್ನೆ ಮಾಡಿದ್ದಾರೆ. 'ಇವರಿಗೆ ಪ್ರೀತಿ ಮಾಡಲು ಜಾಗವೇ ಸಿಗದಂತಾಗಿಬಿಟ್ಟಿದೆ' ಎಂದು ಮತ್ತೊಬ್ಬರು ಕಾಮೆಂಟ್‌ ಮಾಡಿದ್ದಾರೆ. 'ಸಾರ್ವಜನಿಕ ಸ್ಥಳದಲ್ಲಿ ಇಂಥ ಕೆಲಸವನ್ನು ಮಾಡುವುದು ಸರಿಯಲ್ಲ, ಆದರೆ ಇತ್ತೀಚಿನ ದಿನಗಳಲ್ಲಿ ವಾತಾವರಣವು ತುಂಬಾ ಕೆಟ್ಟದಾಗುತ್ತಿದೆ' ಎಂದು ಮತ್ತೊಬ್ಬರು ಬೇಸರ ವ್ಯಕ್ತಪಡಿಸಿದ್ದಾರೆ.

ಇದು ಖಂಡಿತ ದಕ್ಷಿಣ ಭಾರತದ ವಿಡಿಯೋ ಆಗಿರುತ್ತೆ. ಹೈದರಾಬಾದ್‌ನ ಅಂಗಡಿಗಳಿರುವ ರಸ್ತೆಗೆ ಒಮ್ಮೆ ಹೋಗಿ. ಅಲ್ಲಿನ ಮೆಟ್ಟಿಲಿಗಳ ಮೇಲೆ ಇಂಥ ಕೃತ್ಯ ಮಾಡುವ ಹಲವಾರು ವ್ಯಕ್ತಿಗಳು ಸಿಗ್ತಾರೆ ಎಂದು ಪೋಸ್ಟ್‌ ಮಾಡಿದ್ದಾರೆ.